Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ನೀವು ಒಂಟಿಯಾಗಿರುವುದು ಈ ಕಾರಣಗಳಿಗಾಗಿ!

ದುರಾದೃಷ್ಟ, ಆಕರ್ಷಣೀಯವಾಗಿ ಇಲ್ಲದೆ ಇರುವುದು ಇಂತಹ ಕೆಲವು ಕಾರಣಗಳಲ್ಲಿ ಇರಬಹುದು. ಆದರೆ ಇದೆಲ್ಲವನ್ನೂ ಮೀರಿ ಕೆಲವು ಕಾರಣಗಳು ಇವೆ. ಕೆಲವರು ಏಕಾಂಗಿಯಾಗಿ ಇರುವುದು ಯಾಕೆ ಮತ್ತು ಅವರಿಗೆ ಸಂಬಂಧದಲ್ಲಿ ಬಂಧಿಯಾಗಲು ಯಾಕೆ ಇಷ್ಟವಿಲ್ಲವೆಂದು ನಮ್ಮಲ್ಲಿ ಪ್ರಶ್ನೆಗಳು ಬರುವುದು. ಕೆಲವು ಜನರು ಹಿಂದೆ ಪ್ರೀತಿಯಲ್ಲಿ ವಿಫಲರಾಗಿರುವುದು, ಮೋಸಕ್ಕೆ ಒಳಗಾಗಿರುವುದು ಕಾರಣವಿರಬಹುದು. ಒಂಟಿಯಾಗಿ ಯಾಕೆ ಇರುತ್ತಾರೆ ಎನ್ನುವುದಕ್ಕೆ ನಾವಿಲ್ಲಿ ಕೆಲವು ಕಾರಣಗಳನ್ನು ತುಂಬಾ ಕಷ್ಟಪಟ್ಟು ಹುಡುಕಿದ್ದೇವೆ. ಇದನ್ನು ನೀವು ಓದಿಕೊಳ್ಳಿ.
ನಿಮ್ಮನ್ನು ನೀವು ತುಂಬಾ ಪ್ರೀತಿಸುತ್ತೀರಿ
ನಿಮಗಾಗಿಯೇ ನೀವಿರುವುದು ಎಂದು ಎಷ್ಟೋ ಸಲ ನೀವು ಯೋಚಿಸಿರಬಹುದು. ಆದರೆ ಇದು ನಿಜವಲ್ಲ. ನಿಮಗೂ ಸಂಗಾತಿ ಬಯಕೆ ಕಾಡಬಹುದು. ಆದರೆ ಸಮಸ್ಯೆಯೆಂದರೆ ನಿಮ್ಮನ್ನು ನೀವು ಅತಿಯಾಗಿ ಪ್ರೀತಿಸುತ್ತೀರಿ ಮತ್ತು ಬೇರೆಯವರಿಗೆ ನೀವು ಸಮಯ ನೀಡಲು ಸಾಧ್ಯವಿಲ್ಲವೆಂದು ಭಾವಿಸುತ್ತೀರಿ. ಇದರಿಂದ ನೀವು ಸಂಗಾತಿಯಿಂದ ದೂರವಿರುವಿರಿ.

ನೀವು ಹೊಂದಾಣಿಕೆ ಮಾಡಲ್ಲ
ಹೊಂದಾಣಿಕೆ ಮಾಡಿಕೊಳ್ಳಲು ತಯಾರಾದರೆ ಆಗ ಬದ್ಧತೆ ಪ್ರದರ್ಶಿಸಬೇಕು. ನಿಮ್ಮ ಅಹಂನಿಂದಾಗಿ ನೀವು ಸಹಕಾರ ಮಾಡುತ್ತಿಲ್ಲ ಮತ್ತು ಹೊಂದಿಕೊಳ್ಳುವುದಿಲ್ಲ. ನಿಮ್ಮೊಂದಿಗೆ ಯಾರಾದರೂ ಸಂಪರ್ಕ ಸಾಧಿಸಿ ಹೊಂದಾಣಿಕೆ ಮಾಡುವುದನ್ನು ನೀವು ಬಯಸಲ್ಲ. ಸಂಬಂಧವೆನ್ನುವುದು ಎರಡು ಜನರ ನಡುವಿನ ಹೊಂದಾಣಿಕೆಯಾಗಿದೆ ಮತ್ತು ಇದು ಹೇಗೆ ಕೆಲಸ ಮಾಡುವುದು ಎನ್ನುವುದು ಪ್ರಾಮುಖ್ಯತೆ ಪಡೆದಿದೆ.
ನೀವು ಈಗಲೂ ಹಿಂದಿನ ನೆನಪಿನಲ್ಲೇ ಇದ್ದಿರಿ
ಹಿಂದಿನ ಸಂಬಂಧದಿಂದ ನೀವು ಇನ್ನೂ ಹೊರಬಂದಿಲ್ಲ. ಇದರಿಂದಾಗಿ ನೀವು ಏಕಾಂಗಿಯಾಗಿದ್ದೀರಿ. ನೀವು ಹಿಂದೆ ನಡೆದಿರುವುದೆಲ್ಲವನ್ನು ಮರೆತು ಭವಿಷ್ಯದ ಸಂಬಂಧಕ್ಕೆ ತಯಾರಾಗಬೇಕು. ಗತಿಸಿರುವುದನ್ನು ಮರೆತು ಮುಂದೆ ಸಾಗುವುದೇ ಜೀವನ. ಇದರಿಂದ ವ್ಯಕ್ತಿಯು ತುಂಬಾ ಧನಾತ್ಮಕವಾಗಿ ಇರಬಹುದು.
ಜನರಿಂದ ಪರಿಣಾಮವಾಗಿದೆಯಾ
ನೀವು ಏಕಾಂಗಿರಲು ಇದು ಒಂದು ಕಾರಣವಾಗಿದೆ. ಜನರು ಏನು ಯೋಚಿಸುತ್ತಾರೆ ಎನ್ನುವ ಬಗ್ಗೆ ನೀವು ಚಿಂತಿಸುತ್ತೀರಿ. ಅವರ ಮಾತುಗಳಂತೆ ನೀವು ಬದಲಾಗಲು ಬಯಸುತ್ತೀರಿ. ಇದರಿಂದಾಗಿ ನಿಮ್ಮ ಮೂಲವು ಕಳೆದುಹೋಗುವುದು ಮತ್ತು ನಿಮಗೆ ನೆರವಾಗಲ್ಲ. ನಿಮ್ಮ ವ್ಯಕ್ತಿತ್ವ ಕಳೆದುಕೊಂಡು ಜನರು ಹೇಳಿದಂತೆ ಬದಲಾಗುವುದು ತುಂಬಾ ಮೆದು ವ್ಯಕ್ತಿಯನ್ನಾಗಿಸಬಹುದು. ಇದರಿಂದ ನೀವು ಬದ್ಧತೆಯಿಂದ ದೂರ ಹೋಗಲು ಬಯಸುತ್ತೀರಿ. ಜನರು ಏನು ಹೇಳುತ್ತಾರೆ ಎನ್ನುವ ಬಗ್ಗೆ ನೀವು ಚಿಂತೆ ಮಾಡುವುದು ಬೇಡ. ನೀವು ಬಯಸಿದ್ದನ್ನು ಮಾಡಿ ಮತ್ತು ನಿಮ್ಮ ಮೂಲ ತತ್ವವನ್ನು ಉಳಿಸಿಕೊಳ್ಳಿ. ಈ ಮೂಲಕವಾಗಿ ನೀವು ನೀವಾಗಿಯೇ ಉಳಿಯಬಹುದು. ಇದರಿಂದ ಬೇರೆ ವ್ಯಕ್ತಿಗಳ ಕಡೆ ಆಕರ್ಷಣೆಯಾಗುವುದು.
ಸಂಬಂಧಕ್ಕೆ ತಯಾರಾಗಿಲ್ಲವೆಂಬ ಭಾವನೆ
ನೀವು ಸಂಬಂಧದಲ್ಲಿ ಬಂಧಿಯಾಗಲು ತಯಾರಾಗಿಲ್ಲವೆಂದು ನೀವು ಭಾವಿಸುತ್ತೀರಿ ಮತ್ತು ಇದರಿಂದಾಗಿ ಏಕಾಂಗಿಯಾಗಿ ಇರುತ್ತೀರಿ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ನೀರಿಗೆ ಇಳಿದ ಬಳಿಕ ಮಾತ್ರ ಆಳವೆಷ್ಟು ಎಂದು ತಿಳಿಯುವುದು.
ಅಸಾಮಾನ್ಯ ನಿರೀಕ್ಷೆಗಳು
ಸಂಗಾತಿಯು ನಿಮ್ಮನ್ನು ಪರಿಪೂರ್ಣಳಾಗಿಸುವಳು ಎನ್ನುವುದು ತಪ್ಪು ತಿಳುವಳಿಕೆ. ಪ್ರಾಮಾಣಿಕವಾಗಿ ಹೇಳುವುದಾದರೆ ನೀವು ಹೃದಯಕ್ಕೆ ತೃಪ್ತಿ ನೀಡಬಹುದು ಮತ್ತು ನಿಮ್ಮ ಸಂಗಾತಿಯು ಇದರ ವೇಗವರ್ಧಕ ಬೇರೇನೂ ಅಲ್ಲ. ಸಂಗಾತಿಯಿಂದ ಅಸಾಮಾನ್ಯ ನಿರೀಕ್ಷೆಗಳನ್ನು ಇಟ್ಟುಕೊಂಡರೆ ಆಗ ನಿಮ್ಮ ಪರಿಸ್ಥಿತಿ ಮತ್ತಷ್ಟು ಕೆಡುವುದು.
ನೀವು ಒಂಟಿಯಾಗಿರಲು ಇದು ಒಂದು ಕಾರಣವಾಗಿರಬಹುದು. ಅಸಾಮಾನ್ಯ ನಿರೀಕ್ಷೆಗಳ ಬದಲಾಗಿ, ನಿಮ್ಮತ್ತ ಬರುವ ಪ್ರೀತಿಯ ಗಾಳಿಯನ್ನು ಉಸಿರಾಡಿ. ಇಂದಿನ ಜಗತ್ತಿನಲ್ಲಿ ಅಪೂರ್ಣತೆಯೇ ಪರಿಪೂರ್ಣತೆಯಾಗಿರುವುದು. ನಾವು ಬಯಸುವ ಸಂಪೂರ್ಣ ಸೌಂದರ್ಯವು ಇದೇ ಆಗಿರುವುದು.
ನೀವು ಒಂಟಿಯಾಗಿರಲು ಈ ಕಾರಣಗಳು ಇರಬಹುದು. ಇದರಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕಾರಣಗಳು ನಿಮ್ಮದಾಗಿದ್ದರೆ ಆಗ ನಮಗೆ ಇದರ ಬಗ್ಗೆ ತಿಳಿಸಿ ಮತ್ತು ನಾವು ನಿಮ್ಮ ಸಾಮಾಜಿಕ ಜೀವನ ಸರಿಪಡಿಸಿ, ಪ್ರೀತಿ ಗಳಿಸುವಂತೆ ಪ್ರಯತ್ನಿಸುವೆವು. ಒಂಟಿಯಾಗಿರುವುದು ಅದ್ಭುತ. ಆದರೆ ಸಂಬಂಧದಲ್ಲಿರುವುದು ಮತ್ತೊಂದು ರೀತಿಯ ವಿಶೇಷ ಭಾವನೆ. ನೀವು ಒಂಟಿಯಾಗಿದ್ದುಕೊಂಡು ಜೀವನ ಅನುಭವಿಸಿದ್ದೀರಿ. ಈಗ ಸಂಗಾತಿ ಜತೆಗೆ ನೀವು ಹೇಗೆ ಹೊಂದಿಕೊಳ್ಳುತ್ತೀರಿ ಎಂದು ತಿಳಿಯಿರಿ. ನಿಮಗೆ ಸಿಗುವ ಪ್ರೀತಿಯನ್ನು ಆನಂದಿಸಿ. ಹಲವಾರು ವರ್ಷಗಳಿಂದ ನೀವು ಒಂಟಿಯಾಗಿದ್ದರೆ ಈಗ ಸಂಬಂಧಕ್ಕೆ ಒಳಪಡುವ ಸಮಯ ಬಂದಿದೆ. ನೀವು ಬಯಸುವ ಪ್ರೀತಿಯು ಸಿಗುವುದು. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.



Click it and Unblock the Notifications











