ಚಿಕ್ಕದೊಂದು ಕಲಹ, ಪ್ರೀತಿಯ ಅಳಿವಿಗೆ ಮೂಲ!

By Manu

ಯಾವುದೇ ಸಂಬಂಧವನ್ನು ನಿಭಾಯಿಸುವುದು ಎಲ್ಲಾ ಸಮಯದಲ್ಲಿ ನೀರು ಕುಡಿದಂತಲ್ಲ. ಕೈ ಕೈ ತಟ್ಟಿದರೇ ಚಪ್ಪಾಳೆ ಎಂಬಂತೆ ಪ್ರೀತಿ ಮೂಡಲು ಇಬ್ಬರ ಹೃದಯಗಳಲ್ಲಿಯೂ ಸಮಾನವಾದ ಭಾವನೆಗಳು ಮೂಡಬೇಕು. ಈ ಪ್ರೀತಿ ಯಾವುದೇ ಷರತ್ತಿಗೆ ಒಳಪಟ್ಟಿರಬಾರದು, ಒಂದು ವ್ಯಾಪಾರದಂತೆಯೂ ಆಗಬಾರದು. ಆದರೆ ಇಂದಿನ ದಿನಗಳಲ್ಲಿ ಪ್ರೀತಿಯನ್ನೂ ಒಂದು ವ್ಯಾಪಾರದಂತೆಯೇ ನೋಡಲಾಗುತ್ತಿದೆ.

ಪ್ರೀತಿಯನ್ನು ಆದಾಯ ಅಥವಾ ಹಣದ ಅರ್ಹತೆಯಲ್ಲಿ ತೂಗುವ ಮೂಲಕ ಸಂಬಂಧಗಳೂ ನಲುಗುತ್ತಿವೆ. ಇದರ ಪರಿಣಾಮವನ್ನು ಮಾತ್ರ ಹೆಣ್ಣುಮಕ್ಕಳೇ ಹೊರಬೇಕಾಗಿರುವುದು ಮಾತ್ರ ನಾಗರಿಕತೆಯ ವ್ಯಂಗ್ಯವಾಗಿದೆ. ಆದರೆ ಪ್ರೀತಿಯಲ್ಲಿರುವವರಿಗೆ ತಮ್ಮ ಮನದನ್ನ ಅಥವಾ ಮನದನ್ನೆಯ ಋಣಾತ್ಮಕ ವಿಷಯಗಳು ಅರಿವಿಗೆ ಬರುವುದೇ ಇಲ್ಲ.

ಆದರೆ ಒಮ್ಮೆ ಅರಿವಾದರೆ ಈ ಬಗ್ಗೆ ಭಿನ್ನತೆ ತಲೆದೋರಬಹುದು. ಚಿಕ್ಕದೊಂದು ಕಲಹವೂ ಪ್ರಾರಂಭವಾಗಬಹುದು. ಇದು ಪ್ರೀತಿಯ ಅಳಿವಿಗೆ ಮೂಲವಾಗಹುದು. ಒಂದು ವೇಳೆ ಒಬ್ಬರ ಒಂದು ಅಭ್ಯಾಸ ಇನ್ನೊಬ್ಬರಿಗೆ ದುರಭ್ಯಾಸವಾಗಿ ಕಂಡುಬಂದು ಇದರಿಂದ ಹೊರಬರಲು ಉತ್ಸುಕತೇ ತೋರದೇ ಇದ್ದಲ್ಲಿ ಮಾತ್ರ ಈ ಅಭ್ಯಾಸಕ್ಕಾಗಿ ಪ್ರೀತಿಯನ್ನೇ ಕಳೆದುಕೊಳ್ಳಬೇಕಾಗಿ ಬರಬಹುದು.

ಹೆಚ್ಚಿನವರಿಗೆ ತಮ್ಮ ಪ್ರೀತಿ ನಿಧಾನವಾಗಿ ಜಾರುತ್ತಿರುವುದು ಅರಿವಾಗಿದ್ದರೂ ಇದರ ಕಾರಣವನ್ನು ಅರಿಯಲು ಅಸಫಲರಾಗಿರುತ್ತಾರೆ. ಏಕೆಂದರೆ ಇವರ ದುರಭ್ಯಾಸದ ಬಗ್ಗೆ ಹಲವಾರು ಸೂಚನೆ ನೀಡಿದ ಬಳಿಕವೂ ತೋರಿದ ನಿರ್ಲಕ್ಷ್ಯದ ಪರಿಣಾಮವಾಗಿಯೇ ಪ್ರೀತಿ ದೂರ ಹೋಗುತ್ತಿದ್ದಿದ್ದಿರಬಹುದು. ಒಂದು ವೇಳೆ ನಿಮಗೆ ಈ ಅನುಭವವಾಗುತ್ತಿದ್ದಲ್ಲಿ ನಿಮ್ಮ ಅಭ್ಯಾಸಗಳ ಬಗ್ಗೆ ಕೊಂಚ ಅವಕೋಕಿಸಲು ಇದು ಸೂಕ್ತ ಸಮಯವಾಗಿದೆ. ತಮಗೆ ಅರಿವು ಇದ್ದೋ ಇಲ್ಲದೆಯೋ ಆಚರಿಸುತ್ತಿರುವ ದುರಭ್ಯಾಸವನ್ನು ದೂರಮಾಡಲು ಅಥವಾ ಬದಲಿಸಿಕೊಳ್ಳಲು ಕೆಳಗೆ ನೀಡಿರುವ ಮಾಹಿತಿಗಳು ನಿಮಗೆ ನೆರವಾಗಲಿವೆ.

ತಾನು ನಿನಗಾಗಿ ಬದಲಾಗುತ್ತಿದ್ದೇನೆ ಎಂದು ನಿಮ್ಮ ಸಂಗಾತಿಗೆ ಮನದಟ್ಟು ಮಾಡುವುದೂ ಬಹಳ ಮುಖ್ಯ. ಏಕೆಂದರೆ ನೀವು ಬದಲಾಗಿರುವ ಅರಿವಿಲ್ಲದೇ ಸಂಗಾತಿ ತನ್ನ ಮನಸ್ಸನ್ನು ನಿಮ್ಮೆಡೆಗೆ ತಿರುಗಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಬದಲಾದ ನೀವು ಪುನಃ ಜೀವನದಲ್ಲಿ ಮತ್ತೊಮ್ಮೆ ಆ ತಪ್ಪನ್ನು ಎಸಗದಿರುವಂತೆ ನೋಡಿಕೊಳ್ಳುವುದೂ ಅಗತ್ಯ.

ನಿಮ್ಮ ಸಂಗಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸದೇ ಇರುವುದು

ನಿಮ್ಮ ಸಂಗಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸದೇ ಇರುವುದು

ಪ್ರತಿ ವ್ಯಕ್ತಿಯೂ ತನ್ನ ಪ್ರಿಯಕರ ಅಥವಾ ಪ್ರಿಯತಮೆ ತನ್ನ ಬಗ್ಗೆ ಕೊಂಚವಾದರೂ ಮೆಚ್ಚುಗೆಯನ್ನು ವ್ಯಕ್ತಪಡಿಸಬೇಕೆಂದು ಅಪೇಕ್ಷಿಸುತ್ತಾರೆ. ಪರಸ್ಪರ ಮೆಚ್ಚುಗೆ ಮತ್ತು 'ನಿನ್ನಿಂದಾಗಿ ಇದು ಸಾಧ್ಯವಾಯಿತು','ಈ ಕೆಲಸಕ್ಕೆ ನೀನೇ ಪ್ರೇರಣೆ' ಎಂಬ ಧನಾತ್ಮಕ ಮಾತುಗಳನ್ನು ಆಡುವ ಮೂಲಕ ಸಂಗಾತಿ ಅಪಾರವಾದ ಧನ್ಯತಾಭಾವವನ್ನು ಪಡೆಯುತ್ತಾರೆ. ಉದಾಹರಣೆಗೆ ಇಂದಿನ ಅಡುಗೆ ಬಹಳ ರುಚಿಯಾಗಿದೆ ಎಂದಾಗ ಅಡುಗೆ ಮಾಡಿದವಳ ಮನ ಪ್ರಫುಲ್ಲವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ಸಂಗಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸದೇ ಇರುವುದು

ನಿಮ್ಮ ಸಂಗಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸದೇ ಇರುವುದು

ಒಂದು ವೇಳೆ ನಿಮಗೆ ಅರಿವಿಲ್ಲದೇ ಮೆಚ್ಚುಗೆ ವ್ಯಕ್ತಪಡಿಸದೇ ಇದ್ದರೆ ಸಂಗಾತಿಯ ನಿರೀಕ್ಷೆಗಳೆಲ್ಲಾ ಹುಸಿಯಾಗುತ್ತವೆ ಹಾಗೂ ಪರಿಣಾಮವಾಗಿ ನಿಮ್ಮ ಬಗ್ಗೆ ಇದ್ದ ಪ್ರೀತಿಯ ಭಾವನೆಯೂ ಕುಸಿಯುತ್ತದೆ. ಈ ಮನ ನಿಮ್ಮ ಇತರ ಉತ್ತಮ ಕೆಲಸಗಳನ್ನೂ ಗುರುತಿಸುವಲ್ಲಿ ಸೋಲುತ್ತದೆ. ಪ್ರೀತಿಯ ವೈಫಲ್ಯಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ. ಒಂದು ವೇಳೆ ಸಂಗಾತಿಯ ಕೆಲಸ ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರದಿದ್ದರೆ ಇದನ್ನು ತಿರಸ್ಕಾರದ ಮಾತುಗಳಲ್ಲಿ ಎಂದೂ ಹೇಳಬಾರದು, ಬದಲಿಗೆ ಮೆಚ್ಚುಗೆಯ ಮಾತುಗಳನ್ನೇ ಆಡಿ, ಇನ್ನೂ ಉತ್ತಮವಾಗುವ ಸಾಧ್ಯತೆ ಇದೆ ಎಂದು ಸೂಚ್ಯವಾಗಿ ತಿಳಿಸುವ ಪರಿಯನ್ನು ಎಲ್ಲರೂ ಹೃನ್ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ.

ನಿಮ್ಮ ತಾಳ್ಮೆಯನ್ನು ಮಿತಿಮೀರಿ ಪರೀಕ್ಷಿಸಿದಾಗ

ನಿಮ್ಮ ತಾಳ್ಮೆಯನ್ನು ಮಿತಿಮೀರಿ ಪರೀಕ್ಷಿಸಿದಾಗ

ಪ್ರತಿಯೊಬ್ಬರಿಗೂ ತಮ್ಮದೇ ಆದ ಮಿತಿಯಲ್ಲಿ ತಾಳ್ಮೆ ಇರುತ್ತದೆ. ಪ್ರತಿಯೊಬ್ಬರ ತಾಳ್ಮೆಯಲ್ಲಿ ಏರುಪೇರು ಇರುತ್ತದೆ. ಕೆಲವರು ಕೊಂಚಕಾಲಕ್ಕೇ ತಮ್ಮ ತಾಳ್ಮೆ ಕಳೆದುಕೊಂಡರೆ ಕೆಲವರಿಗೆ ಅಪಾರವಾದ ತಾಳ್ಮೆ ಇರುತ್ತದೆ. ಒಂದು ವೇಳೆ ಸಂಗಾತಿಗಳಲ್ಲಿ ಈ ಮಟ್ಟಗಳಲ್ಲಿ ಏರುಪೇರು ಆಗಿದ್ದರೆ ಇದನ್ನು ಸಂಭಾಳಿಸಿಕೊಂಡು ಹೋಗುವುದೇ ಜಾಣತನವಾಗಿದೆ. ಆದರೆ ಎಂದಿಗೂ ನಿಮ್ಮ ಸಂಗಾತಿಯ ತಾಳ್ಮೆಯನ್ನು ಪರೀಕ್ಷಿಸಕೂಡದು. ಅದರಲ್ಲೂ ತಾಳ್ಮೆಯ ಮಿತಿಮೀರಿ ಖಂಡಿತಾ ಪರೀಕ್ಷಿಸಕೂಡದು. ಬದಲಿಗೆ ನಿಮ್ಮ ಸಂಗಾತಿಗೆ ಇನ್ನಷ್ಟು ಪ್ರೇರಣೆ ನೀಡಿ ಮಾನಸಿಕ ಸ್ಥೈರ್ಯ ತುಂಬಬೇಕು.

ವಿನಾಕಾರಣ ಆರೋಪ ಹೊರಿಸಿದಾಗ

ವಿನಾಕಾರಣ ಆರೋಪ ಹೊರಿಸಿದಾಗ

ಈ ಜಗತ್ತಿನಲ್ಲಿ ನಿತ್ಯವೂ ಚಿಕ್ಕಪುಟ್ಟ ತಪ್ಪುಗಳು ಆಗುತ್ತಲೇ ಇರುತ್ತವೆ. ನಮ್ಮ ಸಮಾಜದಲ್ಲಿ ಇದಕ್ಕೆ ಆಗುವ ಕಾರಣಕ್ಕೆ ಯಾರದ್ದಾದರೂ ಮೇಲೆ ಆರೋಪ ಹೊರಿಸುವ ಕೆಟ್ಟ ಚಾಳಿ ಇದೆ. ಆದರೆ ಈ ಚಾಳಿ ಪ್ರೀತಿಯಲ್ಲಿ ಸಲ್ಲದು. ಒಂದು ವೇಳೆ ನಿಮ್ಮ ಸಂಗಾತಿಯನ್ನು ನೀವು ಅಪಾರವಾಗಿ ಪ್ರೀತಿಸುವುದೇ ಆಗಿದ್ದಲ್ಲಿ ಅವರ ತಪ್ಪುಗಳನ್ನು ನಿಮ್ಮ ತಪ್ಪುಗಳು ಎಂದು ಒಪ್ಪಿಕೊಂಡು ಇದಕ್ಕೆ ಪರಿಹಾರ ಹುಡುಕುವುದೇ ಸರಿಯಾದ ಕ್ರಮವಾಗಿದೆ. ಬದಲಿಗೆ ತಪ್ಪಿಗಾದ ಕಾರಣವನ್ನು ಸಂಗಾತಿಯ ಮೇಲೆ ಹೊರಿಸುವ ಮೂಲಕ ಪ್ರೀತಿ ನಲುಗುತ್ತದೆ.

ಮೌನಾಚರಣೆಯ ಮೂಲಕ

ಮೌನಾಚರಣೆಯ ಮೂಲಕ

ಜಗಳವಾಡದ ದಂಪತಿಗಳೇ ಈ ಜಗತ್ತಿನಲ್ಲಿಲ್ಲ. ಅಲ್ಲದೇ ಸುಖದಾಂಪತ್ಯಕ್ಕೆ ಚಿಕ್ಕ ಪುಟ್ಟ ಜಗಳಗಳು ಅನಿವಾರ್ಯ ಕೂಡಾ. ಆದರೆ ಈ ಜಗಳಗಳೆಲ್ಲಾ ಕೋಳಿ ಜಗಳದಂತೆ ಒಂದು ನಿಮಿಷಕ್ಕೆ ಮಾಡಿ ಮುಗಿಸುವಂತಹದ್ದಾಗಬೇಕೇ ವಿನಃ ರಾತ್ರಿಯೂಟದ ಬಳಿಕವೂ ಮುಂದುವರೆಯಬಾರದು. ಸಾಮಾನ್ಯವಾಗಿ ಜಗಳದ ಬಳಿಕ ಮೌನದಿಂದ ಒಬ್ಬರಿಗೊಬ್ಬರು ತೀಕ್ಷ್ಣವಾಗಿ ಇರಿಯುವ ಪರಿ ಪ್ರೀತಿಯನ್ನು ಕಡಿಮೆಮಾಡಬಹುದು. ಆದ್ದರಿಂದ ತಪ್ಪು ಯಾರದ್ದೇ ಆಗಿರಲಿ, ಜಗಳ ಯಾರಿಂದಲೇ ಪ್ರಾರಂಭವಾಗಿರಲಿ, ಒಬ್ಬರಿಗೊಬ್ಬರು ಮಾತನಾಡದೇ ಇರುವುದು ಮಾತ್ರ ಪ್ರೀತಿಗೆ ಅಪಚಾರ ಮಾಡಿದಂತೆ.

ಭವಿಷ್ಯ ಮಸುಕಾದಾಗ

ಭವಿಷ್ಯ ಮಸುಕಾದಾಗ

ಭವಿಷ್ಯದ ಬಗ್ಗೆ ಮಾನತಾಡುವುದು, ಸೂಕ್ತ ಕ್ರಮ ಕೈಗೊಳ್ಳುವುದು ಎಲ್ಲರಿಗೂ ಅಗತ್ಯವಾಗಿದೆ. ಪ್ರೀತಿಯಲ್ಲಿರುವವರಿಗೆ ಇದು ಇನ್ನೂ ಹೆಚ್ಚು ಅಗತ್ಯ. ಒಂದು ವೇಳೆ ನಿಮ್ಮ ಭವಿಷ್ಯ ಭದ್ರವಾಗಿಲ್ಲದಿದ್ದು ಯಾವುದೇ ಸ್ಪಷ್ಟ ಮಾಹಿತಿ ಅಥವಾ ಕ್ರಮ ಕೈಗೊಂಡಿರದೇ ಇದ್ದಲ್ಲಿ ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಸಡಿಲತೆ ತೋರಬಹುದು. ಇದು ಪ್ರೀತಿ ಕಡಿಮೆಯಾಗಲು ಕಾರಣವಾಗಬಹುದು. ಆದ್ದರಿಂದ ಭವಿಷ್ಯದ ಬಗ್ಗೆ ಸ್ಪಷ್ಟವಾಗಿ ಮಾತನಾಡಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಪರಸ್ಪರ ಹತ್ತಿರಾಗಲು ಸಾಧ್ಯ.

English summary

Bad Habits That Destroy Your Love

Relationships are not at all easy to maintain at times. Just like how it takes two hands to clap in order to make a sound; likewise, it takes two hearts to feel that unconditional love. In today's world, there are a lot of people who take advantage of their relationship. Many a times, women are at the other end to suffer a loss in the relationship and this hurts a great deal.
Story first published: Tuesday, March 8, 2016, 11:59 [IST]
X
Desktop Bottom Promotion