For Quick Alerts
ALLOW NOTIFICATIONS  
For Daily Alerts

ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು

By Arshad
|

ಎಷ್ಟೋ ಸಲ ನಮ್ಮ ವೈಯಕ್ತಿಯ ವಿಷಯಗಳು ನಮ್ಮ ಪ್ರಸಕ್ತ ಬದುಕಿನಲ್ಲಿ ಬಾಧೆ ಮೂಡಿಸಬಹುದು. ಕೆಲವೊಮ್ಮೆ ನಿಮ್ಮ ಬಾಳಸಂಗಾತಿ ನಿಮ್ಮ ಯಾವುದೋ ವಿಷಯವನ್ನು ಕುರಿತು ಟಿಪ್ಪಣಿ ಮಾಡಿದಾಗ ಇದು ನಿಮಗೆ ಟೀಕೆಯಂತೆ ಅನ್ನಿಸಬಹುದು. ಪರಿಣಾಮವಾಗಿ ಇದಕ್ಕೆ ನೀವು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಬಹುದು. ಬಳಿಕ ಛೇ! ಹೀಗೆ ಅನ್ನಬಾರದಿತ್ತು ಎನ್ನಿಸಬಹುದು. ಮೊದಲ ಪ್ರೀತಿಯ ಸಿಹಿ-ಕಹಿ ನೆನಪು ಎಂದಿಗೂ ಶಾಶ್ವತ!

ಈ ಸಮಯದಲ್ಲಿ ಕೊಂಚ ತಾಳ್ಮೆ ಹಾಗೂ ಸಂಯಮ ವಹಿಸಿದರೆ ಈ ಸಂದಿಗ್ಧಕ್ಕೆ ಸಿಲುಕುವ ಪ್ರಸಂಗದವೇ ಬಾರಲಾರದು. ವಿಶೇಷವಾಗಿ ನಿಮ್ಮ ಪ್ರಥಮ ಪ್ರೀತಿಯ ಕುರಿತು ನಿಮ್ಮ ಬಾಳಸಂಗಾತಿ ಕ್ವಚಿತ್ತಾಗಿ ಕೆದಕಿದ ವಿಷಯಗಳು ನಿಮ್ಮ ಚಿತ್ತವನ್ನು ಕೆಡಿಸಬಹುದು. ಈ ಸಮಯದಲ್ಲಿ ಸಂಯಮ ಕಾಪಾಡಲು ಕೆಳಗೆ ನೀಡಿರುವ ಸಲಹೆಗಳು ನೆರವಿಗೆ ಬರಬಹುದು.....

ವಾಸ್ತವ #1

ವಾಸ್ತವ #1

ಒಂದು ವೇಳೆ ನಿಮ್ಮ ಸಂಗಾತಿಯ ಮಾತುಗಳಿಂದ ನಿಮ್ಮ ಮನ ನೊಂದರೆ ಇದರಿಂದ ಪರೋಕ್ಷವಾಗಿ ಆತನಿಗೆ/ಆಕೆಗೆ ನಿಮ್ಮ ಸೋಲು, ತನ್ಮೂಲಕ ಆತನಿಗೆ/ಆಕೆಗೆ ಒಂದು ತರಹದ ಸಂತೋಷವುಂಟುಮಾಡುವಲ್ಲಿ ಯಶಸ್ವಿಯಾಗುತ್ತದೆ.

ವಾಸ್ತವ #1

ವಾಸ್ತವ #1

ಬದಲಿಗೆ, ಈ ಪದಗಳಿಗೂ ನನಗೂ ಏನೂ ಸಂಬಂಧವಿಲ್ಲ ಎಂಬಂತೆ ನಿರುಮ್ಮಳರಾಗಿದ್ದು ಸಾಮಾನ್ಯವಾಗಿ ವರ್ತಿಸಿದರೆ ಈ ಪದಗಳು ನಿಮ್ಮನ್ನು ಕಾಡಲಾರವು. ನಿಮ್ಮ ಮನೋಸ್ಥೈರ್ಯ ನಿಮ್ಮ ಮನವನ್ನು ಬಳಲಲು ಬಿಡಲಾರದು.

ವಾಸ್ತವ #2

ವಾಸ್ತವ #2

ಒಂದು ವೇಳೆ ಆತನ/ಆಕೆಯ ಪ್ರತಿ ಪದವನ್ನೂ ನೀವು ವೈಯಕ್ತಿಕವಾಗಿ ಪರಿಗಣಿಸಿದರೆ ಪ್ರತಿ ಪದವೂ ನಿಮ್ಮನ್ನು ಕ್ಷಣ ಕ್ಷಣವೂ ಬಾಧಿಸಬಹುದು. ಬದಲಿಗೆ ನಿಮ್ಮನ್ನು ನೀವೇ ಕೇಳಿಕೊಂಡು ಪ್ರಸ್ತುತ ಈ ಪದಗಳಿಗೆ ನೀಡುವ ಆದ್ಯತೆಗಿಂತಲೂ ಜೀವನದ ಇನ್ನಾವ ವಿಷಯಕ್ಕೆ ನೀಡಬಹುದು ಎಂಬ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಬೇಕು. ಗಂಡ ಹೆಂಡತಿಯ ಬಾಂಧವ್ಯ ಹಾವು-ಏಣಿ ಆಟದ ಹಾಗೆ....

ವಾಸ್ತವ #3

ವಾಸ್ತವ #3

ಕೆಲವೊಮ್ಮೆ ಇತರರು ಬೇರೆಯೇ ಅರ್ಥದಲ್ಲಿ ಹೇಳಿದ ಪದಗಳನ್ನು ನೀವು ತಪ್ಪಾಗಿ ಅರ್ಥೈಸಿಕೊಂಡ ಕಾರಣದಿಂದ ನಿಮಗೆ ಅಸಂತೋಷ ಎದುರಾಗಬಹುದು. ಈ ಪ್ರಸಂಗವಿದ್ದರೆ ಈ ಪದಗಳನ್ನು ನುಡಿದ ವ್ಯಕ್ತಿಯಿಂದ ಈ ಪದಗಳ ನಿಜವಾದ ಅರ್ಥವೇನೆಂದು ಮತ್ತೊಮ್ಮೆ ಖಚಿತಪಡಿಸಿಕೊಳ್ಳುವುದು ಒಳಿತು. ಇದರಿಂದ ಅನಗತ್ಯವಾಗಿ ಮನಸ್ಸಿನ ದುಗುಡಕ್ಕೆ ಒಳಗಾಗುವುದರಿಂದ ಪಾರಾಗಬಹುದು.

ವಾಸ್ತವ #4

ವಾಸ್ತವ #4

ನಿಮ್ಮ ಸಂಗಾತಿಯೊಡನೆ ಎಂದಿಗೂ ಮೂರನೆಯ ವ್ಯಕ್ತಿಯ ಎದುರು ಚರ್ಚಿಸಬೇಡಿ. ಇದರಿಂದ ಇತರರು ನಿಮ್ಮ ಬಗ್ಗೆ ತಮ್ಮದೇ ನಿಷ್ಕ್ರರ್ಷೆಗೆ ಬರಲು ನೀವೇ ಅನುವು ಮಾಡಿಕೊಟ್ಟಂತಾಗುತ್ತದೆ. ಅದರಲ್ಲೂ ಮೂರನೆಯ ವ್ಯಕ್ತಿ ಇಲ್ಲದ ವಿಷಯಕ್ಕೆ ಉಪ್ಪೂ ಕಾರ ಸೇರಿಸಿ ನಾಲ್ಕನೆಯ ವ್ಯಕ್ತಿಗೆ ತಿಳಿಸಿ ಇನ್ನಷ್ಟು ಉಪ್ಪೂ ಕಾರದ ಮೂಲಕ ನಿಮ್ಮ ಸಂಗಾತಿಗೆ ತಲುಪಿ ಇಲ್ಲದ ವಿಷಯ ಸಂಬಂಧದಲ್ಲಿ ಹುಳಿ ಹಿಂಡಬಹುದು.

ವಾಸ್ತವ #5

ವಾಸ್ತವ #5

ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮ ಯಾವುದೋ ಚರ್ಯೆಯನ್ನು ಕುರಿತು ಟೀಕಿಸಿದರೆ ಇದಕ್ಕೆ ಥಟ್ಟನೇ ಪ್ರತಿಕ್ರಿಯಿಸುವ ಬದಲು ಇವರು ಹೇಳಿದ ವಿಷಯದ ಸತ್ಯಾಂಶ ತಿಳಿಯಲು ಯತ್ನಿಸಿ. ನಿಮ್ಮ ದೃಷ್ಟಿಯಿಂದ ನೋಡಿದರೆ ಇದು ಟೀಕೆಯಂತೆಯೇ ಮತ್ತೊಮ್ಮೆ ಅನ್ನಿಸುವುದರಿಂದ ನೀವು ನಂಬುವ ಹಿರಿಯರ ದೃಷ್ಟಿಯಿಂದ ನೋಡಲು ಯತ್ನಿಸಿ.

ವಾಸ್ತವ #5

ವಾಸ್ತವ #5

ಇದರಿಂದ ಮಹಾಯುದ್ದ ನಡೆಯುವುದು ತಪ್ಪಬಹುದು. ಅದರಲ್ಲೂ ಮನಸ್ಸು ಬಳಲಿದ್ದಾಗ ಚರ್ಚಿಸುವ ಪ್ರಮೇಯ ಬಂದರೆ ನಿಮ್ಮ ಪದಗಳನ್ನು ಎಚ್ಚರಿಕೆಯಿಂದ ಬಳಸಿ.

ವಾಸ್ತವ #6

ವಾಸ್ತವ #6

ಕೆಲವೊಮ್ಮೆ ನಮ್ಮ ಬಿಗುಮಾನ ಕೆಲವೊಂದು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಅಡ್ಡಿ ಪಡಿಸುತ್ತದೆ. ಎಷ್ಟೋ ಸಲ ಕಲಹ ಜಗಳಗಳಿಗೆ ನಮ್ಮ ಹಮ್ಮು ಬಿಗುಮಾನವೇ ಕಾರಣವಾಗುತ್ತದೆ. ವಾಸ್ತವವಾಗಿ ತಪ್ಪಿಗೆ ನಾವೇ ಕಾರಣರಾಗಿರಬಹುದು, ಇದು ನಮಗೆ ತಿಳಿದೂ ಇರಬಹುದು. ಆದರೆ ಇದನ್ನು ಒಪ್ಪಿಕೊಳ್ಳಲು ಹೆಚ್ಚಿನವರು ತಯಾರಾಗುವುದಿಲ್ಲ.

ವಾಸ್ತವ #6

ವಾಸ್ತವ #6

ಕೆಲವೊಮ್ಮೆ ನಮ್ಮ ಬಿಗುಮಾನ ಕೆಲವೊಂದು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಅಡ್ಡಿ ಪಡಿಸುತ್ತದೆ. ಎಷ್ಟೋ ಸಲ ಕಲಹ ಜಗಳಗಳಿಗೆ ನಮ್ಮ ಹಮ್ಮು ಬಿಗುಮಾನವೇ ಕಾರಣವಾಗುತ್ತದೆ. ವಾಸ್ತವವಾಗಿ ತಪ್ಪಿಗೆ ನಾವೇ ಕಾರಣರಾಗಿರಬಹುದು, ಇದು ನಮಗೆ ತಿಳಿದೂ ಇರಬಹುದು. ಆದರೆ ಇದನ್ನು ಒಪ್ಪಿಕೊಳ್ಳಲು ಹೆಚ್ಚಿನವರು ತಯಾರಾಗುವುದಿಲ್ಲ.

ವಾಸ್ತವ #7

ವಾಸ್ತವ #7

ಆದರೆ ಹಮ್ಮು ಬಿಗುಮಾನವನ್ನು ಬದಿಗಿಟ್ಟು ನಿಮ್ಮ ಸಂಗಾತಿ ಹೇಳಿದ ವಿಷಯದಲ್ಲಿ ಸತ್ಯಾಂಶವೆಷ್ಟಿದೆ ಎಂದು ತಿಳಿದುಕೊಂಡು ನಿಮ್ಮ ತಪ್ಪನ್ನು ಒಪ್ಪಿಕೊಂಡು ತಣ್ಣನೆಯ ಮನಸ್ಸಿನಿಂದ ಚರ್ಚಿಸಿದರೆ ಬೆಟ್ಟದಷ್ಟು ದೊಡ್ಡ ಸಮಸ್ಯೆ ಬೆಣ್ಣೆಯಂತೆ ಕರಗುವುದು.

English summary

Why we can never recover from first love

Sometimes, it is quite common to take things personally. It is part of our nature. When your partner tries to correct you or tell you something which sounds like criticism, you tend to over react. Later on, you may again feel that you shouldn't have taken it so personally.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X