Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಪ್ರೇಮಿಗಳ ದಿನ: ಸಂಗಾತಿ ಜೊತೆ ಸೆಲೆಬ್ರೇಷನ್‌ಗೆ ಟಾಪ್ 5 ರೊಮ್ಯಾಂಟಿಕ್ ಐಡಿಯಾಗಳು ಇಲ್ಲಿವೆ
ಪ್ರೇಮಿಗಳ ದಿನ ಸಮೀಪಿಸುತ್ತಿರುವಂತೆ ನಿಮ್ಮ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಸುವ ಮಾರ್ಗಗಳನ್ನು ಹುಡುಕುತ್ತಿರಬೇಕು. ಈ ದಿನ ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ವಿಶೇಷ ದಿನ, ಆದ್ದರಿಂದ ಅದನ್ನು ವಿಭಿನ್ನವಾಗಿಯೇ ಆಚರಿಸಬೇಕು. ಇಲ್ಲವಾದಲ್ಲಿ ಸಾಮಾನ್ಯ ದಿನಕ್ಕೂ ಪ್ರೇಮಿಗಳ ದಿನಕ್ಕೂ ಅಂತಹ ವ್ಯತ್ಯಾಸವೇನೂ ಇರದು. ಅದಕ್ಕಾಗಿ ನಾವಿಂದು ನಿಮ್ಮ ವ್ಯಾಲೆಂಟೈನ್ಸ್ ಡೇ ಯನ್ನು ಮತ್ತಷ್ಟು ಸ್ಪೆಷಲ್ ಮಾಡಲು ಕೆಲವೊಂದು ಸೆಲೆಬ್ರೇಷನ್ ಐಡಿಯಾಗಳನ್ನು ನೀಡಲಿದ್ದೇವೆ. ಈ ಮೂಲಕ ನಿಮ್ಮ ಸಂಗಾತಿಗೆ 'ಫೀಲಿಂಗ್ ಸೋ ಸ್ಪೆಷಲ್' ಭಾವನೆ ಮೂಡಿಸಬಹುದು.
ಪ್ರೇಮಿಗಳ ದಿನದಂದು, ನಿಮ್ಮ ಸಂಗಾತಿಯೊಂದಿಗೆ ಮಾಡಬಹುದಾದ 5 ಮೋಜಿನ ಮತ್ತು ರೋಮ್ಯಾಂಟಿಕ್ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ಸಣ್ಣ ರೋಡ್ ಟ್ರಿಪ್ ಮಾಡಿ:
ನಿಮ್ಮ ಸಂಗಾತಿಯೊಂದಿಗೆ ರೋಡ್ ಟ್ರಿಪ್ ಮಾಡದಿದ್ದರೆ, ಖಂಡಿತವಾಗಿಯೂ ಜೀವನದಲ್ಲಿ ಕೆಲವು ಉತ್ತಮ ಕ್ಷಣಗಳನ್ನು ಕಳೆದುಕೊಂಡಿದ್ದೀರಿ. ರೋಡ್ ಟ್ರಿಪ್‌ಗಳು ತುಂಬಾ ವಿನೋದಮಯವಾಗಿದ್ದು, ಸಂಗಾತಿ ಜೊತೆಹೋಗುವುದು ಮತ್ತಷ್ಟು ಆಕರ್ಷಕವಾಗಿರುತ್ತವೆ. ನಿಮ್ಮ ಸಂಗಾತಿಯೊಂದಿಗೆ ರೋಡ್ ಟ್ರಿಪ್ ಮಾಡುವುದು ಸಂತೋಷವನ್ನು ತರುತ್ತದೆ. ಒಟ್ಟಿಗೆ ಪ್ರಯಾಣಿಸುವಾಗ ಅನಿರೀಕ್ಷಿತ ವಿಷಯಗಳನ್ನು ಅನುಭವಿಸುವ ಸಂತೋಷಕ್ಕೆ ಸರಿಸಾಟಿ ಬೇರೊಂದಿಲ್ಲ. ಈ ಪ್ರವಾಸದ ನೆನಪುಗಳು ನಿಮ್ಮ ಸಂಗಾತಿಯೊಂದಿಗೆ ಕಳೆದ ಪ್ರೀತಿಯ ನೆನಪುಗಳಲ್ಲಿ ಒಂದಾಗುತ್ತವೆ.

ಪರಸ್ಪರ ಪ್ರೇಮ ಪತ್ರ ಬರೆಯಿರಿ:
ಪ್ರೇಮ ಪತ್ರಗಳು ಹಳೆಯದಾದ್ದರೂ, ಅವು ಸೂಪರ್ ರೋಮ್ಯಾಂಟಿಕ್. ಇಲ್ಲಿ ನಾವು ಕೈಬರಹದ ಪತ್ರಗಳ ಬಗ್ಗೆ ಮಾತನಾಡುತ್ತಿದ್ದೇವೆ. ನಿಮ್ಮ ಸಂಗಾತಿಗೆ ಪ್ರೀತಿಯ ಅಭಿವ್ಯಕ್ತಿಗಿಂತ ದೊಡ್ಡ ಸಂತೋಷ ಜಗತ್ತಿನಲ್ಲಿ ಇಲ್ಲ. ನಿಮಗೆ ಬರೆಯಲು ಬರದಿದ್ದರೆ ಚಿಂತಿಸಬೇಡಿ, ಗೊತ್ತಿರುವ ಭಾಷೆಯಲ್ಲಿ, ದಾಟಿಯಲ್ಲಿ ಬರೆದರೆ ಸಾಕು, ಆ ಮಾತುಗಳು ಅವರ ಹೃದಯ ನಾಟುತ್ತವೆ. ಪರಸ್ಪರ ಇಬ್ಬರೂ ಪ್ರೇಮ ಪತ್ರಗಳನ್ನು ಬರೆಯಿರಿ. ನಿಮ್ಮ ಸಂಗಾತಿಯ ಬಗ್ಗೆ ನೀವು ಇಷ್ಟಪಡುವ ವಿಷಯಗಳ ಬಗ್ಗೆ, ಅವರ ಮೇಲಿರುವ ಪ್ರೀತಿ ಮತ್ತು ನಿಮ್ಮ ಜೀವನದಲ್ಲಿ ಅವರ ಸ್ಥಾನವೇನು ಎಲ್ಲವನ್ನೂ ಬರೆಯಿರಿ. ಈ ಪ್ರೇಮ ಪತ್ರವು ನಿಮ್ಮ ಸಂಗಾತಿಯ ಹೃದಯವನ್ನು ಕರಗಿಸುವುದು ಖಚಿತ.

ಪ್ಯಾರಚೂಟ್ ರೈಡ್:
ಪ್ಯಾರಾಚೂಟ್ ರೈಡ್ ಒಂದು ಸೂಪರ್ ಮೋಜಿನ ಚಟುವಟಿಕೆಯಾಗಿದ್ದು ಅದನ್ನು ಖಂಡಿತವಾಗಿಯೂ ನಿಮ್ಮ ಸಂಗಾತಿಯೊಂದಿಗೆ ಮಾಡಬೇಕು. ನಿಮ್ಮ ಸಂಗಾತಿಯೊಂದಿಗೆ ನೆಲಮಟ್ಟದಿಂದ ಸಾವಿರಾರು ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿ ಇರುವುದು ಜೀವಮಾನದ ಅನುಭವವಾಗಲಿದೆ. ಈ ಮೋಜಿನ ಚಟುವಟಿಕೆಯು ಖಂಡಿತವಾಗಿಯೂ ನಿಮ್ಮ ಪಟ್ಟಿಯಲ್ಲಿರಬೇಕು. ಇದರಿಂದ ಎಂದಿಗೂ ನೀವು ನಿರಾಶೆಗೊಳ್ಳುವುದಿಲ್ಲ.

ಇಬ್ಬರೂ ಸೇರಿ ಗಿಡ ನೆಡಿ:
ಒಟ್ಟಿಗೆ ತೋಟ ಮಾಡುವುದು ಅಥವಾ ಒಟ್ಟಿಗೆ ಗಿಡ ನೆಡುವುದು ಸಾಮಾನ್ಯ ಚಟುವಟಿಕೆಯಂತೆ ಕಾಣಿಸಬಹುದು, ಆದರೆ ಇದು ಉತ್ತಮ ಅನುಭವವಾಗಿದೆ. ನಿಮ್ಮ ಸಂಗಾತಿಯ ಸಹಾಯದಿಂದ ಸಸ್ಯಗಳನ್ನು ಬೆಳೆಸುವುದು ತುಂಬಾ ಖುಷಿ ಕೊಡುವಂತಹ ವಿಷಯ. ಆ ಬೆಳೆಯುತ್ತಿರುವ ಗಿಡವನ್ನು ಇಬ್ಬರೂ ನೋಡುವುದು, ಖಂಡಿತವಾಗಿಯೂ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲದ ಭಾವನೆ. ಅನೇಕ ದಂಪತಿಗಳು ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯುವ ಸಾಧನವಾಗಿ ಒಟ್ಟಿಗೆ ತೋಟಗಾರಿಕೆ ಮಾಡುತ್ತಾರೆ. ಇದು ಜೀವನದ ಸರಳ ಸಂತೋಷಗಳನ್ನು ಒಳಗೊಂಡಿರುವ ಮಾರ್ಗವಾಗಿದೆ.

ಬೆಟ್ಟವನ್ನೇರಿ:
ಪರ್ವತ ಏರುವುದು ಸಾಹಸದ ಕೆಲಸವಾದರೂ, ಅದರ ತುದಿಯನ್ನು ತಲುಪಿದ ತಕ್ಷಣ, ಅದನ್ನು ಏರಲು ತೆಗೆದುಕೊಂಡ ಎಲ್ಲಾ ಕಸರತ್ತುಗಳು ಮರೆತುಹೋಗುತ್ತವೆ. ಮೌಂಟೇನ್ ಕ್ಲೈಂಬಿಂಗ್ ಒಂದು ಸೂಪರ್ ರೋಮಾಂಚಕಾರಿ ಚಟುವಟಿಕೆಯಾಗಿದ್ದು ಅದು ನಿಮ್ಮಿಬ್ಬರನ್ನು ಹತ್ತಿರ ತರಲಿದೆ. ನಿಮ್ಮ ಸಂಗಾತಿಯೊಂದಿಗೆ ಆರೋಗ್ಯಕರ ಅನುಭವಕ್ಕಾಗಿ, ಪರ್ವತಾರೋಹಣಕ್ಕೆ ಹೋಗಿ. ನೀವಿಬ್ಬರೂ ಟ್ರೆಕ್ಕಿಂಗ್ ಮಾಡುವವರಲ್ಲದಿದ್ದರೂ, ಇದನ್ನು ಒಮ್ಮೆ ಸಂಪೂರ್ಣವಾಗಿ ಅನುಭವಿಸಲೇಬೇಕು.



Click it and Unblock the Notifications