Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಈ ಮನಸ್ಸಿನ ಸೆಳೆತಕ್ಕೆ ಪ್ರೀತಿಯೆಂದು ಹೆಸರಿರಬಹುದೇ?!
ಪ್ರೀತಿಯ ಮೊದಲ ಹಂತವೇ ಆಕರ್ಷಣೆ. ಲವ್ ಅಟ್ ಫಸ್ಟ್ ಸೈಟ್ ಅನ್ನೋ ಮಾತನ್ನು ಹೆಚ್ಚಿನವರು ಕೇಳಿರುತ್ತೀರಿ. ಅಂದರೆ, ನೋಡಿದ ತಕ್ಷಣವೇ ಆಕರ್ಷಿತರಾಗಿ, ಪ್ರೀತಿಸಿದರೆ, ಇವರನ್ನೇ ಪ್ರೀತಿಸಿಬೇಕು ಅಥವಾ ಅವರನ್ನೇ ಬಾಳ ಸಂಗಾತಿಯಾಗಿ ಮಾಡಿಕೊಳ್ಳಬೇಕು ಎಂಬ ಭಾವನೆ ಮನಸ್ಸಲ್ಲಿ ಮೂಡುವುದು.
ಇಂತಹ ಆಕರ್ಷಣೆ ನಿಮಗೂ ಆಗಿದೆಯಾ? ಹಾಗಾದರೆ ಅದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ನೋಡಿದ ತಕ್ಷಣ ಅವರು ನಮ್ಮನ್ನು ಸೆಳೆಯುತ್ತಿದ್ದಾರೆ ಅಥವಾ ನಮಗೆ ಇಷ್ಟ ಆಗಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ? ಎಲ್ಲವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ನಿಮ್ಮನ್ನು ಆ ವ್ಯಕ್ತಿ ಸೆಳೆಯುತ್ತಿದ್ದಾನೆ ಎಂದು ಹೇಗೆ ಅರಿತುಕೊಳ್ಳವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಣ್ಣಲ್ಲಿ ಕಣ್ಣಿಟ್ಟು ನೋಡುವುದು:
ನಿಮಗೆ ಯಾರಾದರೂ ಆಕರ್ಷಿಕರಾಗಿ ಕಂಡರೆ, ಆ ವ್ಯಕ್ತಿಯೊಂದಿಗೆ ಕಣ್ಣಿನ ಸಂಪರ್ಕವನ್ನು ಕಾಪಾಡಿಕೊಳ್ಳುವ ಪ್ರಚೋದನೆಯನ್ನು ನೀವು ಅನುಭವಿಸುವಿರಿ. ನೀವು ಆ ವ್ಯಕ್ತಿಯನ್ನು ದಿಟ್ಟಿಸುತ್ತಿರುವುದನ್ನು ಕಾಣಬಹುದು ಅಥವಾ ಕಣ್ಣಿನ ಮೂಲಕವೇ ಆ ವ್ಯಕ್ತಿಯೊಂದಿಗೆ 'ಮೌನವಾಗಿ' ಮಾತನಾಡುತ್ತಿರುವಿರಿ ಎಂದು ನೀವು ಭಾವಿಸಬಹುದು.

ಮೊದಲೇ ಪರಿಚಯವಿದ್ದಂತಹ ಭಾವನೆ:
ನಿಮ್ಮ ಜೀವನದಲ್ಲಿ ಆ ವ್ಯಕ್ತಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದರೂ ಸಹ, ನೀವು ಅವರಿಗೆ ಆಕರ್ಷಿರಾಗಿದ್ದರೆ, ಈ ಮೊದಲೇ ಭೇಟಿಯಿದ್ದಂತೆ ಅಥವಾ ಪರಿಚಯವಿದ್ದಂತೆ ಅನಿಸಬಹುದು. ನಿಮ್ಮ ನಡುವೆ ಸಂಭಾಷಣೆಗಳು ಸುಲಭವಾಗಿ ನಡೆಯುತ್ತವೆ ಜೊತೆಗೆ ಆ ವ್ಯಕ್ತಿಯೊಂದಿಗೆ ಮಾತನಾಡುವುದು ತುಂಬಾ ನೈಸರ್ಗಿಕ ಪ್ರಕ್ರಿಯೆಯಂತೆ ಭಾಸವಾಗುತ್ತದೆ. ಅವರ ಗಮನವನ್ನು ಉಳಿಸಿಕೊಳ್ಳಲು ಹೆಚ್ಚುವರಿ ಪ್ರಯತ್ನ ಅಥವಾ ಒತ್ತಡವನ್ನು ಹಾಕಬೇಕೆಂದು ನಿಮಗೆ ಅನಿಸುವುದಿಲ್ಲ.

ನಿರ್ದಿಷ್ಟ ದೇಹ ಭಾಷೆ:
ಹೌದು, ನಿಮಗೆ ಯಾವ ವ್ಯಕ್ತಿಯ ಮೇಲಾದರೂ ಪ್ರೀತಿ ಆದಾಗ, ನಿಮ್ಮ ದೇಹ ಭಾಷೆ ಎಲ್ಲವನ್ನೂ ಹೇಳುತ್ತದೆ. ನೀವು ಆ ವ್ಯಕ್ತಿಯ ಕಡೆಗೆ ನಿಮ್ಮ ಆಸಕ್ತಿಯನ್ನು ಪ್ರದರ್ಶಿಸಿದಾಗ, ನಿಮ್ಮ ದೇಹವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಅದರಲ್ಲಿ ಒಂದು ಸಣ್ಣ ನಗುವಿನೊಂದಿಗೆ, ನಿಮ್ಮ ಕೂದಲನ್ನು ಕಿವಿಯ ಹಿಂದೆ ಸರಿಸಿಕೊಳ್ಳುವುದು. ಇದು ಆ ವ್ಯಕ್ತಿಯೊಂದಿಗೆ ಮ್ಯಾಗ್ನೆಟಿಕ್ ಸಂಪರ್ಕವನ್ನು ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಇದು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ.

ಪರಸ್ಪರರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಬಯಕೆ:
ಈ ವ್ಯಕ್ತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೀರಿ, ಅದಕ್ಕಾಗಿ ಹಾತೊರಿಯುತ್ತೀರಿ. ಅದು ಫೋನ್ ಕಾಲ್, ಮೆಸೇಜ್ ಅಥವಾ ಡೇಟಿಂಗ್ ಮೂಲಕ ಆಗಿರಲಿ, ನಿಮಗೆ ಸಾಧ್ಯವಾದಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ಹೆಚ್ಚಿನದನ್ನು ಅರಿಯಲು ಪ್ರಯತ್ನಿಸುತ್ತೀರಿ. ನೀವು ಆ ವ್ಯಕ್ತಿಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರದ ಹೊರತು ಈ ಆಸೆ ಸಾಮಾನ್ಯವಾಗಿ ಸಂಭವಿಸುವುದಿಲ್ಲ.

ಫ್ಲರ್ಟಿಂಗ್:
ಹೌದು, ಸಾಮಾನ್ಯವಾಗಿ ನಿಮಗೆ ಯಾರಾದರೂ ಇಷ್ಟವಾದರೆ, ಅವರೊಂದಗೆ ಫ್ಲರ್ಟ್ ಮಾಡಲು ಆರಂಭಿಸುತ್ತೀರಿ. ಈ ಮೂಲಕ ಅವರಗೆ ಮತ್ತಷ್ಟು ಹತ್ತಿರವಾಗುವ ತವಕ ನಿಮ್ಮಾಗಿದರುತ್ತದೆ. ಮುಂದಾಗು ಪರಿಣಾಮಗಳನ್ನು ಅರಿಯದೇ, ಅವರ ಆಸಕ್ತಿಗಳನ್ನು ಅರಿತುಕೊಳ್ಳಲು ಮುಂದಾಗುತ್ತೀರಿ. ಒಂದು ರೀತಿಯಲ್ಲಿ ಹೇಳುವುದಾದರೆ, ಅವರನ್ನು ಹುಚ್ಚರಂತೆ ಪ್ರೀತಿಸುತ್ತೀರಿ.



Click it and Unblock the Notifications











