Latest Updates
-
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ!
ಗೋಮುಖ ವ್ಯಾಘ್ರನಂತೆ ವರ್ತಿಸುವ ಹುಡುಗರ ಬಗ್ಗೆ ಎಚ್ಚರದಿಂದಿರಿ!
ಓರ್ವ ಪುರುಷ ಸಭ್ಯನು ಹೌದೋ ಅಲ್ಲವೋ ಎಂದು ಕಂಡುಕೊಳ್ಳುವುದು ಪ್ರಥಮ ನೋಟಕ್ಕೆ ಗ್ರಾಹ್ಯವಾಗದ ವಿಷಯವಾಗಿದೆ. ಅದರಲ್ಲೂ ತಾನು ಪ್ರೀತಿಸುತ್ತಿರುವ ಪುರುಷ ಸಭ್ಯವ್ಯಕ್ತಿಯೆಂದು ಅರಿತುಕೊಳ್ಳುವುದು ಪ್ರತಿ ಮಹಿಳೆಗೂ ಅಗತ್ಯವಾಗಿದೆ. ಈ ಸಭ್ಯತನವೇ ಮುಂದಿನ ಜೀವನದ ಸಂತೋಷಕ್ಕೆ ಮತ್ತು ನೆಮ್ಮದಿಗೆ ಕಾರಣವಾಗಿದೆ. ಓತಿಕೇತನಂತೆ ಇಬ್ಬಗೆಯ ವ್ಯಕ್ತಿತ್ವವನ್ನು ಪ್ರಕಟಿಸುವ ಪುರುಷರನ್ನು ಕಂಡುಹಿಡಿಯುವುದು ಮಾತ್ರ ತುಂಬಾ ಕಷ್ಟ. ಇವರು ನಾಲ್ವರ ಎದುರು ಅತ್ಯಂತ ವಿನಯವನ್ನು ಪ್ರದರ್ಶಿಸಿ ತಮ್ಮ ಸಮಯ ಬಂದಾಗ ತಮ್ಮ ನೈಜ ಪೈಶಾಚಿಕ ವರ್ತನೆಯನ್ನು ಪ್ರಕಟಿಸುತ್ತಾರೆ.
ಇಂತಹವರನ್ನು ಮೊದಲು ಸರಿಯಾಗಿ ತಿಳಿದುಕೊಳ್ಳದೇ ಬಳಿಕ ಹಳಿದುಕೊಳ್ಳುವುದು 'ಎಲ್ಲಾ ನನ್ನ ಪಾಲಿಗೆ ಬಂದ ಕರ್ಮ' ಎಂದು ಪಾಡು ಪಡುವಂತಾಗುತ್ತದೆ. ಈ ಸಂಗಿಗ್ಧತೆಯಿಂದ ಪಾರಾಗಲು ಕೆಲವು ಸೂಚನೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಸಭ್ಯಪುರುಷನ ಲಕ್ಷಣಗಳು, ವರ್ತನೆ ಮೊದಲಾದವುಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಇವುಗಳನ್ನು ಅನುಸರಿಸಿ ನೀವು ಪ್ರೀತಿಸುತ್ತಿರುವ ಪುರುಷ ನಿಜವಾಗಿಯೋ ಸಭ್ಯನೇ ಎಂದು ಪರಿಗಣಿಸಲು ಸಾಧ್ಯವಾಗುತ್ತದೆ. ತಾಯಿ-ಪತ್ನಿ ಜಗಳ: ಪರಿಸ್ಥಿತಿಯನ್ನು ಹತೋಟಿಗೆ ತರುವುದು ಹೇಗೆ?

ಸಭ್ಯ ಪುರುಷ ಎಂದಿಗೂ ಚುಂಬನದೊಂದಿಗೆ ನಿಮ್ಮನ್ನು ಬೀಳ್ಕೊಡುತ್ತಾನೆ
ಸಭ್ಯ ಪುರುಷ ಎಂದಿಗೂ ತನ್ನ ಮನದನ್ನೆಯನ್ನು ತನ್ನ ಹೃದಯದ ಹೂವಿನಂತೆ ಪರಿಗಣಿಸುತ್ತಾನೆ ಹಾಗೂ ಅತ್ಯಂತ ಕಾಳಜಿಯನ್ನು ವ್ಯಕ್ತಪಡಿಸುತ್ತಾನೆ. ಇದಕ್ಕೆ ಪುರಾವೆ ಎಂದರೆ ಪ್ರತಿಬಾರಿಯೂ ನಿಮ್ಮಿಂದ ಬೀಳ್ಕೊಂಡಾಗ ನಿಮ್ಮತ್ತ ಹಸನ್ಮುಖಿಯಾಗಿ ಹೂಮುತ್ತು ಅಥವಾ ಗಾಳಿಯಲ್ಲಿ ಮುತ್ತೊಂದನ್ನು ಹಾರಿಸಿ ಕೈಯಾಡಿಸುತ್ತಾ ಮುಂದೆ ತೆರಳುತ್ತಾನೆ. ಇದರಲ್ಲಿ ಒಂದಾದರೂ ನಾಟಕೀಯ ಅಂಶವಿದ್ದರೆ ಕೆಲವು ಭೇಟಿಗಳಲ್ಲಿಯೇ ಅದನ್ನು ನೀವು ಖಂಡಿತಾ ಗಮನಿಸಲು ಸಾಧ್ಯವಾಗುತ್ತದೆ. ಏಕೆಂದರೆ ನಾಟಕೀಯವಾದ ಮುತ್ತು ಪ್ರತಿಬಾರಿ ಒಂದೇ ತೆರನಾಗಿರುವುದಿಲ್ಲ!
ಭೂತಕಾಲವನ್ನು ಒಪ್ಪಿ, ಇಂದಿನ ದಿನವನ್ನು ಪ್ರೀತಿಸಿ ಭವಿಷ್ಯದ ದಿನಗಳಿಗೆ ಬೆಂಬಲ ನೀಡುತ್ತಾನೆ
ಪ್ರತಿ ಮನುಷ್ಯರಿಂದಲೂ ತಪ್ಪಾಗುತ್ತವೆ. ಹಿಂದಿನ ದಿನಗಳ ತಪ್ಪುಗಳನ್ನು ಒಪ್ಪಿಕೊಂಡು ಇಂದಿನ ದಿನಗಳ ಬಗ್ಗೆ ಚಿಂತಿಸುವ ಮತ್ತು ಕ್ರಿಯಾಶೀಲರಾಗಿರುವ ವ್ಯಕ್ತಿ ಸಭ್ಯನೆಂದು ಪರಿಗಣಿಸಬಹುದು. ಇವರು ಭವಿಷ್ಯದ ಬಗ್ಗೆ ನಿಮಗಿರುವ ಕನಸುಗಳನ್ನು ತಮ್ಮದೇ ಕನಸುಗಳೆಂಬಂತೆ ಪರಿಗಣಿಸಿ ಇದೇ ನಿಟ್ಟಿನಲ್ಲಿ ತಮ್ಮ ಯೋಚನೆಗಳನ್ನು ಹರಿಯಬಿಡುವುದು ನಿಮಗೆ ಭವಿಷ್ಯದ ದಿನಗಳಲ್ಲಿ ಭದ್ರತೆಯ ಭಾವನೆಯನ್ನು ಮೂಡಿಸುತ್ತದೆ. ಬದಲಾಗಿ ನಿನ್ನೆಯ ಚಿಕ್ಕಪುಟ್ಟ ತಪ್ಪುಗಳನ್ನೇ ದೊಡ್ಡದಾಗಿಸಿ ನಿಮ್ಮನ್ನು ಪ್ರಶ್ನಿಸುತ್ತಾ ಹೋಗುವುದು ಸಭ್ಯವ್ಯಕ್ತಿಯ ಲಕ್ಷಣವಲ್ಲ. ವೈವಾಹಿಕ ಜೀವನದಲ್ಲಿ ಹುಳಿಹಿಂಡುವ ಅಹಂಗೆ ಮುಕ್ತಿ ಹೇಗೆ?
ಯಾವಾಗ ಮಾತನಾಡಬೇಕೆಂದು, ಯಾವಾಗ ನಗಬೇಕೆಂದು ಅರಿತಿರುವವನಾಗಿದ್ದಾನೆ
ಸಾಮಾನ್ಯವಾಗಿ ಮಹಿಳೆಯರು ಹೆಚ್ಚು ಮಾತುಗಾರರು ಎಂದು ಹೇಳುತ್ತಾರೆ. ಆದರೆ ಪ್ರತಿ ಮಹಿಳೆಯೂ ತಾನು ಮಾತನಾಡುತ್ತಿರುವಾಗ ತನ್ನ ಪುರುಷ ಅದನ್ನು ಪೂರ್ತಿಯಾಗಿ ಆಲಿಸಬೇಕು ಎಂದು ಬಯಸುತ್ತಾಳೆ. ಸಭ್ಯ ವ್ಯಕ್ತಿ ಎಂದಿಗೂ ನಿಮ್ಮನ್ನು ಸ್ವತಂತ್ರವಾಗಿ ಮಾತನಾಡಲು ಬಿಟ್ಟು ನಿಮ್ಮ ಎಲ್ಲಾ ಮಾತುಗಳನ್ನು ಗಮನವಿಟ್ಟು ಆಲಿಸುತ್ತಾನೆ. ಅದರಲ್ಲಿ ನಗಬೇಕಾದ ವಿಷಯವಿದ್ದಲ್ಲಿ ಮನಃಪೂರ್ವಕವಾಗಿ ನಗುತ್ತಾನೆ ಹಾಗೂ ಯಾವಾಗ ತನ್ನ ಅಭಿಪ್ರಾಯವನ್ನು ಕೇಳಲಾಯಿತೋ ಆಗ ತನ್ನ ಮಾತನ್ನಾಡುತ್ತಾನೆ.
ಎಂದಿಗೂ ನಿಮ್ಮ ಮಾತನ್ನು ತುಂಡರಿಸುವುದಿಲ್ಲ ಹಾಗೂ ನಿಮ್ಮ ಮಾತಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಒಂದು ವೇಳೆ ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ ಆತನ ಅಭಿಪ್ರಾಯವಿದ್ದರೆ ಎಂದಿಗೂ ಥಟ್ಟನೇ ಎದುರಾಡುವುದಿಲ್ಲ. ಬದಲಿಗೆ ನಿಮ್ಮ ಅಭಿಪ್ರಾಯದ ಸಾಧಕ ಬಾಧಕಗಳನ್ನು ವಿವರಿಸಿ ಇದಕ್ಕಿಂತ ಉತ್ತಮವಾದುದು ಹೀಗಿದ್ದರೆ ಹೇಗೆ ಎಂದು ತನ್ನ ಅಭಿಪ್ರಾಯವನ್ನು ಮಂಡಿಸಿ ನಿಮ್ಮ ಪರಿಗಣನೆಗೆ ಬಿಡುತ್ತಾನೆ. ಇದು ಓರ್ವ ಸಭ್ಯ ವ್ಯಕ್ತಿಯ ಸದ್ಗುಣವಾಗಿದೆ. ಕೆಲವೊಮ್ಮೆ ಆತನ ನಗುಮೊಗವೇ ಇಡಿಯ ದಿನವನ್ನು ಉಲ್ಲಸಿತವಾಗಿಡಲು ಸಾಕಷ್ಟಾಗುತ್ತದೆ.
ಸಭ್ಯ ವ್ಯಕ್ತಿ ನಿಮಗಾಗಿ ಕಾಯಬಲ್ಲ
ಒಂದು ವೇಳೆ ನೀವು ಪ್ರೀತಿಸುತ್ತಿರುವ ವ್ಯಕ್ತಿ ನಿಮ್ಮನ್ನೂ ಅಷ್ಟೇ ಪ್ರೀತಿಸುತ್ತಿದ್ದರೆ ಅದಕ್ಕಾಗಿ ತನ್ನ ಸಮಯವನ್ನೂ ವ್ಯಯಿಸಬಲ್ಲ. ನಿಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸುವವರೆಗೆ ಮದುವೆ ಬೇಡ ಅಥವಾ ಈ ತೊಂದರೆ ಮುಗಿಯುವವರೆಗೆ ಮದುವೆಯಾಗಲಾರೆ, ಇಂದು ಭೇಟಿಯಾಗಲು ಸಾಧ್ಯವಿಲ್ಲ ಮೊದಲಾದ ನಿಮ್ಮ ಕೋರಿಕೆಗಳಿಗೆ ಆತ ತನ್ನ ಒಪ್ಪಿಗೆ ನೀಡಿ ಕ್ಲುಪ್ತ ಸಮಯದವೆರೆಗೂ ಕಾಯಬಲ್ಲ. ನೀವೇ ನೀಡುವ ತನಕ ಆತ ಅಪೇಕ್ಷಿಸಿದ ಒಂದು ಮುತ್ತನ್ನು ಪಡೆಯಲೂ ಆತ ಕಾಯಬಲ್ಲ. ನಿಮಗಾಗಿ ಕಾಯುವುದು ಓರ್ವ ಸಭ್ಯವ್ಯಕ್ತಿಯ ಸದ್ಗುಣವಾಗಿದೆ. ಗಂಡ-ಹೆಂಡತಿ ಸಂಬಂಧಕ್ಕೆ ಹುಳಿ ಹಿಂಡುವ 'ಮಾತ್ಸರ್ಯದ' ಸೂಚನೆಗಳೇನು?
ಪ್ರತಿಬಾರಿಯೂ ಮೊದಲಬಾರಿಯಂತೆಯೇ ಚುಂಬಿಸಬಲ್ಲ
ಪ್ರಥಮ ಚುಂಬನ ಮತ್ತೇರಿಸುವಂತಿರುತ್ತದೆ. ಬಳಿಕ ನೀಡಿದ ಚುಂಬನಗಳಲ್ಲಿ ಆ ಅನುಭವವಿರುವುದಿಲ್ಲ ಎಂದು ಹಲವರು ಗೊಣಗುತ್ತಾರೆ. ಆದರೆ ಚುಂಬನ ಎಂದರೆ ಕೇವಲ ತುಟಿಗೆ ತುಟಿ ಅಥವಾ ಕೆನ್ನೆಗೆ ತಾಕಿಸುವುದಲ್ಲ, ಅದು ಹೃದಯಾಳದಿಂದ ಬರುವ ಒಂದು ಅನುಭೂತಿಯಾಗಿದೆ. ಚುಂಬನವೆಂದರೆ ಪ್ರಿಯತಮ 'ನಾನು ನಿನ್ನನ್ನು ನನ್ನ ಹೃದಯದಾಳದಿಂದ ಪ್ರೀತಿಸುತ್ತೇನೆ' ಎಂದು ಪದಗಳಿಲ್ಲದೇ ಹೇಳುವ ಒಂದು ಭಾವವಾಗಿದೆ. ಈ ಭಾವವೇ ಚುಂಬನದಲ್ಲಿ ಮತ್ತೇರಿಸಲು ಕಾರಣವಾಗಿದೆ. ಅಂತೆಯೇ ಪ್ರತಿ ಚುಂಬನವೂ ಮೊದಲಿನ ಚುಂಬನದಷ್ಟೇ ಮತ್ತೇರಿಸುವಂತಿದ್ದರೆ ಆ ವ್ಯಕ್ತಿ ಅತ್ಯಂತ ಸಭ್ಯನಾಗಿದ್ದು ನಿಮ್ಮನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾರೆ ಎಂದು ಪರಿಗಣಿಸಬಹುದು. ಈ ವ್ಯಕ್ತಿಯನ್ನು ನಿಮ್ಮ ಜೀವನಸಂಗಾತಿಯಾಗಿ ಆರಿಸಲು ನಿಮಗೆ ನೆರವು ನೀಡುವುದು.



Click it and Unblock the Notifications













