Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ರೋಸ್ ಡೇ 2022: ಇಲ್ಲಿದೆ ನಿಮ್ಮ ಪ್ರೇಮಿಗೆ ಕಳುಹಿಸಲು ರೊಮ್ಯಾಂಟಿಕ್ ಸಂದೇಶ
ಸದ್ಯ ಪ್ರೇಮಿಗಳ ದಿನದ್ದೇ ಭರಾಟೆ. ಕೆಲವರು ಪ್ರೇಮ ನಿವೇದನೆಗೆ ಕಾತರದಿಂದ ಕಾಯುತ್ತಿದ್ದರೆ, ಈಗಾಗಲೇ ಪ್ರೀತಿಯಲ್ಲಿರುವವರು ವಿಭಿನ್ನವಾಗಿ ಹೇಗೆ ಆಚರಣೆ ಮಾಡುವುದು ಎಂದೆಲ್ಲಾ ಯೋಚನೆ ಮಾಡುತ್ತಿದ್ದಾರೆ. ಇದರ ಪ್ರಥಮ ಹೆಜ್ಜೆಯಾಗಿ ಇರುವಂತಹದ್ದೇ ರೋಸ್ ಡೇ ಅಂದರೆ ಗುಲಾಬಿ ದಿನ. ಈ ಮೂಲಕ ಪ್ರೇಮಿಗಳ ದಿನಾಚರಣೆಯ ಅಧೀಕೃತ ಸಿದ್ಧತೆ ಆರಂಭವಾಗುತ್ತದೆ.

ಪ್ರೀತಿಯ ಸಂಕೇತ ಈ ಗುಲಾಬಿ. ಕಷ್ಟ, ಸುಖ ಜೊತೆಗಿದ್ದರಷ್ಟೇ ಬದುಕಿನ ಬೆಲೆ ಗೊತ್ತಾಗುವುದು. ಈ ಗುಲಾಬಿ ಕೂಡಾ ಅದೇ ಖುಷಿ, ದುಃಖದ ಸಂಕೇತ.
ಮುಳ್ಳು ಮತ್ತು ಹೂವು ಇಲ್ಲಿ ಜೊತೆಗೇ ಇದೆ. ಎಂದರೆ ಎಂತಹ ಕಷ್ಟದ ಸಮಯದಲ್ಲೂ ನಿನ್ನ ಜೊತೆಗಿರುತ್ತೇನೆ ಎಂಬ ವಾಗ್ದಾನದೊಂದಿಗೆ ಪ್ರೇಮಿಗಳು ಈ ಗುಲಾಬಿಯನ್ನು ಪ್ರೀತಿಯ ಸಂಕೇತವಾಗಿ ನೀಡುತ್ತಾರೆ. ಈ ರೋಸ್ ಡೇಯಂದು ಶುಭಾಶಯ ಕೋರಲು ಕೆಲವೊಂದು ಅರ್ಥಪೂರ್ಣ ಸಂದೇಶಗಳನ್ನು ಈ ಕೆಳಗೆ ನೀಡಲಾಗಿದೆ.

ರೋಸ್ ಡೇ
ಗುಲಾಬಿಯಂತೆ ನನ್ನ ಜೀವನವನ್ನು ಕಲರ್ ಫುಲ್ ಮಾಡಿ, ಸಂತೋಷವನ್ನು ತಂದಿರುವ ನಿನಗೆ ರೋಸ್ ಡೇಯ ಶುಭಾಶಯಗಳು

ರೋಸ್ ಡೇ
ಪ್ರೀತಿಯು ಮುಳ್ಳುಗಳ ನಡುವಿನ ಹೂವಿನಂತೆ, ಕತ್ತಲೆಯ ನಡುವಿನ ಸೂರ್ಯನ ಬೆಳಕನ್ನು ನೀಡುವಂತದ್ದು

ರೋಸ್ ಡೇ
ರೀತಿ ಎಂದರೆ ಮುಳ್ಳಿನ ಜೊತೆಯಿರುವ ಗುಲಾಬಿಯಂತೆ, ಕಷ್ಟಗಳು ಕಳೆದು ಗುಲಾಬಿಯಂತಹ ಸುಂದರವಾದುದನ್ನು ಪಡೆಯುತ್ತೇವೆ. ನನ್ನ ಪ್ರೀತಿಗೆ ಹ್ಯಾಪಿ ರೋಸ್ ಡೇ

ರೋಸ್ ಡೇ
ಈ ಗುಲಾಬಿಯೊಂದಿಗೆ, ನನ್ನ ಹೃದಯದಿಂದ ನಾನು ನಿಮಗೆ ಪ್ರೀತಿಯನ್ನು ಕಳುಹಿಸುತ್ತಿರುವೆ, ಹ್ಯಾಪಿ ರೋಸ್ ಡೇ

ರೋಸ್ ಡೇ
ಗುಲಾಬಿಗಳೊಂದಿಗಿನ ಮುಳ್ಳುಗಳು ಪ್ರೀತಿಯಲ್ಲಿ ಬರುವ ಕಠಿಣ ಸಮಯವನ್ನು ನೆನಪಿಸುತ್ತವೆ. ಆದರೆ ಅಂತಿಮವಾಗಿ ಗುಲಾಬಿಯಂತಹ ಪ್ರೀತಿಯೇ ನಮ್ಮದಾಗುತ್ತದೆ. ರೋಸ್ ಡೇಯ ಶುಭಾಶಯಗಳು

ರೋಸ್ ಡೇ
ಒಂದು ಗುಲಾಬಿ ಡಜನ್ ಮಾತಿಗಿಂತ ಹೆಚ್ಚು ಹೇಳುತ್ತದೆ. ಹ್ಯಾಪಿ ರೋಸ್ ಡೇ!

ರೋಸ್ ಡೇ
ನನ್ನ ಪ್ರೀತಿ ಗುಲಾಬಿಯಂತೆ, ಇತರರಿಗೆ ಅದರ ಎಲೆಯನ್ನು ನೀಡಿದರೆ, ನಿನಗೆ ಮಾತ್ರ ಗುಲಾಬಿಯನ್ನೇ ನೀಡುವೆ. ಹ್ಯಾಪಿ ರೋಸ್ ಡೇ



Click it and Unblock the Notifications
