Latest Updates
-
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ
ಮದುವೆ ನಿಶ್ಚಯ ಸ್ವರ್ಗದಲ್ಲಿ, ಕಲ್ಯಾಣ ಮಂಟಪ ಭೂಮಿ ಮೇಲೆ!
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು", " ಮದುವೆಯೆನ್ನುವುದು ಬ್ರಹ್ಮ ಗಂಟು", ಹಾಗಾಗಿ ಸ್ವರ್ಗದಲ್ಲಿಯೇ ಮದುವೆ ನಿಶ್ಚಯವಾಗಿರುತ್ತದೆ" ಆದರೆ ಕಲ್ಯಾಣ ಮಂಟಪ ಮಾತ್ರ ಇಲ್ಲಿ ಬುಕ್ ಮಾಡಲಾಗಿರುತ್ತದೆ! ಮದುವೆಯೆಂದರೆ ಹಲವಾರು ವಿಚಾರಗಳು ಹೀಗೆ ಸುಮ್ಮನೆ ಮನಸ್ಸಿನಲ್ಲಿ ಹಾದು ಹೋಗುತ್ತವೆ. ಅದರಲ್ಲೂ ಕೆಲವೊಂದು ವಿಚಾರಗಳಂತು ಭಾರತೀಯ ಸಂಸ್ಕೃತಿಯಲ್ಲಿ ನೆನಸಿಕೊಂಡರೆ ವಿಚಿತ್ರವಾಗಿ ತೋರುತ್ತವೆ. ಉದಾಹರಣೆಗೆ ವಧುವನ್ನು ಆರಿಸುವಾಗ ತ್ವಚೆಯ ಬಣ್ಣವು ತುಂಬಾ ಪ್ರಧಾನವಾಗಿರುತ್ತದೆ.
ಇನ್ನೂ ಹುಡುಗಿಯರ ಮನೆಯವರ ವಿಷಯಕ್ಕೆ ಬಂದಾಗ ನೋಡುವುದು ಅಧಿಕ ಬ್ಯಾಂಕ್ ಬ್ಯಾಲೆನ್ಸ್ ಅಥವಾ ಅತ್ಯಧಿಕ ಸಂಪಾದನೆಯನ್ನು ಪಡೆಯುವ ಉದ್ಯೋಗ ಹೊಂದಿರುವ ಹುಡುಗನನ್ನು.ಹೀಗೆ ಸಾಗುತ್ತದೆ ಭಾರತೀಯ ಮದುವೆಗಳ ಕೊಡು ಕೊಳ್ಳುವಿಕೆಗಳು. ಕೊನೆಗೆ ಇವೆಲ್ಲವೂ ಒಂದು ಹಂತಕ್ಕೆ ಬಂದು ನಿಂತ ನಂತರ ವಧೂವರರಿಬ್ಬರ ಜಾತಕ ಪರಿಶೀಲನೆ ಕೂಡ ಪ್ರಮುಖ ಪಾತ್ರಹಿಸುತ್ತದೆ.
ಒ೦ದು ವೇಳೆ ವಧೂವರರಿಬ್ಬರ ಜಾತಕಗಳೂ ಯಾವುದೇ ದೋಷಗಳಿಲ್ಲದೇ ಸಮರ್ಪಕವಾಗಿ ಹೊ೦ದಾಣಿಕೆಯಾಗುವ೦ತಿದ್ದಲ್ಲಿ, ಭಾವೀ ವಧೂವರರು ತಮ್ಮ ದಾ೦ಪತ್ಯ ಜೀವನವನ್ನು ಯಾವ ಕೊರತೆಯೂ ಇಲ್ಲದೇ ನೆಮ್ಮದಿ, ಸ೦ತಸದಿ೦ದ ಕಳೆಯಲು ಸಾಧ್ಯವಾಗುತ್ತದೆ ಎ೦ದು ನ೦ಬಲಾಗುತ್ತದೆ. ಬನ್ನಿ ಹಾಗಾದರೆ ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಏನೆಲ್ಲಾ ನಡೆಯುತ್ತವೆ ಎಂಬ ಬಗ್ಗೆ ಸುಮ್ಮನೆ ಒಂದು ನೋಟ ಹರಿಸಿ ಬರೋಣ.

ಜಾತಕಗಳ ಪರಿಶೀಲನೆ
ವಿವಾಹಿತರಾಗಲಿರುವ ವಧೂವರರ ಜಾತಕಗಳನ್ನು ತಾಳೆಹಾಕಿ ಪರಿಶೀಲಿಸುವುದರ ಮೂಲ ಉದ್ದೇಶವೇನೆ೦ದರೆ, ದ೦ಪತಿಗಳು ತಮ್ಮ ಭಾವೀ ದಾ೦ಪತ್ಯ ಜೀವನದಲ್ಲಿ ಸ೦ತಸದ ಹಾಗೂ ನೆಮ್ಮದಿಯ ಜೀವನವನ್ನು ನಡೆಸಲು ಸಮರ್ಥರಾಗುವರೆ೦ಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ನೀವು ನಿಮ್ಮ ವೈವಾಹಿಕ ಜೀವನವು ಸಫಲವಾಗಬೇಕೆ೦ದು ಬಯಸುವಿರಾದರೆ, ನಿಮ್ಮ ಹಾಗೂ ನಿಮ್ಮ ಬಾಳಸ೦ಗಾತಿಯ ಜಾತಕಗಳು ಕೂಡಿಬರುವುದು ಅತೀ ಮುಖ್ಯವಾಗಿರುತ್ತದೆ. ಯಾಕೆ೦ದರೆ, ವ್ಯಕ್ತಿಯೋರ್ವನ/ಳ ಸ್ವಭಾವವನ್ನು ಅವನ ಅಥವಾ ಅವಳ ಜಾತಕದ ಆಧಾರದ ಮೇಲೆ ಪ್ರತಿಪಾದಿಸಬಹುದಾಗಿದೆ.

ವರದಕ್ಷಿಣೆ
ಭಾರತೀಯ ಮದುವೆಗಳಲ್ಲಿ ವರದಕ್ಷಿಣೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಮ್ಮ ಮನೆಯ ಮಗಳು ಮದುವೆಯಾದ ನಂತರ ಇನ್ನೊಂದು ಮನೆಗೆ ಹೋಗುವ ಸಂದರ್ಭದಲ್ಲಿ ಅಲ್ಲಿ ಆಕೆಗೆ ಯಾವುದೇ ಕಷ್ಟಗಳು ಉಂಟಾಗಬಾರದು ಎಂಬ ನಿಯಮದಿಂದ ಉಳ್ಳವರು ವಧುವಿಗೆ ಬಳುವಳಿಯ ರೂಪದಲ್ಲಿ ಕೊಡುವ ಪದ್ಧತಿಯೇ ಇಂದು ವರದಕ್ಷಿಣೆಯಾಗಿದೆ. ಮುಂಚೆ ಈ ನಿಯಮ ಉಳ್ಳವರೂ ಇಲ್ಲದವರಿಗೂ ಸಮನಾವಾಗಿದ್ದು ಇತ್ತೀಚೆಗೆ ಕೈಲಾದಷ್ಟನ್ನು ವರದಕ್ಷಿಣೆಯ ರೂಪದಲ್ಲಿ ನೀಡಬಹುದಾಗಿದೆ.

ಸೌಂದರ್ಯ
ಮದುವೆಯೆಂಬ ಪವಿತ್ರ ಬಂಧನ ಏಳು ಜನ್ಮದ ನಂಟಿನಿಂದ ಕೂಡಿರುತ್ತದೆ ಎಂಬ ಮಾತಿದೆ. ಭೂಮಿಯಲ್ಲಿ ನಡೆಯುವ ಮುಂಚೆಯೇ ಸ್ವರ್ಗದಲ್ಲಿ ಮದುವೆಗಳು ನಡೆಯುತ್ತವೆ ಎಂಬ ಮಾತಿದ್ದು ಅಲ್ಲಿ ನಡೆದ ವಿವಾಹವೇ ಭೂಮಿಯ ಮೇಲೆ ಸಂಪ್ರದಾಯವಾಗಿ ನಡೆಯುತ್ತದೆಯಂತೆ. ವಿವಾಹವಾಗುವ ವಧು ವರರ ಈಡು ಜೋಡು ಚೆನ್ನಾಗಿರಬೇಕು ಎಂದಾದಲ್ಲಿ ಇಬ್ಬರಿಗೂ ಅವರವರ ಆಯ್ಕೆಯ ಮೇಲೆ ತೃಪ್ತಿ ಇರಬೇಕು. ಹುಡುಗಿ ನನಗಿಂತ ಸೌಂದರ್ಯದಲ್ಲಿ ಒಂದಿನಿತು ಕಡಿಮೆ ಹುಡುಗ ನನ್ನಷ್ಟೇನೂ ಚೆನ್ನಾಗಿಲ್ಲ ಎಂಬ ಭಾವನೆ ಇಬ್ಬರಲ್ಲೂ ಬರಬಾರದು. ಆದ್ದರಿಂದಲೇ ವಧು ವರರ ಅನ್ವೇಷಣೆಯಲ್ಲಿ ಸೌಂದರ್ಯದ ಪಾತ್ರ ಹಿರಿದಾದುದು.

ಆಭರಣಗಳು
ವಿವಾಹದಲ್ಲಿ ವಧು ಮತ್ತು ವರರಿಗೆ ಆಭರಣಗಳು ಹೆಚ್ಚಿನ ಸಿಂಗಾರವನ್ನು ತಂದುಕೊಡುತ್ತದೆ. ಇನ್ನು ವಧುವಂತೂ ತನಗಿಂತಲೂ ಹೆಚ್ಚು ತೂಕವುಳ್ಳ ಆಭರಣಗಳಿಂದ ಶೋಭಿತಳಾಗಿರುತ್ತಾಳೆ ಮತ್ತು ವಿವಾಹದಲ್ಲಿ ಆಕೆಯ ಆಭರಣಗಳ ಮೇಲೆಯೇ ಎಲ್ಲರ ಕಣ್ಣು ಬಿದ್ದಿರುತ್ತದೆ. ಹುಡುಗಿಗೆ ಎಷ್ಟು ಬಂಗಾರವನ್ನು ಹಾಕಿದ್ದಾರೆ ಎಂಬ ಮಾತಿಗಂತೂ ಭರವೇ ಇರುವುದಿಲ್ಲ.

ಆರ್ಥಿಕ ಸ್ಥಿತಿಗತಿ
ಇತ್ತೀಚಿನ ಆಧುನಿಕ ವಿವಾಹ ವ್ಯವಸ್ಥೆಯಲ್ಲಿ ವರ ಸಾಕಷ್ಟು ಸ್ಥಿತಿವಂತರಾಗಿದ್ದಾರೆಯೇ ಎಂಬುದನ್ನು ಕೂಲಂಕಷುವಾಗಿ ಪರಿಶೀಲಿಸಿ ವಿವಾಹಕ್ಕೆ ಮುಂದುವರಿಯುತ್ತಾರೆ. ಹೆಣ್ಣು ಚೆನ್ನಾಗಿ ಸಂಪಾದನೆ ಮಾಡುವವಳಾಗಿದ್ದರೆ ವರನ ವೇತನ ಆಕೆಯದ್ದಗಿಂತ ಹೆಚ್ಚಿಗೆ ಇರಬೇಕು ಎಂಬುದು ವಧು ಮತ್ತು ಆಕೆಯ ಮನೆಯವರ ಇಚ್ಛೆಯಾಗಿರುತ್ತದೆ. ವರನ ಆರ್ಥಿಕ ಅನುಕೂಲವನ್ನು ಚೆನ್ನಾಗಿ ಪರೀಕ್ಷಿಸಿಯೇ ಮುಂದಡಿಯಿಡುತ್ತಾರೆ.

ಕಣ್ಣೀರೇ ಪನ್ನೀರು
ತಾನು ಜನಿಸಿ ಬೆಳೆದ ಪರಿಸರವನ್ನು ಬಿಟ್ಟು ಬೇರೆ ಮನೆಗೆ ಹೊಸ ಪರಿಸರಕ್ಕೆ ಹೋಗುವಾಗ ಹೆಣ್ಣು ಕಣ್ಣೀರು ಹಾಕುವುದು ಸಹಜವೇ ಆಗಿರುತ್ತದೆ. ತಂದೆತಾಯಿಯ ವಾತ್ಸಲ್ಯ, ಸಹೋದರ ಸಹೋದರಿಯರ ಪ್ರೀತಿಯಿಂದ ತಾತ್ಕಾಲಿಕ ಬಿಡುಗಡೆಯನ್ನು ಹೊಂದಿ ಹೊಸ ಮನೆಯಲ್ಲಿ ತನ್ನ ಬಾಂಧವ್ಯವನ್ನು ಬೆಸೆಯಲು ವಧು ಸಿದ್ಧಳಾಗುವ ಸಂದರ್ಭದಲ್ಲಿ ಮನದಲ್ಲಿ ಮಡುಗಟ್ಟಿದ್ದ ದುಃಖ ಕಣ್ಣೀರಿನ ರೂಪದಲ್ಲಿ ಹೊರಹೋಗುತ್ತದೆ.

ಮದುವೆಯಾಯ್ತು ಮಕ್ಕಳು ಯಾವಾಗ
ಭಾರತೀಯ ವಿವಾಹ ಪದ್ಧತಿಯಲ್ಲಿ ಮದುವೆ ನಂತರ ಮಕ್ಕಳು ಎಂಬ ಬಾಂಧವ್ಯದ ವ್ಯವಸ್ಥೆ ಅಡಿಪಾಯದಂತಿರುತ್ತದೆ. ವಿವಾಹವಾದ ಒಂದೆರಡು ವರ್ಷಗಳೊಳಗೆ ಮಗುವನ್ನು ನೋಡುವ ಬಯಕೆ ಮನೆಯಲ್ಲಿರುವ ಹಿರಿಯರದ್ದಾಗಿರುತ್ತದೆ. ನೀವು ಸ್ವಲ್ಪ ವರ್ಷಗಳ ನಂತರ ಮಕ್ಕಳ ಯೋಚನೆ ಎಂಬ ನಿರ್ಧಾರದಲ್ಲಿದ್ದರೂ ಹಿರಿಯರು ಇದಕ್ಕೆ ಸಮ್ಮತಿಯನ್ನು ಸೂಚಿಸುವುದೇ ಇಲ್ಲ.

ಮನೆ
ಮದುವೆ, ಮಕ್ಕಳು ಇದಕ್ಕೂ ಮುನ್ನ ತಲೆಯ ಮೇಲೊಂದು ಸೂರು ಬೇಕೇ ಬೇಕು ಅಲ್ಲವೇ. ವಿವಾಹವೆಂದರೆ ಹೊಸ ಬಾಳ್ವೆಯ ಆರಂಭವಿದ್ದಂತೆ ಅದಕ್ಕಾಗಿ ಪ್ರತಿಯೊಂದೂ ಹೊಸ ರೂಪದಲ್ಲಿರಬೇಕು ಎಂಬ ಭಾವನೆ ಮನದಲ್ಲಿ ಕೂಡಿರುತ್ತದೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆಯೇ ಇದೆ.

ಸಂಸಾರ ಸಾಗರ
ವಿವಾಹದ ನಂತರ ನಮ್ಮದೇ ಪ್ರಪಂಚವೊಂದು ತೆರೆದುಕೊಳ್ಳುತ್ತದೆ. ಮಡದಿ, ಮನೆ, ಮಕ್ಕಳು ಎಂಬ ಬಾಂಧವ್ಯದ ಪರಿಸರ ನಿರ್ಮಾಣವಾಗುತ್ತದೆ. ಇವರಿಗೇ ಮೊದಲ ಆದ್ಯತೆ ಎಂಬ ಭಾವನೆ ನಮ್ಮ ಮನದಲ್ಲಿ ಮೂಡುತ್ತದೆ. ಅವರಿಗೆ ಇಷ್ಟವಾಗುವ ಸ್ಥಳಗಳು, ತಿಂಡಿತಿನಿಸುಗಳು, ಅವರೊಂದಿಗೆ ನಡೆಸುವ ಮೋಜು ಮನರಂಜನೆ ಹೀಗೆ ಅದು ಬೆಳೆಯುತ್ತಾ ಹೋಗುತ್ತದೆ.

ಜಾತಿ ವ್ಯವಸ್ಥೆ
ವಿವಾಹ ಸಂದರ್ಭದಲ್ಲಿ ಜಾತಿ ಪ್ರಮುಖವಾಗಿದೆ. ಒಂದೇ ಜಾತಿಯವರ ವಿವಾಹದಲ್ಲಿ ಅಷ್ಟೇನೂ ಪ್ರಶ್ನೆ ಉದ್ಭವವಾಗದೇ ಇದ್ದರೂ ವಧು ಮತ್ತು ವರ ಬೇರೆ ಬೇರೆ ಜಾತಿಯಾಗಿದ್ದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ. ಆದರೂ ಮನೆಯವರನ್ನು ಒಪ್ಪಿಸಿ ಈ ವಿವಾಹ ಕೂಡ ಸುಖಾಂತ್ಯವಾಗಿರುವ ಎಷ್ಟೋ ಘಟನೆಗಳು ನಡೆದಿದೆ. ಆದರೂ ವಿವಾಹ ಸಂದರ್ಭದಲ್ಲಿ ಜಾತಿಗೆ ಪ್ರಮುಖ ಆದ್ಯತೆಯನ್ನು ನೀಡುತ್ತಾರೆ.

ಮೊದಲ ರಾತ್ರಿಯ ಸಮ್ಮಿಲನ
ವಿವಾಹ ನಂತರ ಪ್ರಥಮ ರಾತ್ರಿ ತನ್ನದೇ ರಮ್ಯತೆಯನ್ನು ಒಳಗೊಂಡಿದೆ. ಹೆಣ್ಣುಗಂಡುಗಳು ದೈಹಿಕವಾಗಿ ಮಾನಸಿಕವಾಗಿ ಒಂದಾಗುವ ಶುಭ ಗಳಿಗೆ ಇದಾಗಿರುವುದರಿಂದ ಇದಕ್ಕೆ ಮೂಹೂರ್ತ ನೋಡುತ್ತಾರೆ. ಪ್ರಸ್ಥ ಶಾಸ್ತ್ರ ಎಂಬ ಸಂಪ್ರದಾಯವನ್ನೇ ಈ ದಿನದಂದು ಪಾಲಿಸುತ್ತಿದ್ದು ಅದಕ್ಕಾಗಿ ಶುಭ ಗಳಿಗೆಯನ್ನು ನೋಡುತ್ತಾರೆ.



Click it and Unblock the Notifications











