Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮಾತು ಬೆಳ್ಳಿ ಮೌನ ಬಂಗಾರ, ಇದು ಸುಖಿ ಸಂಸಾರಕ್ಕೆ ರಹದಾರಿ!
ನಿಮಗೆ ಗೊತ್ತೆ ಬಹುತೇಕ ಸಂಬಂಧಗಳು ಒಬ್ಬರನ್ನೊಬ್ಬರು ನಿಂದಿಸುವಂತಹ ಪದಗಳ ಮೂಲಕ ಹಾಗು ಕೊನೆಯಿಲ್ಲದ ವಾದಗಳ ಮೂಲಕ ಅಂತ್ಯಗೊಳ್ಳುತ್ತದೆ ಎಂದು? ನಿಮ್ಮ ಸಂಬಂಧ ಅಂತ್ಯವಾಗುವುದನ್ಜು ತಡೆಯಲು ನೀವು ಏನು ಮಾಡಬಹುದು. ಅದಕ್ಕಾಗಿ ನೀವು ನಿಮ್ಮ ಸಂಗಾತಿಯನ್ನು ನೋಯಿಸುವಂತಹ ಮತ್ತು ಅವರ ಭಾವನೆಗಳನ್ನು ಘಾಸಿಗೊಳಿಸಬಹುದಾದ ಪದಗಳನ್ನು ಮತ್ತು ವಾದಗಳನ್ನು ಮಾಡಾಬಾರದು.
ಅದಕ್ಕಾಗಿ ನೀವು ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು, ಆಗ ನೀವು ನಿಮ್ಮ ಸಂಗಾತಿಯ ಪ್ರೀತಿಗೆ ಪಾತ್ರರಾಗುತ್ತೀರಿ. ಒಂದು ವೇಳೆ ನೀವು ನಿಮ್ಮ ನಾಲಿಗೆಯ ಮೇಲಿನ ಹಿಡಿತವನ್ನು ಕಳೆದುಕೊಳ್ಳದಿದ್ದಲ್ಲಿ, ಆಗ ನಿಮ್ಮ ಸಂಗಾತಿ ನಿಮ್ಮನ್ನು ಮತ್ತೂ ಪ್ರೀತಿ ಮಾಡುತ್ತಾರೆ. ಆದರೆ ನಿಮ್ಮ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಲ್ಲಿ, ಆಗ ನಿಮ್ಮ ಸಂಬಂಧದಲ್ಲಿ ಕೋಪ, ತಾಪ ಮತ್ತು ನೋವು ಬಂದು ಸೇರಿಕೊಳ್ಳುತ್ತದೆ.

ಇತರರಿಗೆ ಘಾಸಿಯಾಗದಂತೆ, ನಿಮ್ಮ ಅಸಮಾಧಾನವನ್ನು ತೋರಿಸಲು ಹಲವಾರು ದಾರಿಗಳು ಇವೆ. ನಿಮ್ಮ ಮಾತುಗಳನ್ನು ತುಂಬಾ ಜಾಗರೂಕತೆಯಿಂದ ಬಳಸುವ ದಾರಿ ಯಾವುದು ಎಂಬುದಕ್ಕೆ ನಾವು ಇಲ್ಲಿ ನಿಮಗೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಮುಂದೆ ಓದಿ....
ನೀವು ಮಾತನಾಡುವ ಮೊದಲು ಆಲೋಚಿಸಿ
ನಾಲಿಗೆಯನ್ನು ಹಿಡಿತದಲ್ಲಿಡುವ ಬಗೆ ಹೇಗೆ? ಅಷ್ಟೇನು ಹಿತಕರವಲ್ಲದ ಮಾತುಗಳನ್ನು ನಿಮ್ಮ ಸಂಗಾತಿಯ ಜೊತೆಗೆ ಮಾತನಾಡುವ ಮುನ್ನ ಮೊದಲು ಎರಡು ಬಾರಿ ಆಲೋಚಿಸಿ. ಏನಾದರು ಒಳ್ಳೆಯದನ್ನು ಮಾತನಾಡುವಂತಿದ್ದರೆ, ಮಾತನಾಡಲು ಮುಂದುವರಿಯಿರಿ: ಇಲ್ಲವಾದಲ್ಲಿ ಸುಮ್ಮನೆ ಮೌನವನ್ನು ವಹಿಸಿ. ಹೇಗಿದ್ದರು ನೀವು ಹಿತಕರವಲ್ಲದ್ದನ್ನೆ ಮಾತನಾಡುತ್ತೀರಿ, ಆದರೆ ಅದಕ್ಕೂ ಸಮಯ ಸಂದರ್ಭ ಎಂಬುದು ಇರುತ್ತದೆ. ಅದನ್ನು ನೋಡಿಕೊಂಡು ಮಾತನಾಡುವುದರಿಂದ ಸಂಬಂಧವನ್ನು ಉಳಿಸಿಕೊಳ್ಳಬಹುದು. ಅಷ್ಟಕ್ಕೂ ಸುಖಿ ಸಂಸಾರದ ಹಿಂದಿರುವ ಯಶಸ್ಸಿನ ಗುಟ್ಟೇನು?
ಕ್ಷಮೆ ಕೇಳಿ!
ನಿಮ್ಮ ಸಂಗಾತಿಯನ್ನು ನೋಯಿಸಿದ್ದರೆ ಅದಕ್ಕಾಗಿ ಕ್ಷಮೆ ಕೇಳುವುದರಲ್ಲಿ ತಪ್ಪೇನಿಲ್ಲ! ನೀವು ಏನಾದರು ಅಪ್ಪಿ ತಪ್ಪಿ ಕೆಟ್ಟದಾಗಿ ಮಾತನಾಡಿದ್ದರೆ, ನಿಮ್ಮ ಸಂಗಾತಿಗೆ ಅದರ ಕುರಿತಾಗಿ ಕ್ಷಮೆ ಕೇಳಿ, ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಆಗುತ್ತದೆ ಮತ್ತು ನಿಮ್ಮ ಸಂಗಾತಿಗೆ ಸಂತೋಷ ಸಹ ಆಗುತ್ತದೆ.
ಧನಾತ್ಮಕ ಕಂಪನಗಳು
ನಿಮ್ಮ ಸುತ್ತಲೂ ಧನಾತ್ಮಕ ವ್ಯಕ್ತಿಗಳು, ಧನಾತ್ಮಕ ಸ್ಥಳಗಳು ಮತ್ತು ಜನಗಳನ್ನು ಇರಿಸಿಕೊಳ್ಳುವುದು ಉತ್ತಮ. ಆಗ ನಿಮ್ಮ ಪದಗಳು, ಕೆಲಸಗಳು ಮತ್ತು ಆಲೋಚನೆಗಳಲ್ಲಿ ಧನಾತ್ಮಕತೆ ಬರುತ್ತದೆ. ಯಾವಾಗ ನಿಮ್ಮ ಜೀವನದಲ್ಲಿ ಧನಾತ್ಮಕತೆಯು ಬಂದು ನಿಲ್ಲುತ್ತದೆಯೋ, ಆಗ ನಿಮ್ಮ ಸಂಬಂಧದಲ್ಲಿ ಋಣಾತ್ಮಕತೆ ಇರುವುದಿಲ್ಲ. ಆಗ ನೀವು ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿರಿಸಿಕೊಳ್ಳಬೇಕೆಂಬ ಪ್ರಮೇಯವೇ ಬರುವುದಿಲ್ಲ. ಹಾಲು- ಜೇನಿನಂತಹ ಸುಖ ಸಂಸಾರಕ್ಕೆ ಸರಳ ಸೂತ್ರಗಳು
ನಿಮ್ಮ ಭಾವನೆಗಳನ್ನು ಹಿಡಿತದಲ್ಲಿಡಿ
ನಿಮ್ಮ ಭಾವನೆಗಳು ಸಹ ಸೂಚನೆಗಳೇ! ನಿಮ್ಮ ಮನಸ್ಸಿನ ಮೇಲೆ ಬೀರಿದ ಪ್ರಚೋದನೆಗಳಿಗೆ ಅದು ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತದೆ. ನಿಮಗೆ ಬರುವ ಎಲ್ಲಾ ಭಾವನೆಗಳಿಗೆ ನೀವು ಪ್ರತಿಕ್ರಿಯಿಸಲು ಹೋಗಬೇಡಿ. ಅದರಲ್ಲೂ ಕೆಟ್ಟದಾಗಿ ಪ್ರತಿಕ್ರಿಯಿಸುವುದನ್ನು ಮಾಡಲು ಹೋಗಬೇಡಿ. ಪ್ರತಿಕ್ರಿಯೆಗೆ ಮೊದಲು ಒಮ್ಮೆ ಆಲೋಚಿಸಿ. ಇದರಿಂದ ನಿಮ್ಮ ಸಂಬಂಧ ಉಳಿಯುತ್ತದೆ.



Click it and Unblock the Notifications


