Latest Updates
-
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ!
ಸಿಂಗಲ್ಸ್‌ಗಳಿಗಾಗಿ ಡೇಟಿಂಗ್ ಆಪ್ ತೆರೆದ ಸರ್ಕಾರ..! ಏನಿದರ ವಿಶೇಷ..!
ಜಗತ್ತಿನಲ್ಲಿ ಯಾವೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ನಾವು ಕೇಳಿರುತ್ತೇವೆ. ಬಡತನ, ಅರ್ಥ ವ್ಯವಸ್ಥೆ ಸಮಸ್ಯೆ, ನಿರುದ್ಯೋಗ, ಸಾಲ ಹೀಗೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತೆ. ಆದ್ರೆ ಇತ್ತಿಚಿನ ದಿನಗಳಲ್ಲಿ ಈ ಸಮಸ್ಯೆಗಳ ನಡುವೆ ಕೆಲವು ವಿಚಿತ್ರ ಸಮಸ್ಯೆಗಳು ಸಹ ಈಗ ರಾಷ್ಟ್ರಗಳ ಕಾಡಲು ಆರಂಭಿಸಿವೆ.
ಅಂತಹ ಸಮಸ್ಯೆಗಳಲ್ಲಿ ಜನನ ಪ್ರಮಾಣ ಕನಿಷ್ಟ ಮಟ್ಟಕ್ಕೆ ಇಳಿಯುವುದು ಸಹ ಒಂದಾಗಿದೆ. ನಾವು ಚೀನಾವನ್ನು ಉದಾಹರಣೆಯಾಗಿ ನೋಡುವುದಾದರೆ ಅಲ್ಲಿ ಯುವ ಜನಾಂಗದ ಸಂಖ್ಯೆ ಇಲ್ಲದಾಗಿ, ವೃದ್ಧ ಸಮುದಾಯದ ಸಂಖ್ಯೆ ಹೆಚ್ಚಾಗುತ್ತಿರುವ ಸಮಸ್ಯೆ ಎದುರಾಗಿದೆ.

ಅದ್ರೆ ಜಪಾನ್ ಎಂಬ ಪುಟ್ಟ ದ್ವೀಪರಾಷ್ಟ್ರದಲ್ಲಿ ಈ ಜನನ ಪ್ರಮಾಣ ಕನಿಷ್ಟ ಮಟ್ಟಕ್ಕೆ ಇಳಿದಿರುವ ಸಮಸ್ಯೆ ಕಾಡುತ್ತಿದೆ. ಅಲ್ಲಿ ಜನಸಂಖ್ಯೆ ಹೆಚ್ಚಿಸಲು ಸರ್ಕಾರ ಹಲವು ರೀತಿಯ ಕ್ರಮ ಕೈಗೊಂಡಿದೆ. ಅದರಲ್ಲಿ ಈಗ ಹೊಸದಾಗಿ ಸರ್ಕಾರವೇ ಡೇಟಿಂಗ್ ಆಪ್ ಹೊರತಂದಿದೆ.
123.9 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಜಪಾನ್‌ನಲ್ಲಿ ಕಳೆದ ವರ್ಷ ಕೇವಲ 727,277 ಜನನಗಳು ದಾಖಲಾಗಿವೆ, ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯದ ಅಂಕಿಅಂಶಗಳು ಬಹಿರಂಗಗೊಂಡಿವೆ. ಜನನ ಪ್ರಮಾಣ 1.26 ರಿಂದ 1.20 ಕ್ಕೆ ಕುಸಿತ ಕಂಡಿದೆ.
ಇದರ ಜೊತೆಗೆ ದೇಶದ ಬಹುತೇಕ ಜನಸಂಖ್ಯೆ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಹೀಗಾಗಿ ಸರ್ಕಾರವೇ ಈಗ ಸಿಂಗಲ್ಸ್‌ಗಳಿಗಾಗಿ ಡೇಟಿಂಗ್ ಆಪ್ ಪರಿಚಯಿಸಿದೆ. ಜನನ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯ ಸಾವುಗಳು, ಜಪಾನ್ ಕುಗ್ಗುತ್ತಿರುವ ಜನಸಂಖ್ಯೆಯನ್ನು ಎದುರಿಸುತ್ತಿದೆ, ಅದರ ಕಾರ್ಯಪಡೆ, ಆರ್ಥಿಕತೆ ಮತ್ತು ಸಾಮಾಜಿಕ ರಚನೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ.
2023 ರಲ್ಲಿ ಮಾತ್ರ, ರಾಷ್ಟ್ರವು 1.57 ಮಿಲಿಯನ್ ಸಾವುಗಳಿಗೆ ಸಾಕ್ಷಿಯಾಗಿದೆ, ಇದು ಜನನ ಪ್ರಮಾಣಕ್ಕಿಂತಲೂ ದುಪ್ಪಟ್ಟು ಪ್ರಮಾಣ ಹೊಂದಿದೆ. ಕಳೆದ ವರ್ಷ 30,000 ವಿವಾಹಗಳು ವಿಚ್ಛೇದನದ ಹೆಚ್ಚಳದೊಂದಿಗೆ ಗಮನಾರ್ಹ ಇಳಿಕೆಯಾಗಿದ್ದರೆ, ವಿವಾಹಗಳು ಸಹ ಕಡಿಮೆಯಾಗಿವೆ ಎಂದು ವರದಿಯಾಗಿದೆ.
ಈ ಸಮಸ್ಯೆಗಳ ಮನಗಂಡ ಸರ್ಕಾರ ಜನನ ಪ್ರಮಾಣ ಏರಿಸಲು ಮುಂದಾಗಿದೆ. ಈ ಕಾರಣದಿಂದಾಗಿ ಯುವ ಜನರನ್ನು ಸೆಳೆಯುವ ಉದ್ದೇಶದಿಂದಾಗಿ ಸರ್ಕಾರವೇ ಹೊಸದಾಗಿ ಡೇಟಿಂಗ್ ಆಪ್ ತೆರೆದಿದೆ. ಈ ಡೇಟಿಂಗ್ ಆಪ್ ಮೂಲಕ ಯುವಕ ಹಾಗೂ ಯುವತಿಯರು ಮದುವೆಯ ವರೆಗೂ ಸಂಬಂಧ ಬೆಸೆಯಲು ಹಾಗೂ ಭವಿಷ್ಯದಲ್ಲಿ ಮಕ್ಕಳನ್ನು ಹೊಂದಲು ಪ್ರೇರೇಪಿಸಲಿದೆಯಂತೆ.
18 ವರ್ಷ ಮೇಲ್ಪಟ್ಟವರಿಗೆ ಈ ಆಪ್ ಸಹಾಯದಿಂದ ತಮ್ಮ ನೆಚ್ಚಿನ ಪ್ರೇಯಸಿ ಅಥವಾ ಪ್ರಿಯಕರನನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದೇ ಆಪ್‌ನಲ್ಲಿ ಕೆಲಸ-ಜೀವನದ ಸಮತೋಲನ, ಶಿಶುಪಾಲನಾ ಮತ್ತು ವಸತಿ, ಹಾಗೆಯೇ ಜವಾಬ್ದಾರಿಗಳು ಮತ್ತು ವೃತ್ತಿ ಸಮಾಲೋಚನೆಯಲ್ಲಿ ಪುರುಷರ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಸಹ ಸೇರಿದೆಯಂತೆ.
ಸದ್ಯ ಈ ಆಪ್ ಜಪಾನ್‌ನಲ್ಲಿ ಯುವ ಜನರ ಸೆಳೆಯುತ್ತಿದೆ. ಇಷ್ಟು ದಿನ ಜೋಡಿ ಸಿಗದೆ ಸಿಂಗಲ್ ಆಗಿದ್ದ ಮಂದಿ ಈ ಆಪ್ ಮೂಲಕ ಜೋಡಿ ಹುಡುಕಲು ಮುಂದಾಗಿದ್ದಾರೆ. ಆದರೆ ಸರ್ಕಾರದ ಒಂದಿಷ್ಟು ನಿಯಮಗಳು ಸಹ ಈ ಆಪ್‌ಗೆ ಇರಲಿದ್ದು, ಇದೇ ರೀತಿಯ ಜನನ ಪ್ರಮಾಣದ ಸಮಸ್ಯೆ ಎದುರಿಸುತ್ತಿರುವ ದೇಶಗಳು ಸಹ ಈ ಯೋಜನೆ ಮೇಲೆ ಕಣ್ಣಿಟ್ಟಿವೆ.
ಜಪಾನ್‌ನ ಸುಮಾರು 70% ಅರಣ್ಯ ಮತ್ತು ಪರ್ವತಗಳಿಂದ ಮಾಡಲ್ಪಟ್ಟಿದೆ, ಅದು ಕೃಷಿ ಅಥವಾ ವಾಸಿಸಲು ಸೂಕ್ತವಲ್ಲದ ಭೂಮಿಯೇ ಹೆಚ್ಚಾಗಿದ್ದು, ಜನರು ಬೇರೆ ಬೇರೆ ದೇಶಗಳತ್ತ ಮುಖ ಮಾಡಿದ್ದಾರೆ. ಇದರ ಜೊತೆಗೆ ಯಾವಾಗಲು ಭೂಕಂಪನದ ಆತಂಕ ಎದುರಾಗುವುದರಿಂದ ಅಲ್ಲಿ ಜನರು ನೆಲೆಸಲು ಇಷ್ಟಪಡುತ್ತಿಲ್ಲ. ಅದರಲ್ಲೂ ಹೆಚ್ಚಾಗಿ ಯುವ ಸಮುದಾಯ ವೃತ್ತಿ ಅರಸಿ ಬೇರೆ ಬೇರೆ ದೇಶಗಳತ್ತ ವಲಸೆ ಹೋಗುತ್ತಿದ್ದಾರೆ.



Click it and Unblock the Notifications