Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಬಂಧ ಮುರಿಯಲು, ಅನುಮಾನದ ಪಿಶಾಚಿಯೇ ಸಾಕು!
ಯಾವುದೇ ಇಬ್ಬರು ವ್ಯಕ್ತಿಗಳು ಜೀವನಪರ್ಯಂತ ಒಬ್ಬರಿಗೊಬ್ಬರು ಬದ್ಧರಾಗುವ ಪ್ರಮಾಣ ಮಾಡಿ ವಿವಾಹಬಂಧಕ್ಕೆ ಒಳಗಾಗುವ ಮುನ್ನವೇ ಒಬ್ಬರನ್ನೊಬ್ಬರು ಅರಿತುಕೊಳ್ಳುವುದು ಕೊಂಚ ಅಗತ್ಯ. ಆದರೆ ಇದಕ್ಕೂ ಮುನ್ನ ಓರ್ವರು ಇನ್ನೊಬ್ಬರಲ್ಲಿ ತಮಗೆ ಇಷ್ಟವಾಗದ ಗುಣವನ್ನು ಕಂಡುಕೊಂಡರೆ ಆ ಸಂಬಂಧ ನಿಧಾನವಾಗಿ ಅಲ್ಲಾಡಲು ಪ್ರಾರಂಭವಾಗುತ್ತದೆ. ವಿವಾಹದ ಬಳಿಕವೂ ಸಂಬಂಧ ನಿಧಾನವಾಗಿ ಬಲಗೊಳ್ಳುವ ಬದಲು ಇಬ್ಬರೂ ವಿಮುಖರಾಗುತ್ತಾ ಹೋಗುತ್ತಾರೆ. ಇದನ್ನೇ ಸಂಬಂಧ ಹಳಸುವುದು ಎನ್ನುತ್ತೇವೆ.
ಸಾಮಾನ್ಯವಾಗಿ ಸಂಬಂಧ ಹಳಸಲು ಅನುಮಾನದ ಎಳೆ ಕಾರಣವಾಗುತ್ತದೆ. ಇದು ಇನ್ನೊಬ್ಬರಿಗೆ ಗೊತ್ತಿಲ್ಲದೇ ಸಂಬಂಧವನ್ನು ಬಲಪಡಿಸಲು ಯತ್ನಿಸಿದಷ್ಟೂ ಇನ್ನೊಬ್ಬರು ದೂರ ಸರಿಯುತ್ತಾ ಕಡೆಗೆ ಸಂಬಂಧ ಕಡಿದುಕೊಳ್ಳುತ್ತದೆ. ಒಂದು ವೇಳೆ ನಿಮ್ಮ ತಪ್ಪು ಏನೆಂದು ತಿಳಿಸದೇ ನಿಮ್ಮ ಜೀವನಸಂಗಾತಿಯಾಗುವವರು ಅಥವಾ ಜೀವನಸಂಗಾತಿಯಾಗಿರುವವರು ನಿಮ್ಮಿಂದ ವಿಮುಖರಾಗುತ್ತಿದ್ದರೆ ಇದು ನಿಮ್ಮಲ್ಲಿ ಅತೀವವಾದ ದುಃಖವನ್ನೂ, ನಿರಾಶಾವಾದವನ್ನೂ ಮೂಡಿಸುತ್ತದೆ, ಜೀವನದಲ್ಲಿ ಉತ್ಸುಕತೆಯನ್ನು ಕಡಿಮೆಯಾಗಿಸುತ್ತದೆ ಮತ್ತು ಯಾವುದೇ ಕಾರ್ಯದಲ್ಲಿ ಉತ್ಸಾಹವೇ ಉಡುಗಿಹೋಗುತ್ತದೆ.

ಒಂದು ವೇಳೆ ನಿಮ್ಮ ತಪ್ಪೇ ಇಲ್ಲದಿದ್ದಲ್ಲಿ ಅಥವಾ ಬೇರಾವುದೋ ತಪ್ಪುಕಲ್ಪನೆ ಅಥವಾ ನಿಮ್ಮ ಬಗ್ಗೆ ಇತರರು ಹೇಳಿದ ತಪ್ಪು ವಿಚಾರಗಳನ್ನು ಬೇರೊಂದು ರೂಪದಲ್ಲಿ ಅರ್ಥೈಸಿಕೊಂಡ ನಿಮ್ಮ ಜೀವನಸಂಗಾತಿ ನಿಮ್ಮಿಂದ ದೂರ ಸರಿಯುತ್ತಿರಬಹುದು. ಅವರು ನಿಮ್ಮಿಂದ ದೂರಸರಿಯುತ್ತಿರುವ ಸೂಚನೆಗಳನ್ನು ಕೆಲವು ಸಂಜ್ಞೆಗಳು ನೀಡುತ್ತವೆ. ಇವನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ ನಿಮ್ಮ ಸಂಬಂಧ ಹಳಸುತ್ತಿದೆ ಎಂದು ಕಂಡುಕೊಳ್ಳಬಹುದು. ಸಾಧ್ಯವಾದರೆ, ಇದಕ್ಕೆ ಕಾರಣಗಳನ್ನು ಕಂಡುಕೊಂಡು ಮಿಥ್ಯೆಗಳನ್ನು ನಿವಾರಿಸಿ ನಿಮ್ಮ ಸಂಬಂಧವನ್ನು ಮತ್ತೆ ಸರಿದಾರಿಗೆ ತರಬಹುದು. ಈ ನಿಟ್ಟಿನಲ್ಲಿ ಕೆಳಗೆ ನೋಡಿರುವ ಮಾಹಿತಿ ನಿಮ್ಮ ನೆರವಿಗೆ ಬರಲಿದೆ: ಆಪ್ತಸಲಹೆ: ಸಂಬಂಧ ಮುರಿದು ಹೋದರೆ ಹೀಗೆ ಮಾಡಿ
ನಿಮ್ಮ ಪ್ರೇಮದ ಪ್ರತಿ ನಿಲುವು ಬದಲಾಗುತ್ತದೆ
ಸಂಬಂಧ ಹಳಸುತ್ತಾ ಬಂದಂತೆ ನಿಮ್ಮ ಪ್ರೇಮದ ಬಗೆಗಿನ ನಿಲುವು ಬದಲಾಗುತ್ತದೆ. ಇದು ಕೆಲಸವಿಲ್ಲದವರ ಪಾಲಿನ ಸಮಯಕಳೆಯುವ ಸಾಧನವಾಗಿ, ಯಾವುದೇ ಆರ್ಥವಿಲ್ಲದ ಬೂಟಾಟಿಕೆಯಂತೆ ಕಂಡುಬರುತ್ತದೆ. ಇದು ನಿಮ್ಮ ಸಂಬಂಧ ಹಳಸಿರುವ ಸ್ಪಷ್ಟ ಸೂಚನೆಯಾಗಿದೆ.
ನಿಮಗೆ ಎಲ್ಲವೂ ಬೋರು ಹೊಡೆಯತೊಡಗುತ್ತದೆ
ಹಿಂದೆ ನಿಮಗೆ ಮುದ ನೀಡುತ್ತಿದ್ದ ಸಿನೆಮಾ, ಸಂಗೀತ, ಹರಟೆ ಎಲ್ಲವೂ ಈಗ ಬೋರುಹೊಡೆಯತೊಡಗುತ್ತದೆ. ಯಾವುದೇ ಕೆಲಸದಲ್ಲಿ ಉತ್ಸಾಹ ಇಲ್ಲವಾಗುತ್ತದೆ. ಜೀವನಸಂಗಾತಿಯ ಒಂದು ಕರೆಗಾಗಿ ಹಪಹಪಿಸುತ್ತಿದ್ದವರು ಈಗ ಒಂದು ಕರೆ ಬಂದರೂ ಅದನ್ನು ಸ್ವೀಕರಿಸುವ ಗೋಜಿಗೇ ಹೋಗುವುದಿಲ್ಲ.
ಅವರೊಂದಿಗಿನ ಪ್ರತಿ ಕ್ಷಣವೂ ಉಸಿರುಕಟ್ಟಿಸುತ್ತದೆ
ಅವರೊಂದಿಗೆ ಕಳೆಯುವ ಒಂದು ಕ್ಷಣವೂ ಉಸಿರುವಕಟ್ಟಿದಂತೆ ಅನ್ನಿಸುತ್ತದೆ. ಯಾವಾಗ ಇವರಿಂದ ಬಿಡುಗಡೆ ಹೊಂದುತ್ತೇನೋ ಎಂಬ ಭಾವನೆ ಮೂಡುತ್ತದೆ. ಸಂಬಂಧ ಮುರಿದು ಹೋದ ನಂತರ ಒಂಟಿತನದ ಭಯವೇ?
ನಿಮ್ಮಲ್ಲಿ ಹತಾಶೆ ಮೂಡುತ್ತದೆ
ನಿಮ್ಮ ಸಂಗಾತಿಯ ಪ್ರತಿ ಪದವೂ ನಿಮ್ಮಲ್ಲಿ ಹತಾಶೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಅದರಲ್ಲೂ ನಿಮ್ಮ ಕೊರತೆಗಳನ್ನು ಎತ್ತಿ ಹಿಡಿಯುವ ಅವರ ಪ್ರಶ್ನೆಗಳು ಮತ್ತು ವ್ಯಂಗ್ಯೋಕ್ತಿಗಳು ನಿಮ್ಮ ಹತಾಶೆಯನ್ನು ತೀವ್ರಗೊಳಿಸುತ್ತವೆ.
ನಿಮ್ಮಲ್ಲಿ ನಿರಾಶಾವಾದವನ್ನು ಹೆಚ್ಚಿಸುತ್ತದೆ



Click it and Unblock the Notifications


