Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ದಾಂಪತ್ಯದಲ್ಲಿ ಆ ಮಧುರ ಕ್ಷಣಗಳು ಮತ್ತೆ ನೆನಪಾದಾಗ...!
ಹಿಂದೆ ಅಜ್ಜ ಅಜ್ಜಿಯರು ಮಕ್ಕಳಿಗೆ ಹೇಳುತ್ತಿದ್ದ ರಾಜಕುಮಾರ, ರಾಜಕುಮಾರಿ, ರಾಕ್ಷಸ, ಗಿಳಿ ಮೊದಲಾದ ಕಥೆಗಳೆಲ್ಲಾ 'ಕಡೆಗೆ ಅವರು ಮದುವೆಯಾಗಿ ಸುಖವಾಗಿದ್ದರಂತೆ' ಎಂಬ ವಾಕ್ಯದಿಂದ ಮುಗಿಯುತ್ತದೆ. ನಮ್ಮ ಹೆಚ್ಚಿನ ಚಲನಚಿತ್ರಗಳೂ ನಾಯಕ ನಾಯಕಿಯರ ಮದುವೆಯೊಂದಿಗೇ ಶುಭಂ ಕಾಣುತ್ತವೆ. ಆದರೆ ವಾಸ್ತವವಾಗಿ ಮದುವೆಯವರೆಗೆ ಒಂದು ಕಥೆಯಾದರೆ ಮದುವೆಯ ಬಳಿಕ ನಿಜವಾದ ಕಥೆ ಪ್ರಾರಂಭವಾಗುತ್ತದೆ. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎನ್ನುತ್ತಾರೆ. ಗಂಡ-ಹೆಂಡತಿಯ ನಡುವಿನ ಗುಟ್ಟು ಗುಟ್ಟಾಗಿಯೇ ಇರಲಿ!
ಅಂದರೆ ಮದುವೆಯ ಬಳಿಕ ಎದುರಾಗುವ ಆ ಸಂಭ್ರಮದ ಕ್ಷಣಗಳು ಸ್ವರ್ಗದಲ್ಲಿ ಕಳೆಯುವ ಕ್ಷಣಗಳಿಗೆ ಸಮ ಎಂದು ಹಿರಿಯರು ತಿಳಿಸುತ್ತಾರೆ. ಆದರೆ ಈ ಕ್ಷಣಗಳನ್ನು ಸ್ವರ್ಗಸಮಾನವಾಗಿಸಲು ದಂಪತಿಗಳು ಪರಸ್ಪರರಲ್ಲಿ ವಿಶ್ವಾಸ, ಪ್ರೀತಿ, ಗೌರವ, ಕಾಳಜಿ ಹೊಂದಿರುವುದೂ ಅಷ್ಟೇ ಅಗತ್ಯ. ಆದರೆ ವಿವಾಹನಂತರದ ಎಲ್ಲಾ ಕ್ಷಣಗಳು ಒಂದೇ ತೆರನಾಗಿರುವುದಿಲ್ಲ. ಜೀವನದಲ್ಲಿ ಸುಖದೊಂದಿಗೆ ಕಷ್ಟಗಳೂ ಇರುತ್ತವೆ. ಇವೆರಡನ್ನೂ ಸಮನಾಗಿ ಹಂಚಿ ಆ ಕ್ಷಣದ ಅತ್ಯುತ್ತಮ ಉಪಯೋಗ ಪಡೆಯುವುದೇ ಜೀವನದ ಸಾರ್ಥಕತೆಗೆ ನಾಂದಿಯಾಗುತ್ತದೆ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು
ಪ್ರತಿ ಮನುಷ್ಯರಲ್ಲಿಯೂ ಕೆಲವು ಧನಾತ್ಮಕ ಅಂಶಗಳಿದ್ದರೆ ಕೆಲವು ಋಣಾತ್ಮಕ ಅಂಶಗಳೂ ಇರುತ್ತವೆ. ಇವೆರಡನ್ನೂ ಸಮನಾಗಿ ಪರಿಗಣಿಸಿ ಹೊಂದಾಣಿಕೆಯ ಮೂಲಕ ದಿನಕಳೆದ ದಂಪತಿಗಳಿಗೆ ದಶಮಾನೋತ್ಸವ ಯಾವಾಗ ಆಯಿತು, ಬೆಳ್ಳಿ ಉತ್ಸವ ಯಾವಾಗ ಆಯಿತು ಎಂದೇ ಗೊತ್ತಾಗುವುದಿಲ್ಲ. ದಿನದ ಆಯಾ ವೇಳೆಯಲ್ಲಿ ಪರಸ್ಪರರಿಗೆ ಇರುವ ಕರ್ತವ್ಯಗಳನ್ನು ಪೂರ್ಣಗೊಳಿಸಲು ಬಿಡುವುದು, ಸಾಧ್ಯವಾದರೆ ಸಹಕರಿಸುವುದರ ಮೂಲಕ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ. ಕೆಳಗಿನ ಸ್ಲೈಡ್ ಶೋ ಮೂಲಕ ಕೆಲವು ಅಮೂಲ್ಯ ಮಾಹಿತಿಯನ್ನು ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ.

’ನಾ ನಿನ್ನ ಪ್ರೀತಿಸುವೆ’ ಎಂದು ಹೇಳುವ ಕ್ಷಣ
ಐ ಲವ್ ಯೂ, ನಾ ನಿನ್ನ ಪ್ರೀತಿಸುತ್ತೇನೆ ಎಂದು ಮೂರು ಪದಗಳಲ್ಲಿ ಹೇಳುವ ಆ ಕ್ಷಣ ಪ್ರತಿ ದಂಪತಿಗಳಿಗೂ ಆತ್ಮೀಯವಾಗಿರುತ್ತದೆ. ಇದು ಮೊತ್ತ ಮೊದಲ ಬಾರಿ ಹೇಳಿದ ಆ ಕ್ಷಣ ಇಬ್ಬರಲ್ಲಿಯೂ ಸದಾ ಹಸಿರಾಗಿರುತ್ತದೆ. ಇದನ್ನು ನೆನೆಸಿಕೊಂಡಾಗಲೆಲ್ಲಾ ಹೃದಯ ಹಕ್ಕಿಯಾಗಿ ಹಾರಾಡುತ್ತದೆ. ಮೊಗದಲ್ಲಿ ನಸುನಗು ಮೂಡುತ್ತದೆ.

ಕಣ್ಣೀರಿನ ಆ ಕ್ಷಣಗಳು
ಯಾವುದೇ ಸಂಬಂಧದಲ್ಲಿ ಏಳು ಬೀಳು, ಸುಖ ದುಃಖ, ಸಂತೋಷ ದುಮ್ಮಾನ ಇದ್ದೇ ಇರುತ್ತದೆ. ಕಣ್ಣೀರು ಬರಿಸುವ ಆ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ನೀಡುವ ಜೊತೆಯೇ ಜೀವನದ ನಿಜವಾದ ಅರ್ಥವಾಗಿದೆ. ಅಂತೆಯೇ ಕಣ್ಣೀರು ಹರಿಸುವ ಸಂದರ್ಭದಲ್ಲಿ ಕಣ್ಣೀರೊರೆಸಿ ನಿನ್ನೊಂದಿಗೆ ನಾನಿದ್ದೇನೆ ಎಂದು ಹೇಳುವ ಆ ಸಾಂತ್ವಾನ ಎಂದಿಗೂ ಮರೆಯದ ಕ್ಷಣವಾಗಿದೆ.

ಆಸರೆಗೆ ಭುಜ ನೀಡಿದ ಕ್ಷಣಗಳು
ನಿಮ್ಮ ಸಂಗಾತಿಯ ಮಹತ್ವಾಕಾಂಕ್ಷೆಯ ಮಹತ್ತರ ಘಳಿಗೆಯಲ್ಲಿ ನೀವು ಭುಜ ನೀಡುವ ಮೂಲಕ ನೀಡಿದ ಪ್ರೋತ್ಸಾಹ, ಬೆಂಬಲ ಮತ್ತು ಸಹಕಾರ ಎಂದೂ ಮರೆಯದ ಕ್ಷಣವಾಗಿದೆ. ಜೀವನದ ಕಷ್ಟದ ಸಮಯದಲ್ಲಿ ಮತ್ತು ಸಂತೋಷದ ಸಮಯದಲ್ಲಿ ನೀಡುವ ಸಹಾಯ ದಂಪತಿಗಳ ನಡುವಣ ಬೆಸುಗೆಯನ್ನು ಇನ್ನಷ್ಟು ಹತ್ತಿರ ಬೆಸೆಯುತ್ತದೆ.

ಜಗಳದ ಆ ಕ್ಷಣಗಳು
ಎಷ್ಟೇ ರುಚಿಕರವಾದ ಅಡುಗೆಯಿದ್ದರೂ ಉಪ್ಪಿನಕಾಯಿಯ ಆ ಚೂರು ಇಲ್ಲದಿದ್ದರೆ ಊಟ ಅಪೂರ್ಣವಾಗುತ್ತದೆ. ಅಂತೆಯೇ ಎಷ್ಟೇ ಅನ್ಯೋನ್ಯವಾದ ದಂಪತಿಗಳಾಗಿದ್ದರೂ ಇಬ್ಬರ ನಡುವೆ ಕೊಂಚವಾದರೂ ಜಗಳ ಇರಲೇಬೇಕು. ಪ್ರತಿಬಾರಿಯ ಚಿಕ್ಕ ಪುಟ್ಟ ಜಗಳಗಳ ಬಳಿಕ ಹುಸಿ ಮುನಿಸು ತೋರಿ ಬಳಿಕ ಕ್ಷಮೆ ಕೋರಿ ಒಂದಾಗುವ ಆ ಕ್ಷಣ ಇಬ್ಬರ ಪಾಲಿಗೂ ಸ್ಮರಣೀಯವಾಗಿದೆ.

ಮೊದಲ ಚುಂಬನದ ಕ್ಷಣ
ದಂಪತಿಗಳಿಗೆ ನೆನಪಿರುವ ಕ್ಷಣವೆಂದರೆ ಪ್ರಥಮ ಚುಂಬನದ ಕ್ಷಣ. ಇದೊಂದು ಜೀವನದ ಅತ್ಯಂತ ರಮಣೀಯ ಮತ್ತು ಅತ್ಯದ್ಭುತವಾದ ಕ್ಷಣವಾಗಿದ್ದು ನೆನೆಸಿಕೊಂಡರೇ ಮೈ ಜುಮ್ಮೆನ್ನುತ್ತದೆ. ಅದರಲ್ಲೂ ದಂಪತಿಗಳಾಗುವ ಮುನ್ನ ಪ್ರೇಮದಲ್ಲಿದ್ದಾಗ ಕದ್ದು ಮುಚ್ಚಿ ನೀಡಿದ ಆ ಚುಂಬನಗಳಂತೂ ಕಿವಿಯಲ್ಲಿ ಪಿಸುಮಾತಿನಲ್ಲಿ ಹೇಳಿಕೊಳ್ಳಲಿಕ್ಕೇ ಸೂಕ್ತವಾಗಿದ್ದು ಯಾವಾಗ ಹೇಳಿದರೂ ಇಬ್ಬರಲ್ಲಿಯೂ ರೋಮಾಂಚನ ಮೂಡುತ್ತದೆ. ದಂಪತಿಗಳೇ, ನಿಮ್ಮ ಜೀವನದ ಇಂತಹ ಅಮೂಲ್ಯ ಕ್ಷಣಗಳನ್ನು ಆಗಾಗ ನೆನಪಿಸಿಕೊಳ್ಳುತ್ತಾ ಜೀವನವನ್ನು ಇನ್ನಷ್ಟು ಮಧುರವಾಗಿಸಿ, ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಾಢವಾಗಿಸಿ.



Click it and Unblock the Notifications











