Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಆತ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎನ್ನುವ ಸೂಚನೆಗಳಿವು
ಪುರುಷರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಅಷ್ಟೇನೂ ಆಸಕ್ತಿ ತೋರುವುದಿಲ್ಲ. ತಮ್ಮ ಭಾವನೆಗಳನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳುವುದೂ ಇಲ್ಲ. ಪ್ರೀತಿಯ ವಿಚಾರಕ್ಕೆ ಬಂದರಂತೂ, ಎಲ್ಲವನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ಅವರ ಹೃದಯದಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಅವರ ಮುಖಭಾವವನ್ನು ಮತ್ತು ಅವರ ಬಾಡಿ ಲ್ಯಾಂಗ್ವೇಜ್ ಗಮನಿಸುವುದು.
ಹತ್ತಿರದಲ್ಲಿದ್ದಾಗ ಅವರ ಮುಖ ನೋಡಿಯೇ ಅವರ ಮನದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬಹುದು. ಆದರೆ ದೂರವಿರುವಾಗ ಅವರು ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ, ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳುವುದು ಹೇಗೆ? ಅದಕ್ಕಾಗಿ ನಾವಿಂದು ಸಹಾಯ ಹೇಳಿಕೊಡುತ್ತೇವೆ. ಅದೇಗೆ ಅಂದ್ರೆ ಒಬ್ಬ ವ್ಯಕ್ತಿ ನಿಮ್ಮನ್ನು ಮಿಸ್ ಮಾಡಿಕೊಂಡಾಗ ಆತ ಕೊಡುವಂತಹ ಕೆಲವು ಸೂಚನೆಗಳ ಬಗ್ಗೆ ತಿಳಿಸಿಕೊಡುತ್ತೇವೆ.
ನಿಮ್ಮ ಪ್ರಿಯಕರ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ಸೂಚಿಸುವ ಚಿಹ್ನೆಗಳನ್ನು ಈ ಕೆಳಗೆ ನೀಡಲಾಗಿದೆ:

ನಿಮ್ಮ ಬಗ್ಗೆ ಎಲ್ಲವನ್ನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತಾನೆ:
ಹೌದು, ಯಾವುದೇ ಹುಡುಗ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ, ಆತ ನಿಮ್ಮ ಬಗ್ಗೆ ಹೆಚ್ಚಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ನಿಮ್ಮ ಇಷ್ಟ-ಕಷ್ಟಗಳ ಬಗ್ಗೆ ವಿಚಾರಿಸುತ್ತಾನೆ ಜೊತೆಗೆ ಆತನ ಜೀವನದ ಬಗ್ಗೆಯೂ ಹಂಚಿಕೊಳ್ಳುತ್ತಾನೆ. ನಿಮ್ಮ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸದಾ ಉತ್ಸುಕನಾಗುತ್ತಾನೆ. ಈ ಮೂಲಕ ನಿಮ್ಮ ಬಗ್ಗೆ ಆತನಿಗೆ ತಿಳಿದಿದೆ ಎಂದು ತೋರಿಸುವ ದಾರಿಯಾಗಿದೆ ಜೊತೆಗೆ ಪರಸ್ಪರ ಹಂಚಿಕೊಳ್ಳುವುದರಿಂದ ಇಬ್ಬರ ನಡುವಿನ ಬಾಂಡ್ ಹೆಚ್ಚಾಗುವುದು ಎಂಬುದು ಅವನ ನಂಬಿಕೆ.

ಸಂಭಾಷಣೆಯನ್ನು ಮುಂದುವರಿಸಲು ಯತ್ನಿಸುತ್ತಾನೆ:
ಒಂದು ಹಂತದ ನಂತರ ಸಂಭಾಷಣೆಯನ್ನು ಮುಗಿಸುವುದು ಬಹಳ ಸುಲಭ. ಆದರೆ ಅವನು ಸಂಭಾಷಣೆಯನ್ನು ಮುಂದುವರಿಸಲು ಪ್ರಯತ್ನಿಸಿದರೆ ಅವನು ಖಂಡಿತವಾಗಿಯೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂದರ್ಥ. ಆತನಿಗೆ ನಿಮ್ಮ ಜೊತೆ ಮಾತು ಮುಗಿಸಲು ಇಷ್ಟವಿಲ್ಲ, ನಿಮ್ಮ ಜೊತೆಗೆ ಕಾಲ ಕಳೆಯಬೇಕೆಂಬ ಆಸೆ ಅವನಿಗಿರುತ್ತದೆ. ಇದಕ್ಕಾಗಿ ಹೊಸ ಹೊಸ ವಿಷಯಗಳನ್ನು ಮಧ್ಯೆ ತಂದು, ಆ ಕುರಿತು ಏನಾದರೂ ಮಾತನಾಡಲು ಆರಂಭಿಸುತ್ತಾನೆ.

ನಿಮ್ಮನ್ನು ನೋಡಲು ಸದಾ ಹಾತೋರುಯುತ್ತಾನೆ:
ನೀವು ಒಬ್ಬರಿಗೊಬ್ಬರು ಮೆಸೇಜ್ ಕಳುಹಿಸಿದಾಗಲೆಲ್ಲಾ, ನಿಮ್ಮನ್ನು ನೋಡದೇ ಇರಲು ಸಾಧ್ಯವಾಗುತ್ತಿಲ್ಲ, ನೋಡಲು ಕಾಯುವುದು ಅಸಾಧ್ಯ ಎಂಬ ಮಾತನ್ನು ಉಲ್ಲೇಖ ಮಾಡುತ್ತಲೇ ಇರುತ್ತಾನೆಂದರೆ ಆತ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂದರ್ಥ. ಭವಿಷ್ಯದಲ್ಲಿ ನಿಮ್ಮ ಜೊತೆ ಇರಲು ಬೇರೆ ಬೇರೆ ಪ್ಲಾನ್ ಯೋಜಿಸುತ್ತಾನೆ, ಎಷ್ಟೇ ಕಾರ್ಯನಿರತವಾಗಿದ್ದರೂ ನಿಮ್ಮನ್ನು ಭೇಟಿಯಾಗಲು ಸದಾ ಸಿದ್ಧನಾಗಿರುತ್ತಾನೆ, ಅದೇ ರೀತಿ ಇರುತ್ತಾನೆ ಕೂಡಾ..

ಬೇಗ ಪ್ರತಿಕ್ರಿಯಿಸುತ್ತಾನೆ:
ನೀವು ಅವನಿಗೆ ಸಂದೇಶ ಕಳುಹಿಸಿದಾಗಲೆಲ್ಲಾ ನಿಮಿಷಗಳಲ್ಲಿ ಉತ್ತರಿಸುತ್ತಾನೆ. ಇದು ಆತ ನಿಜಕ್ಕೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂಬುದರ ಅರ್ಥ. ಆತನಿಗೆ ನೀವು ಕೊಡುತ್ತಿರುವ ಸಮಯ ಸಾಕಾಗುತ್ತಿಲ್ಲ ಎಂಬುದರ ಅರ್ಥವೂ ಕೂಡ ಹೌದು. ನಿಮ್ಮನ್ನೇ ನೆನಸಿಕೊಳ್ಳುತ್ತಾ, ನಿಮ್ಮ ಸಂದೇಶಕ್ಕೆ ಕಾಯುತ್ತಾ, ಅದಕ್ಕೆ ಉತ್ತರಿಸಲೆಂದೇ ಕೂತಿರುತ್ತಾನೆ. ನಿಮ್ಮ ಮೆಸೇಜ್ ಬಂದಾಗ ತಕ್ಷಣ ಪ್ರತಿಕ್ರಿಯಿಸುತ್ತಾನೆ.



Click it and Unblock the Notifications
