ಅಚಾನಕ್ಕಾಗಿ ಈಗೆಲ್ಲಾ ನಡೆದರೆ, 'ಪ್ರೀತಿಯ' ಲೆಕ್ಕಾಚಾರ ಹಾಕಬಹುದು!

By Arshad

ಸುಳ್ಳು ಹೇಳುವುದನ್ನು ಕಂಡು ಹಿಡಿಯುವ ಮೆಷೀನ್ ಒಂದನ್ನು ಕಂಡುಹಿಡಿಯಲಾಗಿದೆ ಎಂದಾಗ ಹಿರಿಯರೊಬ್ಬರು ಹೀಗೆ ಹೇಳಿದರಂತೆ. ಇದೇನು ಮಹಾ, ಇಂತಹ ಒಂದು ಮಷೀನ್ ಒಂದನ್ನು ನಾನು ನಲವತ್ತು ವರ್ಷ ಹಿಂದೆಯೇ ಮದುವೆಯಾಗಿದ್ದೇನೆ! ಹೌದು, ಪತಿಯ ಸುಳ್ಳುಗಳನ್ನು ಪತ್ನಿಯರು ಚಿಟಿಕೆ ಹೊಡೆಯುವುದರಲ್ಲಿ ಕಂಡುಹಿಡಿಯಬಲ್ಲರು.

ಇದು ಕೇವಲ ಪತಿ ಪತ್ನಿಯರ ನಡುವೆ ಮಾತ್ರವಲ್ಲ, ಹೃದಯದಿಂದ ಹತ್ತಿರವಿರುವ ಯಾವುದೇ ಇಬ್ಬರು ವ್ಯಕ್ತಿಗಳು ಇನ್ನೊಬ್ಬರ ಬಗ್ಗೆ ಒಂದು ಮಾತನ್ನೂ ಆಡದೇ ಅವರ ಮನಸ್ಸನ್ನು ಅರಿಯಬಲ್ಲರು. ಪದಗಳಲ್ಲಿ ಬಣ್ಣಿಸದೆ ಒಮ್ಮೆ ಪ್ರೀತಿಯನ್ನು ವ್ಯಕ್ತಪಡಿಸಿ ನೋಡಿ!

ತನ್ನ ಉದ್ಯೋಗಿಗಳ ಮನಸ್ಸನ್ನು ಅರಿತು ಅವರು ಕೇಳುವ ಮುನ್ನವೇ ಅವರ ಬೇಡಿಕೆಯನ್ನು ಮನ್ನಿಸುತ್ತಿದ್ದ ಡಾ. ಕಲಾಂ ರವರ ಪರಿ ಎಲ್ಲರನ್ನೂ ಬೆರಗಿನ ಕಡಲಲ್ಲಿ ಮುಳುಗಿಸುತ್ತಿತ್ತು. ಈ ಶಕ್ತಿ ಪ್ರತಿಯೊಬ್ಬರಲ್ಲಿಯೂ ಇರುತ್ತದೆ, ಆದರೆ ಇದನ್ನು ಬಳಸಲು ಎದುರಿನ ವ್ಯಕ್ತಿಯು ನಿಮ್ಮ ಮನಸ್ಸಿಗೆ ಹತ್ತಿರದವರಾಗಿರಬೇಕು ಅಷ್ಟೇ.

ಒಂದು ವೇಳೆ ನೀವಿನ್ನೂ ಅವಿವಾಹಿತ ಯುವಕರಾಗಿದ್ದು ನೀವು ಪ್ರೀತಿಸುತ್ತಿರುವ ಯುವತಿ ನಿಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾಳೆ? ನಿಮ್ಮನ್ನು ಜೀವನಸಂಗಾತಿಯಾಗಿ ವರಿಸಲು ಆಕೆ ಸಿದ್ಧಳಿದ್ದಾಳೋ, ಅಥವಾ ಕೇವಲ ಪ್ರೀತಿಯ ನಾಟಕ ಆಡುತ್ತಿದ್ದಾಳೋ ಎಂದು ಕಂಡುಕೊಳ್ಳುವುದು ಹೇಗೆ ಎಂಬ ದ್ವಂದ್ವ ಎದುರಾಗಿದೆಯೇ? ಕೆಲವು ಪುರುಷರಿಗೆ, ಮಹಿಳೆಯರೆಂದರೆ ಸಿಕ್ಕಾಪಟ್ಟೆ ಭಯವಂತೆ!

ಇದಕ್ಕೂ ಮುನ್ನ ನೀವು ಆಕೆಯನ್ನು ಮನಸಾರೆ ಪ್ರೀತಿಸುತ್ತಿದ್ದೀರೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಇದಕ್ಕೆ ಮೊದಲು ನಿಮ್ಮ ಮನಸ್ಸು ನಿರಾಳವಾಗಿರಬೇಕು. ಥಟ್ಟನೇ ಆಕೆಯ ಬಗ್ಗೆ ನಿಮ್ಮ ಮನದಲ್ಲಿ ಯಾವುದೇ ಕಲ್ಪನೆಗಳು ಮೂಡಿದರೂ ನೀವು ಆಕೆಯನ್ನು ಪ್ರೀತಿಸುವುದು ಖಚಿತ ಎಂದು ತಿಳಿದುಕೊಳ್ಳಬಹುದು. ಅಂತೆಯೇ ಆಕೆಯೂ ನಿಮ್ಮನ್ನು ಮನಸಾರೆ ಪ್ರೀತಿಸುತ್ತಿದ್ದಾಳೆಯೇ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ....

ಸೂಚನೆ #1

ಸೂಚನೆ #1

ನೀವು ಆಕೆಯ ಬಗ್ಗೆ ಯೋಚಿಸುತ್ತಿದ್ದಾಗ ಅನೂಚಾನವಾಗಿ ಸೀನು ಬಂದರೆ ಆಕೆಯೂ ಆ ಹೊತ್ತಿನಲ್ಲಿ ನಿಮ್ಮನ್ನು ನೆನೆಸಿಕೊಳ್ಳುತ್ತಾಳೆ, ಅದರಲ್ಲೂ ನಿಮ್ಮ ಬಗ್ಗೆ ಆಕೆಯ ಯೋಚನೆಗಳು ಒಳ್ಳೆಯದಿವೆ ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ಎರಡು ಸೀನುಗಳು ಬಂದರೆ ಆಕೆ ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದಾಳೆ, ಆದರೆ ಆಕೆಯ ಯೋಚನೆಗಳು ನಿಮ್ಮ ಬಗ್ಗೆ ಕೆಟ್ಟದ್ದಾಗಿವೆ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ಮೂರು ಸೀನುಗಳು ಬಂದರೆ ನಿಮ್ಮ ಬಗ್ಗೆ ಆಕೆಯ ಆಯ್ಕೆ ಅಂತಿಮವಾಗಿದ್ದು ನಿಮ್ಮ ಸಂಬಂಧ ಬಲಗೊಳ್ಳಲಿದೆ ಎಂದು ತಿಳಿದುಕೊಳ್ಳಬಹುದು.

ಸೂಚನೆ #2

ಸೂಚನೆ #2

ಆಕೆಯ ಬಗ್ಗೆ ಯೋಚಿಸುತ್ತಿದ್ದಾಗ ನಿಮ್ಮ ಹಸ್ತಗಳಲ್ಲಿ ತುರಿಕೆಯ ಅನುಭವವಾದರೆ ಆಕೆಯೂ ನಿಮ್ಮನ್ನು ಇಷ್ಟಪಡುತ್ತಿದ್ದಾಳೆ ಎಂದು ಭಾವಿಸಿಕೊಳ್ಳಬಹುದು. ಆಕೆಯ ಬಗ್ಗೆ ಯೋಚಿಸದ ಇತರ ಹೊತ್ತಿನಲ್ಲಿ ಬಲಹಸ್ತದಲ್ಲಿ ತುರಿಕೆಯಾದರೆ ಧನದ ಆಗಮನ ಮತ್ತು ಎಡಹಸ್ತದಲ್ಲಿ ತುರಿಕೆಯಾದರೆ ಖರ್ಚಿನ ಬಾಬ್ತು ಬರಲಿದೆ ಎಂದು ತಿಳಿದುಕೊಳ್ಳಬಹುದು.

ಸೂಚನೆ #3

ಸೂಚನೆ #3

ಅತ್ಯಂತ ಜನಪ್ರಿಯವಾದ ಸೂಚನೆ ಎಂದರೆ ಬಿಕ್ಕಳಿಕೆ. ಒಂದು ವೇಳೆ ಆಕೆಯ ಬಗ್ಗೆ ಯೋಚಿಸುತ್ತಿದ್ದಾಗ ನಿಮಗೆ ಬಿಕ್ಕಳಿಕೆ ಎದುರಾದರೆ ಆಕೆಯೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದಾಳೆ ಎಂದು ಅರ್ಥೈಸಿಕೊಳ್ಳಬಹುದು.

ಸೂಚನೆ #4

ಸೂಚನೆ #4

ಒಂದು ವೇಳೆ ಊಟದ ಸಮಯದಲ್ಲಿ ಅನ್ನದ ಅಗುಳೊಂದು ಗಂಟಲಿನಲ್ಲಿ ಸಿಕ್ಕಿಕೊಂಡು ಥಟ್ಟನೇ ಕೆಮ್ಮು ಎದುರಾದರೆ ಈ ಹೊತ್ತಿನಲ್ಲಿ ಆಕೆಯೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದಾಳೆ ಎಂದು ಅರ್ಥೈಸಿಕೊಳ್ಳಬಹುದು. ಒಂದು ವೇಳೆ ಕೆಮ್ಮು ಸತತವಾದರೆ ಆಕೆ ನಿಮ್ಮಲ್ಲಿ ಜಗಳವಾಡಲು ಸಿದ್ಧಳಾಗುತ್ತಿದ್ದಾಳೆ ಎಂದು ಅರ್ಥೈಸಿಕೊಳ್ಳಬಹುದು.

ಸೂಚನೆ #5

ಸೂಚನೆ #5

ಒಂದು ವೇಳೆ ನಿಮ್ಮ ಎಡಗಣ್ಣು ಅದುರಿದರೆ ಆಕೆ ನಿಮ್ಮನ್ನು ದ್ವೇಷಿಸುತ್ತಿದ್ದಾಳೆ ಅಥವಾ ನಿಮ್ಮಿಬ್ಬರ ಬಗ್ಗೆ ಏನೋ ಚಿಕ್ಕ ಕಲಹ ಎದುರಾಗಬಹುದು ಎಂದು ಅರ್ಥೈಸಿಕೊಳ್ಳಬಹುದು. ಒಂದು ವೇಳೆ ಬಲಗಣ್ಣು ಅದುರಿದರೆ ಆಕೆ ನಿಮ್ಮನ್ನು ಇಷ್ಟಪಡುತ್ತಿದ್ದಾಳೆ ಎಂದು ಅರ್ಥ.

English summary

How To Know If She's Thinking About You

Now, if you are wondering whether she's thinking about you, then there are some signs to recognise. But firstly, your mind needs to be clutter-free. When her thoughts suddenly hit your mind, when you are not thinking about her consciously, then it could be one sign that she's thinking about you. Now, let us know about others signs that indicate she's thinking about you.
X
Desktop Bottom Promotion