Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ನೀವು ಟ್ರೈ ಮಾಡಿ, ಪ್ರಾಮಿಸ್ ಡೇಗೆ ಹೇಳಿಮಾಡಿಸಿದ ಈ ಗಿಫ್ಟ್ ಗಳನ್ನು..
ನಿಮ್ಮ ಸಂಗಾತಿಗೆ ಎಂದೆಂದಿಗೂ ಮುಗಿಯದ ಪ್ರೀತಿ ಮತ್ತು ಕಾಳಜಿಯನ್ನು ನೀಡುತ್ತೇನೆಂದು ಭರವಸೆ ನೀಡುವ ಅತ್ಯುತ್ತಮ ಸಂದರ್ಭವೇ ಪ್ರಾಮಿಸ್ ಡೇ. ಫೆಬ್ರವರಿ ೧೧ರಂದು ತಮ್ಮ ಪ್ರೀತಿಪಾತ್ರರಿಗೆ ಎಂತಹ ಸಂದರ್ಭದಲ್ಲೂ ಬಿಟ್ಟು ಕೊಡಲಾರೆ ಎಂದು ಪ್ರಮಾಣ ಮಾಡುವುದೇ ಪ್ರಾಮಿಸ್ ಡೇ. ಜೀವನದಲ್ಲಿ ಬರುವ ಕಷ್ಟ-ಸುಖ, ದುಃಖ, ನೋವು-ನಲಿವುಗಳನ್ನು ಸಮಾನಾಗಿ ಹಂಚಿಕೊಂಡು ಬಾಳುತ್ತೇವೆಂದು ಈ ದಿನದಂದು ಪ್ರಾಮಿಸ್ ಮಾಡುತ್ತಾರೆ. ಈ ಪ್ರಾಮಿಸ್ ದಿನವನ್ನು ನಿಮ್ಮ ಪ್ರೀತಿಪಾತ್ರರ ಜೊತೆಗೆ ಹೆಚ್ಚು ಸಂತಸ ಮತ್ತು ರೋಮಾಂಚನಕಾರಿಯಾಗಿ ಮಾಡಲು ನಿಮಗೆ ಸಹಾಯ ಮಾಡಲು ಕೆಲವು ಅದ್ಭುತ ಉಡುಗೊರೆ ಕಲ್ಪನೆಗಳನ್ನು ನಿಮಗೆ ತರುತ್ತಿದ್ದೇವೆ.
ಪ್ರಾಮಿಸ್ ಡೇಯಂದು ನಿಮ್ಮ ಸಂಗಾತಿಗೆ ಕೊಡಲು ಉಡುಗೊರೆಗಳು ಇಲ್ಲಿವೆ:

ಪ್ರಾಮಿಸ್ ಕ್ಯಾಂಡಲ್:
ಭರವಸೆಯ ಮೇಣದ ಬತ್ತಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ನಿಮ್ಮ ಪ್ರಿಯರಿಗೆ ಅವರ ಜೀವನದಲಿ ಶಾಶ್ವತವಾಗಿ ಬೆಳಕಾಗಿ ಇರುತ್ತೇನೆಂದು ಭರವಸೆ ನೀಡಿ. 'ನಾನು ನಿನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ, ಇಂದಿಗೂ ಮತ್ತು ಎಂದೆಂದಿಗೂ ಪ್ರೀತಿಸುತ್ತೇನೆ' ಎಂದು ಹೇಳುವ ಮೂಲಕ, ಪರಿಮಳಯುಕ್ತ ಮೇಣದ ಬತ್ತಿ ನೀಡಿ. ಇದು ಖಂಡಿತವಾಗಿಯೂ ನಿಮ್ಮ ಸಂಗಾತಿಯ ಮುಖದಲ್ಲಿ ದೊಡ್ಡ ನಗುವನ್ನು ಮೂಡಿಸುತ್ತದೆ. ಮತ್ತು ಮುಂದಿನ ಒಂದು ವಾರದವರೆಗೂ ಈ ಮನಸ್ಥಿತಿ ಮುಂದುವರೆಯುತ್ತದೆ.

ಲವ್ ಪ್ಲೇಕ್:
ನಿಮ್ಮ ಜೀವನದ ವಿಶೇಷ ವ್ಯಕ್ತಿಯನ್ನು ಪ್ರೀತಿಸುತ್ತಿರುವುದು ಯಾವಾಗಲೂ ಉತ್ತಮವೆನಿಸುತ್ತದೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಆ ವ್ಯಕ್ತಿಯ ಬಗ್ಗೆ ನಿಮ್ಮ ಒಳಗಿನ ಭಾವನೆಗಳನ್ನು ವ್ಯಕ್ತಪಡಿಸುವುದು. ನಿಮ್ಮ ಸಂಗಾತಿಯನ್ನು ಎಂದಿಗೂ ಮತ್ತು ಶಾಶ್ವತವಾಗಿ ಪ್ರೀತಿಸುತ್ತೀರಿ ಎಂಬುದನ್ನು ಮರದ ಫಲಕದ ಮೇಲೆ ಬರೆದಿರುವ ವಸ್ತುವನು ಉಡುಗೊರೆಯಾಗಿ ನೀಡಿ. ನಿಮ್ಮ ಭಾವನೆಗಳಿಗೆ ಪದಗಳನ್ನು ನೀಡಲು ಮತ್ತು ನಿಮ್ಮ ಜೀವನದ ಪ್ರಮುಖ ವ್ಯಕ್ತಿಯಾಗಿರುವ ನಿಮ್ಮ ಸಂಗಾತಿಯನ್ನು ನೀವು ಎಷ್ಟು ಆಳವಾಗಿ ಪ್ರೀತಿಸುತ್ತೀರಿ ಎಂಬುದನ್ನು ತೋರಿಸಲು ಉತ್ತಮ ಮಾರ್ಗವಾಗಿದೆ.

ಹೂಗುಚ್ಛ:
ಹೂವುಗಳನ್ನು ಪ್ರತಿ ಸಂಬಂಧ ಮತ್ತು ಸಂದರ್ಭಕ್ಕೆ ಹೊಂದುವ ಅತ್ಯುತ್ತಮ ಉಡುಗೊರೆಗಳೆಂದು ಪರಿಗಣಿಸಲಾಗುತ್ತದೆ. ಹಾಗಿರುವಾಗ ನಿಮ್ಮ ಸಂಗಾತಿಗೆ ಪ್ರೀತಿ, ಸೌಂದರ್ಯ ಮತ್ತು ಸಂತೋಷದಿಂದ ತುಂಬಿದ ಜೀವನವನ್ನು ನೀಡುತ್ತೇನೆಂದು ವಾಗ್ದಾನ ನೀಡಲು ಈ ಹೂಗುಚ್ಛಗಳನ್ನು ಏಕೆ ಬಳಸಬಾರದು? ಹೌದು, ಹೂಗುಚ್ಛ ನೀಡಿ, ಪ್ರಾಮಿಸ್ ಮಾಡಿ. ಹೂವುಗಳ ಸೌಂದರ್ಯವು ನಿಮ್ಮ ಸಂಗಾತಿಯ ಕಣ್ಣುಗಳನು ಆಕರ್ಷಿಸುತ್ತದೆ ಮತ್ತು ಅವರ ಮುಖದ ಮೇಲೆ ದೊಡ್ಡ ಸ್ಮೈಲ್ ನೀಡುತ್ತದೆ.

ಸದಾ ನಿನ್ನೊಂದಿಗೆ ಇರುವ ಭರವಸೆಯೊಂದಿಗೆ ಕುಶನ್:
ನಿಮ್ಮ ಪ್ರೀತಿಯ ಆರಾಮದಾಯಕತೆಯನ್ನು ವ್ಯಕ್ತಪಡಿಸಲು ಯಾರಿಗಾದರೂ ಕುಶನ್ ನೀಡುವುದು ಉತ್ತಮ ಮಾರ್ಗವಾಗಿದೆ. 'ಐ ಪ್ರಾಮಿಸ್ ಯು, ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ' ಎಂದು ಹೇಳುವ ಒಂದು ಮುದ್ದಾದ ಮತ್ತು ಆರಾಮದಾಯಕವಾದ ಕುಶನ್ ನಿಮ್ಮ ಪ್ರಿಯತಮೆಗೆ ಅತ್ಯುತ್ತಮವಾದ ಪ್ರಾಮಿಸ್ ಡೇ ಉಡುಗೊರೆಯಾಗಿದೆ. ಇದು ಪ್ರತಿದಿನ ಅವಳ ಮುಖದಲ್ಲಿ ಸ್ಮೈಲ್ ಮೂಡಿಸುತ್ತದೆ. ಪ್ರತಿದಿನ ಬೆಳಿಗ್ಗೆ ಅದೇ ಕುಶನ್ ಮೂಲಕ ಎಚ್ಚರಗೊಳ್ಳುವುದು ಅವಳ ಇಡೀ ದಿನಕ್ಕೆ ಒಂದು ರೀತಿಯ ಹುರುಪನ್ನು ತುಂಬುತ್ತದೆ.

ಪ್ರಾಮಿಸ್ ರಿಂಗ್:
ನಿಮ್ಮ ಸಂಗಾತಿಗೆ ನೀವು ಸಂಪೂರ್ಣವಾಗಿ ಸಮರ್ಪಿತರಾಗಿದ್ದರೆ ಮತ್ತು ಅವರಿಗೆ ಸಂತೋಷ ತುಂಬಿದ ಜೀವನವನ್ನು ನೀಡುವ ಭರವಸೆ ಹೊಂದಿದ್ದರೆ, ಆಕೆಗೆ ಏಕೆ ಉಂಗುರವನ್ನು ಹಾಕಬಾರದು. ನಿಮ್ಮ ಸಂಗಾತಿಗೆ ಭರವಸೆಯ ಉಂಗುರವನ್ನು ನೀಡುವುದು ಅವರ ಮೇಲಿನ ನಿಮ್ಮ ಶಾಶ್ವತ ಪ್ರೀತಿಯನ್ನು ಸಂಕೇತಿಸುತ್ತದೆ, ಅದು ನಿಮ್ಮ ಸಂಬಂಧವನ್ನು ವಾತ್ಸಲ್ಯ, ಕಾಳಜಿ, ಸಮರ್ಪಣೆ ಮತ್ತು ನಂಬಿಕೆಯೊಂದಿಗೆ ಪೋಷಿಸುತ್ತದೆ.



Click it and Unblock the Notifications