Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅನುಮಾನವೇ ಸಂಸಾರವನ್ನು ನುಚ್ಚುನೂರು ಮಾಡಬಹುದು!
ಅನುಮಾನಂ ಪೆದ್ದರೋಗಂ ಎಂಬ ಸುಭಾಷಿತದಂತೆ ಅನುಮಾನವಿರುವ ಸಂಬಂಧಗಳಾವುವೂ ಹೆಚ್ಚುಕಾಲ ಬಾಳಲಾರವು. ಯಾವುದೇ ಸಂಬಂಧದ ಉಳಿಯಲು ಬೇಕಾಗುವುದು ಪ್ರಥಮವಾಗಿ ವಿಶ್ವಾಸ. ಒಮ್ಮೆ ಬರೆಯ ಒಂದು ಬಾಳೆಹಣ್ಣು ಕೊಂಡ ಅಂಗಡಿಗೆ ಮತ್ತೊಮ್ಮೆ ಹೋಗಬೇಕಾದರೂ ಹಿಂದಿನ ಬಾರಿ ಕೊಟ್ಟಿದ್ದ ಬಾಳೆಹಣ್ಣು ಚೆನ್ನಾಗಿದೆ ಎಂದು ಹೇಳಿ ಕೊಟ್ಟಿದ್ದು ಚೆನ್ನಾಗಿಯೇ ಇದ್ದರೆ ಮಾತ್ರ ಹೋಗುತ್ತೇವೆಯೇ ವಿನಃ ಹಾಳಾಗಿದ್ದರೆ ಮತ್ತೊಮ್ಮೆ ಹೋಗಲು ಹಿಂದೇಟು ಹಾಕುತ್ತೇವೆ.
ಕೇವಲ ಒಂದು ಬಾಳೆಹಣ್ಣಿಗೆ ನಾವು ಅಂಗಡಿಯಾತನ ವಿಶ್ವಾಸಾರ್ಹತೆಯನ್ನು ಪರಿಗಣಿಸುವ ನಾವು ನಮ್ಮ ಹತ್ತಿರದ, ಅದರಲ್ಲೂ ಜೀವನಸಂಗಾತಿಗಳಲ್ಲಿ ವಿಶ್ವಾಸವಿರಿಸುವುದು ಮತ್ತು ಅವರಲ್ಲಿ ನಮ್ಮ ಪ್ರತಿ ವಿಶ್ವಾಸಾರ್ಹತೆ ಮೂಡಿಸುವುದು ಸುಖದಾಂಪ್ಯದ ಅಡಿಗಲ್ಲಾಗಿದೆ. ಒಂದು ವೇಳೆ ಅನುಮಾನದ ಭೂತ ಮನವನ್ನು ಹೊಕ್ಕಿತೋ, ಇದು ನಿಮ್ಮ ಸಂಬಂಧವನ್ನೇ ಒಳಗಿನಿಂದ ಟೊಳ್ಳಾಗಿಸುತ್ತಾ ಕಡೆಗೊಮ್ಮೆ ಕುಸಿದು ಬೀಳಿಸುವ ಅಪಾಯವಿದೆ. ಇದು ಅತಿ ಪ್ರೀತಿಯಲ್ಲ, ಸಂಶಯ!
ಒಂದು ವೇಳೆ ಇಬ್ಬರೂ ತೀರಾ ಇತ್ತೀಚೆಗೆ ಪರಿಚಿತರಾಗಿದ್ದು ಅಥವಾ ಇತ್ತೀಚೆಗೆ ಹಳೆಯ ಸಂಬಂಧವೊಂದನ್ನು ಕಳೆದುಕೊಂಡು ಹೊಸ ಜೀವನ ನಡೆಸಲು ಕೂಡಲೇ ಹೊಸ ಸಂಬಂಧಕ್ಕೆ ಒಳಗಾಗಿದ್ದರೆ ಇದು ಇನ್ನೂ ಹೊಸ ಅನುಮಾನಗಳಿಗೆ ಎಡೆಮಾಡಿಕೊಡಬಹುದು. ಏಕೆಂದರೆ ವಿಶ್ವಾಸಾರ್ಹತೆಯೇ ಗಟ್ಟಿಯಾದ ಸಂಬಂಧದ ತಳಹದಿಯಾಗಿರುವಾಗ ಅನುಮಾನದ ಭೂತ ಆವರಿಸಿಕೊಂಡಿರುವವರಿಗೆ ತಮ್ಮ ಸಂಗಾತಿಗಳ ಎಲ್ಲಾ ಚರ್ಯೆಗಳೂ ಅನುಮಾನಾಸ್ಪದವಾಗಿಯೇ ಕಾಣುತ್ತಾ ಹೊಸ ಸಂಬಂಧವೂ ಹಳಸಲು ಪ್ರಾರಂಭಿಸುತ್ತದೆ. ಬನ್ನಿ ನಿಮ್ಮನ್ನು ಅನುಮಾನದ ಭೂತ ಆವರಿಸಿಕೊಂಡಿದೆ ಎಂಬುದನ್ನು ಸಾರುವ ಸೂಚನೆಗಳನ್ನು ಈ ಕೆಳಗಿನ ಸ್ಲೈಡ್ ಶೋ ಮೂಲಕ ಕಂಡುಕೊಳ್ಳಬಹುದು...

ಫೋನ್‌ಗೆ ಕಠಿಣವಾದ ಪಾಸ್‌ವರ್ಡ್
ನಿಮ್ಮ ಫೋನ್ ಅನ್ನು ಸದಾ ನಿಮ್ಮ ಬಳಿಯೇ ಇಟ್ಟುಕೊಂಡಿದ್ದು ಅತ್ಯಂತ ಕ್ಲಿಷ್ಟಕರವಾದ, ಯಾರೂ ಸುಲಭವಾಗಿ ಊಹಿಸಲು ಅಸಾಧ್ಯವಾದ ಪಾಸ್‌ವರ್ಡ್ ಹಾಕಿದ್ದೀರೋ? ಫೋನ್ ಬಿಟ್ಟು ಹೋಗಿ ಐದು ನಿಮಿಷದ ಬಳಿಕ ಬಂದರೂ ನಿಮ್ಮ ಅನುಪಸ್ಥಿತಿಯಲ್ಲಿ ಯಾರಾದರೂ (ವಿಶೇಷವಾಗಿ ನಿಮ್ಮ ಸಂಗಾತಿ) ನಿಮ್ಮ ಫೋನನ್ನು ಮುಟ್ಟಿದ್ದಾರೋ ಎಂದು ಪರಿಶೀಲಿಸುತ್ತಿದ್ದೀರೋ? ನಿಮ್ಮನ್ನು ಅನುಮಾನದ ಭೂತ ಆವರಿಸಿರುವುದು ಖಂಡಿತ.

ಚಿಕ್ಕಪುಟ್ಟ ಕಲಹಗಳಿಗೂ ಅದ ಅತಿರೇಕವನ್ನು ಊಹಿಸಿಕೊಳ್ಳುತ್ತಿದ್ದೀರೋ
ಹುಲ್ಲುಬವಣೆಯ ಹತ್ತಿರ ಪಟಾಕಿ ಹಚ್ಚುತ್ತಿರುವ ಮಕ್ಕಳಿಗೆ ಬೆಂಕಿ ತಗುಲಿದರೆ ಆಗುವ ಅಪಾಯವನ್ನು ತಿಳಿಸುವಂತೆ ಚಿಕ್ಕಪುಟ್ಟ ವಿಷಯಗಳಿಗೂ ಅದು ಅತಿರೇಕಕ್ಕೆ ಹೋಗಬಹುದಾದ ಸಾಧ್ಯತೆ ಮತ್ತು ಇದರಿಂದಾಗುವ ಅಪಾಯಗಳನ್ನೇ ಪದೇ ಪದೇ ಹೇಳುತ್ತಾ ಕಿರಿಕಿರಿಯುಂಟುಮಾಡುತ್ತಿದ್ದೀರೋ? ನಿಮ್ಮ ಸಂಗಾತಿಗೆ ಫೋನ್ ಮಾಡಿದಾಗ ಅವರು ಯಾವುದೋ ಕಾರಣಕ್ಕೆ ಫೋನ್ ಎತ್ತಿಕೊಳ್ಳದಿದ್ದುದನ್ನೇ ದೊಡ್ಡದು ಮಾಡಿ ಇಲ್ಲದಿದ್ದುದ್ದನೆಲ್ಲಾ ಕಲ್ಪಿಸಿ ಅದನ್ನು ಅತಿರೇಕಕ್ಕೆ ಕೊಂಡೊಯ್ಯುವ ಜಾಯಮಾನವೇ? ನಿಮಗೆ ಅನುಮಾನದ ತೊಂದರೆ ಆವರಿಸಿರುವುದು ನಿಜ.

ಸಂಗಾತಿ ಇತರ ಪುರುಷ/ಮಹಿಳೆಯೊಂದಿಗೆ ಮಾತನಾಡುತ್ತಿದ್ದರೆ
ಒಂದು ವೇಳೆ ನಿಮ್ಮ ಪತ್ನಿ/ಪತಿ ಬೇರೆ ಪುರುಷ/ಮಹಿಳೆಯೊಂದಿಗೆ ಮಾತನಾಡುತ್ತಿದ್ದರೆ, ಅದರಲ್ಲೂ ನಕ್ಕು ನಲಿಯುತ್ತಿದ್ದರೆ, ಅಥವಾ ನಿಮ್ಮ ಸಂಗಾತಿಗೆ ಬಂದ ಫೋನ್ ಕರೆ ಕೆಲವಾರು ನಿಮಿಷಗಳಷ್ಟು ಮುಂದುವರೆದರೆ ನಿಮಗೆ ಸಹಿಸಲಸಾಧ್ಯವಾಗುತ್ತಿದೆಯೇ? ಇವರು ಯಾರು? ಏಕಾಗಿ ಇಷ್ಟು ಹೊತ್ತು ಮಾತನಾಡಿದರು ಎಂದು ವಿಚಾರಿಸಬೇಕು ಎನ್ನಿಸುತ್ತಿದೆಯೇ? ಇವು ನಿಮ್ಮ ಸಂಕುಚಿತ ಮನೋಭಾವನೆಯನ್ನು ಸ್ಪಷ್ಟವಾಗಿ ತೋರುತ್ತಿದೆ.

ನಿಮ್ಮ ಸಂಗಾತಿ ನಿಮ್ಮನ್ನು ವಂಚಿಸುತ್ತಿದ್ದಾರೆ ಎನ್ನಿಸುತ್ತಿದೆಯೇ
ತಾನಿದ್ದಂತೆ ಜಗವೆಲ್ಲಾ ಎಂಬ ಮಾತಿದೆ. ಒಂದು ವೇಳೆ ನೀವೇ ಸುಳ್ಳುಗಾರರಾಗಿದ್ದು ಹಿಂದಿನ ಸಂಬಂಧ ಅಥವಾ ಗೆಳೆತನದಲ್ಲಿ ನಿಮ್ಮ ಸಂಗಾತಿ ಅಥವಾ ಸ್ನೇಹಿತರನ್ನು ವಂಚಿಸಿ, ಸುಳ್ಳುಹೇಳಿ ಬಂದಿದ್ದೀರಾದರೆ ನಿಮ್ಮ ಸಂಗಾತಿಯೂ ನಿಮ್ಮನ್ನು ವಂಚಿಸುತ್ತಿದ್ದಾರೆ ಎಂದೆನ್ನಿಸುತ್ತಿದೆಯೇ? ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ಸಂಗಾತಿ ನಿಮ್ಮನ್ನು ವಂಚಿಸುತ್ತಿದ್ದಾರೆ ಎನ್ನಿಸುತ್ತಿದೆಯೇ
ಮನಃಶಾಸ್ತ್ರಜ್ಞರ ಪ್ರಕಾರ ನಿಮ್ಮ ಮನದಲ್ಲಿ ವಂಚನೆಯ ಯೋಚನೆ ಇದ್ದಷ್ಟೂ ಕಾಲ ನಿಮ್ಮ ಸುತ್ತಮುತ್ತಲಿನವರೂ ನಿಮ್ಮನ್ನು ವಂಚಿಸುತ್ತಿದ್ದಾರೆ ಎಂದೇ ನಿಮಗನ್ನಿಸುತ್ತದೆ. ನೀವು ಸುಳ್ಳುಗಾರರಾಗಿದ್ದರೆ ಸುತ್ತಮುತ್ತಲಿನವರು ಹೇಳುವ ಮಾತುಗಳೆಲ್ಲಾ ಸುಳ್ಳೇ ಅನ್ನಿಸುತ್ತದೆ. ಸಂಗಾತಿಗಳನ್ನು ವಂಚಿಸುವುದು ಮುಂದೆ ಬಹಳ ಗಂಭೀರವಾದ ಸ್ವರೂಪ ಪಡೆಯಬಹುದು. ಇದು ಮತ್ತೆಂದೂ ಸರಿಪಡಿಸಲಾಗದ ಮಟ್ಟಕ್ಕೂ ಬಂದು ತಲುಪಬಹುದು.

ನಿಮ್ಮ ಸಂಗಾತಿಯನ್ನು ಪದೇ ಪದೇ ಪರೀಕ್ಷೆಗೊಳಪಡಿಸುತ್ತಿದ್ದೀರಾ
ಆ ಮರ್ಯಾದಾ ಪುರುಷೋತ್ತಮನೇ ಅಗಸನ ಮಾತು ಕೇಳಿ ತನ್ನ ಪತ್ನಿಯನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿರುವಂತೆ ಚಿಕ್ಕ ಪುಟ್ಟ ಅನುಮಾನಗಳು ಉಂಟಾದರೆ ನಿಮ್ಮ ಸಂಗಾತಿಯನ್ನೇ ಪರೀಕ್ಷೆಗೆ ಒಳಪಡಿಸಿದ್ದೀರೋ? ಹಾಗಾದರೆ ನಿಮ್ಮಲ್ಲಿನ ಅನುಮಾನದ ಭೂತ ನಿಮ್ಮನ್ನು ಸಂಪೂರ್ಣವಾಗಿ ಆವರಿಸಿ ನುಂಗಿರುವುದು ಸ್ಪಷ್ಟ. ಏಕೆಂದರೆ ಯಾವುದೇ ಸಂಬಂಧ ಗಟ್ಟಿಗೊಳ್ಳುವುದು ವಿಶ್ವಾಸ, ಪ್ರೀತಿ, ಒಲುಮೆ, ಜೀವನಪರ್ಯಂತ ಪಾಲಿಸಬೇಕಾದ ಬದ್ಧತೆ. ಸಮಾಜದಲ್ಲಿದ್ದಾಗ ಹಲವು ಜನರೊಂದಿಗೆ ಸಂಪರ್ಕವಿರಿಸಲೇ ಬೇಕಾಗುತ್ತದೆ. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದಲೇ ನೋಡುವುದು ತರವಲ್ಲ.



Click it and Unblock the Notifications
