Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಗಂಡು ಹೆಣ್ಣಿನ ನಡುವಿನ ಅನ್ಯೋನ್ಯ ಸಂಬಂಧಕ್ಕೆ ಪ್ರಣಯ ಅತ್ಯಗತ್ಯವೇ?
ಒಂದು ಗಂಡು ಮತ್ತು ಹೆಣ್ಣು ಆತ್ಮೀಯವಾಗಿ ಮಾತನಾಡಿದರೇ ಸಾಕು, ಸುತ್ತಮುತ್ತಲಿನವರು ಇವರಿಬ್ಬರ ನಡುವೆ ಪ್ರಣಯವಿದೆ ಎಂಬ ನಿಶ್ಚಯಕ್ಕೆ ಬಂದುಬಿಡುತ್ತಾರೆ. ಉತ್ತಮ ಸ್ನೇಹಿತರಾಗಿರಲು ಪ್ರಣಯವಿರಲೇಬೇಕು ಎಂದರೆ ತಪ್ಪಾಗುತ್ತದೆ. ಆದರೆ ಒಂದು ಯಶಸ್ವೀ ಪತಿ ಪತ್ನಿಯ ಸಂಬಂಧಕ್ಕೆ ಪ್ರಣಯದ ಅಗತ್ಯ ಖಂಡಿತಾ ಇದೆ. ಪ್ರಣಯವಿಲ್ಲದ ಸಂಬಂಧ ಸಪ್ಪೆಯಾಗಿರುತ್ತದೆ. ಇದು ಮುಂದಿನ ದಿನಗಳಲ್ಲಿ ಸಂಬಂಧ ಮುರಿಯಲೂ ಕಾರಣವಾಗಬಹುದು. ಎಷ್ಟೋ ಕಡೆ ಪಡ್ಡೆ ಹುಡುಗರು ಯುವತಿಯರ ಗಮನ ತಮ್ಮಲ್ಲಿ ಸೆಳೆಯಲು ನಾನಾ ತರಹದ ಚೇಷ್ಟೆಗಳನ್ನು ಮಾಡುವುದನ್ನು ಕಾಣಬಹುದು.
ಬೈಕಿನ ಆಕ್ಸಿಲೇಟರ್ ಜೋರಾಗಿ ತಿರುಗಿಸುವುದು, ಸ್ಟಂಟ್ ಮಾಡುವುದು ಮೊದಲಾದವು. ಆದರೆ ನಿಮ್ಮ ಪ್ರಿಯತಮೆಯ ಮೆಚ್ಚುಗೆ ಪಡೆಯಲು ಇದೆಲ್ಲಾ ಅಗತ್ಯವಿಲ್ಲ. ನಿಮ್ಮಲ್ಲಿರುವ ಸ್ವಂತಿಕೆಯನ್ನು ಪ್ರಕಟಿಸಿದರೆ ಸಾಕು. ಪ್ರೀತಿ ಬೆಳೆಯುತ್ತಾ ಹೋಗುತ್ತದೆ. ಕಾಲ ಕಳೆದಂತೆ ನಿಮ್ಮಿಬ್ಬರ ನಡುವೆ ಅತ್ಮೀಯತೆಯೂ ಬೆಳೆಯುತ್ತದೆ. ಜೊತೆಗೇ ಪ್ರಣಯವೂ ಸಹಾ.
ಮಾನವ ಸಂಘಜೀವಿ. ತನ್ನ ಸುತ್ತಮುತ್ತಲಿನವರು ತನ್ನನ್ನು ಗಮನಿಸಬೇಕು, ತಾನೂ ಬೇರೆಯವರಿಗೆ ನೆರವಾಗಬೇಕು ಎಂಬ ಭಾವನೆಯಿಂದಲೇ ಸಂತೃಪ್ತ ಜೀವನ ನಡೆಸಲು ಸಾಧ್ಯ. ಒಂದು ವೇಳೆ ನಿಮ್ಮ ಸುತ್ತಮುತ್ತಲಿನವರು ನಿಮ್ಮ ಬಗ್ಗೆ ಯಾವುದೇ ಒಲವನ್ನು ತೋರದೇ ಇದ್ದರೆ ಆ ಜಗತ್ತಿನಲ್ಲಿ ಇರಲು ಇಚ್ಛಿಸುವಿರಾ? ಖಂಡಿತಾ ಇಲ್ಲ. ಪ್ರತಿಯೊಬ್ಬರಿಗೂ ಸಮಾಜದೊಂದಿಗೆ ಮಿಳಿತವಾಗಿ ಬದುಕಬೇಕಾಗಿದೆ. ಅಂತೆಯೇ ನಿಮ್ಮ ಪ್ರಿಯತಮ/ಪ್ರಿಯತಮೆ ಮತ್ತು ಪತಿ/ಪತ್ನಿಯ ಜೊತೆ ಒಲವು ಅತ್ಯಗತ್ಯವಾಗಿದೆ. ಜೊತೆಗೇ ನಿಸರ್ಗನಿಯಮದ ಪ್ರಕಾರ ಪ್ರಣಯವನ್ನು ಪ್ರಕಟಿಸುವುದೂ ಅಗತ್ಯವಾಗಿದೆ. ಈ ಪ್ರಣಯ ಏಕೆ ಅಗತ್ಯ ಎನ್ನುವ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ನಿಮ್ಮ ಕನಸಿನ ನಲ್ಲನನ್ನು ಪ್ರೇಮಪಾಶದಲ್ಲಿ ಸಿಲುಕಿಸುವುದು ಹೇಗೆ?

ಪ್ರಣಯ ಅನ್ಯೋನ್ಯತೆಗೆ ಮೂಲವಾಗಿದೆ
ಮದುವೆಯ ಬಳಿಕ ಕೇವಲ ಶಾರೀರಿಕ ಸಂಸರ್ಗದಿಂದ ಅನ್ಯೋನ್ಯತೆ ಹೆಚ್ಚುತ್ತದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಇದು ಪೂರ್ಣವಾಗಿ ನಿಜವಲ್ಲ. ಶಾರೀರಿಕ ಸಂಸರ್ಗ ಪ್ರಣಯದ ಒಂದು ಅಂಗ ಮಾತ್ರ. ಇನ್ನುಳಿದಂತೆ ಪತಿ ಪತ್ನಿಯರ ನಡುವೆ ಭಾವನಾತ್ಮಕ ಸಂಬಂಧ, ಆತ್ಮೀಯ ಮಾತುಕತೆ, ಜೊತೆಯಾಗಿ ನಿರ್ಧಾರಗಳನ್ನು ಕೈಗೊಳ್ಳುವುದು, ಭವಿಷ್ಯದ ಬಗ್ಗೆ ಚಿಂತಿಸುವುದು, ಮನೆಯವರ ಸಮಸ್ಯೆಗಳ ನಿವಾರಣೆಗೆ ಸಮಾಲೋಚಿಸುವುದು, ಒಬ್ಬರ ಕಷ್ಟಗಳನ್ನು ಹೇಳಿಕೊಂಡು ಇದರ ಪರಿಹಾರಕ್ಕಾಗಿ ಜೊತೆಯಾಗಿ ಚರ್ಚಿಸುವುದು, ನಿಮ್ಮ ಪತಿ/ಪತ್ನಿಯ ಬಗ್ಗೆ ಕಾಳಜಿ ವಹಿಸುವುದು ಮೊದಲಾದವು ಸಹಾ ಪ್ರಣಯದ ಭಾಗಗಳೇ ಆಗಿವೆ. ಪ್ರಣಯದ ಮೂಲಕ ನಿಮ್ಮಿಬ್ಬರ ನಡುವಣ ಸಂಬಂಧ ಇನ್ನಷ್ಟು ಹೆಚ್ಚುತ್ತದೆ. ಇದೇ ಅನ್ಯೋನ್ಯತೆಗೆ ಮೂಲವಾಗಿದೆ. ಅನ್ಯೋನ್ಯ ದಂಪತಿಗಳು ಸುಖ ಸಂಸಾರದ ಕಣ್ಣುಗಳಾಗಿದ್ದಾರೆ.
ಪ್ರಣಯವಿಲ್ಲದ ಸಂಬಂಧ ಒಣಗುತ್ತದೆ
ಕೆಲಸದಲ್ಲಿರುವಾದ ದಿನದ ಸಮಯ ಮುಗಿಯುತ್ತಾ ಬಂದಂತೆ ಪದೇ ಪದೇ ಕೈಗಡಿಯಾಗ ನೋಡಿಕೊಳ್ಳುತ್ತಿದ್ದರೆ ಬೇಗನೇ ಮನೆಸೇರುವ ತವಕದಲ್ಲಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದು. ಅಂದರೆ ನಿಮ್ಮ ಮನದನ್ನ/ಮನದನ್ನೆಯನ್ನು ಸೇರಲು ಮನಸ್ಸು ಹಾತೊರೆಯುವುದು ಅನ್ಯೋನ್ಯತೆಯ ಲಕ್ಷಣವಾಗಿದೆ. ಒಂದು ವೇಳೆ ನಿಮ್ಮ ಸಂಬಂಧದಲ್ಲಿ ಪ್ರಣಯ ಅಥವಾ ಅನ್ಯೋನ್ಯತೆಯ ಕೊರತೆಯಾದರೆ ನಿಮ್ಮ ನಡವಳಿಕೆಯೂ ಬದಲಾಗುತ್ತಾ ಹೋಗುತ್ತದೆ. ಕಚೇರಿಯಿಂದ ಎಲ್ಲರೂ ಹೋದರೂ ಕುಂಟುನೆಪ ತೆಗೆದು ಕಛೇರಿಯಲ್ಲಿಯೇ ಉಳಿದುಕೊಳ್ಳುವುದು, ಎಲ್ಲೆಲ್ಲೋ ಅಲೆದು ತಡರಾತ್ರಿ ಮನೆಸೇರುವುದು ಮೊದಲಾದವು ಪ್ರಾರಂಭವಾಗುತ್ತದೆ. ಇದರಿಂದಾಗಿ ಪ್ರಣಯದಿಂದ ವಿಮುಖರಾಗದಿರುವಂತೆ ಇಬ್ಬರೂ ಪರಸ್ಪರರಲ್ಲಿ ಸ್ಪಷ್ಟ ಮಾತುಗಳಿಂದ ಮತ್ತು ಪ್ರತಿಕ್ರಿಯೆಗಳಿಂದ ಆಗಾಗ ನೋಡಿಕೊಳ್ಳುತ್ತಲೇ ಇರಬೇಕು. ನೆನಪಿರಲಿ, ಪ್ರಣಯ ನಿಮ್ಮಿಬ್ಬರ ಹೃದಯಗಳನ್ನು ಬೆಸೆಯುವ ಕೊಂಡಿಯಾಗಿದೆ. ಗಂಡು ಹೆಣ್ಣಿನ ನಡುವೆ ಆತ್ಮೀಯ ಸ್ಪರ್ಶವೇಕೆ ಅಗತ್ಯ?
ಪ್ರಣಯದಿಂದ ನಿಮ್ಮಿಬ್ಬರ ನಡುವಣ ಸಂಬಂಧ ಗಾಢಗೊಳ್ಳುತ್ತದೆ
ನೀವು ನಿಮ್ಮ ಪತಿ/ಪತ್ನಿಯನ್ನು ಎಷ್ಟು ಪ್ರೀತಿಸುತ್ತೀರಿ ಎಂಬ ಪ್ರಶ್ನೆಗೆ ಖಚಿತವಾದ ಉತ್ತರ ನೀಡಲು ಸಾಧ್ಯವಿಲ್ಲ. ಏಕೆಂದರೆ ಸಂಗಾತಿಯನ್ನು ತೀವ್ರವಾಗಿ ಬಯಸುವುದಕ್ಕೂ ತೀವ್ರವಾಗಿ ಪ್ರೀತಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಪ್ರೀತಿಯಲ್ಲಿ ಮಾನಸಿಕವಾಗಿ ಇಬ್ಬರು ಹತ್ತಿರಾದರೆ ಬಯಸುವುದರಲ್ಲಿ ದೈಹಿಕವಾಗಿ ಹತ್ತಿರಾಗುತ್ತೀರಿ. ಪ್ರಣಯ ಈ ಎರಡನ್ನೂ ಒಳಗೊಂಡಿದೆ. ಪ್ರಣಯದಿಂದ ನೀವಿಬ್ಬರೂ ಒಬ್ಬರಿಗೊಬ್ಬರು ಮಾನಸಿಕವಾಗಿ ಮತ್ತು ದೈಹಿಕವಾಗಿ ಇಷ್ಟೊಂದು ಹತ್ತಿರಾಗುತ್ತೀರಿ ಎಂದರೆ ಒಂದು ಜೀವ ಎರಡು ಹೃದಯವಾಗುತ್ತೀರಿ. ಒಂದು ವೇಳೆ ಪ್ರಣಯದಲ್ಲಿ ಕೊರತೆಯುಂಟಾದರೆ ನಿಮ್ಮ ನಡುವಣ ಅಂತರ ಹೆಚ್ಚುತ್ತಾ ಹೋಗುತ್ತದೆ.
ಪ್ರಣಯದಿಂದ ನಿಮ್ಮ ಸಂಬಂಧ ಸುಭದ್ರ ಎಂಬ ಭಾವನೆ ಮೂಡುತ್ತದೆ
ಯಾವುದೇ ಸಂಬಂಧ ಗಟ್ಟಿಯಾಗಿರಲು ಪರಸ್ಪರರ ನಡುವೆ ಗೌರವ, ಪ್ರೀತಿ, ಆದರ ಮತ್ತು ತನ್ನವನು/ತನ್ನವಳು ಎಂಬ ಖಚಿತಭಾವನೆ ಅಗತ್ಯವಾಗಿದೆ. ಪ್ರಣಯದ ಮೂಲಕ ಈ ಎಲ್ಲಾ ಭಾವನೆಗಳಿಗೆ ಮೆರುಗು ಮೂಡುತ್ತದೆ. ಒಂದು ವೇಳೆ ಈ ಭಾವನೆಯಲ್ಲಿ ಕೊರತೆಯುಂಟಾದರೆ ಕೂಡಲೇ ಸಂಗಾತಿ ಅದನ್ನು ಗುರುತಿಸಿಬಿಡುತ್ತಾರೆ. ಉದಾಹರಣೆಗೆ ಪತಿಗೆ ಹೊರಗಿನ ಪರಸ್ತ್ರೀಯ ಮೇಲೆ ವ್ಯಾಮೋಹವುಂಟಾದರೆ ಮನೆಯಲ್ಲಿ ಅವರು ಎಷ್ಟು ಮುಚ್ಚಿಟ್ಟರೂ ಈ ಬಗ್ಗೆ ಸಂಶಯ ಖಂಡಿತಾ ಮೂಡುತ್ತದೆ. ಇದಕ್ಕಾಗಿ ಪತಿ ಪತ್ನಿ ಇಬ್ಬರೂ ಪರಸ್ಪರರ ಮೇಲೆ ಮಾತ್ರ ತಮ್ಮೆಲ್ಲಾ ವಿಶ್ವಾಸವನ್ನು ಕೇಂದ್ರೀಕರಿಸುವುದು ಅತ್ಯಗತ್ಯ. ಮೂರನೆಯ ವ್ಯಕ್ತಿಯ ಪ್ರವೇಶವಾಗುತ್ತಿದ್ದಂತೆ ಸುಭದ್ರವಾಗಿದ್ದ ಸಂಬಂಧ ಛಿದ್ರಗೊಳ್ಳಲು ಪ್ರಾರಂಭವಾಗುತ್ತದೆ. ನಿಮ್ಮಿಬ್ಬರ ನಡುವೆ ಆರೋಗ್ಯಕರವಾದ ಪ್ರಣಯ ಇರುವವರೆಗೂ ನಿಮ್ಮ ಅನ್ಯೋನ್ಯತೆಗೆ ಕೊರತೆಯಿಲ್ಲ. ವರ್ಷಗಳು ಕಳೆದಂತೆ ಇದನ್ನು ಕಡಿಮೆಯಾಗಲೂ ಬಿಡಬಾರದು. ಆಗ ಮಾತ್ರ ಬೆಳ್ಳಿಮಹೋತ್ಸವ, ಸುವರ್ಣಮಹೋತ್ಸವಗಳಿಗೆ ಅರ್ಥ ಇರುತ್ತದೆ.



Click it and Unblock the Notifications














