Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊದಲ ಭೇಟಿ: ಅಂದ ಚಂದ ಹೆಚ್ಚಿಸುವ ಭರದಲ್ಲಿ.....
ಹೇಗೋ ಪರಿಚಯವಾಗಿದೆ. ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮಾತುಕತೆ ಕೂಡ ನಡೆಯುತ್ತಾ ಇರುತ್ತದೆ. ಆದರೆ ಇದುವರೆಗೆ ಪರಸ್ಪರ ಭೇಟಿಯಾಗಿಲ್ಲ! ಮೊದಲ ಸಲ ನೀವು ಪ್ರೀತಿಸುತ್ತಿರುವ ವ್ಯಕ್ತಿಯನ್ನು ಭೇಟಿಯಾಗಲು ಹೋಗುತ್ತಿರುವಿರಾದರೆ ಆಗ ತುಂಬಾ ಚೆನ್ನಾಗಿ ಕಾಣಿಸಿಕೊಳ್ಳಬೇಕೆನ್ನುವುದು ಸಹಜ. ಇದಕ್ಕಾಗಿ ಇನ್ನಿಲ್ಲದಂತಹ ಪ್ರಯತ್ನ ಮಾಡುತ್ತೇವೆ. ಹುಡುಗಿ ಜೊತೆ ಮೊದಲ ಡೇಟಿಂಗ್ - ನರ್ವಸ್ ಆಗಬೇಡಿ!
ಮೊದಲ ಭೇಟಿಯ ಆಕರ್ಷಣೆ ಕೊನೆಯ ತನಕ ಉಳಿಯಲಿ ಎನ್ನುವುದೇ ಇದರ ಉದ್ದೇಶವಾಗಿರುತ್ತದೆ. ಎಲ್ಲಿ ನನ್ನನ್ನು ನೋಡಿ ನಿರಾಕರಿಸುತ್ತಾನೋ/ತ್ತಾಳೋ ಎನ್ನುವ ಭೀತಿ ಕೂಡ ಮನಸ್ಸಿನಲ್ಲಿರುತ್ತದೆ. ಇಂತಹ ಸಮಯದಲ್ಲಿ ಸರಿಯಾಗಿ ತಯಾರಿ ನಡೆಸುವುದು ಅತೀ ಮುಖ್ಯ. ಮೊದಲ ಭೇಟಿ: ಬರೀ ಕಾಫಿಗೆ ಮಾತ್ರ ಸೀಮಿತವೇ?
ಆದರೆ ಕೆಲವರು ಮೊದಲ ಭೇಟಿ ವೇಳೆ ಅತಿಯಾದ ಶ್ರೀಮಂತಿಕೆ ತೋರಿಸಲು ಹೋಗುತ್ತಾರೆ. ಇನ್ನು ಕೆಲವರು ಇನ್ನಿಲ್ಲದ ಮೇಕಪ್ ಮಾಡಿಕೊಂಡು ಸುಂದರವಾಗಿ ಕಾಣಿಸಲು ಬಯಸುತ್ತಾರೆ. ಆದರೆ ಮೊದಲ ಭೇಟಿ ಅಥವಾ ಮೊದಲ ಡೇಟಿಂಗ್ ವೇಳೆ ಮಾಡುವಂತಹ ಕೆಲವೊಂದು ತಪ್ಪುಗಳನ್ನು ಇಲ್ಲಿ ತಿಳಿಸಬೇಕಾಗಿದೆ. ಇದನ್ನು ಓದಿಕೊಂಡು ನಿಮ್ಮ ಮೊದಲ ಭೇಟಿಗೆ ತಯಾರಾಗಿ...

1ನೇ ತಪ್ಪು
ಸುಂದರ ತುಟಿಗಳನ್ನು ನೋಡಿದರೆ ಅದಕ್ಕೊಂದು ಮುತ್ತು ಕೊಡಬೇಕೆಂದು ಅನಿಸುವುದು ಸಹಜ. ಆದರೆ ನಿಮ್ಮ ತುಟಿಗಳು ಸುಂದರವಾಗಿಲ್ಲವೆಂದಾದರೆ ಆತ ನಿಮ್ಮನ್ನು ಇಷ್ಟಪಡುದಿಲ್ಲವೆಂದಲ್ಲ. ತುಟಿಗಳನ್ನು ಸುಂದರವಾಗಿಸಲು ಹೋದರೆ ನಿಮ್ಮ ಮುಖ ಕೆಟ್ಟದಾಗಿ ಕಾಣಿಸಬಹುದು.

2ನೇ ತಪ್ಪು
ಹಲವಾರು ಪದರಗಳ ಮೇಕಪ್ ನಿಮ್ಮ ಮುಖದಲ್ಲಿನ ಕಲೆಯನ್ನು ತೆಗೆದುಹಾಕಿ ನೀವು ಸುಂದರವಾಗಿ ಕಾಣುವಂತೆ ಮಾಡಬಹುದು. ಆದರೆ ಹುಡುಗರಿಗೆ ಮೇಕಪ್ ಇಲ್ಲದಿರುವ ಸೌಂದರ್ಯ ನೋಡಲು ಇಷ್ಟ.

3ನೇ ತಪ್ಪು
ಅತಿಯಾದ ಲಿಪ್ಸ್ಟಿಕ್ ಒಳ್ಳೆಯದಲ್ಲ. ನಿಮ್ಮ ಸೌಂದರ್ಯವನ್ನು ಹೆಚ್ಚಿಸುವುದು ಮೇಕಪ್ ನ ಮುಖ್ಯ ಉದ್ದೇಶ. ನಿಮ್ಮ ಸೌಂದರ್ಯವನ್ನು ಬದಲಾಯಿಸುವುದಲ್ಲ.

4ನೇ ತಪ್ಪು
ಮಕ್ಕಳ ಸ್ವರದಲ್ಲಿ ಮಾತನಾಡಿ ಎದುರಿಗಿರುವ ಪುರುಷರನ್ನು ಮೋಡಿ ಮಾಡಬಹುದು ಎಂದು ಹೆಚ್ಚಿನ ಮಹಿಳೆಯರು ಭಾವಿಸಿದ್ದಾರೆ. ಆದರೆ ನಿಮ್ಮ ಸ್ವರ ಬದಲಾದಾಗ ಪರಿಸ್ಥಿತಿ ಹೇಗಿರಬಹುದು ಎಂದು ಯೋಚಿಸಿ.

5ನೇ ತಪ್ಪು
ಸರಿಯಾಗಿ ತಿನ್ನದೆ ಉಪವಾಸ ಬಿದ್ದು ದೇಹವನ್ನು ಸಪೂರ ಮಾಡಬೇಕೆಂದು ಬಯಸುವುದು ಸರಿಯಲ್ಲ. ಯಾಕೆಂದರೆ ಪುರುಷರಿಗೆ ನಿಮ್ಮ ದೇಹದ ಓರೆಕೋರೆಗಳು ಇಷ್ಟ. ಅವರು ಮೊದಲ ಭೇಟಿಯಲ್ಲಿ ರೂಪದರ್ಶಿಯನ್ನು ನಿರೀಕ್ಷಿಸಿರುವುದಿಲ್ಲ.

6ನೇ ತಪ್ಪು
ಸಣ್ಣ ಹಾಸ್ಯ ಚಟಾಕಿಗೆ ನೀವು ಜೋರಾಗಿ ನಕ್ಕರೆ ಆಗ ಹುಡುಗನಿಗೆ ತುಂಬಾ ಖುಷಿಯಾಗುತ್ತದೆ ಎಂದು ಭಾವಿಸಿರಬಹುದು. ಆದರೆ ಆತನ ಸಂಗವನ್ನು ನೀವು ಇಷ್ಟಪಟ್ಟಿದ್ದೀರಾ ಅಥವಾ ಕೇವಲ ತೋರಿಕೆ ಮಾತ್ರವಾ ಎನ್ನುವುದನ್ನು ಆತ ತಿಳಿಯಲು ಬಯಸುತ್ತಾನೆ.



Click it and Unblock the Notifications
