Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ತಮಿಳು ನಟ ಜಯಂ ರವಿ ವಿಚ್ಛೇದನ: ಗಂಡನಾಗಿ ನೂರಕ್ಕೆ ನೂರು ಮಾರ್ಕ್ಸ್ ಕೊಡ್ತೀನಿ ಎಂದಿದ್ದರು ಪತ್ನಿ
ತಮಿಳು ನಟ ಜಯಂ ರವಿ ವಿಚ್ಛೇದನ ಸುದ್ದಿ ಕಾಲಿವುಡ್ ಇಂಡಸ್ಟ್ರಿಯನ್ನು ಅಚ್ಚರಿಗೊಳಿಸಿದೆ. 15 ವರ್ಷೆದ ದಾಂಪತ್ಯ, ಇದುವರೆಗೆ ಹೊರ ಜಗತ್ತಿಗೆ ತುಂಬಾ ಸುಂದರವಾಗಿ ಕಾಣಿಸಿದ್ದ ಆ ಕುಟುಂಬ ಇಂದು ನಾನೊಂದು ತೀರ ನೀನೊಂದು ತೀರ ಎಂದು ಬಿರುಗಾಳಿಗೆ ಸಿಕ್ಕ ನೌಕೆಯಂತೆ ಛಿದ್ರವಾಗಿರುವುದನ್ನು ನೋಡಿ ಅಚ್ಚರಿಯಾಗುವುದು. ಇತ್ತೀಚಿನ ವರ್ಷಗಳಲ್ಲಿ ಇಂಥ ಡಿವೋರ್ಸ್ ಪ್ರಕರಣಗಳ ಬಗ್ಗೆ ಕೇಳುವಾಗಲೇ ಮದುವೆ ಜೀವನದ ಬಗ್ಗೆ ಕೆಲವರಿಗೆ ಭಯ ಉಂಟಾಗುವುದು ಎಂದು ಯುವ ಜನಾಂಗ ಹೇಳುತ್ತಿದೆ.

ಒಂದು ಜೋಡಿಯನ್ನು ನೋಡಿ, ಅವರ ಪೋಸ್ಟ್‌ಗಳನ್ನು ಅಹಾ ಎಂಥ ಸುಂದರ ಬಾಂಧವ್ಯ, ಇವರಂತೆ ಬದುಕಬೇಕು ಎಂದು ಯೋಚಿಸಿದ ಅಭಿಮಾನಿಗಳಿಗೆ ವಿಚ್ಚೇದನದ ಸುದ್ದಿ ಬರುತ್ತಿದ್ದಂತೆ ಅದನ್ನು ತೆಗೆದುಕೊಳ್ಳಲು ಕಷ್ಟವಾಗುವುದು, ಜಯಂ ರವಿ ವಿಷಯದಲ್ಲಿ ಈಗ ಅವರ ಅಭಿಮಾನಿಗಳಿಗೆ ಅದೇ ಆಗುತ್ತಿದೆ. ಇದುವರೆಗೆ ಈ ಜೋಡಿಯ ಪೋಸ್ಟ್ ನೋಡಿ ಎಂಥ ಕ್ಯೂಟ್ ಜೋಡಿ ಅಂದುಕೊಂಡಿದ್ದರು, ಆದರೆ ಅದೆಲ್ಲಾ ಕೇವಲ ಪೋಸ್ಟ್‌ಗಾಗಿ ಹಾಕುವ ಪದಗಳು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಜಯಂ ರವಿ- ಆರತಿ ವಿಚ್ಚೇದನ ಸುದ್ದಿ ಹೊರ ಬರುತ್ತಿದ್ದಂತೆ ತುಂಬಾನೇ ಬೇಸರ ವ್ಯಕ್ತ ಪಡಿಸುತ್ತಿರುವ ಅಭಿಮಾನಿಗಳು
ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆ ಇರಬೇಕು, ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ, ಇದು ನಿಮ್ಮ ವೈಯಕ್ತಿಕ ಜೀವನ, ಇದರ ಬಗ್ಗೆ ಹೇಳುವ ಹಕ್ಕು ನನಗಿಲ್ಲ, ಆದರೂ ಇದು ತುಂಬಾ ಬೇಸರ ತಂದಿದೆ ಎಂದು ಕಮೆಂಟ್ ಮಾಡಿದರೆ ಇನ್ನೊಬ್ಬರು ಇವರೆಲ್ಲಾ ಸೋಷಿಯಲ್ ಮಿಡಿಯಾದಲ್ಲಿ ಹಾಕುವುದು ಬರಿ ಸುಳ್ಳು (ತುಂಬಾನೇ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಪೋಸ್ಟ್‌ಗಳು), ಅವೆಲ್ಲಾ ಪೋಸ್‌ಗಳಷ್ಟೇ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬರು ದಂಪತಿಗಳ ಫೋಟೋ ನೋಡಿ ಲೈಕ್ ಬಟನ್ ಒತ್ತಲು ಭಯವಾಗುತ್ತೆ ಎಂದು ಕಮೆಂಟ್ ಮಾಡಿದ್ದಾರೆ.
ಗಂಡನಿಗೆ ನೂರಕ್ಕೆ ನೂರು ಮಾರ್ಕ್ ಕೊಡುತ್ತೇನೆ ಎಂದು ಹೇಳಿದ್ದರು
ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಂರವಿ ಹಾಗೂ ಆರತಿ ಬಳಿ ಅವರ ಜೀವನದ ಬಗ್ಗೆ ಆ ಕಾರ್ಯಕ್ರಮದ ನಿರೂಪಕರು ಕೇಳಿದ್ದರು, ಆವಾಗ ಆರತಿ ಗಂಡನಾಗಿ ಜಯಂರವಿಗೆ ನೂರಕ್ಕೆ ನೂರು ಮಾರ್ಕ್ಸ್ ಕೊಡುತ್ತೇನೆ ಎಂದು ಹೇಳಿದ್ದರು, ಅಲ್ಲದೆ ತಾನು ಗರ್ಭಿಣಿಯಾಗಿದ್ಧಾಗ ಜಯಂರವಿ ನೋಡಿಕೊಂಡ ರೀತಿ, ಸಿ ಸೆಕ್ಷನ್‌ಗೆ ನನ್ನನ್ನು ಕರೆದುಕೊಂಡು ಹೋದಾಗ ಜಯಂರವಿ ತಲೆಸುತ್ತಿ ಬಿದ್ದಿದ್ದರು ಎಂದು ಹೇಳುವಾಗ ಅವರಿಬ್ಬರ ಬಾಂಧವ್ಯ ಎಷ್ಟೊಂದು ಗಟ್ಟಿಯಾಗಿದೆ ಎಂದನಿಸಿತ್ತು, ಆದರೆ ಅಷ್ಟೊಂದು ಚೆನ್ನಾಗಿದ್ದ ದಂಪತಿ ನಡುವೆ ಏನಾಯ್ತು, ವಿಚ್ಛೇದನಂಥ ಕಠಿಣ ನಿರ್ಧಾರ ಏಕೆ ತೆಗೆದುಕೊಂಡರು ಎಂಬುವುದೇ ಅವರ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
15 ವರ್ಷದ ದಾಂಪತ್ಯ ಜೀವನ, ಇಬ್ಬರು ಮಕ್ಕಳು
ಇವರು ಮದುವೆಯಾಗಿ 15 ವರ್ಷ ಆಗಿದೆ, ಇಬ್ಬರು ಗಂಡು ಮಕ್ಕಳಿದ್ದಾರೆ. ಈಗ ಇಬ್ಬರು ದೂರ ದೂರಾಗಿದ್ದಾರೆ. ಆರತಿ ತನ್ನ ಇನ್‌ಸ್ಟಾ ಖಾತೆಯಲ್ಲಿ ಆರತಿ ರವಿ ಎಂದೇ ಇನ್ನೂ ಇಟ್ಟಿದ್ದಾರೆ, ಅದರೆ ಜಯಂರವಿಯವರ ಒಂದೂ ಫೋಟೋವು ಅವರ ಇನ್‌ಸ್ಟಾಖಾತೆಯಲ್ಲಿಲ್ಲ, ಜಯಂ ರವಿಯವರ ಖಾತೆಯಲ್ಲಿ ಈ ಜೋಡಿಯ ಅದ್ಭುತ ಕ್ಯಾಪ್ಷನ್‌ನಂಥ ಫೋಟೋಗಳನ್ನು ಕಾಣಬಹುದು.
ಮದುವೆ ಬಂಧ ಕಾಪಾಡಿಕೊಳ್ಳಲು ಇಬ್ಬರೂ ಪ್ರಯತ್ನ ಹಾಕಬೇಕು, ಆದರೆ ಮಾತ್ರ ವೈವಾಹಿಕ ಬದುಕು ಚೆನ್ನಾಗಿರುತ್ತದೆ. ಯಾರೋ ಫೋಟೋ ಹಾಕಿ ಒಂದೊಳ್ಳೆ ಕ್ಯಾಪ್ಷನ್ ನೀಡಿದರು ಎಂದು ಅಯ್ಯೋ ಅವರ ಬದುಕು ಎಷ್ಟು ಚೆನ್ನಾಗಿದೆ, ನಮ್ಮ ಬದುಕು ಹೀಗೆ ಇಲ್ಲ ಎಂದು ಕೊರಗುವ ಬದಲಿಗೆ ಇರುವ ಬದುಕನ್ನು ಸುಂದರವಾಗಿಸುವ ಪ್ರಯತ್ನ ಮಾಡಿದ್ದಾರೆ.



Click it and Unblock the Notifications
