Latest Updates
-
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ
ಮದುವೆಯ ಬಂಧನ-ವಿಶ್ವಾಸದ ಸಂಬಂಧವಾಗಿರಲಿ!
ವಿವಾಹ ಬಂಧನದಲ್ಲಿ ಒಳಪಡುವ ಮೊದಲು ಬೋಧಿಸುವ ವಿಧಿಗಳಲ್ಲಿ ಜೀವನಪೂರ್ತಿ, ಅಥವಾ ಸಾವು ನಮ್ಮಲ್ಲೊಬ್ಬರನ್ನು ಬೇರ್ಪಡಿಸುವವರೆಗೆ ಒಬ್ಬರಿಗೊಬ್ಬರು ನಿಷ್ಠರಾಗಿರುತ್ತೇವೆ ಎಂಬುದು ಹೆಚ್ಚಿನ ಎಲ್ಲಾ ಧರ್ಮಗಳಲ್ಲಿದೆ. ಏಕೆಂದರೆ ಯಾವುದೇ ಬಂಧನ, ಸಂಬಂಧದಲ್ಲಿ ವಿಶ್ವಾಸ ಮತ್ತು ನಿಷ್ಠೆಯೇ ಮುಖ್ಯವಾಗಿದೆ. ಮನಃಶಾಸ್ತ್ರಜ್ಞರ ಪ್ರಕಾರ ಒಂದು ಯಶಸ್ವಿ ಮತ್ತು ಸುಖೀ ಪತಿಪತ್ನಿಯರ ಸಂಬಂಧದಲ್ಲಿ ಎಲ್ಲಾ ಗುಣಗಳನ್ನು ಶೇಖಡಾವಾರು ಪರಿಗಣಿಸುವುದಾದರೆ ವಿಶ್ವಾಸಕ್ಕೆ ಗರಿಷ್ಟ ಅಂದರೆ ಸುಮಾರು 55% ಅಂಕವಿದೆ. ಅಚ್ಚರಿ ಎಂದರೆ ವಿವಾಹ ಬಂಧನದಲ್ಲಿ ಶಾರೀರಿಕ ಸುಖಕ್ಕೆ ನೀಡಿರುವ ಅಂಕ ಕೇವಲ 9%.
ಇದೇ ಕಾರಣಕ್ಕೆ ಭಾರತದ ಲಕ್ಷಾಂತರ ಕುಟುಂಬಗಳ ದುಡಿಯುವ ಪುರುಷರು ವಿದೇಶಗಳಲ್ಲಿ ವರ್ಷಗಟ್ಟಲೇ ಕಾಲ ಕಳೆದರೂ ಅವರ ಪತ್ನಿಯರು ಊರಿನಲ್ಲಿ ಲೈಂಗಿಕ ಸುಖದಿಂದ ವಂಚಿತರಾಗಿಯೂ ವಿವಾಹಬಂಧನವನ್ನು ಕಾಯ್ದುಕೊಂಡಿರುವುದು. ವಿಶ್ವಾಸ ಕೇವಲ ಪತಿ ಪತ್ನಿಯರ ನಡುವೆ ಮಾತ್ರವಲ್ಲ, ಸಮಾಜದ ಯಾವುದೇ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ನಡುವೆ ಇರಬಹುದು. ಅಷ್ಟೇ ಅಲ್ಲ, ವಿಶ್ವಾಸಾರ್ಹತೆಗೆ ನಾಯಿಯೂ ಇನ್ನೊಂದು ಹೆಸರು. ಇಂದು ಹಲವು ಪತಿ ಪತ್ನಿಯರ ನಡುವೆ ಮೂಡುವ ಕಲಹ, ಕದನ, ತನ್ಮೂಲಕ ಎದುರಾಗುವ ವಿಚ್ಛೇದನಕ್ಕೆ ವಿಶ್ವಾಸಾರ್ಹತೆಯ ಕೊರತೆಯೇ ಮುಖ್ಯ ಕಾರಣವಾಗಿರುವುದು ಕಂಡುಬಂದಿದೆ.
ಒಂದು ವೇಳೆ ವಿಶ್ವಾಸಕ್ಕೆ ಅರ್ಹರಾಗಿರದೇ ಇದ್ದಲ್ಲಿ ಸಂಬಂಧ ಮುಂದುವರೆಸುವುದು ಉತ್ತಮ ಕ್ರಮವಲ್ಲ. ನಾವು ವಿಶ್ವಾಸಕ್ಕೆ ಅರ್ಹರು ಎಂಬುದನ್ನು ಸಾಬೀತುಪಡಿಸಲು ಇಡಿಯ ದಿನ ವಿಶ್ವಾಸ ಪಡೆಯಬೇಕಾದ ವ್ಯಕ್ತಿಯ ಎದುರಿಗೆ ಇರಬೇಕಾದ ಅಗತ್ಯವೂ ಇಲ್ಲ. ವಿಶ್ವಾಸ, ನಿಷ್ಠೆ ಇದ್ದರೆ ಈ ಗುಣಗಳು ತನ್ನಿಂತಾನೇ ಪ್ರಕಟಗೊಂಡು ಸಂಬಂಧ ಹೆಚ್ಚು ಪಕ್ವಗೊಳ್ಳಲು ಸಾಧ್ಯವಾಗುತ್ತದೆ.
ಇದು ಇಬ್ಬರು ಸ್ನೇಹಿತರ ನಡುವೆ ಇರಬಹುದು, ಪತಿ ಪತ್ನಿಯರ, ತಂದೆ ಮಕ್ಕಳ, ಗ್ರಾಹಕ ವ್ಯಾಪಾರಿ, ರೋಗಿ ವೈದ್ಯ ಇಂತಹ ನೂರಾರು ಸಂಬಂಧಗಳಲ್ಲಿರಬಹುದು. ಆದರೆ ಒಮ್ಮೆ ಈ ವಿಶ್ವಾಸ ಅಲ್ಲಾಡಿತೋ, ವರ್ಷಗಳಿಂದ ಉಳಿಸಿಕೊಂಡುಬಂದಿದ್ದ ಸಂಬಂಧ ಬುಡಕಡಿದ ಬಾಳೆಮರದಂತೆ ಒಮ್ಮೆಲೇ ಕುಸಿದು ಬೀಳಬಹುದು. ಆದ್ದರಿಂದಲೇ ಹಿರಿಯರು ವಿಶ್ವಾಸಘಾತುಕತನವನ್ನು ಅತಿ ಘೋರ ಅಪರಾಧ ಎಂದು ಕರೆದಿದ್ದಾರೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ವಿಶ್ವಾಸದಿಂದ ನಿಜವಾದ ಬದ್ಧತೆ ಇರಲು ಸಾಧ್ಯ
ಯಾವುದೇ ವ್ಯಕ್ತಿ ಎಷ್ಟೇ ಪ್ರಬಲನಾಗಿದ್ದರೂ ಯಾವಾಗ ತನ್ನ ಆಪ್ತರಲ್ಲಿ ಗೌರವ ಕಳೆದುಕೊಳ್ಳುತ್ತಾನೋ ಆಗ ನೆಲಮಟ್ಟಕ್ಕೆ ಕುಸಿದುಬಿಡುತ್ತಾನೆ. ಆದ್ದರಿಂದ ಸಮಾಜದಲ್ಲಿ ಮತ್ತು ವಿಶೇಷವಾಗಿ ತನ್ನ ಸಂಬಂಧದಲ್ಲಿರುವವರೊಂದಿಗೆ ವಿಶ್ವಾಸದಲ್ಲಿರುವ ಮೂಲಕ ಮಾತ್ರ ಗೌರವವನ್ನು ಪಡೆದುಕೊಳ್ಳಲು ಮತ್ತು ಉಳಿಸಿಕೊಳ್ಳಲು ಸಾಧ್ಯ.

ಸೋಲುಗಳನ್ನು ಸ್ಪರ್ಧಾಮನೋಭಾವದಿಂದ ಸ್ವೀಕರಿಸಲಾಗುತ್ತದೆ
ನಿಮ್ಮ ವಿಶ್ವಾಸದಲ್ಲಿರುವವರಿಗೆ ನಿಮ್ಮ ಗೆಲುವು ಮತ್ತು ಸೋಲುಗಳು ಸ್ವೀಕಾರಾರ್ಹವಾಗಿರುತ್ತವೆ. ಅಂದರೆ ನೀವು ಸೋತರೂ ನಿಮ್ಮನ್ನು ಅವರು ತ್ಯಜಿಸುವುದಿಲ್ಲ. ಬದಲಿಗೆ ನಿಮ್ಮನ್ನು ಮುಂದಿನ ಗೆಲುವಿಗೆ ಪ್ರೇರೇಪಿಸುತ್ತಾರೆ. ಇದೇ ನಿಜವಾದ ಜೀವನ, ಇದೇ ನಿಜವಾದ ಐಶ್ವರ್ಯ. ನಿಮ್ಮಿಂದ ಚಿಕ್ಕಪುಟ್ಟ ತಪ್ಪುಗಳು, ಸೋಲುಗಳಾದರೂ ಇದನ್ನು ಪರಿಗಣಿಸದೇ ನಿಮ್ಮಿಂದ ಸಾಧ್ಯವಾಗುವ ಇತರ ಗುರಿಯ ಕಡೆ ನಿಮ್ಮನ್ನು ಪ್ರೇರೇಪಿಸುತ್ತಾರೆ. ಇದು ಕೇವಲ ವಿಶ್ವಾಸದಿಂದ ಮಾತ್ರವೇ ಸಾಧ್ಯ ಹೊರತು ಉಳಿದವರೆಲ್ಲಾ ಸೋತ ವ್ಯಕ್ತಿ ಕೆಳಗೆ ಬಿದ್ದ ತಕ್ಷಣ ಬೆನ್ನು ತೋರಿಸುತ್ತಾರೆ.

ವಿಶ್ವಾಸದಿಂದ ಗೌರವಪಾತ್ರರಾಗಲು ಸಾಧ್ಯ
ಯಾವುದೇ ವ್ಯಕ್ತಿ ಎಷ್ಟೇ ಪ್ರಬಲನಾಗಿದ್ದರೂ ಯಾವಾಗ ತನ್ನ ಆಪ್ತರಲ್ಲಿ ಗೌರವ ಕಳೆದುಕೊಳ್ಳುತ್ತಾನೋ ಆಗ ನೆಲಮಟ್ಟಕ್ಕೆ ಕುಸಿದುಬಿಡುತ್ತಾನೆ. ಆದ್ದರಿಂದ ಸಮಾಜದಲ್ಲಿ ಮತ್ತು ವಿಶೇಷವಾಗಿ ತನ್ನ ಸಂಬಂಧದಲ್ಲಿರುವವರೊಂದಿಗೆ ವಿಶ್ವಾಸದಲ್ಲಿರುವ ಮೂಲಕ ಮಾತ್ರ ಗೌರವವನ್ನು ಪಡೆದುಕೊಳ್ಳಲು ಮತ್ತು ಉಳಿಸಿಕೊಳ್ಳಲು ಸಾಧ್ಯ.

ನಿಮ್ಮ ಸಂಬಂಧವೊಂದು ಮಾದರಿ ಸಂಬಂಧವಾಗುತ್ತದೆ
ಪತಿ ಪತ್ನಿಯರ ನಡುವೆ ಪರಸ್ಪರ ವಿಶ್ವಾಸವೇ ಪ್ರಮುಖವಾಗಿದ್ದಾಗ ಈ ಸಂಬಂಧವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇಬ್ಬರು ಒಬ್ಬರಿಗೊಬ್ಬರು ಅನುರೂಪರಾಗಿ ಒಬ್ಬರಿಗೊಬ್ಬರು ಸಹಕರಿಸಿಕೊಂಡು ಜೀವನವನ್ನು ಹಂಚಿಕೊಂಡು ನಗುನಗುತ್ತಾ ಇರುವ ಪರಿ ಒಂದು ಮಾದರಿಯಾಗಿ ಪರಿಗಣಿಸಲ್ಪಡುತ್ತದೆ.

ದ್ವೇಶಕ್ಕೆ ಇಲ್ಲಿ ಸ್ಥಳವಿಲ್ಲ
ವಿಶ್ವಾಸದಲ್ಲಿರುವ ಯಾವುದೇ ಸಂಬಂಧದ ನಡುವೆ ಕೇವಲ ಪ್ರೀತಿ ಮಾತ್ರ ಕುಡಿಯೊಡೆಯುತ್ತದೆ. ಎಲ್ಲಿಯವರೆಗೆ ವಿಶ್ವಾಸಘಾತುಕತನ ಇರುವುದಿಲ್ಲವೋ ಅಲ್ಲಿಯವರೆಗೆ ಈ ಸಂಬಂಧದ ನಡುವೆ ದ್ವೇಶ ಇರುವುದಿಲ್ಲ.

ಬದ್ಧತೆ ಮತ್ತು ಪ್ರಾಮುಖ್ಯತೆ
ನಿಮ್ಮ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿ, ನಿಮ್ಮ ಸಂಗಾತಿಯ ಪ್ರಮುಖ ಆದ್ಯತೆ ನಿಮಗಾಗುತ್ತದೆ. ಜೀವನದ ನಿಜವಾದ ಅರ್ಥ ಮತ್ತು ನಿಜವಾದ ಸುಖ ಇದರಲ್ಲಿದೆ.

ಜೀವನದ ಕಷ್ಟಗಳನ್ನು ಸುಖವಾಗಿ ಎದುರಿಸಲು ಸಾಧ್ಯವಾಗುತ್ತದೆ
ಸುಖ ಎಂದರೇನು? ಹೆಚ್ಚಿನವರು ಹೆಚ್ಚು ಹಣ ಇರುವುದೇ ಸುಖ ಎಂದು ತಪ್ಪಾಗಿ ತಿಳಿದಿದ್ದಾರೆ. ಜೀವನದಲ್ಲಿ ಯಾವುದೇ ಮಟ್ಟ ಇದ್ದರೂ ಸುಖವಾಗಿರಲು ನಮ್ಮ ಮನಸ್ಸುಗಳು ನಿರಾಳವಾಗಿದ್ದು ಇರುವುದರಲ್ಲಿ ಸಂತೋಷಪಡುವ ಗುಣ, ಉನ್ನತವಾದ ಗುರಿ ಹೊತ್ತು ಇದನ್ನು ಸಾಧಿಸಲು ಕಷ್ಟಪಡುವ ಮೂಲಕವೇ ನಿಜವಾದ ಸಂತೋಷ, ಸುಖ, ನೆಮ್ಮದಿ ದೊರಕುತ್ತದೆ. ಪರಸ್ಪರ ವಿಶ್ವಾಸದಲ್ಲಿರುವವರು ಜೀವನದ ಕಷ್ಟ ಸುಖಗಳನ್ನು ಸಮಾನವಾಗಿ ಹಂಚಿಕೊಂಡು ಒಬ್ಬರಿಗೊಬ್ಬರು ನೆರವಾಗಿ ಗುರಿ ಸಾಧಿಸಲು ನೆರವಾಗುವ ಮೂಲಕ ಜೀವನ ಸಂತೋಷಕರವಾಗುತ್ತದೆ.

ಪರಸ್ಪರ ದೂರವಿದ್ದರೂ ಬದ್ಧತೆ ಉಳಿಯುತ್ತದೆ
ವಿದೇಶಗಳಲ್ಲಿ ಅಥವಾ ದೂರದ ಊರುಗಳಲ್ಲಿ ಉದ್ಯೋಗಿಗಳಾಗಿರುವವರು ಅನಿವಾರ್ಯವಾಗಿ ತಮ್ಮ ಸಂಗಾತಿಗಳಿಂದ ದೂರವಿದ್ದರೂ ಅವರ ಸಂಬಂಧ ಉಳಿದವರಿಗಿಂತಲೂ ಉತ್ತಮವಾಗಿರಲು ಪರಸ್ಪರ ವಿಶ್ವಾಸವೇ ಕಾರಣ. ಶಾರೀರಿಕವಾಗಿ ದೂರವಿದ್ದರೂ ಹೃದಯದಿಂದ ಹೃದಯಕ್ಕೆ ಈ ಅಂತರ ಬಹಳ ಕಡಿಮೆ ಇರುವ ಕಾರಣ ಲೋಕದ ಯಾವುದೇ ಆಕರ್ಷಣೆ ಇವರನ್ನು ಬೇರ್ಪಡಿಸಲು ಸಾಧ್ಯವಿಲ್ಲ.



Click it and Unblock the Notifications











