Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನೇರವಾಗಿ ಮಾತಲ್ಲಿ ಹೇಳದೇ, ಈ ಕಾರ್ಯಗಳ ಮೂಲಕ ಪುರುಷರು 'ಐ ಲವ್ ಯೂ' ಹೇಳುತ್ತಾರೆ
ಪುರುಷರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಸ್ವಲ್ಪ ಹಿಂದೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಪ್ರೀತಿಯ ವಿಷಯಕ್ಕೆ ಬಂದಾಗ. ಮಹಿಳೆಯರಂತೆ ಆಗಾಗ 'ಐ ಲವ್ ಯು' ಎಂದು ಜೋರಾಗಿ ಹೇಳುವುದು ಅವರು ಖಂಡಿತವಾಗಿಯೂ ಮಾಡುವುದಿಲ್ಲ. ಆದರೆ ಸಂಗಾತಿಯ ಮೇಲಿರುವ ಪ್ರೀತಿಯ ಭಾವನೆಗಳನ್ನು ತಮ್ಮ ಕಾರ್ಯಗಳ ಮೂಲಕ ವ್ಯಕ್ತಪಡಿಸುತ್ತಾರೆ. ಅವರ ತೋರುವ ಕಾಳಜಿ, ಬೆಂಬಲ ಎಲ್ಲವೂ ನಿಮ್ಮ ಮೇಲಿರುವ ಪ್ರೀತಿಯ ಸಂಕೇತ.
ಪುರುಷರು ಮಾತನಾಡದೇ, 'ಐ ಲವ್ ಯು' ಎಂದು ಸಾರುವ ಕೆಲವು ಕಾರ್ಯಗಳನ್ನು ಈ ಕೆಳಗೆ ನೀಡಲಾಗಿದೆ:

1. ನಿದ್ದೆ ಬಂದಾಗ ಬೆಡ್ ಶೀಟ್ ಹೊದಿಸುವುದು:
ನೀವು ನಿದ್ದೆ ಮಾಡಿದಾಗ ಅವರು ಬಂದು ನಿಮ್ಮ ಮೇಲೆ ಕಂಬಳಿ ಹಾಕುವುದು ಕೂಡ ಅವರಿಗಿರುವ ಪ್ರೀತಿಯನ್ನು ತೋರಿಸುವ ದಾರಿಯಾಗಿದೆ. ನಿದ್ರೆ ಮಾಡುವಾಗ ಆರೈಕೆ ಮಾಡುವುದು ಶಾಂತ ಮತ್ತು ಸುರಕ್ಷತೆಯ ಭಾವವನ್ನು ಉಂಟುಮಾಡುತ್ತದೆ.

2. ನಿಮ್ಮಿಷ್ಟದ ವಸ್ತುಗಳನ್ನು ಖರೀದಿಸುವುದು:
ಹೌದು, ನಿಮಗಿಷ್ಟವಾದ ವಸ್ತುಗಳನ್ನು ಖರೀದಿಸುವುದು ಸಹ ಪ್ರೀತಿಯನ್ನ ಹೇಳುವ ಮಾರ್ಗ. ಅದು ಕೂಡ ನಿಮಗೆ ತಿಳಿಯದೇ ಸರ್ಪೈಸ್ ನೀಡಿದರೆ, ನಿಮ್ಮಷ್ಟು ಅದೃಷ್ಟವಂತೆ ಮತ್ತೊಬ್ಬರಿಲ್ಲ. ಮಹಿಳೆಯರು ಇಷ್ಟಪಡುವ ವಿಷಯಗಳ ಬಗ್ಗೆ ಸದ್ದಿಲ್ಲದೇ ಅರಿತುಕೊಳ್ಳುವ ಪುರುಷ ಸಿಕ್ಕರೆ ನಿಮಗೆ ಡಬಲ್ ಧಮಾಕಾ.

3. ಆಗಾಗ ಟೆಕ್ಸ್ಟ್ ಮಾಡುವುದು:
ಟೆಕ್ಸ್ಟಿಂಗ್ ಖಂಡಿತವಾಗಿಯೂ ಒಬ್ಬ ವ್ಯಕ್ತಿ ತನ್ನ ಸಂಗಾತಿಯನ್ನು ಎಷ್ಟು ನೆನಪಿಸಿಕೊಳ್ಳುತ್ತಿದ್ದಾನೆ ಎಂಬುದನ್ನು ಸೂಚಿಸುವುದು. ಆದರೆ ಪುರುಷರು ಮಿಸ್ ಯೂ ಎಂಬ ಪದವನ್ನು ಕಳುಹಿಸುವುದು ತುಂಬಾ ಕಡಿಮೆ. ಅದರ ಬದಲಿಗೆ "ನೀವು ಊಟ ಮಾಡಿದ್ದೀರಾ?", "ನಿಮ್ಮ ಹೊಟ್ಟೆ ನೋವು ಈಗ ಹೇಗಿದೆ?" ಎಂದು ಕೇಳಲು ಬಯಸುತ್ತಾರೆ. ಏಕೆಂದರೆ ಅವರು ನಿಮ್ಮ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಾರೆ.

4. ಪ್ರವಾಸಕ್ಕೆ ಕರೆದೊಯ್ಯುವುದು:
ಪುರುಷರು ತಮ್ಮ ಸಂಗಾತಿಯನ್ನು ರಜೆಯ ಮೇಲೆ ಹೊರಗೆ ಕರೆದುಕೊಂಡು ಹೋಗುವುದನ್ನು ಇಷ್ಟಪಡುತ್ತಾರೆ. ಇದು ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ಸಹಾಯವಾಗುವುದು. ಅಷ್ಟೇ ಅಲ್ಲ, ಪುರುಷರು ಹೆಚ್ಚು ದಿನಗಳವರೆಗೆ ತಮ್ಮ ಸಂಗಾತಿಯನ್ನು ಬಿಟ್ಟಿರುವುದಿಲ್ಲ. ಅದಕ್ಕಾಗಿ ಆಗಾಗ ಟ್ರಿಪ್ ಆಯೋಜನೆ ಮಾಡುತ್ತಾರೆ.

5. ಕ್ರಿಕೆಟ್ ಮಧ್ಯೆಯೂ ನಿಮ್ಮ ನೆಚ್ಚಿನ ಟಿವಿ ಕಾರ್ಯಕ್ರಮ ವೀಕ್ಷಿಸಲು ಅವಕಾಶ ನೀಡುವುದು:
ಪುರುಷರು ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದಕ್ಕೆ ಇದು ಒಂದು ಪ್ರಮುಖ ಸಂಕೇತವಾಗಿದೆ ಏಕೆಂದರೆ ಪುರುಷರು ಸಾಮಾನ್ಯವಾಗಿ ಕ್ರಿಕೆಟ್ ನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಆದರೆ ಕ್ರಿಕೆಟ್ ಮಧ್ಯೆಯೂ ಅವರು ನಿಮಗೆ ಟಿವಿ ನೊಡಲು ಅವಕಾಶ ಮಾಡಿಕೊಡುತ್ತಾರೆ. ಇದು 'ಐ ಲವ್ ಯು' ನ ಪ್ರಮುಖ ಪ್ರದರ್ಶನವಾಗಿದೆ.

6. ನಿಮ್ಮ ಬಗ್ಗೆ ಕೆಟ್ಟದ್ದು ಮಾತನಾಡಿದರೆ ಸಹಿಸರು:
ಯಾರಾದರೂ ತಮ್ಮ ಸಂಗಾತಿಯ ಸಾಮರ್ಥ್ಯ, ನಡವಳಿಕೆ, ನೋಟ ಅಥವಾ ಮನೋಭಾವವನ್ನು ಅವಮಾನಿಸಿದಾಗ ಅಥವಾ ಅದರ ಬಗ್ಗೆ ಮಾತನಾಡಿದಾಗ ಪುರುಷರು ಅದನ್ನು ಸಹಿಸಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ ಯಾರಾದರೂ ನಿಮ್ಮೊಂದಿಗೆ ಅಸಭ್ಯವಾಗಿ ಮಾತನಾಡುವಾಗ ಅವರು ಆ ವ್ಯಕ್ತಿಯನ್ನು ದೂರತಳ್ಳಲು ಹಿಂಜರಿಯುವುದಿಲ್ಲ.

7. ತನ್ನ ಜೀವನದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು:
ಪುರುಷರು ತಮ್ಮ ಸಂಗಾತಿಯನ್ನು ಅವರು ಮಾಡುವ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಅದು ಅವರ ಟೈ ಬಣ್ಣ ಇರಲಿ ಅಥವಾ ಊಟವನ್ನು ನಿರ್ಧರಿಸುವ ಬಗ್ಗೆ ಇರಲಿ.. ಈ ಬಗ್ಗೆ ತಮ್ಮ ಸಂಗಾತಿ ನಿರ್ಧಾರ ಮಾಡುವುದನ್ನು ಇಷ್ಟಪಡುತ್ತಾರೆ.

8. ಸಂಪೂರ್ಣ ಬೆಂಬಲ:
ಪುರುಷರು ಯಾವಾಗಲೂ ತಮ್ಮ ಸಂಗಾತಿಯ ಎಲ್ಲಾ ವಿಚಾರವನ್ನೂ ಒಪ್ಪುವುದಿಲ್ಲ. ಆದರೆ ಅವರು ಖಂಡಿತವಾಗಿಯೂ ತಮ್ಮ ಸಂಗಾತಿಯ ನಿರ್ಧಾರಗಳನ್ನು ಬೆಂಬಲಿಸುತ್ತಾರೆ. ಹೀಗೆ ಪುರುಷರ ಸೂಕ್ಷ್ಮ ಕಾರ್ಯಗಳು ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ. ಇದು ಅವರ ಸಂಗಾತಿಗೆ 'ಐ ಲವ್ ಯು' ಎಂದು ಹೇಳುವ ವಿಧಾನವಾಗಿದೆ.



Click it and Unblock the Notifications