Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್!
ಆತ ನಿಮ್ಮನ್ನು ಬಹಳ ಆಳವಾಗಿ ಪ್ರೀತಿಸುತ್ತಿದ್ದಾನೆ ಎನ್ನುತ್ತವೆ ಈ ಸೂಚನೆಗಳು
ಸಂಬಂಧಗಳು ಸಾಮಾನ್ಯವಾಗಿ ನಿಮ್ಮ ಮನಸ್ಥಿತಿ ಅಥವಾ ಅನುಭವಗಳಿಂದ ರೂಪುಗೊಂಡ ಭಾವನೆಗಳಾಗಿವೆ. ಪ್ರತಿಯೊಬ್ಬರೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ವಿಭಿನ್ನ ದಾರಿಯನ್ನು ಹೊಂದಿರುತ್ತಾರೆ. ಆದರೆ, ಹುಡುಗಿಯರು ತಮ್ಮ ಪ್ರಿಯತಮನ ಪ್ರೀತಿ ಯಾವ ಹಂತದಲ್ಲಿದೆ, ಅದರ ತೀವ್ರತೆ ಎಷ್ಟಿದೆ? ಎಂದು ತಿಳಿದುಕೊಳ್ಳಲು ಸಾಮಾನ್ಯವಾಗಿ ಹಂಬಲಿಸುತ್ತಾರೆ. ನಿಮ್ಮ ಹುಡುಗ ನಿಮ್ಮನ್ನು ಆಳವಾಗಿ ಪ್ರೀತಿಸುತ್ತಾನೆಯೇ ಎಂದು ಖಚಿತಪಡಿಸಿಕೊಳ್ಳಲು ಬಯಸಿದರೆ, ಈ ಮೂರು ಚಿಹ್ನೆಗಳನ್ನು ಗಮನಿಸಿ, ಬಹುಶಃ ಉತ್ತರವನ್ನು ಪಡೆಯುತ್ತೀರಿ.
ಆತ ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾನೆ ಎಂದು ಸೂಚಿಸುವ ಚಿಹ್ನೆಗಳನ್ನು ಈ ಕೆಳಗೆ ನೀಡಲಾಗಿದೆ:

ನಿಮ್ಮಿಷ್ಟದ ಕೆಲಸಗಳನ್ನು ಮಾಡುವ ಮೂಲಕ ನಿಮ್ಮನ್ನು ಮೆಚ್ಚಿಸುತ್ತಾನೆ:
ಪ್ರೀತಿಯಲ್ಲಿರುವವರು ತಮ್ಮ ಪಾಲುದಾರರನ್ನು ಮೆಚ್ಚಿಸಲು ಬಯಸುತ್ತಾರೆ, ತಮಗಿಷ್ಟವಿಲ್ಲದಿದ್ದರೂ ಅಥವಾ ತಮಗೆ ಬೋರ್ ಎನಿಸಿದರೂ, ನಿಮಗೋಸ್ಕರ ಆ ಕೆಲಸಗಳನ್ನು ಇಷ್ಟಪಟ್ಟು ಮಾಡಲು ಮುಂದಾಗುತ್ತಾನೆ. ಈ ಮೂಲಕ ನೀವು ಇಷ್ಟಪಡುವ ಕೆಲಸಗಳನ್ನು ಅವರೂ ಮಾಡಲು ಬಯಸುವುದನ್ನು ಕಾಣಬಹುದು. ನಿಮಗೆ ಇಷ್ಟವಿರುವ ಪುಸ್ತಕ ಪ್ರದರ್ಶನಕ್ಕೆ ಹಾಜರಾಗುವುದರಿಂದ ಹಿಡಿದು, ಯಾವ ಸಿನಿಮಾಕ್ಕೆ ಹೋಗಬೇಕೆಂದು ಆಯ್ಕೆ ಮಾಡುವ ಅವಕಾಶವನ್ನೂ ನಿಮಗೇ ನೀಡುತ್ತಾನೆ. ಇದು ಪ್ರೀತಿಯಲ್ಲಿರುವ ವ್ಯಕ್ತಿ ನಿಮಗಾಗಿ ಮಾಡುವ ಕೆಲಸ. ಮುಖ್ಯವಾಗಿ ಆತ ನಿಮ್ಮ ಸನಿಹವನ್ನೇ ಬಯಸುತ್ತಿರುತ್ತಾನೆ. ಎಲ್ಲಾ ಕೆಲಸಗಳಿಗೂ ನಿಮ್ಮನ್ನೇ ಕರೆಯುತ್ತಾನೆ.

ಆತ ನಿಮ್ಮತ್ತ ಆಗಾಗ ನೋಡುತ್ತಿರುವುದನ್ನು ಗಮನಿಸಬಹುದು:
ನಿಮ್ಮನ್ನು ಆಳವಾಗಿ ಪ್ರೀತಿಸುವ ವ್ಯಕ್ತಿ ನಿಮ್ಮ ಮುಖದ ಅಭಿವ್ಯಕ್ತಿಗಳಲ್ಲಿ ಸೂಕ್ಷ್ಮವಾದ ಚಿಹ್ನೆಗಳನ್ನು ಹುಡುಕುತ್ತಾರೆ, ನೀವು ಸಂತೋಷವಾಗಿದ್ದೀರಾ, ಚಿಂತೆ ಮಾಡುತ್ತಿದ್ದೀರಾ ಅಥವಾ ಆಳವಾದ ಆಲೋಚನೆಯಲ್ಲಿದ್ದೀರಾ ಎಂಬುದನ್ನು ನಿಮ್ಮ ಮುಖ ನೋಡಿಯೇ ಅರಿತುಕೊಳ್ಳುತ್ತಾರೆ. ಅದಕ್ಕಾಗಿಯೇ ಆಗಾಗ ನಿಮ್ಮ ಮುಖದ ಭಾವನೆಗಳನ್ನ ಗಮನಿಸಲು ನಿಮ್ಮ ಕಡೆಯೇ ಕಣ್ಣು ಹಾಯಿಸುತ್ತಿರುತ್ತಾನೆ. ಈ ಮೂಲಕ ಆತ ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದಾರೆ, ನಿಮ್ಮನ್ನು ಆಳವಾಗಿ ಪ್ರೀತಿಸುತ್ತಿದ್ದಾರೆ ಎಂಬುದು ಖಚಿತವಾಗುವುದು.

ಆತನ ಕೊನೆಯ ತುತ್ತು ನಿಮಗೆ ನೀಡುತ್ತಾನೆ:
ಇದು ಒಂದು ಸಣ್ಣ ಗೆಸ್ಚರ್‌ನಂತೆ ಕಾಣಿಸಬಹುದು, ಆದರೆ ನಿಮ್ಮ ಸಂಗಾತಿಯು ಆಹಾರಪ್ರಿಯರಾಗಿದ್ದರೆ ಇದರರ್ಥ ಹೆಚ್ಚೇ ಆಗಿರುತ್ತದೆ. ತಾನು ತಿನ್ನುವ ಆಹಾರದಲ್ಲಿ ಹಾಗೂ ತನ್ನಿಷ್ಟದ ಆಹಾರದಲ್ಲಿ ಅಥವಾ ಯಾವುದೇ ಕುಕೀ, ಕೇಕ್‌ಗಳ ಕೊನೆಯ ಭಾಗವನ್ನು ನಿಮಗಾಗಿ ನೀಡುತ್ತಿದ್ದರೆ, ಆತ ನಿಮ್ಮನ್ನು ಬಹಳ ಪ್ರೀತಿಸುತ್ತಿದ್ದಾನೆ ಎಂದರ್ಥ. ಇದು ತಳಮಟ್ಟದಲ್ಲಿ ನಿಮಗೆ ಸೇವೆ ಸಲ್ಲಿಸಲು ಮತ್ತು ನಿಮ್ಮನ್ನು ರಕ್ಷಿಸಲು ಪ್ರಾಥಮಿಕ ಪ್ರವೃತ್ತಿಯನ್ನು ಸೂಚಿಸುತ್ತದೆ. ನೀವೇನಾದರೂ ಇಂತಹ ವ್ಯಕ್ತಿಯನ್ನು ನಿಮ್ಮ ಜೀವನದಲ್ಲಿ ಪಡೆದಿದ್ದರೆ, ಅದೃಷ್ಟವಂತರು.



Click it and Unblock the Notifications
