ಆಕರ್ಷಣೆಗೆ ಮರುಳಾಗಿ, ಕೊನೆಗೆ ಮೋಸ ಹೋಗಬೇಡಿ!

By Arshad

ನಮಗೆಲ್ಲರಿಗೂ ಇನ್ನೊಬ್ಬರ ಸಾಮೀಪ್ಯ ಮತ್ತು ಸಹಕಾರ ಅಗತ್ಯವಿದೆ. ಅದರಲ್ಲೂ ಜೀವನಸಂಗಾತಿಯ ಜೊತೆ ಜೀವನದ ಸವಿಯನ್ನು ಹೆಚ್ಚಿಸಲು ಅಗತ್ಯ. ಆದರೆ ಜೀವನಸಂಗಾತಿಯನ್ನು ಆರಿಸಿಕೊಳ್ಳುವುದೇ ಅತಿ ಕ್ಲಿಷ್ಟ ಮತ್ತು ಸಂಕೀರ್ಣವಾದ ಕಾರ್ಯ. ಏಕೆಂದರೆ ಪ್ರತಿಯೊಬ್ಬರಲ್ಲಿಯೂ ಉತ್ತಮ ಮತ್ತು ಅವಗುಣಗಳಿರುತ್ತವೆ. ಇವುಗಳಲ್ಲಿ ಎಲ್ಲವೂ ಹೊಂದಿಕೊಂಡರೂ ಕೆಲವು ಹೊಂದಿಕೊಳ್ಳದೇ ಇರಬಹುದು.

ಆದ್ದರಿಂದ ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮನ್ನು ಆಕರ್ಷಿಸಿದ ವ್ಯಕ್ತಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ ಅವರ ಅವಗುಣಗಳ ಬಗ್ಗೆಯೂ ತಿಳಿದು ಅವರ ಬಗ್ಗೆಯ ನಿಮ್ಮ ನಿಲುವನ್ನು ಬದಲಾಯಿಸಬೇಕಾಗಿ ಬರುತ್ತದೆ. ಬಳಿಕ ನಿಧಾನವಾಗಿ ಇವರಿಂದ ದೂರವಾಗಬೇಕಾಗುತ್ತದೆ. ಸಂಬಂಧ ಗಟ್ಟಿಗೊಳ್ಳುವ ಮುನ್ನ ಈ ತರಹ ದೂರವಾದರೆ ಹೆಚ್ಚು ತೊಂದರೆ ಇಲ್ಲ. ಆದರೆ ಇವರೇ ತಮ್ಮ ಜೀವನಸಂಗಾತಿ ಎಂದು ಮನಸ್ಸಿನಲ್ಲಿ ಆಳವಾಗಿ ನಂಬಿದ ಬಳಿಕ ಆಕೆ ಅಥವಾ ಆತ ನಿಮನ್ನು ತಿರಸ್ಕರಿಸಿದರೆ ಇದರಲ್ಲಿ ನೀವು ಮೋಸ ಹೋಗಿರುವುದು ತಡವಾಗಿ ಕಂಡುಬರುತ್ತದೆ. ಗೆಳೆಯ ಮದುವೆಯಾಗದೇ ಕೈ ಕೊಡಬಹುದು, ಜೋಕೆ!

ನಂತರ ಪ್ರೇಮಿಯ ಅವಸ್ಥೆ ಬಹಳ ಶೋಚನೀಯವಾಗಿರುತ್ತದೆ. ಇದು ಕೆಲವರಲ್ಲಿ ಆತ್ಮಹತ್ಯೆಗೆ ಪ್ರಚೋದನೆಯನ್ನೂ ನೀಡಬಹುದು. ಇನ್ನುಳಿದಂತೆ ಮದ್ಯಪಾನಕ್ಕೆ ದಾಸರಾಗುವುದು, ತಾನು ಮೋಸ ಹೋದ ಸೇಡನ್ನು ಬೇರೆಯ ರೀತಿಯಲ್ಲಿ ತೀರಿಸಿಕೊಳ್ಳುವುದು, ಸನ್ಯಾಸತ್ವದ ಬಗ್ಗೆ ಚಿಂತನೆ ನಡೆಸುವುದು, ಯಾರಿಗೂ ಹೇಳದೇ ಎಲ್ಲೋ ಅಂತರ್ಧಾನವಾಗುವುದು ಮೊದಲಾದ ಪ್ರಕ್ರಿಯೆಯನ್ನು ಜಗತ್ತಿನಾದ್ಯಂತ ನೋಡುತ್ತಾ ಬಂದಿದ್ದೇವೆ. ಕೆಲವರು ಮಾತ್ರ ಇದನ್ನು ಒಂದು ಪಾಠವನ್ನಾಗಿ ಕಲಿತು ಜೀವನದ ಮುಂದಿನ ಹೆಜ್ಜೆಗಳನ್ನು ಜಾಗರೂಕತೆಯಿಂದ ಇಟ್ಟು ಜಯಶೀಲರಾಗಿ ಸಂತೃಪ್ತ ಬಾಳ್ವೆ ನಡುಸುತ್ತಿದ್ದಾರೆ. ಸಂಸಾರದಲ್ಲಿ ದುಃಸ್ವಪ್ನದಂತೆ ಕಾಡುವ ವಿಚ್ಛೇದನ!

ನೀವು ಮೋಸ ಹೋದದು ಅನುಭವಕ್ಕೆ ಬಂದ ಕೂಡಲೇ ನೀವು ನಂಬಿಕೊಂಡು ಬಂದಿದ್ದ ಸತ್ಯಗಳು ಮಿಥ್ಯೆ ಎಂದು ತಿಳಿದು ಬರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗುತ್ತದೆ. ಈ ಸ್ಥಿತಿಗೆ ಬರಲು ಕಾರಣವೇನು ಎಂದು ಮೊದಲೇ ತಿಳಿದಿದ್ದರೆ ಜಾಗರೂಕಲಾಗಲು ಸಾಧ್ಯವಾಗುತ್ತದೆ. ಕೆಳಗಿನ ಸ್ಲೈಡ್ ಶೋ ಮೂಲಕ ನಿಮ್ಮಲ್ಲಿ ಈ ಕುರಿತಾದ ಅರಿವನ್ನು ಮೂಡಿಸಲು ಹಲವು ಕಾರಣಗಳನ್ನು ನೀಡಾಲಾಗಿದೆ..

ನಿಮ್ಮ ಆಯ್ಕೆಯೇ ತಪ್ಪಾಗಿದೆ

ನಿಮ್ಮ ಆಯ್ಕೆಯೇ ತಪ್ಪಾಗಿದೆ

ನಿಸರ್ಗ ನಿಯಮದಂತೆ ಹೆಣ್ಣಿನ ಸೌಂದರ್ಯವೇ ಗಂಡನ್ನು ಅತಿಹೆಚ್ಚಾಗಿ ಆಕರ್ಷಿಸುತ್ತದೆ. ಅಂತೆಯೇ ಗಂಡಿನ ವ್ಯಕ್ತಿತ್ವ ಮತ್ತು ಸದ್ಗುಣಗಳೇ ಹೆಣ್ಣನ್ನು ಆಕರ್ಷಿಸುತ್ತವೆ. ಆದರೆ ಈ ಆಕರ್ಷಣೆ ಕೇವಲ ಬಾಹ್ಯವಾಗಿದ್ದು ವ್ಯಕ್ತಿಯ ನಿಜವಾದ ಗುಣಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ ನೀವು ಇಷ್ಟಪಟ್ಟ ಸೌಂದರ್ಯದ ಒಡತಿಯನ್ನು ಇಷ್ಟಪಡದಿರುವತ್ತ ಸಾಗುತ್ತದೆ. ಅಂದರೆ ನಿಮ್ಮ ಗುಣಗಳಿಗೆ ಒಗ್ಗದ ವ್ಯಕ್ತಿಯನ್ನು ಕೇವಲ ಬಾಹ್ಯ ಸೌಂದರ್ಯದ ಮೂಲಕ ಆಯ್ಕೆ ಮಾಡುವ ಮೂಲಕ ಮೂಲದಲ್ಲಿಯೇ ಎಡವಿರುವುದು ವೇದ್ಯವಾಗುತ್ತದೆ. ಮುಂದೆ ಓದಿ

ನಿಮ್ಮ ಆಯ್ಕೆಯೇ ತಪ್ಪಾಗಿದೆ

ನಿಮ್ಮ ಆಯ್ಕೆಯೇ ತಪ್ಪಾಗಿದೆ

ಅಷ್ಟಕ್ಕೂ ಸೌಂದರ್ಯ ಎಂದರೇನು? ಇಂದು ಸೌಂದರ್ಯಪ್ರಸಾಧನಗಳ ಮೂಲಕ, ಭಾರೀ ಉಡುಗೆತೊಡುಗೆಯ ಮೂಲಕ ಕಾಣುವುದು ಸೌಂದರ್ಯವೋ ಅಥವಾ ಕುರೂಪಿಯಾಗಿದ್ದ ಲೈಲಾಳನ್ನು ಮಜನೂವಿನ ದೃಷ್ಟಿಯಿಂದ ನೋಡುವುದೋ?

ನಿಮ್ಮ ಕಡೆಯಿಂದ ಪ್ರಯತ್ನಗಳು ಸಾಕಷ್ಟಿಲ್ಲದಿರುವುದು

ನಿಮ್ಮ ಕಡೆಯಿಂದ ಪ್ರಯತ್ನಗಳು ಸಾಕಷ್ಟಿಲ್ಲದಿರುವುದು

ನೀವು ಯಾವ ರೀತಿ ನಿಮ್ಮ ಸಂಗಾತಿಯಿಂದ ಸದ್ಗುಣಗಳನ್ನು ಬಯಸುತ್ತೀರೋ, ಅಂತೆಯೇ ನಿಮ್ಮ ಸಂಗಾತಿಯಾಗುವವರೂ ನಿಮ್ಮಿಂದ ಉತ್ತಮ ಗುಣಗಳನ್ನೇ ಬಯಸುತ್ತಾರೆ. ಆದರೆ ಈ ಪರೀಕ್ಷೆಯಲ್ಲಿ ನಿಮ್ಮ ಕಡೆಯಿಂದ ಸಾಕಷ್ಟು ಪ್ರಯತ್ನಗಳಿಲ್ಲದಿದ್ದರೆ ಅಥವಾ ಬೇರೆ ಸಂಗತಿಗಳಿಗೆ ನೀವು ಹೆಚ್ಚಿನ ಪ್ರಾಮುಖ್ಯತೆ ನೀಡಿ ಇವರನ್ನು ಕಡೆಗಣಿಸುವಂತಾದರೆ ಇದು ತಪ್ಪು ಸಂದೇಶವನ್ನು ನೀಡುತ್ತದೆ.

ನಿಮ್ಮ ಕಡೆಯಿಂದ ಪ್ರಯತ್ನಗಳು ಸಾಕಷ್ಟಿಲ್ಲದಿರುವುದು

ನಿಮ್ಮ ಕಡೆಯಿಂದ ಪ್ರಯತ್ನಗಳು ಸಾಕಷ್ಟಿಲ್ಲದಿರುವುದು

ನಿಮ್ಮ ಸಂಗಾತಿಯಾಗುವವರು ನಿಧಾನವಾಗಿ ಬೇರೆ ಕಡೆ ತಮ್ಮ ಗಮನವನ್ನು ಹರಿಸುತ್ತಾರೆ. ಪರಿಣಾಮವಾಗಿ ನಿಮಗಿಂತಲೂ ಉತ್ತಮ ವ್ಯಕ್ತಿ ಅವರಿಗೆ ಸಿಕ್ಕರೆ ನಿಮಗೆ ಟಾಟಾ ಬೈಬೈ ಉಡುಗೊರೆ ಸಿಗುತ್ತದೆ. ಆದ್ದರಿಂದ ನಿಮ್ಮ ಕಡೆಯಿಂದ ಪ್ರಯತ್ನಗಳು ನಿರಂತರ ಮತ್ತು ಪ್ರಾಮಾಣಿಕವಾಗಿರಲಿ.

ನೀವು ಅವರನ್ನು ಬದಲಿಸಲು ಯತ್ನಿಸುತ್ತೀರಿ

ನೀವು ಅವರನ್ನು ಬದಲಿಸಲು ಯತ್ನಿಸುತ್ತೀರಿ

ಪ್ರತಿ ವ್ಯಕ್ತಿಗೂ ತಮ್ಮದೇ ಆದ ವ್ಯಕ್ತಿತ್ವ ಮತ್ತು ಅಭಿಲಾಶೆಗಳಿರುತ್ತವೆ. ಅಂತೆಯೇ ತಮ್ಮ ಜೀವನಸಂಗಾತಿಯಾಗುವವರು ಹೀಗೇ ಇರಬೇಕೆಂಬ ಒಂದು ಕನಸಿರುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಯಾಗುವವರು ಈ ರೀತಿ ಇಲ್ಲದಿದ್ದಲ್ಲಿ ನೀವು ಬಲವಂತವಾಗಿ ಆ ಕನಸಿನ ರೂಪವನ್ನು ಪಡೆಯಬೇಕೆಂಬ ನಿಲುವನ್ನು ಬಲವಂತವಾಗಿ ಹೇರಿದರೆ ಅದು ಅವರಿಗೆ ನುಂಗಲಾರದ ತುತ್ತಾಗುತ್ತದೆ. ಪರಿಣಾಮವಾಗಿ ನಿಮ್ಮ ಬಗ್ಗೆ ಅವರು ಕಠಿಣ ನಿಲುವನ್ನು ತಾಳಿ ನಿಮ್ಮಿಂದ ದೂರವಾಗುತ್ತಾರೆ.

ನೀವು ಅವರನ್ನು ಬದಲಿಸಲು ಯತ್ನಿಸುತ್ತೀರಿ

ನೀವು ಅವರನ್ನು ಬದಲಿಸಲು ಯತ್ನಿಸುತ್ತೀರಿ

ಉದಾಹರಣೆಗೆ ನೂರು ರೂಪಾಯಿಯನ್ನು ಹೋಟೆಲಿನಲ್ಲಿ ತಿಂದು ಖರ್ಚು ಮಾಡಬೇಕೆಂದೇ ನಿಮ್ಮ ನಿಲುವಾಗಿದ್ದು ನಿಮ್ಮ ಸಂಗಾತಿಯಾಗುವವರು ನೂರು ರೂಪಾಯಿಯಲ್ಲಿ ಐವತ್ತು ರೂಪಾಯಿ ಮಾತ್ರ ಸರಳ ಆಹಾರ ತಿಂದು ಉಳಿದ ಐವತ್ತು ರೂಪಾಯಿಗಳನ್ನು ದಾನ ಮಾಡಿದರೆ, ಅದು ನಿಮಗೆ ಸಹ್ಯವಾಗದೇ "ನೀವು ನೂರು ರೂಪಾಯಿಯ ಊಟವನ್ನೇ ಮಾಡಬೇಕಿತ್ತು, ಐವತ್ತು ರೂಪಾಯಿ ಏಕೆ ದಾನ ನೀಡಿದೆ" ಎಂದು ಕೇಳಿದರೆ ನಿಮ್ಮ ನಿಲುವನ್ನು ಬಲವಂತವಾಗಿ ಹೇರಿದಂತಾಗುತ್ತದೆ. ಬದಲಿಗೆ ನಿಮ್ಮ ಸಂಗಾತಿಯಾಗುವವರ ಮನಸ್ಸನ್ನು ಅರಿತು 'ದಾನ ಮಾಡಿದ್ದು ಒಳ್ಳೆಯದೇ ಆಯಿತು, ಮುಂದಿನ ಬಾರಿ ನನ್ನಿಂದಲೂ ಐವತ್ತು ರೂಪಾಯಿ ತೆಗೆದುಕೊಳ್ಳಿ' ಎಂದು ಹೇಳಿದ್ದಿದ್ದರೆ ನಿಮ್ಮ ಸಂಗಾತಿಯ ದೃಷ್ಟಿಯಲ್ಲಿ ನೀವು ಇನ್ನಷ್ಟು ಬೆಳೆಯುವ ಅವಕಾಶವಿತ್ತು.

ನಿಮ್ಮ ಆಶ್ರಯ ಸುರಕ್ಷಿತವಲ್ಲ ಎಂಬ ಭಾವನೆ ಮೂಡುತ್ತದೆ

ನಿಮ್ಮ ಆಶ್ರಯ ಸುರಕ್ಷಿತವಲ್ಲ ಎಂಬ ಭಾವನೆ ಮೂಡುತ್ತದೆ

ಯಾವುದೇ ವ್ಯಕ್ತಿ ತನ್ನ ಸಂಗಾತಿಯಲ್ಲಿ ನೋಡುವುದು ಭವಿಷ್ಯದ ಭದ್ರತೆ. ಪ್ರೀತಿ, ಪ್ರೇಮ, ಸೌಂದರ್ಯ ಇವೆಲ್ಲಾ ಏನಿದ್ದರೂ ಒಂದು ಆಕರ್ಷಣೆಯೇ ಹೊರತು ಜೀವನ ನಡೆಸಲು ಸಮರ್ಥವಾದ ಉಪಕರಣಗಳಲ್ಲ. ಅತ್ಯಂತ ಮುಖ್ಯವಾದುದೆಂದರೆ ಒಂದು ಉದ್ಯೋಗ ಅಥವಾ ನಿಯಮಿತ ಆದಾಯ ಬರುವ ಭದ್ರತೆ. ನಿಮ್ಮಲ್ಲಿ ಆ ಭದ್ರತೆ ಇಲ್ಲದಿದ್ದರೆ, ಅಥವಾ ಆ ಭದ್ರತೆ ಪಡೆಯುವ ಅರ್ಹತೆ ಛಲ ಇಲ್ಲದಿದ್ದರೆ ನಿಮ್ಮ ಸಂಗಾತಿಯಾಗುವವರು ನಿಮ್ಮೆಡೆಗೆ ಒಲವು ತೋರುವುದು ಅನುಮಾನ.

ನೀವು ಆಕೆಯ / ಆತನ ಬಯಕೆಗಳಿಗೆ ಆದ್ಯತೆ ನೀಡದೇ ಇರುವುದು

ನೀವು ಆಕೆಯ / ಆತನ ಬಯಕೆಗಳಿಗೆ ಆದ್ಯತೆ ನೀಡದೇ ಇರುವುದು

ಪ್ರತಿ ವ್ಯಕ್ತಿಗೂ ತಮ್ಮದೇ ಆದ ಬಯಕೆಗಳು ಮತ್ತು ಬೇಕುಬೇಡಗಳಿರುತ್ತವೆ. ಇವು ಸಾಂದರ್ಭಿಕವೂ ಆಗಿರಬಹುದು ಅಥವಾ ಮಹತ್ವಾಕಾಂಕ್ಷೆಯವೂ ಆಗಿರಬಹುದು. ನೀವು ನಿಮ್ಮ ಸಂಗಾತಿಯ ಈ ಅಗತ್ಯಗಳಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಅವರಿಂದಲೂ ನಿಮ್ಮ ಬಗ್ಗೆ ಒಲವು ಅಪೇಕ್ಷಿಸಬಹುದು.

ನೀವು ಆಕೆಯ / ಆತನ ಬಯಕೆಗಳಿಗೆ ಆದ್ಯತೆ ನೀಡದೇ ಇರುವುದು

ನೀವು ಆಕೆಯ / ಆತನ ಬಯಕೆಗಳಿಗೆ ಆದ್ಯತೆ ನೀಡದೇ ಇರುವುದು

ಉದಾಹರಣೆಗೆ ನಿಮ್ಮ ಸಂಗಾತಿಗೆ ಈ ಕ್ಷಣದಲ್ಲಿ ಒಂದು ಮೊಬೈಲ್ ಮತ್ತು ಜೀವನದಲ್ಲಿ ಓರ್ವ ಶಿಕ್ಷಕಿಯಾಗಲು ಹೆಚ್ಚಿನ ಓದಿನ ಅಗತ್ಯವಿದೆ ಎಂದುಕೊಳ್ಳಿ. ಆಗ ನೀವು ಕೇವಲ ಮೊಬೈಲ್ ಒಂದನ್ನು ಉಡುಗೊರೆಯಾಗಿ ನೀಡಿ ಹೆಚ್ಚಿನ ಓದಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದಲ್ಲಿ ನಿಮ್ಮ ಸಂಗಾತಿಯಾಗುವವರು (ಆ ಮೊಬೈಲ್ ಸಹಿತ) ನಿಮ್ಮಿಂದ ದೂರವಾಗುವ ಸಾಧ್ಯತೆಗಳು ಹೆಚ್ಚು.

X
Desktop Bottom Promotion