Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ನಿಮ್ಮವನ ಉದ್ದೇಶ ಬೇರೆಯದೇ ಇದೆ ಎನ್ನುತ್ತವೆ ಈ ಸೂಚನೆಗಳು
ನಿಮ್ಮ ಸಂಗಾತಿ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ಆಗಾಗ ನಿಮಗೆ ಅನಿಸುತ್ತಿದೆಯೇ? ಅವರು ಹೇಳುವಾಗ ತಮಾಷೆಯಿದ್ದರೂ, ಅದರ ಒಳ ಅರ್ಥ ಬೇರೆಯೇ ಇದೆ ಎಂಬ ಭಾವನೆ ಮೂಡುತ್ತಿರಬಹುದು. ಹಾಗಿದ್ದಲ್ಲಿ, ನೀವು ಸ್ವಲ್ಪ ಜಾಗರೂಕರಾಗಿರಬೇಕು. ನೀವು ಹುಡುಗಿಯಾಗಿರಲೀ ಅಥವಾ ಹುಡುಗನಾಗಿರಲೀ ಸಂಬಂಧದಲ್ಲಿ ಬದ್ಧತೆ ತುಂಬಾ ಮುಖ್ಯ. ಆದರೆ, ಕೆಲವರು ಸಂಬಂಧದಲ್ಲಿದ್ದುಕೊಂಡೇ ಮೂರನೇಯ ಸಂಬಂಧ ಅಥವಾ ಇತರ ಉದ್ದೇಶಗಳನ್ನು ಹೊಂದಿರುತ್ತಾರೆ. ಅಂತಹವರೊಂದಿಗೆ ನೀವು ಜಾಗರೂಕಾರಾಗಿರಬೇಕು. ನಿಮ್ಮ ಸಂಗಾತಿಯೂ ಹೀಗೆಯೇ? ಅದನ್ನು ಗುರುತಿಸಲು, ಈ ಚಿಹ್ನೆಗಳಿಗೆ ಗಮನ ಕೊಡುವುದು ಅವಶ್ಯಕ.
ನಿಮ್ಮ ಸಂಗಾತಿಯ ಉದ್ದೇಶ ಬೇರೆಯದೇ ಇದೆ ಎಂದು ಸೂಚಿಸುವ ಚಿಹ್ನೆಗಳನ್ನು ಈ ಕೆಳಗೆ ನೀಡಲಾಗಿದೆ:

ಆ ವಿಷಯದ ಬಗ್ಗೆ ತಮಾಷೆ ಮಾಡುವುದು:
ನಿಮ್ಮ ಸಂಗಾತಿ ನಿಮ್ಮೊಂದಿಗೆ ಬದ್ಧ ಸಂಬಂಧದಲ್ಲಿರುವಾಗ ಬೇರೊಬ್ಬರೊಂದಿಗೆ ಸಂಬಂಧವನ್ನು ಬೆಳೆಸುವ ಬಗ್ಗೆ ಮಾತನಾಡುವ ಇಂತಹ ಹಾಸ್ಯಗಳನ್ನು ಪದೇ ಪದೇ ಮಾಡುತ್ತಿದ್ದರೆ, ನೀವು ಎಚ್ಚರದಿಂದಿರಬೇಕು. ಅಂತಹ ಹಾಸ್ಯದ ಹಿಂದೆ ಅವನ ಗುಪ್ತ ಭಾವನೆಗಳು ಆಗಿರಬಹುದು, ಅದರರ್ಥ ಅವನು ಮುಕ್ತ ಸಂಬಂಧಕ್ಕೆ ಹೋಗಲು ಯೋಚಿಸುತ್ತಿದ್ದಾನೆ ಎಂಬುದು. ಆದ್ದರಿಂದ ಇಂತಹ ತಮಾಷೆಯ ಮಾತುಗಳು ಆಗಾಗ ಬಂದರೆ ಎಚ್ಚರವಾಗಿರಿ.

ಖಾಸಗಿ ವಿಚಾರಗಳ ಬಗ್ಗೆ ಮಾತನಾಡುವುದು:
ನಿಮ್ಮ ಸಂಗಾತಿ ತನ್ನ ಕಲ್ಪನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಅವನ ಇತರರೊಂದಿಗೆ ಸಂಬಂಧವನ್ನು ಹೊಂದುವಂತೆ ಅಥವಾ ಲೈಂಗಿಕ ಕ್ರಿಯೆಯನ್ನು ನಡೆಸುವಂತೆ ಅಥವಾ ಅಂತಹ ವಿಚಾರಗಳು ನಡೆದಿರುವ ಬಗ್ಗೆ ಹೇಳಿಕೊಂಡರೆ, ಅದು ಸಾಮಾನ್ಯವಲ್ಲ. ಇದು ಎಲ್ಲೋ ಅವರ ಮನದ ಮಾತನ್ನು ತೋರಿಸುತ್ತದೆ ಜೊತೆಗೆ ಅವರು ಯಾವ ರೀತಿಯ ಸಂಬಂಧವನ್ನು ಹುಡುಕುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಒಟ್ಟಿಗೆ ಇರುವಾಗಲೂ ಇತರರಿಗೆ ಗಮನ ಕೊಡುವುದು:
ನೀವು ಆತನ ಜೊತೆಯಿದ್ದರೂ ಸಹ, ನಿಮ್ಮ ಸಂಗಾತಿಯು ಇತರ ಜನರ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದರೆ, ಅವರು ನಿಮಗೆ ಸಂಪೂರ್ಣವಾಗಿ ಬದ್ಧರಾಗಿಲ್ಲದ ಸಾಧ್ಯತೆಗಳಿವೆ ಅಥವಾ ಅವರು ಸಂಬಂಧದಲ್ಲಿರುವಾಗ ಮೋಜಿಗಾಗಿ ಮೂರನೇ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಲು ಬಯಸುತ್ತಿದ್ದಾರೆ ಎಂದರ್ಥ. ನೀವು ಅಡ್ಡಿಪಡಿಸಿದಾಗಲೂ ಅವರು ಇದನ್ನು ಮುಂದುವರಿಸಿದರೆ, ನೀವು ಜಾಗರೂಕರಾಗಿರಬೇಕು.

ಅಸೂಯೆಪಡದೇ ಇರುವುದು:
ಸಂಬಂಧದೊಂದಿಗೆ ಸ್ವಾಮ್ಯಸೂಚಕತೆಯ ಪ್ರಜ್ಞೆ ಬರುತ್ತದೆ, ಅದು ಅಸೂಯೆಯನ್ನು ಉಂಟುಮಾಡುತ್ತದೆ. ಆದರೆ ನೀವು ಇತರರೊಂದಿಗೆ ಮಾತನಾಡುವುದನ್ನು ನೋಡಿದ ನಂತರ ಅಥವಾ ಬೇರೆಯವರು ನಿಮ್ಮ ಹತ್ತಿರ ಬರುತ್ತಿರುವುದನ್ನು ನೋಡಿದ ನಂತರವೂ ನಿಮ್ಮ ಸಂಗಾತಿ ಯಾವುದೇ ಪ್ರತಿಕ್ರಿಯೆ ನೀಡದೆ, ಅದನ್ನು ಮತ್ತಷ್ಟು ಪ್ರೋತ್ಸಾಹಿಸಿದರೆ ಅದು ಸರಿಯಲ್ಲ. ಅವರು ನಿಮ್ಮನ್ನು ಬೇರೆಯವರಿಗೆ ಹತ್ತಿರವಾಗಿಸುವ ಅವಕಾಶವನ್ನು ಹುಡುಕುತ್ತಿರಬಹುದು ಇದರಿಂದ ಅವರು ಬೇರೆಯವರೊಂದಿಗೆ ಬಹಿರಂಗವಾಗಿ ಸಂಬಂಧವನ್ನು ಪ್ರವೇಶಿಸಬಹುದು.



Click it and Unblock the Notifications