ಅತಿಯಾದ ಪ್ರೀತಿ ಕೂಡ ದಾಂಪತ್ಯಕ್ಕೆ ಮುಳ್ಳಾಗಬಹುದು!

By Manu

ಅತಿಯಾದರೆ ಅಮೃತವೂ ವಿಷವಂತೆ. ಇದು ಎಲ್ಲಾ ವಿಷಯಗಳಿಗೂ ಅನ್ವಯವಾಗುತ್ತದೆ, ಮಗುವಿನ ಮೇಲಿನ ತಾಯಿಯ ಮಮತೆಯನ್ನೂ ಸೇರಿ! ಕೆಲವು ದಂಪತಿಗಳಲ್ಲಿ ವಿವಾಹವಾದ ಕೆಲವೇ ದಿನಗಳಲ್ಲಿ ವಿರಸ ಮೂಡಲೂ ಇದೇ ಕಾರಣ. ವಿವಾಹಕ್ಕೂ ಮೊದಲು ಪ್ರೇಮದ ಅಮಲಿನಲ್ಲಿದ್ದವರಿಗೆ ಜಗತ್ತೇ ಬೇರೆ ರೂಪ ಪಡೆದಿರುತ್ತದೆ. ಈ ಅಮಲಿನಲ್ಲಿ ಏನು ಹೇಳಿದರೂ ಒಪ್ಪದ ಸ್ಥಿತಿಯಲ್ಲಿ ಮನವಿರುತ್ತದೆ. ವಿವಾಹದ ಬಳಿಕವೂ ಈ ಅಮಲು ಮುಂದುವರೆಯುತ್ತದೆ.

ಸೂಕ್ತ ಸಮಯದಲ್ಲಿ ಅವರಾಗಿ ಎಚ್ಚೆತ್ತುಕೊಳ್ಳದಿದ್ದರೆ ಅಥವಾ ಇದನ್ನು ಗಮನಿಸಿದ ಹಿರಿಯರು ಲಗಾಮು ಹಿಡಿಯದಿದ್ದರೆ ಕೆಲವೇ ದಿನಗಳಲ್ಲಿ ಅಮಲು ಮತ್ತೇರಿ ಹಳಸಲು ಪ್ರಾರಂಭವಾಗುತ್ತದೆ. ಪ್ರೇಮವಿವಾಹಗಳಲ್ಲಿ ಶೇಖಡಾ ಅರವತ್ತೆಂಟರಷ್ಟು ವೈಫಲ್ಯಕ್ಕೆ ಅತಿಯಾದ ಪ್ರೀತಿಯೂ ಒಂದು ಕಾರಣ. ಪ್ರೀತಿ ವ್ಯಕ್ತಪಡಿಸುವುದು ಒಂದು ಕಲೆ, ಅದು ಹೇಗೆ ಅಂತಿರಾ?

ಆದ್ದರಿಂದ ಪ್ರೇಮಿಗಳು ಅಥವಾ ನವವಿವಾಹಿತರು ತಮ್ಮ ಪ್ರೇಮವನ್ನು ಅಮಲೇರುವಷ್ಟು ಅಧಿಕಗೊಳಿಸದಿರಲು ವಿವೇಕವನ್ನು ಬಳಸುವುದು ಅಗತ್ಯ. ಯಾವ ಸಮಯದಲ್ಲಿ ಎಷ್ಟು ಪ್ರೀತಿ ತೋರಿಸಬೇಕೋ ಅಷ್ಟು ತೋರಿಸಿದರೆ ಸಾಕು. ನವವಿವಾಹಿತರು ಕಛೇರಿಗೆ ಬಂದ ಬಳಿಕವೂ ಫೋನ್, ಚ್ಯಾಟ್, ಮೆಸೇಜ್ ಮೂಲಕ ನಿರಂತರವಾಗಿ ತಮ್ಮ ಪತ್ನಿಯರೊಡನೆ ಸಂಪರ್ಕದಲ್ಲಿರುವುದು ಪ್ರೀತಿ ಅತಿಯಾಗಿರುವ ಒಂದು ಸ್ಪಷ್ಟ ಸೂಚನೆಯಾಗಿದೆ.ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು

ನಿಮ್ಮ ಪ್ರೀತಿಯ ಅಮೃತ ಮಿತಿಮೀರದೇ ವಿಷವಾಗದಂತೆ ಬೋಲ್ಡ್ ಸ್ಕೈ ತಂಡ ಕೆಲವು ಅಗತ್ಯ ಮತ್ತು ಅಮೂಲ್ಯವಾದ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡುತ್ತಿದೆ. ಇವನ್ನು ಪಾಲಿಸಿದ ಬಳಿಕ ನಿಮ್ಮ ವೈವಾಹಿಕ ಬಂಧನ ಇನ್ನಷ್ಟು ಗಟ್ಟಿಯಾಗುವುದು ಮಾತ್ರವಲ್ಲ, ನಿಮ್ಮ ಜೀವನ ಕೊನೆತನಕ ಸುಖವಾಗಿರುವುದು ಸಹಾ ಸಾಕ್ಷಾತ್ಕಾರವಾಗುತ್ತದೆ.

 ಪ್ರೇಮಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ

ಪ್ರೇಮಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ

ಒಂದು ವೇಳೆ ನಿಮ್ಮ ಪ್ರೀತಿ ಮಿತಿಮೀರಿದರೆ, ನಿಮ್ಮ ಪ್ರೇಮಿಗೆ ತನ್ನ ಖಾಸಗಿ ಸಮಯವೆಂಬುದೇ ಇಲ್ಲವಾಗುತ್ತದೆ. ಸಾಮಾನ್ಯವಾಗಿ ಪ್ರೀತಿಯ ಅಮಲಿನಲ್ಲಿದ್ದವರು ಅತಿ ಹೆಚ್ಚಿನ ಕಾಳಜಿಯನ್ನು ಮತ್ತು ರಕ್ಷಕಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಘಳಿಗೆ ಘಳಿಗೆಗೂ ಕರೆ ಮಾಡಿ ಸುರಕ್ಷತೆಯ ಬಗ್ಗೆ ವಿಚಾರಿಸುತ್ತಾ ಇರುತ್ತಾರೆ.

 ಪ್ರೇಮಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ

ಪ್ರೇಮಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ

ಪ್ರಾರಂಭದಲ್ಲಿ ಇದು ನಿಮ್ಮ ಪ್ರೇಮಿಗೆ ತನ್ನ ಬಗ್ಗೆ ಇರುವ ಪ್ರೀತಿ ಮತ್ತು ಕಾಳಜಿಯ ಪರಿ ಎಂದು ಮನ ಹಾರಾಡಿದರೂ ಕೆಲವೇ ದಿನಗಳಲ್ಲಿ ಈ ಕಾಳಜಿ ತನ್ನ ವೈಯಕ್ತಿಯ ಸಮಯ ಮತ್ತು ಸ್ವಾತಂತ್ರ್ಯ ಕಸಿದುಕೊಳ್ಳುತ್ತಿರುವ ಸತ್ಯ ಗೋಚರವಾಗುತ್ತದೆ. ಆದ್ದರಿಂದ ಕೆಲಸಕ್ಕೆ ಹೊರಟ ಬಳಿಕ ನಿಮ್ಮ ಕೆಲಸದಲ್ಲಿ ತಲ್ಲೀನರಾಗಿ, ಅಗತ್ಯವಾಗಿ ಕರೆ ಮಾಡಲೇಬೇಕಾದ ಹೊರತು ಕರೆ ಅಥವಾ ಸಂದೇಶಗಳನ್ನು ಕಳಿಸಲೇಬೇಡಿ.

ಅತಿ ಹೆಚ್ಚಿನ ಸಾಮೀಪ್ಯ ಕೊಳೆಯಲಾರಂಭಿಸುತ್ತದೆ

ಅತಿ ಹೆಚ್ಚಿನ ಸಾಮೀಪ್ಯ ಕೊಳೆಯಲಾರಂಭಿಸುತ್ತದೆ

ಎರಡು ಹಣ್ಣುಗಳನ್ನು ಪಕ್ಕಪಕ್ಕದಲ್ಲಿಟ್ಟಾಗ ಕೆಲವೇ ಹೊತ್ತಿನಲ್ಲಿ ಎರಡೂ ಕೊಳೆಯಲು ಆರಂಭಿಸುತ್ತವೆ. ಅದೇ ಕೊಂಚ ದೂರವಿದ್ದರೆ ಎರಡೂ ಹೆಚ್ಚು ಹೊತ್ತು ತಾಜಾತನವನ್ನು ಉಳಿಸಿಕೊಳ್ಳುತ್ತವೆ. ಸಂಬಂಧಗಳೂ ಹೀಗೇ ಯಾವುದೇ ಸಂಬಂಧ ಅಗತ್ಯವಿದ್ದಷ್ಟು ಮಾತ್ರ ಸಾಮೀಪ್ಯ ಪಡೆದರೆ ಸಾಕು. ಅದಕ್ಕಿಂತ ಹೆಚ್ಚಿದ್ದರೆ ಈ ಸಾಮೀಪ್ಯವೇ ಕಿರಿಕಿರಿಗೆ ಮೂಲವಾಗುತ್ತದೆ. ಪ್ರೇಮಿಗಳ ವಿಷಯದಲ್ಲಿಯೂ ಅಷ್ಟೇ.

ಅತಿ ಹೆಚ್ಚಿನ ಸಾಮೀಪ್ಯ ಕೊಳೆಯಲಾರಂಭಿಸುತ್ತದೆ

ಅತಿ ಹೆಚ್ಚಿನ ಸಾಮೀಪ್ಯ ಕೊಳೆಯಲಾರಂಭಿಸುತ್ತದೆ

ಅಪ್ಪುಗೆಯ ಅಮಲಿನಲ್ಲಿ ಎಂದೆಂದೂ ಹೀಗೇ ಇರೋಣ ಎಂಬ ಆಣೆ ಭಾಷೆಗಳೆಲ್ಲಾ ಆ ಕ್ಷಣದ ಭಾವಾತಿರೇಕವನ್ನು ಹೆಚ್ಚಿಸಲು ಪೂರಕವೇ ಹೊರತು ವಾಸ್ತವವಲ್ಲ. ಎಷ್ಟೇ ಹತ್ತಿರವಿದ್ದರೂ ಇಬ್ಬರೂ ಪರಸ್ಪರರಿಗೆ ತಮ್ಮ ಖಾಸಗಿ ಸಮಯ ಮತ್ತು ಒಂಟಿಯಾಗಿರಲು, ಅವರ ಕೆಲಸದಲ್ಲಿ ಮಗ್ನರಾಗಿರಲು ಮತ್ತು ಅವರ ಸ್ನೇಹಿತರ, ಹಿತೈಷಿ, ಗ್ರಾಹಕರೊಡನೆ ಭೇಟಿಯಾಗಲು ಅನುವು ಮಾಡಿಕೊಡುವುದು ಸುಖದಾಂಪತ್ಯಕ್ಕೆ ಅಗತ್ಯ.

ನಿಮ್ಮ ಪ್ರೇಮಿಯ ವೈಯಕ್ತಿಕ ಸ್ಥಳವನ್ನು ಅಕ್ರಮಿಸಬೇಡಿ

ನಿಮ್ಮ ಪ್ರೇಮಿಯ ವೈಯಕ್ತಿಕ ಸ್ಥಳವನ್ನು ಅಕ್ರಮಿಸಬೇಡಿ

ಪ್ರತಿ ವ್ಯಕ್ತಿಗೂ ತನ್ನ ಒಂದು ಖಾಸಗಿ ವಲಯವಿರುತ್ತದೆ. ಇದರಲ್ಲಿ ಅವರು ತಮ್ಮ ಸ್ನೇಹಿತರು, ಕುಟುಂಬ ಮತ್ತು ಪ್ರೇಮಿಯನ್ನು ಮಾನಸಿಕವಾಗಿ ಸಂಪರ್ಕದಲ್ಲಿಟ್ಟುಕೊಂಡಿರುತ್ತಾರೆ. ಖಾಸಗಿ ಡೈರಿ, ಮೊಬೈಲ್ ಸಂದೇಶಗಳು, ಈ ಮೇಲ್ ಮೊದಲಾದವು ಪ್ರತಿ ವ್ಯಕ್ತಿಯ ಖಾಸಗಿ ವಲಯದಲ್ಲಿರುತ್ತವೆ. ನಿಮ್ಮ ಪ್ರೇಮಿಯ ಅನುಮತಿಯ ಹೊರತಾಗಿ ಈ ವಲಯವನ್ನು ಪ್ರವೇಶಿಸಬೇಡಿ. ಅದರಲ್ಲೂ ಕದ್ದು ಪ್ರವೇಶಿಸಿರುವುದು ನಿಮ್ಮ ಪ್ರೇಮಿಗೆ ಗೊತ್ತಾದರೆ ನಿಮ್ಮ ಪ್ರೇಮದಲ್ಲಿ ಬಿರುಕು ಬಿಡಬಹುದು.

ನಿಮ್ಮ ಪ್ರೇಮಿಯ ವೈಯಕ್ತಿಕ ಸ್ಥಳವನ್ನು ಅಕ್ರಮಿಸಬೇಡಿ

ನಿಮ್ಮ ಪ್ರೇಮಿಯ ವೈಯಕ್ತಿಕ ಸ್ಥಳವನ್ನು ಅಕ್ರಮಿಸಬೇಡಿ

ನೆನಪಿಡಿ, ಎಷ್ಟೇ ಬಲವಾದ ಅಣೆಕಟ್ಟಿದ್ದರೂ ಒಂದು ಚಿಕ್ಕ ಬಿರುಕು ಅದನ್ನು ಕೆಡವಬಲ್ಲುದು. ದಾಂಪತ್ಯ ಸಂಬಂಧವೂ ಒಂದು ಅಣೆಕಟ್ಟು ಇದ್ದಂತೆ. ಪರಸ್ಪರ ವಿಶ್ವಾಸವೇ ಇದರ ಗೋಡೆ. ಅನುಮಾನವೆಂಬ ಒಂದು ಚಿಕ್ಕ ಬಿರುಕು ವಿಶ್ವಾಸದ ಗೋಡೆಯನ್ನು ಕೆಡವಲೂ ಸಾಧ್ಯ.

ನಿಮ್ಮ ಪ್ರೇಮಿಯ ವ್ಯಕ್ತಿತ್ವವನ್ನು ಗೌರವಿಸಿ

ನಿಮ್ಮ ಪ್ರೇಮಿಯ ವ್ಯಕ್ತಿತ್ವವನ್ನು ಗೌರವಿಸಿ

ಅತಿಯಾದ ಪ್ರೀತಿ ನಿಮ್ಮ ಪ್ರೇಮಿಯ ವ್ಯಕ್ತಿತ್ವವನ್ನೇ ಕಸಿದುಕೊಳ್ಳಬಹುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವರು ಬದಲಾಗಬೇಕು ಎಂದು ಸರ್ವಥಾ ಭಾವಿಸಬೇಡಿ. ನಿಮ್ಮ ಅತಿಯಾದ ಪ್ರೀತಿಯ ಕಾರಣ ಅವರು ತಮ್ಮ ಸ್ವಾತಂತ್ರ್ಯ ಮತ್ತು ಅವರ ಇಷ್ಟದ ಕಾರ್ಯದಲ್ಲಿ ಬಾಧೆಯುಂಟಾಗುತ್ತದೆ. ಇದರಿಂದ ಅವರು ತಮ್ಮ ಜೀವನದ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಪಕ್ಷದಲ್ಲಿ ಇದು ಪ್ರೇಮಿಯ ಪ್ರತಿಭೆಯನ್ನು ಕುಂಠಿತಗೊಳಿಸಲೂಬಹುದು. ಇದು ಬಹಳಷ್ಟು ಜೋಡಿಗಳು ಇದೇ ವಿಷಯಕ್ಕೆ ದೂರವಾಗುತ್ತಾರೆ. ಯಶಸ್ವಿ ಹಿಂದಿಚಿತ್ರ 'ಅಭಿಮಾನ್' ನ ಕಥೆಯ ಜೀವಾಳವೂ ಇದೇ ವಿಷಯವಾಗಿದೆ.

ಅತಿಪ್ರೀತಿ ಜಗಳಕ್ಕೆ, ಜಗಳ ಕದನಕ್ಕೆ, ಕದನ ಅಗಲುವಿಕೆಗೆ ಕಾರಣವಾಗುತ್ತದೆ!

ಅತಿಪ್ರೀತಿ ಜಗಳಕ್ಕೆ, ಜಗಳ ಕದನಕ್ಕೆ, ಕದನ ಅಗಲುವಿಕೆಗೆ ಕಾರಣವಾಗುತ್ತದೆ!

ನಿಮ್ಮ ಪ್ರೇಮಿಯನ್ನು ಅಗತ್ಯಕ್ಕಿಂತ ಹೆಚ್ಚು ಪ್ರೀತಿಸಿದರೆ ಆ ಪ್ರೀತಿಯೇ ಅವರ ಆಶಾಭಂಗಕ್ಕೆ ಕಾರಣವಾಗುತ್ತದೆ. ಈ ಪ್ರೀತಿ ಅವರ ವೈಯಕ್ತಿಕ ಸಮಯವನ್ನೆಲ್ಲಾ ಕಬಳಿಸಿಬಿಡುವುದರಿಂದ ಹತಾಶೆ ಮೂಡುತ್ತದೆ. ಈ ಹತಾಷೆ ಅಸಮಾಧಾನದ ರೂಪ ತಾಳಿ ಜಗಳಕ್ಕೆ ಪ್ರೇರಣೆ ನೀಡುತ್ತದೆ. ಜಗಳದಲ್ಲಿ ಬಿರುಮಾತುಗಳು ವರ್ಗಾವಣೆಯಾಗಿ ಇನ್ನೊಬ್ಬರ ಕುರಿತಾಗಿ ಕೆಟ್ಟ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಲಾಗುತ್ತದೆ. ನಿಧಾನಾಅಗಿ ಜಗಳ ಕದನಕ್ಕೆ, ಕದನ ಅಗಲುವಿಕೆಗೆ ಕಾರಣವಾಗುತ್ತದೆ. ಈ ಬಗ್ಗೆ ತಮ್ಮಲ್ಲಿ ಹೆಚ್ಚಿನ ಮಾಹಿತಿ ಇದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಮುಖ್ಯ ಪುಟದ ಕೆಳಗೆ ಇರುವ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.

Story first published: Wednesday, October 28, 2015, 11:35 [IST]
X
Desktop Bottom Promotion