Latest Updates
-
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಪುರುಷರು ಬದ್ಧತೆಯ ವಿಷಯದಲ್ಲಿ ಕೈ ಕೊಡುವುದೇ ಜಾಸ್ತಿ!
ಸಾಮಾನ್ಯವಾಗಿ ಮನದನ್ನೆಯನ್ನು ಒಲಿಸಿಕೊಳ್ಳಲು ಪ್ರಯತ್ನಗಳು ಪುರುಷರ ಕಡೆಯಿಂದಲೇ ಮೊದಲಾಗುತ್ತವೆ. ಪಡ್ಡೆ ಹುಡುಗರ ಭಾಷೆಯಲ್ಲಿ ಇದಕ್ಕೆ 'ಕಾಳು ಹಾಕುವುದು' ಎನ್ನುತ್ತಾರೆ. ಆದರೆ ಮನದನ್ನೆ ಒಲಿದ ಬಳಿಕ ಪುರುಷರು ತಮ್ಮ ಪ್ರಯತ್ನ ಅಥವಾ ಬದ್ಧತೆಯಿಂದ ವಿಮುಖರಾಗುತ್ತಾ ಹೋಗುತ್ತಾರೆ. ಇದೇಕೆ ಎಂಬುದು ಶತಮಾನಗಳಿಂದ ಬಗೆಹರಿಯದ ಪ್ರಶ್ನೆಯಾಗಿದೆ. ಒಮ್ಮೆ ಮನದನ್ನೆ ಒಲಿದಳೋ, ಬಳಿಕ ಪುರುಷರಿಗೆ ಉಸಿರುಗಟ್ಟಿದಂತಾಗುತ್ತದೆ. ತಾವೀಗ ಆಕೆಯ ಕೈಗೊಂಬೆಯಾಗುವ ಮೂಲಕ ಪುರುಷನ ಪ್ರಾಬಲ್ಯವನ್ನೇ ಕಳೆದುಕೊಂಡಿರುವಂತೆ ಆಡುತ್ತಾರೆ. ಇದೊಂದು ತರಹದ ಪ್ರಾಬಲ್ಯ ಮೆರೆಯುವ ಸ್ಪರ್ಧೆಯಾಗುತ್ತದೆ. ಈ ಸ್ಪರ್ಧೆಯಲ್ಲಿ ಯಾರಿಗೆ ಬೇಡಿಕೆ ಕಡಿಮೆಯೋ ಅವರು ಗೆದ್ದಂತೆ.
ಪರಿಚಯ ಗಾಢವಾದ ಬಳಿಕ ಒಂದು ಸಂಬಂಧವೇರ್ಪಡುತ್ತಿದ್ದಂತೆಯೇ ಪುರುಷರಿಗೆ ಒಂದು ಬಗೆಯ ಆಧೀನತೆಯ ಅನುಭವವಾಗುತ್ತದೆ. ಇದು ಎರಡೂ ಬಗೆಯದ್ದಾಗಿರಬಹುದು. ತಾವು ಆಕೆಯ ಆಧೀನಲ್ಲಿರುವುದೋ ಅಥವಾ ಆಕೆ ತಮ್ಮ ಆಧೀನದಲ್ಲಿರುವಳೋ ಎಂಬ ದ್ವಂದ್ವ ಎದುರಾಗುತ್ತದೆ. ಒಂದು ವೇಳೆ ಈ ದ್ವಂದ್ವ ಕೂಡಲೇ ಬಗೆಹರಿಯದಿದ್ದರೆ ಗಟ್ಟಿಗೊಂಡಿದ್ದ ಸಂಬಂಧ ಸಡಿಲಗೊಂಡು ನಿಧಾನವಾಗಿ ದೂರವಾಗಲೂ ಸಾಕು. ಇದು ಹೆಚ್ಚಿನ ಪುರುಷರಿಗೆ ಹೆದರಿಕೆಯುಂಟುಮಾಟುತ್ತದೆ. ಈ ಹೆದರಿಕೆಯೇ ವಿಶ್ವಾಸ ಮತ್ತು ಬದ್ಧತೆಯಿಂದ ವಿಮುಖರಾಗಲು ಕಾರಣವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ: ಗೆಳೆಯ ಮದುವೆಯಾಗದೇ ಕೈ ಕೊಡಬಹುದು, ಜೋಕೆ!

ಆತ ಮುಂದಿನ ಹೆಜ್ಜೆಗಾಗಿ ಸಿದ್ಧನಾಗಿಯೇ ಇಲ್ಲ
ಬದ್ಧತೆ ಅಥವಾ ವಿಶ್ವಾಸ ಮೊದಲಾದ ಪದಗಳನ್ನು ಕೇಳಿದಾಕ್ಷಣ ಕೆಲವು ಪುರುಷರಿಗೆ ತಮ್ಮ ಸ್ವಾತಂತ್ರ್ಯವನ್ನೇ ಕಳೆದುಕೊಂಡ ಅನುಭವವಾಗುತ್ತದೆ. ಸ್ವಚ್ಛಂದ ಪಕ್ಷಿಯಂತೆ ಹಾರುತ್ತಿದ್ದವರಿಗೆ ಜವಾಬ್ದಾರಿಗಳ ಸಂಕೋಲೆ ಕಾಲಿಗೆ ತೊಡಿಸಿದಂತನ್ನಿಸುತ್ತದೆ. ಇದು ಅವರಿಗೆ ಹೆದರಿಕೆಯುಂಟುಮಾಡುತ್ತದೆ.
ಆತ ಬೇರೊಬ್ಬರನ್ನು ಪ್ರೀತಿಸುತ್ತಿದ್ದಿರಬಹುದು
ಪುರುಷರು ಸ್ವಭಾವತಃ ವಿವಿಧ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ. ಒಂದೇ ಸಮಯದಲ್ಲಿ ಹಲವು ಮಹಿಳೆಯರೊಡನೆ ಸಂಬಂಧವಿಟ್ಟುಕೊಂಡಿರಲು ಮನದಲ್ಲಿಯೇ ಮಂಡಿಗೆ ತಿನ್ನುತ್ತಿರುತ್ತಾರೆ. ಆದರೆ ವಿಶ್ವಾಸ ಮತ್ತು ಬದ್ಧತೆ ಕೇವಲ ಏಕಸಂಗಾತಿಗೆ ಮಾತ್ರ ಮೀಸಲಾಗಿಸಲು ಸಾಧ್ಯ. ಒಂದು ವೇಳೆ ವಿವಿಧ ಮಹಿಳೆಯರಿಗೆ ಕಾಳು ಹಾಕಿದರೂ ಕಾಳು ಉಂಡ ಹಕ್ಕಿಯೇ ಜೀವನಸಂಗಾತಿಯಾಗಿರಲು ಸಾಧ್ಯವಿಲ್ಲ, ಮನದಲ್ಲಿ ಬೇರೊಂದು ಹಕ್ಕಿ ಈಗಾಗಲೇ ಜೀವನಸಂಗಾತಿಯಾಗುವ ನಿಟ್ಟಿನಲ್ಲಿ ಮನೆಮಾಡಿಕೊಂಡಿದ್ದರೆ ಈ ಹಕ್ಕಿಯ ಪ್ರತಿ ಬದ್ಧತೆ ಸಾಧ್ಯವೇ ಇಲ್ಲ. ಇದು ಪುರುಷರನ್ನು ಬದ್ಧತೆಯಿಂದ ವಿಮುಖರನ್ನಾಗಿಸುತ್ತದೆ.
ಕರ್ತವ್ಯಗಳಿಗೆ ಪ್ರಥಮ ಆದ್ಯತೆ
ಒಂದು ವೇಳೆ ಪುರುಷರಿಗೆ ತಮ್ಮದೇ ಆದ ಜವಾಬ್ದಾರಿಗಳಿದ್ದು ಅದನ್ನು ಪೂರ್ಣಗೊಳಿಸುವವರೆಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲದುದರಿಂದ ಬದ್ಧತೆಗೆ ಒಳಗಾಗಲು ಹಿಂದೇಟು ಹಾಕುತ್ತಾರೆ. ಇವರು ತಮ್ಮ ಪ್ರೇಮಿಯೊಡನೆ ಸಿನಿಮಾ ನೋಡಲು, ಗಂಟೆಗಟ್ಟಲೆ ಮಾತನಾಡಲು ಸಿದ್ಧರಿರುತ್ತಾರೆಯೇ ವಿನಃ ಬದ್ದತೆಗೆ ಒಳಗಾಗಲು ತಮ್ಮ ಜವಾಬ್ದಾರಿಗಳನ್ನು ಅರಿತವರಾಗಿದ್ದು ಈ ಜವಾಬ್ದಾರಿಗಳು ಪೂರ್ಣವಾಗುವವರೆಗೆ ಬದ್ದತೆಯ ಬಂಧನಕ್ಕೆ ಒಳಗಾಗಲಾರೆ ಎಂದು ಸ್ಪಷ್ಟವಾಗಿಯೇ ತಿಳಿಸುತ್ತರೆ. ಈ ನೇರ ನಡವಳಿಕೆ ಸೂಕ್ತವಾಗಿದ್ದು ಇದನ್ನು ಅವರ ಪ್ರೇಮಿ ಗೌರವಿಸುವುದು ಅಗತ್ಯವಾಗಿದೆ.
ಪ್ರೇಮಿಗೆ ನೋವುಂಟಾಗುವ ಭಯ
ಒಂದು ವೇಳೆ ಪುರುಷರಿಗೆ ಹಿಂದೆ ಕೆಟ್ಟ ಅನುಭವವಾಗಿದ್ದು ಅದರ ಪರಿಣಾಮ ತಮ್ಮ ಪ್ರೇಮಿಯ ಮೇಲೂ ಬೀಳಬಹುದೆಂಬ ಭಯವಿದ್ದರೆ ಬದ್ದತೆಗೆ ಒಳಗಾಗಲು ಹೆದರುತ್ತಾರೆ. ಏಕೆಂದರೆ ಒಮ್ಮೆ ಬದ್ದತೆಗೆ ಒಳಗಾದ ಬಳಿಕ ಹಳೆಯ ತೊಂದರೆಗಳು ಮೇಲೆದ್ದು ಬಂದು ನೋವು ಕೊಡುವಂತಾದರೆ? ಅದರ ಪರಿಣಾಮ ತಮ್ಮ ಪ್ರೇಮಿ ಅಥವಾ ಜೀವನಸಂಗಾತಿಯ ಮೇಲಾದರೆ ಎಂಬ ಭಯ ಅವರನ್ನು ಆವರಿಸುತ್ತದೆ. ಇದು ಅವರ ಹಿಮ್ಮೆಟ್ಟುವಿಕೆಗೆ ಇನ್ನೊಂದು ಪ್ರಮುಖ ಕಾರಣವಾಗಿದೆ.
ಅತಿಹೆಚ್ಚಿನ ಒತ್ತಡ
ಯಾವುದೇ ಸಂಬಂಧ ಒತ್ತಡ ಅಥವಾ ಬ್ಲಾಕ್ ಮೇಲ್ ಮೂಲಕ ಆಗಬಾರದು. ಪರಸ್ಪರ ಒಪ್ಪಿಗೆ ಅಗತ್ಯ. ಒಂದು ವೇಳೆ ಪುರುಷರಿಗೆ ಅವರ ಪ್ರೇಮಿ ಸತತವಾಗಿ ಮದುವೆಯಾಗಲು ಒತ್ತಾಯಿಸುತ್ತಲೇ ಬಂದರೆ ಪುರುಷರು ಬದ್ಧತೆಗೆ ಒಳಗಾಗುವಲ್ಲಿ ಹಿಮ್ಮೆಟ್ಟಬಹುದು. ಈ ಸಂದರ್ಭದಲ್ಲಿ ಪ್ರೇಮಿ ಅಪಾರವಾದ ತಾಳ್ಮೆ ವಹಿಸಬೇಕು. ನಿಮ್ಮ ಮನಸ್ಸಿನ ಭಾವನೆಯನ್ನು ನಿಧಾನವಾಗಿ ತಿಳಿಸಿ ಓಲೈಸಿಕೊಳ್ಳಬೇಕು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪುರುಷನೂ ನಿಜವಾಗಿ ತಮ್ಮನ್ನು ಪ್ರೀತಿಸುತ್ತಿದ್ದಾನೆ ಎಂದು ಖಚಿತಪಡಿಸಿಕೊಂಡ ಬಳಿಕವೇ ಮುಂದುವರೆಯಬೇಕು. ಒಂದು ವೇಳೆ ಇಂತಹ ಉತ್ತಮ ಮಾಹಿತಿ ತಮ್ಮಲ್ಲಿದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಮುಖ್ಯ ಪುಟದ ಕೆಳಗಿರುವ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.



Click it and Unblock the Notifications
