Latest Updates
-
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ!
ದಾಂಪತ್ಯದ ಸುಖಕರ ಪ್ರಯಾಣಕ್ಕೆ ಬಾಂಧವ್ಯದ ಬೆಸುಗೆ ಅತ್ಯಗತ್ಯ ಕಣ್ರೀ!
ಒಂದು ಸಂಬಂಧದಲ್ಲಿ ಇದ್ದರೆ, ಅದು ಹೇಳಿ ಮಾಡಿಸಿದ ಸಂಬಂಧ ಎನ್ನುವ ರೀತಿ ಇರಬೇಕು. ಜೀವನ ಪರ್ಯಂತ ಇದು ಸುಖದ ಹಳಿಯ ಮೇಲೆ ಸಾಗುವ ಬಂಡಿಯ ರೀತಿಯಲ್ಲಿರಬೇಕು. ಸಣ್ಣ ಪುಟ್ಟ ಕೋಪ-ತಾಪ, ಮುನಿಸುಗಳು ಇರಬೇಕು, ಸಂಬಂಧದಲ್ಲಿ ಆಗಲೇ ಆ ಸಂಬಂಧಕ್ಕೆ ಅಮರತ್ವ ಲಭಿಸುತ್ತದೆ. ಇವುಗಳು ನಿಮ್ಮನ್ನು ಪರಸ್ಪರ ಹತ್ತಿರ ಸೇರಿಸುತ್ತವೆ. ಅತ್ಯಂತ ಯಶಸ್ವಿ ಸಂಬಂಧಗಳಲ್ಲಿ " ವಿಚ್ಛೇಧನ" ಮತ್ತು "ಬೇರೆಯಾಗುವುದು" ಎಂಬ ಪದಗಳ ಸುಳಿವೇ ಇರುವುದಿಲ್ಲ. ಹಾಗಾದರೆ ಉಳಿದ ಸಂಬಂಧಗಳು ವಿಫಲರಾಗುವುದಾದರು ಎಲ್ಲಿ? ಬಹುಶಃ ಅವು ಸಂಬಂಧದಲ್ಲಿ ಸಂವಹನದ ಕೊರತೆಯಿಂದ ಇವುಗಳು ಈ ಸ್ಥಿತಿ ತಲುಪಿರಬಹುದು.
ಹೌದು, ಕೆಲವೊಮ್ಮೆ ನಂಬಲು ಕಷ್ಟವಾದರು ನೀವು ನಿಮ್ಮ ಸಂಬಂಧವನ್ನು ಮುರಿದು ಕೊಳ್ಳುವ ಅಂಚಿನಲ್ಲಿರುತ್ತೀರಿ. ಆದರೆ ನಿಮಗೆ ಗೊತ್ತಿರಬಹುದು. ಸಂಬಂಧ ಎನ್ನುವುದು ರಬ್ಬರ್‌ನಂತೆ, ಇದರಲ್ಲಿರುವ ಹಿಗ್ಗುವಿಕೆಯ ಲಕ್ಷಣವೇ ಪ್ರೀತಿ, ನಿಷ್ಠೆ, ಆರೈಕೆ. ಯಾವಾಗ ಇವುಗಳು ಹೋಗುತ್ತವೆಯೋ, ಆಗ ಇವುಗಳಲ್ಲಿರುವ ಅಂತಃಸತ್ವ ಹೋಗಿ ಅದು ಕೇವಲ ನಿರ್ಜೀವ ವಸ್ತುವಾಗಿ ಬಿಡುತ್ತದೆ. ಹಾಗಾಗಿ ಸಂಬಂಧದಲ್ಲಿ ಏನಾಗುತ್ತದೆಯೋ ಅಂದರೆ ಸತ್ಯ ಮತ್ತು ನೋವನ್ನು ನೇರವಾಗಿ ಅನುಭವಿಸಲು ಸಿದ್ಧರಾಗಿ, ಇಲ್ಲವಾದಲ್ಲಿ ಮುಂದೆ ಬಾಳಿನಲ್ಲಿ ಇದರಿಂದ ಮತ್ತಷ್ಟು ಅಧಿಕವಾದ ನೋವನ್ನು ಅನುಭವಿಸಬೇಕಾದೀತು.

ಈ ಮೊದಲೆ ಹೇಳಿದಂತೆ ಸಂಬಂಧದಲ್ಲಿ ಸಂವಹನದ ಕೊರತೆಯೇ, ಅದನ್ನು ಬೇರೆ ಮಾಡಲು ಪ್ರಮುಖ ಕಾರಣವಾಗುತ್ತದೆ. ಇದರ ಜೊತೆಗೆ ಸಂಬಂಧದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ಕೆಲವೊಂದು ಸಂಕೇತಗಳು ನಮಗೆ ತೋರಿಸುತ್ತಿರುತ್ತವೆ. ಬನ್ನಿ ಅವುಗಳ ಕುರಿತು ತಿಳಿದುಕೊಂಡು ಬರೋಣ ಮಹಿಳೆಯರ ಮನದಾಳವನ್ನು ಅರಿಯುವುದು ಅಷ್ಟು ಸುಲಭವಲ್ಲ ಕಣ್ರೀ!
ಮಿತವಾದ ಸಂವಹನ
ಮಿತವಾದ ಸಂವಹನವು ಸಂಬಂಧದಲ್ಲಿ ಕಂದಕವನ್ನು ಸೃಷ್ಟಿಸುತ್ತದೆ. ಒಂದು ವೇಳೆ ನೀವು ಅವಶ್ಯಕತೆಗಿಂತ ಕಡಿಮೆ ಮಾತನಾಡುತ್ತಿದ್ದಲ್ಲಿ, ನಿಮ್ಮ ಸಂಬಂಧದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದೇ ಅರ್ಥ. ಸಾಧ್ಯವಾದಷ್ಟು ಮಾತನಾಡಿ, ಆಗಲೇ ಅಲ್ಲವೇ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದು. ಒಂದು ವೇಳೆ ನೀವು ಸರಿಯಾಗಿ ಮಾತನಾಡದಿದ್ದರೆ, ನಿಮ್ಮ ಸಂಬಂಧದಲ್ಲಿ ಅಂತರ ಹೆಚ್ಚಾಗುತ್ತದೆ.
ಸಂಬಂಧದಲ್ಲಿ ಪ್ರೀತಿಯ ಕೊರತೆ
ಬಹುಶಃ ನಿಮ್ಮ ಸಂಬಂಧವನ್ನು ನೀವು ಕೊನೆಗೊಳಿಸಿಕೊಳ್ಳಲು, ಇದಕ್ಕಿಂತ ಬೇರೆ ಕಾರಣ ಬೇಕಾಗಿಲ್ಲ. ನೀವು ಪರಸ್ಪರ ಅನುರಾಗವನ್ನು ಹೊಂದಿದ್ದರೆ, ನಿಮಗೆ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಎದುರಿಸಬಹುದು. ಪರಸ್ಪರ ಕೈ- ಹಿಡಿದುಕೊಂಡು ಕಷ್ಟಗಳ ಸಾಗರವನ್ನು ಸಹ ದಾಟಬಹುದು. ಆದರೆ ಇದೇ ಬಾಂಧವ್ಯದ ಬೆಸುಗೆ ಕಳಚಿಕೊಂಡಿದ್ದಲ್ಲಿ, ನಿಮ್ಮನು ಅಂಟಿಸುವ ಯಾವ ಶಕ್ತಿಗಳು ನಿಮ್ಮ ನೆರವಿಗೆ ಬರುವುದಿಲ್ಲ. ಕಪಿ ಚೇಷ್ಟೆ ಮೂಲಕ ಮನದ ಕನ್ಯೆಗೆ ಭಯ ಹುಟ್ಟಿಸಬೇಡಿ!
ಮಿಲನಕ್ಕೆ ಮನಸ್ಸಿಲ್ಲ
ಆರೋಗ್ಯಕರವಾದ ಸಂಬಂಧವು ಸ್ವಲ್ಪ ಮಟ್ಟಿಗೆ ದೈಹಿಕ ವಾಂಛೆಗಳಿಗೆ ಸಹ ಬೆಲೆಯನ್ನು ನೀಡುತ್ತದೆ. ಬೆಡ್‍ರೂಮಿನಲ್ಲಿ ಆಸಕ್ತಿ ಕಡಿಮೆಯಾದರೆ, ಸಂಬಂಧದಲ್ಲಿ ಸಹ ಅನಾಸಕ್ತಿ ತಲೆದೋರುತ್ತದೆ. ಮುಂದೆ ಇದು ವಿಕೋಪಕ್ಕೆ ಹೋಗಿ, ಸಂಬಂಧವನ್ನು ಏರು-ಪೇರು ಮಾಡುತ್ತದೆ. ಎಚ್ಚರ: ಇಂತಹ ಸುಳ್ಳುಗಳು ಸಂಸಾರದ ಬುಡವನ್ನೇ ಅಲುಗಾಡಿಸಿಬಿಡಬಲ್ಲವು!!
ಭವಿಷ್ಯದ ಬಗ್ಗೆ ಚರ್ಚೆ ಮಾಡದಿರುವುದು
ಇದು ಸಂಬಂಧವನ್ನು ಕಾಪಾಡುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಭವಿಷ್ಯದ ಬಗ್ಗೆ ಚರ್ಚೆಯು ಸಂಬಂಧವನ್ನು ಕಾಯುವ ಕಾವಲುಗಾರನಿದ್ದಂತೆ. ಅದರ ಕನಸು ನಿಮ್ಮ ನಡುವೆ ಇರುವ ಲೋಪ-ದೋಷಗಳನ್ನು ಮುಚ್ಚಿ ಹಾಕಿ ಬಿಡುತ್ತದೆ. ಆದ್ದರಿಂದ ಭವಿಷ್ಯದ ಬಗ್ಗೆ ತಪ್ಪದೆ ಕನಸು ಕಾಣಿ, ಚರ್ಚೆ ಮಾಡಿ.



Click it and Unblock the Notifications













