Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಟೆಡ್ಡಿ ಡೇಯಂದು ನಿಮ್ಮ ಸಂಗಾತಿಗೆ ನೀಡಲು ಈ ಟ್ರೆಂಡಿ ಉಡುಗೊರೆಗಳೇ ಬೆಸ್ಟ್..
ವ್ಯಾಲೆಂಟೈನ್ಸ್ ಡೇ ವೀಕ್ ಈಗಾಗಲೇ ಶುರುವಾಗಿದೆ. ರೋಸ್ ಡೇ ಮೂಲಕ ನಿನ್ನೆ ವಾಲೇಂಟೈನ್ ಡೇ ಯ ಸಿದ್ಧತೆಗೆ ಅಧೀಕೃತ ಚಾಲನೆ ದೊರೆತಿದೆ. ಇದರ ಬೆನ್ನಲ್ಲೇ ಫೆಬ್ರವರಿ 10ರಂದು ಟೆಡ್ಡಿ ಡೇ ನಡೆಯಲಿದೆ. ಈ ದಿನದಂದು ಪ್ರತಿಯೊಬ್ಬರೂ ತಮ್ಮ ಸಂಗಾತಿಗೆ ಟೆಡ್ಡಿ ಬೀರ್ ನೀಡಿ ಪ್ರೇಮ ನಿವೇದನೆ ಮಾಡುತ್ತಾರೆ. ಅಥವಾ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ನಿಮ್ಮ ಜೀವನದ ಆ ವಿಶೇಷ ವ್ಯಕ್ತಿ, ನಿಮಗೆ ಎಷ್ಟು ಮುಖ್ಯವೆಂದು ಹೇಳಲು ಅಸಾಧ್ಯ, ಇದಕ್ಕೆ ಉತ್ತಮ ಮಾರ್ಗ ಮುದ್ದಾದ ಟೆಡ್ಡಿ ಬೀರ್. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ನಿಮ್ಮ ಸಂಬಂಧದಲ್ಲಿನ ಉತ್ಸಾಹವನ್ನು ಪುನರುಜ್ಜೀವನಗೊಳಿಸಲು ನಿಮಗೆ ಸಹಾಯ ಮಾಡಲು ಕೆಲವು ವಿಶಿಷ್ಟ ಮತ್ತು ಟ್ರೆಂಡಿ ಟೆಡ್ಡಿ ಡೇ ಉಡುಗೊರೆ ಕಲ್ಪನೆಗಳನ್ನು ಈ ಕೆಳಗೆ ನೀಡಲಾಗಿದೆ.
ಟ್ರೆಂಡಿ ಟೆಡ್ಡಿ ಡೇ ಉಡುಗೊರೆ ಕಲ್ಪನೆಗಳು ಇಲ್ಲಿವೆ:

ಹಾರ್ಟ್ ಶೇಪ್ ಇರುವ ದೊಡ್ಡ ಟೆಡ್ಡಿ:
ನಿಮ್ಮ ಸಂಗಾತಿಗೆ 'ಐ ಲವ್ ಯು' ಎಂದು ಹೇಳಲು ಮತ್ತು ಅವನು / ಅವಳು ನಿಮ್ಮ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದ್ದಾಳೆ ಎಂದು ಅರ್ಥ ಮಾಡಿಸಲು ಹಾರ್ಟ್ ಶೇಪ್ ಇರುವ ದೊಡ್ಡ ಟೆಡ್ಡಿ ಒಂದೊಳ್ಳೆ ಉಡೂಗೊರೆಯಾಗಿದೆ. ಈ ಟೆಡ್ಡಿ ಹಿಡಿದ ನಂತರ ನಿಮ್ಮ ಸಂಗಾತಿಯ ಮುಖದಲ್ಲಿ ಸುಂದರವಾದ ಸ್ಮೈಲ್ ಖಂಡಿತವಾಗಿಯೂ ಮೂಡುತ್ತದೆ. ಇದರಿಂದ ನಿಮ್ಮ ದಿನವು ಸುಂದರವಾಗಿರುವುದರಲ್ಲಿ ಡೌಟೇ ಇಲ್ಲ.

ಕೆಂಪು ಗುಲಾಬಿಗಳುಳ್ಳ ಟೆಡ್ಡಿ :
ಕೆಂಪು ಗುಲಾಬಿಗಳು ಮತ್ತು ಟೆಡ್ಡಿ ಬೀರ್ ಎರಡೂ ಪ್ರೀತಿಯ ಪರಿಪೂರ್ಣ ಸಂಕೇತವಾಗಿದೆ. ಆದ್ದರಿಂದ, ಕೆಂಪು ಗುಲಾಬಿಗಳನ್ನು ಬಳಸಿ ತಯಾರಿಸಿದ ಟೆಡ್ಡಿ ಬೀರ್ ಈ ಟೆಡ್ಡಿ ದಿನದಂದು ಪ್ರೀತಿಯ ಅಭಿವ್ಯಕ್ತಿಗೆ ಸೂಕ್ತವಾದ ಉಡುಗೊರೆಯಾಗಿದೆ. ಇದು ನಿಮಗೆ ಮತ್ತು ನಿಮ್ಮ ಸಂಗಾತಿಯ ಕಣ್ಣಿಗೆ ಸಂತೋಷ ನೀಡುತ್ತದೆ. ನಿಮ್ಮ ಸಂಗಾತಿಯು ಇಂತಹ ಸುಂದರವಾದ ಉಡುಗೊರೆಯನ್ನು ಪಡೆದ ನಂತರ ಅವರ ಉತ್ಸಾಹಕ್ಕೆ ಪಾರವೇ ಇರುವುದಿಲ್ಲ.

ಟೆಡ್ಡಿ ಮತ್ತು ಚಾಕೋಲೇಟ್ ಕಾಂಬೋ:
ನಿಮ್ಮ ಗೆಳತಿ ಅಥವಾ ಹೆಂಡತಿಗೆ ಟೆಡ್ಡಿ ಬೀರ್ ಮತ್ತು ಚಾಕೊಲೇಟ್ ಕಾಂಬೊವನ್ನು ಉಡುಗೊರೆಯಾಗಿ ನೀಡುವ ಮೂಲಕ ನಿಮ್ಮ ಪ್ರೀತಿಯ ಜೀವನಕ್ಕೆ ಸಿಹಿ ಮತ್ತು ಮಾಧುರ್ಯವನ್ನು ಸೇರಿಸಿ. ಟೆಡ್ಡಿ ಬೀರ್ ಆಕೆಗೆ ಸಂತೋಷವನ್ನು ನೀಡದರೆ, ಚಾಕೋಲೇಟ್ ಆಕೆಯ ನಾಲಗೆಗೆ ಸಿಹಿಯನ್ನು ಉಣಿಸುತ್ತದೆ. ಈ ಎರಡರಿಂದ ಆಕೆಯ ಮನಸ್ಸು ಸಂತೃಪ್ತವಾಗುತ್ತದೆ.

ಟೆಡ್ಡಿ- ಪುಷ್ಪ ಗುಚ್ಛ:
ಟೆಡ್ಡಿ ಬೀರ್ ಹರಡುವ ಪ್ರೀತಿ ಮತ್ತು ಸಂತೋಷವನ್ನು ಪದಗಳಲ್ಲಿ ವಿವರಿಸಲಾಗುವುದಿಲ್ಲ. ಮುದ್ದಾದ ಟೆಡ್ಡಿ ಬೀರ್ ಜೊತೆಗೆ ನೀಡುವ ಹೂಗುಚ್ಛ ನಿಮ್ಮ ಪ್ರೀತಿಪಾತ್ರರಿಗೆ ನೀಡಬಹುದಾದ ಸಂತೋಷ ಮತ್ತು ಆನಂದವನ್ನು ಕಲ್ಪಿಸಿಕೊಳ್ಳಲು ಅಸಾಧ್ಯ.

ಟೆಡ್ಡಿ ಕುಶನ್:
ನಿಮ್ಮ ಸಂಗಾತಿಗೆ ಟೆಡ್ಡಿ ಬೀರ್ ಇರುವ ಕುಶನ್ ಅನ್ನು ಉಡುಗೊರೆಯಾಗಿ ನೀಡುವ ಬಗ್ಗೆ ಹೇಗೆ? ನಿಮ್ಮ ಸಂಗಾತಿಯು ನಿಮ್ಮ ಪ್ರೀತಿಯ ನೆನಪಾಗಿ ಅದನ್ನು ಮಲಗುವ ಕೋಣೆಯಲ್ಲಿ ಇಡಬಹುದು. ಕುಶನ್ ನಿಂದ ಬೆಳಿಗ್ಗೆ ಏಳುವಾಗ ನಿಮ್ಮನ್ನು ದಿನದ ಮೊದಲ ವಿಷಯವಾಗಿ ನೆನಪಿಸಿಕೊಳ್ಳುವುದು ಅವರಿಗೆ ಸುಂದರವಾಗಿರುತ್ತದೆ.



Click it and Unblock the Notifications
