Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯಾರನ್ನಾದರೂ ನಿಮ್ಮತ್ತ ಸೆಳೆದುಕೊಳ್ಳಬೇಕಾದರೆ, ಈ ಸೂಪರ್‌ಟ್ರಿಕ್ಸ್‌ಗಳನ್ನು ಪ್ರಯತ್ನಿಸಿ
ನಿಮ್ಮ ಅನುಪಸ್ಥಿತಿಯಲ್ಲಿ ಯಾರಾದರೂ ನಿಮ್ಮನ್ನು ಮಿಸ್ ಮಾಡಿಕೊಳ್ಳಬೇಕು ಅಥವಾ ನೆನಪಿಸಿಕೊಳ್ಳಬೇಕು ಎಂದು ಒಮ್ಮೆಯಾದರೂ ನಿಮಗೆ ಅನಿಸಿರುತ್ತದೆ ಅಥವಾ ನಿಮ್ಮ ಪ್ರೇಮಿ, ಸಂಗಾತಿಯೇ ನಿಮ್ಮನ್ನು ಮಿಸ್ ಮಾಡಿಕೊಳ್ಳಬೇಕು ಎಂಬ ಆಸೆಯಾದರೂ ಇರುತ್ತದೆ ಅಲ್ಲವೇ?..ಹಾಗಾದರೆ ಈ ಸ್ಟೋರಿ ಓದಿ.
ಇಲ್ಲಿ ನಾವು ನೀವು ಇಷ್ಡಪಡುವ ವ್ಯಕ್ತಿ ನಿಮ್ಮನ್ನು ಮಿಸ್ ಮಾಡಿಕೊಳ್ಳಬೇಕಾದರೆ, ನೀವೇನು ಮಾಡಬೇಕು ಎಂಬುದನ್ನು ಹೇಳಿದ್ದೇವೆ. ಹಾಗಂತ ಇದು ಯಾವುದೇ ಟ್ರಿಕ್ಸ್‌ಗಳಲ್ಲ, ಇದು ಅವರ ಮನಸ್ಸಿಗೆ ನಾಟುವಂತಹ ತಂತ್ರಗಳಾಗಿವೆ.
ನಿಮ್ಮನ್ನು ಆಗಾಗ ನೆನಪಿಸಿಕೊಳ್ಳಲು ಸಹಾಯ ಮಾಡುವ ತಂತ್ರಗಳನ್ನು ಈ ಕೆಳಗೆ ನೀಡಲಾಗಿದೆ:

ಆಕರ್ಷಕ ನೋಟ:
ಯಾವಾಗಲೂ ನಿಮ್ಮ ನೋಟದ ಮೇಲೆ ಕೆಲಸ ಮಾಡಿ. ಚೆನ್ನಾಗಿ ಉಡುಗೆ -ತೊಡುಗೆ ಮಾಡಿಕೊಳ್ಳಿ. ನೀವು ಯಾವಾಗಲೂ ಸಪ್ಪೆಯಾಗಿ ಕಾಣುತ್ತಿದ್ದರೆ, ಜನರು ನಿಮ್ಮಿಂದ ಬೇಸರಗೊಳ್ಳುತ್ತಾರೆ ಮತ್ತು ಆಫ್ ಆಗುತ್ತಾರೆ. ಆಕರ್ಷಕವಾಗಿ ಕಾಣಿಸಿಕೊಳ್ಳುವುದು, ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಅವರು ನಿಮ್ಮೊಂದಿಗೆ ಹ್ಯಾಂಗ್ ಔಟ್ ಮಾಡಲು ಬಯಸುತ್ತಾರೆ ಜೊತೆಗೆ ನಿಮ್ಮನ್ನು ಮೆಚ್ಚುತ್ತಾರೆ.

ನಿಮ್ಮ ಪರಿಮಳ:
ವ್ಯಕ್ತಿಯ ಸುವಾಸನೆಯು ತುಂಬಾ ಶಕ್ತಿಯುತವಾಗಿದೆ, ಆದರೆ ಅನೇಕರಿಗೆ ಅದು ತಿಳಿದಿಲ್ಲ. ನೀವು ಬಳಸುವ ಸುಗಂಧದ್ರವ್ಯ ನಿಮ್ಮ ನೆನಪುಗಳನ್ನು ಪ್ರಚೋದಿಸುತ್ತದೆ. ಇದು ಭಾವನೆಗಳನ್ನು ಮತ್ತು ನೆನಪುಗಳನ್ನು ಪುನರುಜ್ಜೀವನಗೊಳಿಸುವ ಶಕ್ತಿಯನ್ನು ಹೊಂದಿದೆ. ಇದಕ್ಕಾಗಿ, ನೀವು ಸರಿಯಾದ ಪರ್ಫ್ಯೂಮ್ ಆರಿಸಿಕೊಂಡು, ಅದನ್ನೇ ನಿಯಮಿವಾಗಿ ಬಳಸಬೇಕು. ಏಕೆಂದರೆ, ಅದು ಆ ಪರಿಮಳ ವ್ಯಕ್ತಿಯ ಮನಸ್ಸಲ್ಲಿ ಅಚ್ಚೊತ್ತಬೇಕು, ಜೊತೆಗೆ ಆಗಾಗ ಕಾಡಬೇಕು.

ಸ್ವಲ್ಪ ನಿಗೂಢವಾಗಿರಿ:
ನೀವು ಎಷ್ಟೇ ಮಾತಿನಮಲ್ಲರಾದರೂ, ನಿಮ್ಮನ್ನು ಸಂಪೂರ್ಣವಾಗಿ ಬಹಿರಂಗಪಡಿಸುವುದನ್ನು ತಡೆಯಲು ಪ್ರಯತ್ನಿಸಿ. ಕೆಲವು ವಿವರಗಳು ಮತ್ತು ಪ್ರತಿಭೆಗಳನ್ನು ಮುಚ್ಚಿಡಿ, ಆ ವ್ಯಕ್ತಿಯು ನಿಮ್ಮನ್ನು ಕಂಡುಹಿಡಿಯಲಿ. ಯಾರಾದರೂ ನಿಮ್ಮ ಬಗ್ಗೆ ಯೋಚಿಸಬೇಕೆಂದು ಬಯಸಿದರೆ, ಅವರ ಕುತೂಹಲವನ್ನು ಹೆಚ್ಚಿಸಿ, ನಿಮ್ಮ ಬಗ್ಗೆ ಕಡಿಮೆ ಹೇಳಿ ಮತ್ತು ಅವರ ಬಗ್ಗೆ ಹೆಚ್ಚು ಕೇಳಿ. ಈ ರೀತಿಯಲ್ಲಿ ಅವರು ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿ:
ನೀವು ತುಂಬಾ ಹೊರಗೆ ಹೋಗದೇ ಇರಬಹುದು ಆದರೆ ಸಾಮಾಜಿಕ ಮಾಧ್ಯಮದ ಮುಖಾಂತರ ಎಲ್ಲರನ್ನೂ ತಲುಪಬಹುದು, ಎಲ್ಲಾ ಕಡೆ ಹೋಗಬಹುದು.ನೀವು ಯಾವಾಗಲೂ ಮೋಜು ಮಾಡುತ್ತಿದ್ದೀರಿ, ಅದ್ಭುತ ಸ್ಥಳಗಳಿಗೆ ಹೋಗುತ್ತೀರಿ ಮತ್ತು ನೀವು ಆಸಕ್ತಿದಾಯಕ ಜನರೊಂದಿಗೆ ಸಂವಹನ ನಡೆಸುತ್ತೀರಿ ಎಂಬ ಭ್ರಮೆಯನ್ನು ರಚಿಸಿ. ಅವರು ಏನನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅವರಿಗೆ ತಿಳಿಸಿ.

ಸ್ವತಂತ್ರವಾಗಿರಿ:
ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿರುವುದು ಹೆಚ್ಚಿನವರಿಗೆ ಇಷ್ಟ, ಸಾಮಾನ್ಯವಾಗಿ ಇದರರ್ಥ ನೀವು ನಿಮ್ಮದೇ ಆದ ಜೀವನವನ್ನು ನಡೆಸುತ್ತಿದ್ದೀರಿ ಎಂಬುದು. ಜೀವನದಲ್ಲಿ ಕೆಲವು ಗುರಿಗಳನ್ನು ಹೊಂದಿದ್ದೀರಿ, ಜೊತೆಗೆ ಮೋಜಿನ ಜೀವನವನ್ನು ಹೊಂದಿದ್ದೀರಿ ಎಂದು ತೋರಿಸಿದಾಗ, ನಿಮ್ಮ ಅನುಪಸ್ಥಿತಿಯಲ್ಲಿ ಜನರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಾರೆ.

ಏನನ್ನಾದರೂ ಬಿಟ್ಟುಹೋಗಿ:
ಅದು ಉಂಗುರವಾಗಿರಲಿ, ಕಿವಿಯೋಲೆಯಾಗಲಿ, ನಿಮ್ಮ ಟೋಪಿಯಾಗಿರಲಿ ಅಥವಾ ನೀರಿನ ಬಾಟಲಿಯಾಗಿರಲಿ, ಏನನ್ನಾದರೂ ಬಿಟ್ಟುಹೋಗಿ. ಆದ್ದರಿಂದ ನೀವು ಹತ್ತಿರವಿಲ್ಲದಿದ್ದಾಗ, ಅವರು ಆ ವಿಷಯವನ್ನು ನೋಡಿದಾಗ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಾರೆ. ಇಲ್ಲಿ ಉತ್ತಮ ಭಾಗವೆಂದರೆ ನೀವು ಏನನ್ನೂ ಮಾಡಬೇಕಾಗಿಲ್ಲ, ಆದರೆ ಯಾವುದನ್ನಾದರೂ ನಿರ್ಲಕ್ಷವಾಗಿ ಬಿಡಿ.



Click it and Unblock the Notifications
