Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಅಪನಂಬಿಕೆಗೆ ಟೂ ಬಿಡಿ, ಸುಖ ಸಂಸಾರಕ್ಕೆ ಜೈ ಅನ್ನಿ!
ಸಮಾಜಜೀವಿಗಳಾಗಿರುವ ನಮಗೆ ಒಂಟಿಯಾಗಿರಲು ಸಾಧ್ಯವಿಲ್ಲ, ಇರಲೂ ಬಾರದು. ಅಂತೆಯೇ ನಾಲ್ವರ ನಡುವೆ ಇದ್ದಾಗ ಪ್ರತಿ ವ್ಯಕ್ತಿಯ ಪ್ರತ್ಯೇಕ ವ್ಯಕ್ತಿತ್ವದ ಕಾರಣ ಕೊಂಚವಾದರೂ ಭಿನ್ನತೆ ಮತ್ತು ಮುಜುಗರ ತಪ್ಪಿದ್ದಲ್ಲ. ಆದರೆ ಸಾಮರಸ್ಯವೇ ಜೀವನ ಅಲ್ಲವೇ, ಎಷ್ಟು ಇನ್ನೊಬ್ಬರೊಂದಿಗೆ ಹೊಂದಿಕೊಂಡು ಹೋಗುತ್ತೇವೆಯೋ ಅಷ್ಟೇ ಜೀವನ ಸುಖಕರವಾಗುತ್ತದೆ. ಆದರೆ ಈ ಹೊಂದಾಣಿಕೆ ಪರಸ್ಪರವಾಗಿರಬೇಕು, ಆಗಲೇ ಈ ಸಾಮರಸ್ಯಕ್ಕೆ ಒಂದು ಸಾರ್ಥಕತೆ ಇರುತ್ತದೆ.
ಬದಲಿಗೆ ಒಬ್ಬರು ಹೊಂದಿಕೊಂಡು ಹೋಗುವಲ್ಲಿ ಇನ್ನೊಬ್ಬರು ಸಹಕರಿಸದೇ ಇದ್ದರೆ? ಉದಾಹರಣೆಗೆ ಬಸ್ಸಿನ ಎರಡು ಆಸನದ ಸ್ಥಳದಲ್ಲಿ ಒಬ್ಬರೇ ಇದ್ದಾಗ ಎರಡೂ ಕಾಲುಗಳನ್ನು ಅಗಲಿಸಿ ಆರಾಮವಾಗಿ ಕುಳಿತಿದ್ದ ವ್ಯಕ್ತಿ ಇನ್ನೊಬ್ಬರು ಬಂದಾಗ ಕಾಲುಗಳನ್ನು ಹತ್ತಿರ ತಂದು ಇನ್ನೊಬ್ಬರಿಗೆ ಕುಳಿತುಕೊಳ್ಳಲು ಅವಕಾಶ ಕೊಡುವುದು ಮಾನವೀಯತೆ. ಹಾಗೆ ಮಾಡದೇ ಇದ್ದರೆ? ಆಗ ಇಬ್ಬರ ನಡುವೆ ವೈಮನಸ್ಸು, ವಿರಸ, ಜಗಳ ಕಡೆಗೆ ಬೇರ್ಪಡುವಿಕೆಯಲ್ಲಿ ಪರ್ಯವಸಾನವಾಗುತ್ತದೆ. ಈ ಚಿಕ್ಕ ಉದಾಹರಣೆಯನ್ನು ಜೀವನದ ಕಷ್ಟಕರ ಎನ್ನುವ ಸಂಗತಿಗಳಿಗೆ ಹೋಲಿಸಿಕೊಂಡಾಗಲೂ ವಿಪರೀತಗೊಳ್ಳುವ ಪರಿಣಾಮಗಳನ್ನು ಕಾಣಬಹುದು. ಪ್ರೀತಿ ವಿಶ್ವಾಸವೇ, ಸುಖಿ ಸಂಸಾರದ ರಹದಾರಿ

ಇಂದಿನ ಲೇಖನದಲ್ಲಿ ಮಾನವನ ನಡುವಣ ಸಂಬಂಧದ ಬಗ್ಗೆ ಇರುವ ಮಿಥ್ಯೆಗಳನ್ನು ಹಂಚಿಕೊಳ್ಳಲು ಬೋಲ್ಡ್ ಸ್ಕೈ ತಂಡ ಪ್ರಯತ್ನಿಸುತ್ತಿದೆ. ಎಷ್ಟೋ ಸಲ ಓರ್ವ ವ್ಯಕ್ತಿಯ ಬಾಹ್ಯ ಚಹರೆಯನ್ನು ನೋಡಿಯೇ ಇವರು ಹೀಗೆ ಎಂಬ ಒಂದು ತೀರ್ಮಾನಕ್ಕೆ ಬಂದುಬಿಡುತ್ತೇವೆ. ವಾಸ್ತವಾಗಿ ಮಾನವರ ವ್ಯಕ್ತಿತ್ವಕ್ಕೂ ಅವರ ರೂಪಕ್ಕೂ ತಾಳೆಹೊಂದುವುದು ಅಪರೂಪ.
ಸ್ಫುರದ್ರೂಪಿಯಾಗಿದ್ದ ಚಾರ್ಲ್ಸ್ ಶೋಭರಾಜ್ ಎಂತಹವರನ್ನಾದರೂ ತನ್ನ ಸೌಂದರ್ಯ ಮತ್ತು ಮಾತುಗಳಿಂದ ಮರಳು ಮಾಡುತ್ತಿದ್ದ ಇರಾದೆ ಏಕೆಂದು ಆತನ ಉಗ್ರರೂಪ ನೋಡಿದ ಬಳಿಕವೇ ಗೊತ್ತಾಗಿದೆ. ಅಂತೆಯೇ ಸಂಬಂಧಗಳು ಸಹಾ. ಒಂದು ಸಂಬಂಧ ರೂಪುಗೊಳ್ಳಲು ಮತ್ತು ಗಟ್ಟಿಗೊಳ್ಳಲು ಮುಖ್ಯವಾಗಿ ಬೇಕಾಗಿರುವುದು ವಿಶ್ವಾಸ. ವಿಶ್ವಾಸಘಾತುಕತನದಿಂದ ಇಡಿಯ ಜೀವನವೇ ಅಸ್ತವ್ಯಸ್ತವಾಗಬಹುದು.
ಕೆಲವೊಮ್ಮೆ ಕೆಲವು ಸುಳ್ಳುಗಳೇ ಈ ಸಂಬಂಧವನ್ನು ಗಟ್ಟಿಗೊಳಿಸಲು ನೆರವಾಗಬಹುದು. 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂಬ ಗಾದೆಯೇ ಇದೆ. ಇಂದು ಸಂಬಂಧಗಳಲ್ಲಿರುವ ಮಿಥ್ಯಗಳ ಬಗ್ಗೆ ಕೆಳಗೆ ನೀಡಿರುವ ಮಾಹಿತಿಗಳ ಮೂಲಕ ಮುಖ್ಯವಾದ ಮಾಹಿತಿಗಳನ್ನು ನೋಡೋಣ. ಇದು ಪ್ರೇಮದ ಅಮಲಿನಲ್ಲಿ ವ್ಯಕ್ತಿಯ ನಿಜವಾದ ಗುಣವನ್ನು ಅರಿಯದೇ ಹೋಗುವವರಿಗೆ ಮತ್ತು ಸಂಬಂಧಗಳನ್ನು ಈ ದೃಷ್ಟಿಕೋನದಿಂದ ನೋಡದೇ ಇರುವವರಿಗೆ ದಾರಿದೀಪವಾಗಲೂಬಹುದು.
ಉತ್ತಮ ಸಂಬಂಧಗಳು ಸ್ವಾರ್ಥರಹಿತವಾಗಿರುತ್ತವೆ
ಯಾವುದೇ ಸಂಬಂಧ ಬಲಗೊಳ್ಳಲು ಕಠಿಣ ಪರಿಶ್ರಮ ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಮಯಾವಕಾಶ ಬೇಕಾಗುತ್ತದೆ. ಯಾವುದೇ ಸಂಬಂಧವನ್ನು ಗಟ್ಟಿಗೊಳಿಸಬೇಕಾದರೆ ಆ ಸಂಬಂಧದತ್ತ ನಿಮ್ಮ ಚಿತ್ತ ಸ್ವಾರ್ಥರಹಿತವಾಗಿರಬೇಕು. ಅಂದರೆ ಇದರಿಂದ ನನಗೇನು ಲಾಭ? ಎಂಬ ಪ್ರಶ್ನೆ ಮೂಡಬಾರದು, ಬದಲಿಗೆ ಇದರಿಂದ ಅವರಿಗೆ ಎಷ್ಟರ ಮಟ್ಟಿಗೆ ಸಹಾಯವಾಗಬಹುದು ಎಂದು ಯೋಚಿಸಬೇಕು. ನೆನಪಿಡಿ, ಉತ್ತಮ ಸಂಬಂಧಗಳು ತಾವಾಗಿ ನಿಮ್ಮೆಡೆಗೆ ಬರಲಾರವು, ನೀವೇ ಅವುಗಳ ಕಡೆಗೆ ಅಡಿಯಿಡಬೇಕು. ನಿಮ್ಮಿಂದ ಪ್ರಾರಂಭವಾಗುವ ನಿಃಸ್ವಾರ್ಥ ನಡೆ ಸಂಗಾತಿಯ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಕುರುಡು ಪ್ರೇಮದ ಅಮಲಿನಲ್ಲಿ ಮೋಸ ಹೋಗಬೇಡಿ
ಸಂಬಂಧ ಸುಧಾರಿಸಬೇಕೇ? ನಿಮ್ಮ ಸ್ವಂತಿಕೆಯನ್ನು ತೋರಿ
ಹಣವಂತರಿಗೆ ಎಲ್ಲಿ ಹೋದರೂ ಸಂಬಂಧಿಕರು ಎಂಬ ಗಾದೆಯೊಂದಿದೆ. ಒಮ್ಮೆ ಈ ಹಣ ಇಲ್ಲ ಎಂದು ಗೊತ್ತಾಯಿತೋ ಅಷ್ಟೂ ಸಂಬಂಧಿಕರು ಮೊಲದ ಕೊಂಬಿನಂತೆ ಮಾಯವಾಗಿಬಿಡುತ್ತಾರೆ. ಅಂತೆಯೇ ಯಾವುದೇ ಸಂಬಂಧದಲ್ಲಿ ನಿಮ್ಮ ನಡುವಣ ಬಂಧ ನಿಮ್ಮ ವ್ಯಕ್ತಿತ್ವವಾಗಬೇಕೇ ವಿನಃ ಹಣ ಅಥವಾ ವರ್ಚಸ್ಸು ಆಗಬಾರದು. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ನಿಮ್ಮನ್ನು ಬದಲಿಸಿಕೊಳ್ಳುವುದು, ಅತಿ ಆಪ್ತರಂತೆ ನಾಟಕವಾಡುವುದು ಎಲ್ಲವೂ ಕ್ಷಣಿಕವಾಗುತ್ತವೆ. ಎಂದಾದರೊಮ್ಮೆ ನಿಮ್ಮ ನಿಜಬಣ್ಣ ತಿಳಿಯುತ್ತಿದ್ದಂತೆಯೇ ನಿಮ್ಮಲ್ಲಿದ್ದ ಉತ್ತಮ ಗುಣಗಳನ್ನು ಮೆಚ್ಚಿಕೊಂಡಿದ್ದವರು ಸಹಾ ನಿಮ್ಮನ್ನು ದೂರವಾಗಿಸುತ್ತಾರೆ. ಆದ್ದರಿಂದ ನಿಮ್ಮ ಸಹಜ ಮತ್ತು ಶಾಂತವರ್ತನೆಯಿಂದ ಸಂಬಂಧಗಳನ್ನು ಗೆಲ್ಲಲು ಪ್ರಯತ್ನಿಸಿ. ನಿಮ್ಮ ಮನಸ್ಸು ಶುದ್ಧವಾಗಿದ್ದರೆ ನಿಮ್ಮ ಸಂಗಾತಿಗಳು ನಿಮ್ಮನ್ನು ಹೇಗಿದ್ದೀರೋ ಹಾಗೇ ಸ್ವೀಕರಿಸುತ್ತಾರೆ. ಅಂತೆಯೇ ನೀವೂ ಅವರನ್ನು ಸಹಾ. ಈ ಸಂಬಂಧ ಜನುಮದ ಬಂಧವಾಗಿ ಸದಾಕಾಲ ಹಸಿರಾಗಿರುತ್ತದೆ.
ಪ್ರಥಮ ಭೇಟಿಯ ಅಭಿಪ್ರಾಯವನ್ನು ಬದಲಿಸುವುದು ಕಷ್ಟ
ಯಾವುದೇ ಸಂಬಂಧದಲ್ಲಿ ಪ್ರಥಮ ಬೇಟಿಯಲ್ಲಿ ಪಡೆಯುವ ಅಭಿಪ್ರಾಯ ಸಂಬಂಧ ಮುಂದುವರೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ ಖ್ಯಾತ ಚಿತ್ರನಟರು ತಮ್ಮ ಮಕ್ಕಳನ್ನು ಬಾಲನಟರಾಗಲು ಬಿಡದೇ ಏಕಾಏಕಿ ನಾಯಕನಟನ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಏಕೆಂದರೆ ಒಮ್ಮೆ ಬಾಲನಟನ ಪ್ರಖ್ಯಾತಿ ಸಿಕ್ಕಿದರೆ ನಾಯಕ ನಟನಾಗಿ ಅವರನ್ನು ಜನರು ಗುರುತಿಸುವುದೇ ಇಲ್ಲ. ಇದಕ್ಕಾಗಿ ತಂದೆಯೇ ಮಕ್ಕಳಿಗಾಗಿ ನಿರ್ಮಾಪಕರಾಗುವುದೂ ಇದೆ.
ಉದಾಹರಣೆಗೆ ಹಿಂದಿ ಚಿತ್ರನಟ ವಿನೋದ್ ಖನ್ನಾ, ಅಮಿತಾಭ್ ಬಚ್ಚನ್ ಇತ್ಯಾದಿ. ಆದ್ದರಿಂದ ಯಾವುದೇ ವ್ಯಕ್ತಿಯೊಂದಿಗಿನ ಪ್ರಥಮ ಭೇಟಿಯನ್ನು ಅತ್ಯುತ್ತಮವಾಗಿ ನಿರ್ವಹಿಸಬೇಕು. ಇದು ಮುಂದಿನ ಭೇಟಿಗಳಲ್ಲಿ ಇನ್ನಷ್ಟು ಗಟ್ಟಿಯಾಗುತ್ತಾ ಹೋಗುತ್ತದೆ. ಆದರೆ ನಿಜವಾದ ಬಣ್ಣವನ್ನು ಮಾತ್ರ ಕಠಿಣ ಸಂದರ್ಭಗಳು ತೋರುತ್ತವೆ.
ನಿಮ್ಮ ಪ್ರೀತಿಪಾತ್ರರನ್ನು ಗದರುವುದು ಸಹಾ ಪ್ರೀತಿಯ ಒಂದು ಲಕ್ಷಣ
ಜಗಳವಾಡದ ಗಂಡಹೆಂಡತಿಯರೇ ಇಲ್ಲ ಈ ಜಗತ್ತಿನಲ್ಲಿ! ಏಕೆಂದರೆ ಈ ಜಗಳದಲ್ಲಿಯೂ ಒಂದು ಪ್ರೀತಿ ಅಡಗಿರುತ್ತದೆ. ಅದೆಂದರೆ ತಮ್ಮ ಸಂಗಾತಿ ಮಾಡುವ ತಪ್ಪು ತಮ್ಮದೇ ಎಂದು ಭಾವಿಸಿ ಆ ತಪ್ಪಿಗಾಗಿ ಸಂಗಾತಿಯನ್ನು ಗದರಿದರೂ ಬಳಿಕ ಅದನ್ನು ಸರಿಪಡಿಸಲು ತಮ್ಮ ಸಮಯ ಮತ್ತು ಶ್ರಮವನ್ನು ವಹಿಸುವ ಮೂಲಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದೇ ನಿಜವಾದ ಜೀವನ.
ಒಂದು ವೇಳೆ ಆಗಿರುವ ಚಿಕ್ಕ ತಪ್ಪನ್ನೂ ಇಬ್ಬರೂ ಒಪ್ಪಿಕೊಳ್ಳದೇ ಇನ್ನೊಬ್ಬರ ಮೇಲೆ ಹಾಕುತ್ತಾ ಹೋದರೆ ಗಂಡ ಹೆಂಡಿರ ಜಗಳದಲ್ಲಿ ಬಡವಾಯ್ತು ಕೂಸು ಎಂಬಂತೆ ಸಂಬಂಧ ಸಹಾ ಹಳಸುತ್ತಾ ಹೋಗುತ್ತದೆ. ಆದ್ದರಿಂದ ಪ್ರೀತಿಯ ಗದರಿಕೆ ಇರಲಿ, ದ್ವೇಶದ ಗದರಿಕೆ ಬೇಡ. ಗಂಡಸರಿಗೆ ಇಂತಹ ಹುಡುಗಿಯರೆಂದರೆ ಎಲ್ಲಿಲ್ಲದ ಪ್ರೀತಿ!
ಈ ಬಗ್ಗೆ ನಿಮಗೆ ಏನೆನ್ನಿಸಿತು ಎಂಬುದನ್ನು ನಮಗೆ ತಿಳಿಸಿ. ಇಂತಹ ಉಪಯುಕ್ತ ಸಲಹೆಗಳಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ. ಇದು ಬೇರೆಯವರಿಗೆ ಉಪಯುಕ್ತವಾಗಿ ಹಳಸುವ ಒಂದು ಕುಟುಂಬ ಉಳಿದಂತಾದರೆ ಅದರಿಂದ ಸಿಗುವ ಆತ್ಮತೃಪ್ತಿಗೆ ಬೆಲೆಕಟ್ಟಲಾಗದು ಅಲ್ಲವೇ!



Click it and Unblock the Notifications














