Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಂಗಾತಿ ಮೋಸ ಮಾಡಿದರೆ ಸೆಕೆಂಡ್ ಛಾನ್ಸ್ ಕೊಟ್ಟರೆ ಎಲ್ಲವೂ ಮೊದಲಿನಂತಾಗುವುದೇ? ಯಾವಾಗ ಕೊಡಬಹುದು, ಯಾರಿಗಲ್ಲ!
ಅವರು ನನಗೆ ಮೋಸ ಮಾಡಿದ್ದಾರೆ, ತಪ್ಪಾಯ್ತು ಎಂದು ಕೇಳುತ್ತಿದ್ದಾರೆ ಸೆಕೆಂಡ್ ಛಾನ್ಸ್ ಕೊಡುವುದೇ? ಈ ರೀತಿ ಹಲವಾರು ಜನರು ಕೇಳಿದ್ದಾರೆ. ಸೆಕೆಂಡ್ ಛಾನ್ಸ್ ಕೊಡುವುದು ಸರಿಯೇ? ಕೊಟ್ಟರೆ ಸರಿಯಾಗಿ ಬಾಳುತ್ತಾರಾ? ಯಾವಾಗ ಕೊಡಬೇಕು, ಯಾವ ಲಕ್ಷಣಗಳು ಕಂಡು ಬಂದರೆ ಅಂಥ ವ್ಯಕ್ತಿಯನ್ನು ನಂಬದೇ ಇರುವುದು ಒಳ್ಳೆಯದು ಎಂದು ನೋಡೋಣ ಬನ್ನಿ:

ಸಂಬಂಧದಲ್ಲಿ ಮುಖ್ಯವಾಗಿ ಬೇಕಾಗಿರುವುದೇ ನಿಯತ್ತು, ನಂಬಿಕೆ
ಇಬ್ಬರು ಜೊತೆಯಾಗಿ ಬಾಳ್ವೆ ಮಾಡ್ತಾ ಇದ್ದೀವಿ ಅಂದರೆ ಅಲ್ಲಿ ನಂಬಿಕೆ ತುಂಬಾನೇ ಮುಖ್ಯವಾಗಿರುತ್ತದೆ, ನಮ್ಮ ನಂಬಿಕೆಗೆ ಮೋಸ ಆಯ್ತೆಯೆಂದರೆ ಅವರ ಜೊತೆ ಬಾಳುವುದು ಕಷ್ಟ, ಅವರ ಬಗ್ಗೆ ಸಂಶಯ ಕಾಡುತ್ತೆ, ಅವರು ಏನು ಹೇಳಿದರೂ ಸಂಶಯದ ಕಣ್ಣಿನಿಂದಲೇ ನೋಡುತ್ತೇವೆ, ಪ್ರೀತಿ ಇರಲ್ಲ, ಜೊತೆಗೆ ಇರಬೇಕು ಎಂಬ ಕಾರಣಕ್ಕೆ ಅಥವಾ ಮಕ್ಕಳಿದ್ದಾರೆ ಅವರಿಗೋಸ್ಕರ ಎಲ್ಲ ಸಹಿಸಬೇಕು ಎಂದು ಬಾಳ್ವೆ ಮಾಡುವವರು ತುಂಬಾ ಇದ್ದಾರೆ. ಅಂಥ ಸಂಬಂಧದಲ್ಲಿ ಪ್ರೀತಿ, ನಂಬಿಕೆ ದೂರಾಗಿರುತ್ತದೆ, ಭಾವನಾತ್ಮಕ ಬೆಸುಗೆ ಇರಲ್ಲ, ಬದುಕು ಯಾಂತ್ರಿಕವಾಗುವುದು.
ಸಂಗಾತಿ ನಿಮಗೆ ಮೋಸ ಮಾಡಿದ ಮೇಲೆ ಅವರಿಗೆ ಅದರ ಬಗ್ಗೆ ಪಶ್ಚಾತಾಪವಿದೆಯೇ?
ಸಂಗಾತಿ ಮೋಸ ಮಾಡಿದ ಮೇಲೆ ಅವರಿಗೆ ಅದರ ಬಗ್ಗೆ ಪಶ್ಚಾತಾಪವಿದೆಯೇ? ಅದು ಅವರ ಮಾತಿನಲ್ಲಿ ಅಲ್ಲ ವರ್ತನೆಯಲ್ಲಿ ಕಾಣುತ್ತಿದೆಯೇ ? ಹಾಗಾದರೆ ಅವರನ್ನು ಕ್ಷಮಿಸುವ ಬಗ್ಗೆ ಆಲೋಚನೆ ಮಾಡುವುದು ಒಳ್ಳೆಯದು, ಈ ರೀತಿ ಆಲೋಚನೆ ಮಾಡುವಾಗ ನೀವು ಈ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿಕೊಳ್ಳುವುದು ಒಳ್ಳೆಯದು.
* ನಿಮ್ಮ ಸಂಗಾತಿ ಇದೇ ಮೊದಲ ಬಾರಿಗೆ ಮೋಸ ಮಾಡಿರುವುದಾ??
* ನಿಮಗೆ ಇದರಿಂದ ತುಂಬಾ ನೋವಾಗಿದೆ ಎಂಬ ಪಶ್ಚಾತಾಪ ಅವರಲ್ಲಿ ಇದೆಯೇ?
* ಇನ್ಮುಂದೆ ಈ ತಪ್ಪು ಮತ್ತೆ ಮಾಡಲ್ಲ ಎಂದು ಪ್ರಾಮಿಸ್ ಮಾಡಿದ್ರಾ?
* ಅನೈತಿಕ ಸಂಬಂಧ ಬೆಳೆಸಿದ ವ್ಯಕ್ತಿ ಜೊತೆಗಿನ ಸಂಪರ್ಕ ಸಂಪೂರ್ಣವಾಗಿ ಕಡಿದು ಕೊಂಡ್ರಾ?
* ನಿಮಗೆ ಅವರನ್ನು ಮೊದಲಿನಂತೆ ಪ್ರೀತಿಸಲು ಸಾಧ್ಯವೇ?
* ಅವರನ್ನು ಚುಚ್ಚು ಮಾತುಗಳಿಂದ ನೋಯಿಸದೆ ಅವರ ಜೊತೆ ಖುಷಿ-ಖುಷಿಯಾಗಿ ಇರಲು ಸಾಧ್ಯನಾ?
ಈ ಬಗೆಯ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿಕೊಳ್ಳಿ. ಈ ಎಲ್ಲಾ ಪ್ರಶ್ನೆಗಳಿಗೆ ನಿಮಗೆ ಸಮರ್ಪಕ ಉತ್ತರ ಸಿಕ್ಕಿದೆ, ನಿಮಗೆ ಅವರನ್ನು ಕ್ಷಮಿಸುವ ಮತ್ತೆ ಮೊದಲಿನಂತೆ ಪ್ರೀತಿಸುವ ಮನಸ್ಸಿದೆ ಎಂದರೆ ಮಾತ್ರ ಅವರಿಗೆ ಸೆಕೆಂಡ್ ಛಾನ್ಸ್ ನೀಡುವುದರ ಬಗ್ಗೆ ಆಲೋಚಿಸಬಹುದು.
ಎಂಥ ವ್ಯಕ್ತಿ ಜೊತೆ ಸಂಬಂಧ ಮುಂದುವರೆಸದಿದ್ದರೆ ಒಳ್ಳೆಯದು?
ಅವರು ಅನೈತಿಕ ಸಂಬಂಧದಲ್ಲಿ ಇರುವ ವ್ಯಕ್ತಿ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದಾದರೆ
ಅವರ ಸಂಬಂಧ ದೀರ್ಘ ಸಮಯದಿಂದ ಇದೆ ಎಂದಾದರೆ
ಅವರಿಗೆ ಅವರು ಮಾಡಿದ ಕಾರ್ಯದಲ್ಲಿ ಒಂದಿಷ್ಟೂ ಪಶ್ಚಾತಾಪ ಇಲ್ಲದಿದ್ದರೆ
ನಿಮ್ಮ ಸಂಬಂಧದ ಶುರುವಿನಲ್ಲಿಯೇ ಅವರು ಮೋಸ ಮಾಡಿದರೆ
ನಿಮ್ಮ ಸಂಗಾತಿ ನಿಮ್ಮನ್ನು ತುಂಬಾನೇ ಕಂಟ್ರೋಲ್ ಮಾಡ್ತಾ ಇದ್ದಾರೆ ಎಂದಾದರೆ
ನೀವು ಇಂಥ ವ್ಯಕ್ತಿಗೆ ಸೆಕೆಂಡ್ ಛಾನ್ಸ್ ನೀಡಿದರೂ ಅವರು ನಿಮಗೆ ಮತ್ತೆ ಮೋಸ ಮಾಡಲ್ಲ ಎಂಬ ಯಾವ ಗ್ಯಾರಂಟಿಯೂ ಇರಲ್ಲ, ಪದೇ ಪದೇ ನೋವು ತಿನ್ನುವುದಕ್ಕಿಂತ ಅಂಥ ಸಂಬಂಧದಿಂದ ದೂರ ಉಳಿಯುವುದು ಒಳ್ಳೆಯದು.



Click it and Unblock the Notifications
