Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಸಂಬಂಧದಲ್ಲಿರುವವರು ಮೋಸ ಮಾಡುವುದು ಇದೇ ಕಾರಣಗಳಿಂದಾಗಿ..
ಯಾವುದೇ ಸಂಬಂಧ ಆದರೂ ಸರಿ, ಅಲ್ಲಿ ನಂಬಿಕೆ ಎನ್ನುವುದು ತುಂಬಾ ಮುಖ್ಯ. ನಾವು ನಂಬಿಕೆ ಇಟ್ಟ ವ್ಯಕ್ತಿ ನಮಗೆ ಅರಿಯವಾಗದ ರೀತಿಯಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ತಿಳಿದರೆ ಅದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ. ಆದರೆ ಆ ವ್ಯಕ್ತಿ ನಮಗೆ ಮೋಸ ಮಾಡಲು ಕೆಲವೊಂದು ನಿರ್ದಿಷ್ಟ ಕಾರಣಗಳಿರುತ್ತವೆ. ಅವುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಂಬಂಧದಲ್ಲಿ ಜನರು ಏಕೆ ಮೋಸ ಮಾಡುತ್ತಾರೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಬೋರ್ ಆಗಿರುವುದು:
ಜನರು ಮೋಸ ಮಾಡಲು ಪ್ರಮುಖ ಕಾರಣವೆಂದರೆ ಸಂಬಂಧ ಬೊರ್ ಆಗುವುದು. ಒಂದು ಮಗುವಿಗೆ ಸ್ವಲ್ಪ ಸಮಯದ ನಂತರ ಹೇಗೆ ಒಂದು ಆಟಿಕೆ ಬೊರ್ ಆಗುವುದೋ ಹಾಗೇ, ಕೆಲವರಿಗೆ ಜನರು ಬೋರ್ ಆಗುತ್ತಾರೆ. ಸದಾ ಕಾಲ ಒಬ್ಬರ ಜೊತೆಯೇ ಇರುವುದು ಅವರಿಗೆ ಬೇಸರ ತರಬಹುದು. ಇದರಿಂದಲೇ ಬೇರೆ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಬಹುದು. ಇಂತಹವರು ಬೇರೆಯವರಿಗೆ ಆಕರ್ಷಣೆ ಆಗುವುದು ಬೇಗ, ಮೋಸ ಮಾಡುವುದು ಬೇಗ.

ಕೋಪ ಅಥವಾ ಸೇಡು:
ಅನೇಕ ಬಾರಿ, ಜನರು ಕೋಪದಿಂದ ಅಥವಾ ಸೇಡು ತೀರಿಸಿಕೊಳ್ಳುವ ದೃಷ್ಟಿಯಿಂದ ಮೋಸ ಮಾಡುತ್ತಾರೆ. ಯಾವುದೋ ಒಂದು ವಿಚಾರದಲ್ಲಿ ನೀವು ಮಾಡಿರುವ ನೋವನ್ನು ನೆನಪಿಟ್ಟುಕೊಂಡು, ಅದರ ಹಗೆಯನ್ನು ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಕೊನೆಗೆ ಅದನ್ನು ಪ್ರೀತಿಯ ನಾಟಕವಾಡಿ, ಅರ್ಧದಲ್ಲೇ ಬಿಟ್ಟು ಹೋಗುತ್ತಾರೆ. ಈ ಮೂಲಕ ಅವರ ಸೇಡನ್ನು ತೀರಿಸಿಕೊಳ್ಳುತ್ತಾರೆ.

ಮದುವೆಯಲ್ಲಿ ಅತೃಪ್ತಿ:
ತಮ್ಮ ಎಲ್ಲ ಅಗತ್ಯಗಳನ್ನು ಪೂರೈಸುವ ನಿರೀಕ್ಷೆಯೊಂದಿಗೆ ಜನರು ಹೆಚ್ಚಾಗಿ ಮದುವೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ತಾವು ಬಯಸಿದೆಲ್ಲವೂ ಆ ಮದುವೆಯಿಂದ ಸಿಗದೇ ಇದ್ದರೆ, ಬೇರೆಡೆ ತಮ್ಮ ಮನಸ್ಸನ್ನು ಹರಿಯಬಿಡುತ್ತಾರೆ. ಬೇರೆ ಸಂಗಾತಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ.

ಪ್ರೀತಿಯಲ್ಲಿ ಶಾಶ್ವತವಾಗಿಲ್ಲದೆ ಇರುವುದು :
ಯಾರನ್ನಾದರೂ ಪ್ರೀತಿಸುವ ಭಾವನೆ ಸಾಮಾನ್ಯವಾಗಿ ಶಾಶ್ವತವಾಗಿ ಉಳಿಯುವುದಿಲ್ಲ. ದಿನ ಕಳೆದಂತೆ ಉತ್ಸಾಹ ಕಡಿಮೆಯಾಗುತ್ತದೆ. ಪ್ರೀತಿಯಲ್ಲಿ ಉತ್ಸಾಹ ಇಲ್ಲ ಎಂದರೆ ಅವರಿಗೆ ಆ ಪ್ರೀತಿ ಸಾಕಾಗಿರ್ಬಹುದು ಅಥವಾ ಬೇರೆ ಪ್ರೀತಿ ಸಿಕ್ಕಿರಬಹುದು ಎಂದರ್ಥ.

ದೈಹಿಕ ಅಥವಾ ಭಾವನಾತ್ಮಕ ದೂರ
ನಿಮ್ಮ ಸಂಗಾತಿ ದೀರ್ಘಕಾಲ ಕೆಲಸ ಮಾಡುವುದರಿಂದ ನೀವು ಅವರಿಂದ ದೈಹಿಕ ಹಾಗೂ ಮಾನಸಿಕವಾಗಿ ದೂರವಾಗುತ್ತಿರಿ. ಇದರಿಂದ ಅವರಲ್ಲಿ ಒಂಟಿತನ ಕಾಡಬಹುದು. ಒಂದು ವೇಳೆ ನೀವು ಹತ್ತಿರದಲ್ಲಿದರೂ ನಿಮ್ಮ ಸಂಗಾತಿಯ ಭಾವನೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಾದರೂ ಸಹ ಅವರು ಬೇರೆ ವ್ಯಕ್ತಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ.

ಲೈಂಗಿಕ ಅಸಮಾಧಾನ
ಸಂಬಂಧದಲ್ಲಿನ ಲೈಂಗಿಕ ಅಸಮಾಧಾನವು ತಮ್ಮ ಸಂಗಾತಿಯನ್ನು ಬಿಟ್ಟು ಬೇರೆಯವರನ್ನು ಹುಡುಕಲು ಪ್ರಚೋದಿಸುವುದು. ಏಕೆಂದರೆ ಲೈಂಗಿಕ ತೃಪ್ತಿ ಎನ್ನುವುದು ವ್ಯಕ್ತಿಗೆ ಅವಶ್ಯವಾದ ಅಂಶಗಳ್ಳಲ್ಲಿ ಒಂದಾಗಿದೆ.



Click it and Unblock the Notifications