Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
ಕುರುಡು ಪ್ರೇಮದ ಅಮಲಿನಲ್ಲಿ ಮೋಸ ಹೋಗಬೇಡಿ
ಜೀವನಸಂಗಾತಿಯಾಗುವವರನ್ನು ನೀವು ಈಗಾಗಲೇ ಆರಿಸಿದ್ದು ವರಿಸಬೇಕಾದ ದಿನ ಅಥವಾ ಹಿರಿಯರಲ್ಲಿ ಹೇಳಬೇಕಾದ ದಿನ ಹತ್ತಿರಾದಂತೆ ನಿಮ್ಮ ಆಯ್ಕೆ ಸರಿಯಾದುದೇ ಎಂಬುದನ್ನು ಮತ್ತೊಮ್ಮೆ ಒರೆಹಚ್ಚಿ ನೋಡುವುದು ಅಗತ್ಯ. ಏಕೆಂದರೆ ಕುರುಡು ಪ್ರೇಮದ ಅಮಲಿನಲ್ಲಿರುವ ಪ್ರೇಮಿಗಳಿಗೆ ತಮ್ಮ ಪ್ರೇಮಿಯ ಉತ್ತಮ ಗುಣಗಳು ಅಥವಾ ಆ ಗುಣಗಳಿರುವಂತೆ ಆತ ಮಾಡುತ್ತಿರುವ ನಾಟಕಗಳು ಮಾತ್ರ ಕಾಣುತ್ತವೆಯೇ ಹೊರತು ಅದರ ಅಡಿಯಲ್ಲಿರುವ ಕೃತ್ರಿಮತೆಯಲ್ಲ.
ಇದಕ್ಕೆ ನಿಮ್ಮ ದೃಷ್ಟಿಯನ್ನು ಬದಲಿಸಿ ಮೂರನೆಯವರ ದೃಷ್ಟಿಯಿಂದ ನೋಡುವುದು ತುಂಬಾ ಅಗತ್ಯವಾಗಿದೆ. ಹಿಂದಿ ಚಿತ್ರ 'ಪಡೋಸನ್' ನೋಡಿದ್ದಿದ್ದರೆ ಇದು ಹೇಗೆ ಎಂಬುದು ಮನದಟ್ಟಾಗುತ್ತದೆ. ಸಾಮಾನ್ಯವಾಗಿ ಯುವಕರು ಯಾವಾಗ ಕೈಕೊಡುತ್ತಾರೆಂದು ಹೇಳಲು ಬರುವುದಿಲ್ಲ. ಏಕೆಂದರೆ ನಿಮ್ಮ ಸಂಬಂಧ ಪ್ರಾರಂಭವಾದಾಗ ಇದ್ದ ಅವರ ಮನಃಸ್ಥಿತಿ ಯಾವುದೋ ಕಾರಣದಿಂದ ಈಗ ಬದಲಾಗಿರಬಹುದು, ಪರಿಸ್ಥಿತಿ ಬದಲಾಗಿರಬಹುದು ಅಥವಾ ಬೇರೆ ಇನ್ನಾವುದೋ ಕಾರಣವಿರಬಹುದು.
ಎಷ್ಟೋ ಕಡೆಗಳಲ್ಲಿ ಸ್ಪುರದ್ರೂಪಿ ಯುವಕರು ಕೇವಲ ತಮ್ಮ ಸೌಂದರ್ಯವನ್ನೇ ಬಂಡವಾಳವಾಗಿಟ್ಟುಕೊಂಡು ಒಂದೇ ಸಮಯದಲ್ಲಿ ಹಲವು ಯುವತಿಯರೊಂದಿಗೆ ಲಲ್ಲೆ ಹೊಡೆಯುತ್ತಾ ತಮ್ಮ ಪೌರುಷದ ಬಗ್ಗೆ ಕೊಚ್ಚಿಕೊಳ್ಳುತ್ತಿರುತ್ತಾರೆ. ಇವರಿಗೆ ವಿವಾಹವಾಗುವುದು ಎಲ್ಲಾ ಬೇಡದ ಉಸಾಬರಿಗಳು.

ಆದರೆ ಇವರು ಅತೀವ ಬುದ್ಧಿವಂತರೂ ಆಗಿರುವುದರಿಂದ ತಮ್ಮ ಪ್ರೇಯಸಿಯರನ್ನು ಹೇಗೆ ಆಟವಾಡಿಸಬೇಕು ಮತ್ತು ಸಿಕ್ಕಿಕೊಳ್ಳುವುದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಗೊತ್ತಿರುತ್ತದೆ. ಒಂದು ವೇಳೆ ನಿಮ್ಮ ಆಯ್ಕೆಯೂ ಈ ತರಹದ ವ್ಯಕ್ತಿತ್ವದವನೇ ಆಗಿದ್ದಿದ್ದರೆ? ಗಂಡಸರೇ ಹೀಗೆ, ನೀವೇ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ..!
ಈ ಪರಿಸ್ಥಿತಿಯಲ್ಲಿ, ಯಾವಾಗ ನೀವು ನಿಮ್ಮ ಸಂಬಂಧವನ್ನು ವಿವಾಹದ ಮೂಲಕ ಗಟ್ಟಿಗೊಳಿಸಲು ಮಾತು ತೆಗೆಯುತ್ತೀರೋ ಆಗಿನಿಂದ, ಒಂದು ವೇಳೆ ಅವರ ಇರಾದೆ ಬೇರೆಯೇ ಆಗಿದ್ದಿದ್ದರೆ ಅವರ ವರ್ತನೆ ನಿಧಾನವಾಗಿ ಬದಲಾಗುತ್ತಾ ಹೋಗುತ್ತದೆ. ಈ ಬದಲಾವಣೆಗಳು ಸ್ಪಷ್ಟವಾಗಿ ನೀವು ಆತನಿಗೆ ಇಷ್ಟವಿಲ್ಲ ಎಂಬ ಸಂಜ್ಞೆಗಳನ್ನು ನೀಡುತ್ತವೆ. ಪ್ರೇಮದಲ್ಲಿ ಕುರುಡಾಗಿರುವ ನಿಮಗೆ ಈ ಸೂಚನೆಗಳು ಕಾಣದೇ ಇರುವ ಸಂಭವವೇ ಹೆಚ್ಚು.
ಆದರೆ ಗಟ್ಟಿಮನಸ್ಸಿನಿಂದ ಈ ಸೂಚನೆಗಳನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ ಅವರ ಇರಾದೆಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ನಿಮ್ಮ ಬಾಳು ತಪ್ಪು ತಿರುವು ಪಡೆಯದೇ ಸರಿಯಾದ ದಾರಿಯಲ್ಲಿ ಸುಖಮಯವಾಗಿ ಮುಂದುವರೆಯಲು ಬೋಲ್ಡ್ ಸ್ಕೈ ತಂಡ ಕೆಲವು ಸಲಹೆಗಳನ್ನು ನೀಡುತ್ತಿದೆ ಮುಂದೆ ಓದಿ..
ನಿಮ್ಮನ್ನು ಭೇಟಿಯಾಗುವುದನ್ನು ಕಡಿಮೆ ಮಾಡುತ್ತಾನೆ
ಮೊದಲು ನಿಮ್ಮನ್ನು ಭೇಟಿಯಾಗಲು ನೆವಗಳನ್ನು ಹುಡುಕುತ್ತಿದ್ದುದು ಈಗ ಆ ವರಸೆ ಬದಲಾಗಿ ನಿಮ್ಮಿಂದ ತಪ್ಪಿಸಿಕೊಳ್ಳಲು ನೆವಗಳನ್ನು ಹುಡುಕುತ್ತಿರುವುದು ನಿಮಗೆ ಗಮನಕ್ಕೆ ಬಂದಿದ್ದರೆ ಆತ ನಿಮ್ಮನ್ನು ಕಡೆಗಣಿಸುತ್ತಿದ್ದಾನೆ ಎಂದರ್ಥ.
ನಿಮ್ಮೊಡನೆ ತಾನಾಗಿಯೇ ಮಾತನಾಡಲು ಪ್ರಾರಂಭಿಸುವುದನ್ನು ಕಡಿಮೆ ಮಾಡುತ್ತಾನೆ
ಮೊದಲು ನಿಮ್ಮೊಡನೆ ಮಾತು ಪ್ರಾರಂಭಿಸಲು ಏನಾದರೊಂದು ವಿಷಯ ತೆಗೆಯುತ್ತಿದ್ದವನು ಈಗ ಮಾತು ಪ್ರಾರಂಭಿಸುವುದನ್ನೇ ಕಡಿಮೆ ಮಾಡಿಬಿಡುತ್ತಾನೆ. ನೀವೇ ಪ್ರಾರಂಭಿಸಿದರೂ ಅಗತ್ಯವಿದ್ದಷ್ಟೇ ಮಾತನಾಡಿ ಏನಾದರೊಂದು ನೆವ ತೆಗೆದು ನಿಮ್ಮಿಂದ ಬೀಳ್ಕೊಡುತ್ತಾನೆ. ಬಹುತೇಕ ಸಂದರ್ಭಗಳಲ್ಲಿ ಈ ನೆವಗಳು 'ಅರ್ಜೆಂಟ್' ಎಂದೇ ಇರುತ್ತವೆ. ಇಂತಹ ಹುಡುಗರ ಕೈ ಹಿಡಿಯುವವರು ನಿಜಕ್ಕೂ ಅದೃಷ್ಟವಂತರು!
ನಿಮ್ಮೊಡನೆ ನಡೆಸುವ ಸಂವಾದಗಳು ಕಾರ್ಯನಿಮಿತ್ತವೇ ಆಗಿರುತ್ತವೆ
ಒಂದು ವೇಳೆ ನಿಮ್ಮೊಡನೆ ಯಾವುದಾದರೊಂದು ವಿಷಯ ತೆಗೆದು ಸಂಭಾಷಿಸಲು ಪ್ರಾರಂಬಿಸಿದರೆ ಆ ವಿಷಯಕ್ಕೆ ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ ಸಾಧ್ಯವಾದಷ್ಟು ಬೇಗ ನಿಮ್ಮಿಂದ ಬೀಳ್ಕೊಡುತ್ತಾನೆ.
ನಿಮಗೆ ಕಳುಹಿಸುವ ಸಂದೇಶಗಳೂ ಕಡಿಮೆಯಾಗುತ್ತವೆ



Click it and Unblock the Notifications














