Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಜೀವದ ಗೆಳತಿಯೇ ನಿಮ್ಮ ಬಾಳಸಂಗಾತಿಯಾಗಲಿ
ಪ್ರಸ್ತುತ ಸಮಾಜದಲ್ಲಿ ಒತ್ತಡದ ಬದುಕನ್ನು ಸುಗಮವಾಗಿ ನಡೆಸಲು ವೈಯಕ್ತಿಕ ವಿಚಾರಗಳ ನೋವು ನಲಿವುಗಳನ್ನು ಹಂಚಿಕೊಳ್ಳಲು ಒಬ್ಬ ಒಳ್ಳೆಯ ಗೆಳೆಯ ಅಥವಾ ಗೆಳೆತಿಯಿದ್ದರೆ ಎಷ್ಟು ಚೆನ್ನ. ಈಗೀಗ ಗೆಳತಿಯನ್ನು ಹೊಂದದ ಪುರುಷರು ಸಿಗಲು ಸಾಧ್ಯವೇ ಇಲ್ಲ. ನಿಮಗೆ ಒಳ್ಳೆಯ ಗೆಳತಿಯಿದ್ದರೂ ಸಹ ಕೆಲವರು ಮಾತ್ರ ತಮ್ಮ ಮದುವೆಗೆ ಬೇರೊಬ್ಬ ಹುಡುಗಿಯನ್ನು ಹುಡುಕುತ್ತಿರುತ್ತಾರೆ.
ಗೆಳತನವೇ ಬೇರೆ ಮದುವೆಯೇ ಬೇರೆ ಎಂದು ಕೆಲವರು ಭಾವಿಸುತ್ತಾರೆ. ಕಾಲ ಬದಲಾದಂತೆ ಜನರೂ ಬದಲಾಗಿದ್ದಾರೆ. ಈಗಿನ ಯುವ ಜನಾಂಗವು ತಮಗೆ ಇಚ್ಛೆಯಿರುವ ಅವರ ಭಾವನೆಗೆ ಸರಿಹೊಂದುವ ಸಮ ಚಿತ್ತದ ಮನಸ್ಸಿನವರನ್ನು ಬಾಳ ಸಂಗಾತಿ ಮಾಡಿಕೊಳ್ಳಲು ಇಚ್ಛಿಸುತ್ತಿದ್ದಾರೆ. ನೀವು ನಿಮ್ಮ ಗೆಳತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆದಿರುತ್ತೀರಿ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತೀರಿ. ಹಾಗೆ ಅರ್ಥಮಾಡಿಕೊಳ್ಳದೇ ಇದ್ದಲ್ಲಿ ಇಷ್ಟು ಸುದೀರ್ಘವಾಗಿ ಗೆಳೆತನವೇ ಇರುವುದಿಲ್ಲವೆಂಬ ಅರಿವು ನಿಮಗಿರಲಿ.

ನೀವು ಇನ್ನೂ ಜೊತೆಯಾಗಿದ್ದು, ಉತ್ತಮ ಗೆಳೆತನ ಹೊಂದಿದಲ್ಲಿ ಮತ್ತೇಕೆ ಚಿಂತಿಸುವಿರಿ. ಮದುವೆಯೆಂಬುದು ಜೂಜಾಟವಿದ್ದಂತೆ. ಇದರಲ್ಲಿ ಗೆಲ್ಲಲು ಎಷ್ಟು ಅವಕಾಶವಿದೆಯೋ ಸೋಲಲೂ ಸಹ ಅಷ್ಟೇ ಕಾರಣಗಳಿರುತ್ತವೆ. ಹೀಗಿರುವಾಗ ನಿಮ್ಮ ಇಡೀ ಜೀವನವನ್ನು ಈ ಮದುವೆಯೆಂಬ ಆಟದಲ್ಲಿ ಏಕೆ ಅಡ ಇಡುತ್ತೀರಿ? ಒಮ್ಮೆ ಯೋಚಿಸಿ. ಯಾರೋ ತಿಳಿಯದವರ ಕೈಗೆ ನಮ್ಮ ಜೀವನವನ್ನು ನೀಡುವುದಕ್ಕಿಂತ, ನಿಮ್ಮನ್ನು ಹೆಚ್ಚು ತಿಳಿದಿರುವ ಮತ್ತು ಅರ್ಥಮಾಡಿಕೊಂಡಿರುವ ನಿಮ್ಮ ಅಚ್ಚುಮೆಚ್ಚಿನ ಗೆಳತಿಯನ್ನೇ ವರಿಸಿ ಅವಳೊಂದಿಗೆ ನಿರ್ಭಯವಾಗಿ ನೀವು ಜೀವನ ನಡೆಸಬಹುದಾಗಿದೆ. ನಿಮ್ಮನ್ನು ಚೆನ್ನಾಗಿ ತಿಳಿದಿರುವ ಹಾಗೂ ಅರ್ಥ ಮಾಡಿಕೊಂಡಿರುವ ವ್ಯಕ್ತಿಯೊಂದಿಗೇ ಅಂದರೆ ನಿಮ್ಮ ಗೆಳತಿಯೊಂದಿಗೇ ಮದುವೆಯಾಗಬಾರದೇಕೆ? ಸಕಾರಣಗಳನ್ನು ಈಗ ಚರ್ಚಿಸೋಣ ಬನ್ನಿ. ನಿಮ್ಮ ಗೆಳತಿಯೊಂದಿಗೆ ಮದುವೆಯಾಗಲು ವಿಶೇಷ ಕಾರಣಗಳನ್ನು ನಿಮಗಾಗಿ ನೀಡಲಾಗಿದೆ. ನಿಮ್ಮ ಗೆಳತಿ ಫೋನಿನ ವಿಷಯದಲ್ಲಿ ಮುನಿಸಿಕೊಳ್ಳುವುದು ಏಕೆ?
ಒಪ್ಪಲೇಬೇಕು, ನಿಮ್ಮೊಳಗಿನ ಪೈಶಾಚಿಕ ವ್ಯಕ್ತಿತ್ವವು ಆಕೆಗೆ ತಿಳಿದಿರುತ್ತದೆ
ನೀವು ಅತ್ಯುತ್ಸಾಹದಲ್ಲಿದ್ದರೂ ನಿಮ್ಮನ್ನು ನಿರ್ವಹಿಸುತ್ತಾಳೆ
ಆಕೆ ನಿಮ್ಮ ಗೆಳತಿಯಾಗಿದ್ದು, ನಿಮ್ಮ ಎಲ್ಲಾ ಪರಿಸ್ಥಿತಿಯನ್ನು ಆಕೆ ಅರ್ಥೈಸಿಕೊಂಡು ನಿಮ್ಮೊಂದಿಗೆ ಬಾಳು ನಡೆಸುವಳು. ಆಕೆಯನ್ನು ಮದುವೆಯಾದರೆ ನೀವು ಯಾವುದೇ ಮನಸ್ಥಿತಿಯಲ್ಲಿರಲಿ ಖಂಡಿತ ನಿಮ್ಮನ್ನು ಬಿಟ್ತುಹೋಗಲಾರಳು. ಗುಲಾಬಿ ಪಕಳೆಗಾಗಿ ಕಾದು ಕುಳಿತಿರುವ ಜೀವದ ಗೆಳತಿ
ಬದುಕಿನ ಕಠಿಣ ಸಮಯದಲ್ಲೂ ಸಹ ನಿಮ್ಮ ಜೊತೆಗಿರುವಳು
ಎಲ್ಲರ ಬದುಕಿನಲ್ಲಿ ಕೆಲವು ಒಳ್ಳೆಯ ದಿನ ಮತ್ತು ಕೆಲವು ಕೆಟ್ಟ ದಿನಗಳು ಬಂದೇ ಬರುತ್ತದೆ. ಕೆಲವು ಸಲ ನಿಮ್ಮ ಜೇಬು ತುಂಬಿರುತ್ತದೆ ಮತ್ತು ಕೆಲವು ಸಲ ಜೇಬು ಖಾಲಿಯಿರುತ್ತದೆ. ಬೇರೆ ಹುಡುಗಿಯಾದರೆ ಕಷ್ಟ ಬಂದ ತಕ್ಷಣವೇ ನಿಮ್ಮನ್ನು ತೊರೆಯುವಳು. ಆದರೆ ನಿಮ್ಮ ಗೆಳತಿ ಮಾತ್ರ ನಿಮ್ಮ ಬದುಕಿನ ಕಠಿಣ ಸಮಯದಲ್ಲಿಯೂ ಸಹ ನಿಮ್ಮ ಜೊತೆಗಿದ್ದು, ನಿಮಗೆ ಧೈರ್ಯ ತುಂಬುವಳು.
ಆಕೆಯು ಯಾವುದೇ ಸಂದರ್ಭದಲ್ಲೂ ತಲೆನೋವಿನ ಕಾರಣ ನೀಡುವುದಿಲ್ಲ
ಇದನ್ನು ಸ್ವೀಕರಿಸಲೇಬೇಕು. ಹೌದು, ನಾವು ಪುರುಷರು ಮಲಗುವ ಕೋಣೆಯಲ್ಲಿ ಎಷ್ಟೆಲ್ಲಾ ಚಟುವಟಿಕೆ ಮಾಡಲು ಬಯಸುತ್ತೀವಿ. ನೀವು ನಿಮ್ಮಾಕೆಯ ವಸ್ತ್ರವನ್ನು ಕಳಚಿದಾಗ, ಆಕೆ ತಲೆನೋವಿನ ಕಾರಣ ನೀಡಿದರೆ ನಿಮಗೆ ಏನನ್ನಿಸುತ್ತೆ? ಒಮ್ಮೆ ಯೋಚಿಸಿ. ಹೌದು, ನಿಮ್ಮ ಗೆಳತಿ ಮಾತ್ರ ಯಾವುದೇ ಕಾರಣ ನೀಡದೇ ನಿಮ್ಮನ್ನು ನಿರಾಸೆಗೊಳಿಸದೆ ನಿಮ್ಮೊಂದಿಗೆ ಸಹಕರಿಸುವಳು. ಆಕೆಗೆ ಮಾತ್ರ ನಿಮ್ಮ ಬಯಕೆಗಳು ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದ ನಿಮ್ಮ ಗೆಳತಿಯನ್ನು ಮದುವೆಯಾದರೆ ಬಾಳು ಸ್ವರ್ಗವಿದ್ದಂತೆ.



Click it and Unblock the Notifications

