Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
Anti Valentine's Week List 2023: ಫೆಬ್ರವರಿಯಲ್ಲಿ ಕಪಾಳಕ್ಕೆ ಭಾರಿಸಲು, ಬ್ರೇಕಪ್ ಮಾಡಿಕೊಳ್ಳಲೂ ಒಂದು ವಾರ ಇದೆ ಗೊತ್ತಾ?
ಫೆಬ್ರವರಿ ತಿಂಗಳೆಂದರೆ ಅದು ಪ್ರೇಮಿಗಳ ತಿಂಗಳು. ಪ್ರತೀ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುವುದು. ಈ ಸಂಭ್ರಮ ವಾರದ ಮುಂಚೆಯೇ ಶುರುವಾಗುವುದು. ಪ್ರಪೋಸ್ ಡೇ, ಲವ್ ಡೇ, ಕಿಸ್ ಡೇ ಅಂತ ದಿನಾ ಒಂದೊಂದು ದಿನವನ್ನು ಸಡಗರ-ಸಂಭ್ರಮದಿಂದ ಪ್ರೇಮಿಗಳು ಆಚರಿಸುತ್ತಾರೆ. ಆದರೆ ನಿಮಗೊಂದು ವಿಷಯ ಗೊತ್ತೇ, ವ್ಯಾಲೆಂಟೈನ್ಸ್ ಡೇ ಆದ ಮೇಲೂ ಕೆಲವೊಂದು ಆಚರಣೆಗಳಿವೆ, ಆದರೆ ಅದು ಪ್ರೇಮಕ್ಕೆ ಸಂಬಂಧಿಸಿದ್ದಲ್ಲ, ಪ್ರೇಮಕ್ಕೆ ವಿರೋಧವಾಗಿದ್ದು.
ಹೌದು, ಪ್ರೇಮಿಗಳ ದಿನ ಫೆಬ್ರವರಿ 14ಕ್ಕೆ, ಅದಾದ ಮಾರನೇಯ ದಿನ ಅಂದರೆ ಫೆಬ್ರವರಿ 15ಕ್ಕೆ ಪ್ರೀತಿಯ ವಿರೋಧದ ವಾರ ಪ್ರಾರಂಭವಾಗುವುದು. ಹೌದು ಫೆಬ್ರವರಿ 15ರಿಂದ ಕಪಾಳಕ್ಕೆ ಹೊಡೆಯುವ ದಿನದಿಂದ ಶುರುವಾಗಿ ಫೆಬ್ರವರಿ 21ಕ್ಕೆ ಬ್ರೇಕಪ್ ಆಗುವುದರೊಂದಿಗೆ ಮುಗಿಯುವುದು, ಈ ವಾರ ಪ್ರೀತಿಯದು ಅಲ್ಲ, ಪ್ರೀತಿಯನ್ನು ತಿರಸ್ಕರಿಸುವ ವಾರವಾಗಿದೆ.

ಪ್ರೀತಿಯ ವಿರೋಧಿಸುವ ವಾರ(ಫೆ.15ರಿಂದ ಫೆ 21)
ಫೆಬ್ರವರಿ 15: ಸ್ಲ್ಯಾಪ್ ಡೇ (ಕಪಾಳಕ್ಕೆ ಭಾರಿಸುವ ದಿನ)
ಫೆಬ್ರವರಿ 16: ಕಿಕ್ ಡೇ
ಫೆಬ್ರವರಿ 17: ಪರ್ಫ್ಯೂಮ್ ಡೇ
ಫೆಬ್ರವರಿ 18: ಫ್ಲರ್ಟ್ ಡೇ
ಫೆಬ್ರವರಿ 19: ಕನ್‌ಫೆಷನ್ ಡೇ (ತಪ್ಪೊಪ್ಪಿಕೊಳ್ಳುವ ದಿನ)
ಫೆಬ್ರವರಿ 20: ಮಿಸ್ಸಿಂಗ್ ಡೇ
ಫೆಬ್ರವರಿ 21: ಬ್ರೇಕಪ್ ಡೇ

ಇದನ್ನು ಆಚರಿಸುವುದು ಹೇಗೆ?
ಸ್ಲ್ಯಾಪ್ ಡೇ: ನಿಮಗೆ ನೋವುಂಟು ಮಾಡುತ್ತಿದ್ದರೂ ನಿಮಗೆ ಅವರ ಮೇಲೆ ಸೆಂಟಿಮೆಂಟ್ ಇದ್ದರೆ ಅದನ್ನು ಹೊರದೂಡುವ ದಿನ. ನಿಮ್ಮನ್ನು ಕಾಡುತ್ತಿರುವ ಎಲ್ಲಾ ಕೆಟ್ಟ ಆಲೋಚನೆ ಹಾಗೂ ನೆನಪುಗಳನ್ನು ಹೊ ಹಾಕುವ ದಿನ.
ಕಿಕ್ ಡೇ: ಈ ದಿನ ನಿಮ್ಮ ಎಲ್ಲಾ ಚಿಂತೆಗಳನ್ನು ಒದ್ದು ಹೊರಹಾಕಿ. ನಿಮಗೆ ಪ್ರೀತಿಯಲ್ಲಿ ಯಾರಾದರೂ ಮೋಸ ಮಾಡಿದ್ದರೆ ಅವರ ಎಲ್ಲಾ ನೆನಪುಗಳನ್ನು ನಿಮ್ಮಿಂದ ಒದ್ದು ಹೊರಹಾಕಿ.
ಪರ್ಫ್ಯೂಮ್ ಡೇ: ಈ ದಿನ ನಿಮ್ಮನ್ನು ಕಾಡುತ್ತಿರುವ ಕೆಟ್ಟ ನೆನಪುಗಳನ್ನು ಹೊರದೂಡಿ ಸ್ನಾನ ಮಾಡಿ ಒಳ್ಳೆಯ ಸುಗಂಧದ್ರವ್ಯ ಹಾಕಿ, ಅದರ ಸುವಾಸನೆ ನಿಮ್ಮ ಮನಸ್ಸಿಗೆ ಖುಷಿ ನೀಡುವುದು.
ಫ್ಲರ್ಟ್ ಡೇ: ಈ ದಿನ ಹೊಸ ವ್ಯಕ್ತಿಯನನ್ನು ಭೇಟಿ ಮಾಡಿ, ಅವರೊಂದಿಗೆ ಖುಷಿಯಾಗಿ ಇರುವುದು.
ಕನ್‌ಫೆಷನ್ ಡೇ: ಈ ದಿನ ನಿಮ್ಮಿಂದ ಆದ ತಪ್ಪುಗಳನ್ನು ಹೇಳಿಕೊಂಡು ಕ್ಷಮೆ ಕೇಳುವುದು.
ಮಿಸ್ಸಿಂಗ್ ಡೇ: ನಿಮಗೆ ನಿಮ್ಮ ಪ್ರೇಮಿ ತುಂಬಾ ನೆನಪಾಗುತ್ತಿದ್ದರೆ ಅವರಿಗೆ ನಿಮ್ಮ ನೆನಪಿನ ಉಡುಗೊರೆ ನೀಡುವುದು.
ಬ್ರೇಕಪ್ ಡೇ: ಆ ವ್ಯಕ್ತಿಯ ಪ್ರೀತಿ ನಿಮಗೆ ನಿಜ ಅನಿಸದಿದ್ದರೆ ಅವರಿಂದ ಬ್ರೇಕಪ್ ಆಗುವುದು.

ಪ್ರೇಮ ಹಿತ, ಆದರೆ ಅದು ದೂರಾದರೆ ನೀಡುವುದು ತೀರದ ನೋವು
ಪ್ರೇಮಿಸುವಾಗ ಜಗತ್ತು ತುಂಬಾ ಸುಂದರವಾಗಿ ಕಾಣುವುದು. ಪ್ರೇಮಿಯೊಂದಿಗೆ ಕಳೆಯುವ ಪ್ರತಿಯೊಂದು ಕ್ಷಣ ಸುಂದರವಾಗಿರುತ್ತದೆ. ಆದರೆ ಬ್ರೇಕಪ್ ಆದಾಗ ಅದು ನೀಡುವ ದುಃಖ ಸಹಿಸಲು ಕಷ್ಟವಾಗುವುದು. ಈ ಜಗತ್ತಿನ ಮೇಲೆಯೂ ಕೋಪ ಬರುವುದು, ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ, ನಿಮ್ಮನ್ನು ಮೋಸ ಮಾಡಿದವರಿಗಾಗಿ ಕೊರಗುವ ಬದಲಿಗೆ ನಿಮ್ಮನ್ನು ಪ್ರೀತಿಸುವವರಿಗಾಗಿ ಬದುಕಿ, ಆ ಬದುಕು ಚೆನ್ನಾಗಿರುತ್ತದೆ.



Click it and Unblock the Notifications
