Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Relationship: ಈ ಅಭ್ಯಾಸ ನಿಮ್ಮ ಸಂಬಂಧ ಉಳಿಸುತ್ತೆ! ನೀವು ಇದನ್ನು ಮಾಡುತ್ತಿದ್ದೀರಾ?
ದೈಹಿಕ ಸ್ಪರ್ಶ ಕೇವಲ ಪ್ರಣಯವಲ್ಲ! ಕೈ ಹಿಡಿಯುವುದು, ಅಪ್ಪಿಕೊಳ್ಳುವುದು ಮತ್ತು ಹಣೆಯ ಮೇಲೆ ಮುತ್ತಿಡುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ಹೌದು, ಒಂದು ಅಪ್ಪುಗೆ ನಿಮ್ಮ ಮತ್ತು ಸಂಗಾತಿಯ ಸಂಬಂಧದಲ್ಲಿ ಭದ್ರತೆ, ನಿಕಟತೆ ಮತ್ತು ಮಾನಸಿಕ ಶಾಂತಿ ಹೆಚ್ಚಾಗುತ್ತೆ. ಹಾಗಿದ್ರೆ, ನಿಮ್ಮ ಸಂಗಾತಿಯನ್ನು ಅಪ್ಪಿಕೊಳ್ಳುವುದು ಅಥವಾ ಕೈ ಹಿಡಿಯುವುದು ಏಕೆ ಮುಖ್ಯ? ದೈಹಿಕ ಸ್ಪರ್ಶದ ಪ್ರಯೋಜನಗಳೇನು? ಮತ್ತು ಮನೋವಿಜ್ಞಾನ ಏನು ಹೇಳುತ್ತದೆ ಗೊತ್ತಾ? ಈ ಬಗ್ಗೆ ತಿಳಿದ್ರೆ, ನೀವು ನಿಜಕ್ಕೂ ವಾವ್ ಅಂತಿರಾ.
ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವುದು ತುಸು ಕಷ್ಟವೇ ಸರಿ. ಒಬ್ಬೊಬ್ಬರ ಸಂಬಂಧವು ಒಂದೊಂದು ರೀತಿಯಿಂದ ಕೂಡಿರುತ್ತದೆ. ಗಂಡ - ಹೆಂಡತಿ ಒಟ್ಟಾಗಿ ಸೇರಿ ಸಂಸಾರದ ಬಂಡಿಯನ್ನು ನಡೆಸಬೇಕು. ಆಗ ಮಾತ್ರ ಸುಖ ಸಂಸಾರ ಸಾಧ್ಯ. ಸಂಗಾತಿಗಳು ಪರಸ್ಪರರನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ, ಎಂತಹ ಮನಸ್ತಾಪಗಳು ಬಂದರೂ ನಿವಾರಿಸಿಕೊಂಡು ಜೀವನ ನಡೆಸಬಹುದು. ಇಲ್ಲದಿದ್ದರೆ ದಾಂಪತ್ಯದಲ್ಲಿ ಬಿರುಕು ಮೂಡುವುದು ಖಚಿತ. ಹಾಗಾದ್ರೆ, ಸುಖ ಸಂಸಾರಕ್ಕಾಗಿ ಏನು ಮಾಡಬೇಕು ಅಂತೀರಾ? ಮುಂದೆ ಓದಿ.

ಸಂಗಾತಿ ಜೊತೆ ಪರಸ್ಪರ ತಿಳುವಳಿಕೆ ಮತ್ತು ಸಂವಹನ ಬಹಳ ಮುಖ್ಯ. ಅದೇ ರೀತಿ ದೈಹಿಕ ಸ್ಪರ್ಶವೂ ಮುಖ್ಯ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಬಹುತೇಕರು ಇದನ್ನು ಕೇವಲ ಪ್ರಣಯ ಅಥವಾ ದೈಹಿಕ ಅಗತ್ಯ ಎಂದು ಭಾವಿಸುತ್ತಾರೆ. ಆದರೆ, ಮಾನಸಿಕ ದೃಷ್ಟಿಕೋನ ಬೇರೆಯದನ್ನೇ ಹೇಳುತ್ತದೆ. ಇದು ಭಾವನಾತ್ಮಕ ಬಂಧ ಮತ್ತು ಮಾನಸಿಕ ಸಮತೋಲನದ ಪ್ರಮುಖ ಸ್ತಂಭವಾಗಿದೆ. ಸಂಗಾತಿಯನ್ನು ಅಪ್ಪಿಕೊಳ್ಳುವುದು, ಕೈ ಹಿಡಿಯುವುದು ಅಥವಾ ಹಣೆಯ ಮೇಲೆ ಚುಂಬಿಸುವುದು ಸೇರಿದಂತೆ ಈ ರೀತಿಯ ಸ್ಪರ್ಶವು ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ಸಂಸಾರದ ಭದ್ರತೆ, ಅನ್ಯೋನ್ಯತೆ ಮತ್ತು ನಂಬಿಕೆಗೆ ಸೋಪಾನವಾಗಿದೆ.
ಸ್ಪರ್ಶದ ಸಮಯದಲ್ಲಿ ಈ ಹಾರ್ಮೋನ್ ಬಿಡುಗಡೆ
ಸ್ಪರ್ಶವು ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಸ್ಪರ್ಶವು ಪ್ರೀತಿ ಮತ್ತು ಸೇರಿರುವುದನ್ನು ಅನುಭವಿಸಲು ಅಗತ್ಯವಾದ ಮಾಧ್ಯಮ. ಸಂಗಾತಿಯ ಸ್ಪರ್ಶದ ಸಮಯದಲ್ಲಿ, ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು 'ಪ್ರೀತಿಯ ಹಾರ್ಮೋನ್' ಎಂದು ಮನಶ್ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಆಕ್ಸಿಟೋಸಿನ್ ಹಾರ್ಮೋನ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸಂಗಾತಿಗಳ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುತ್ತದೆ.
ದೈಹಿಕ ಸ್ಪರ್ಶದಿಂದ ಏನೆಲ್ಲಾ ಪ್ರಯೋಜನಗಳಿವೆ?
ಭಾವನಾತ್ಮಕ ಬಾಂಧವ್ಯ ವೃದ್ಧಿ
ನಿಯಮಿತ ಸ್ಪರ್ಶವು ಸಂಗಾತಿಗಳ ನಡುವಿನ ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ. ಈ ಮೂಲಕ ನಿಮ್ಮ ಸಂಗಾತಿಯನ್ನು ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂಬುವುದನ್ನು ಸಾಬೀತು ಪಡಿಸುತ್ತದೆ.
ತಬ್ಬಿಕೊಂಡಾಗ ಒತ್ತಡ ಮತ್ತು ಆತಂಕ ಕಡಿಮೆ
ನೀವು ಒತ್ತಡದಲ್ಲಿದ್ದಾಗ ಸಂಗಾತಿಯನ್ನು ತಬ್ಬಿಕೊಳ್ಳಬಹುದು. ಈ ಸಮಯದಲ್ಲಿ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟವು ಕಡಿಮೆಯಾಗುತ್ತದೆ. ಈ ರೀತಿ ಮಾಡುವ ವ್ಯಕ್ತಿಯು ಶಾಂತವಾಗಿರುತ್ತಾನೆ.
ಅಪ್ಪುಗೆಯು ನಂಬಿಕೆಯ ಪ್ರತೀಕ
ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವುದು ಅಥವಾ ಅವರ ಕೈ ಹಿಡಿಯುವುದು ನಂಬಿಕೆಯ ಪ್ರತೀಕವಾಗಿದೆ. ಇದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ನೀವು ಸಂಗಾತಿಯ ಜೊತೆ ಇದ್ದೀರಿ ಎಂದು ಅವರಿಗೆ ಭರವಸೆ ನೀಡುತ್ತದೆ.
ದೈಹಿಕ ಆರೋಗ್ಯದಲ್ಲಿ ಸುಧಾರಣೆ
ಸ್ಪರ್ಶವು ಹೃದಯ ಬಡಿತವನ್ನು ನಿಯಂತ್ರಿಸುತ್ತದೆ. ಇದು ನಿಮ್ಮ ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಆರೋಗ್ಯಕರ ಸ್ಪರ್ಶವು ಯಾವ ರೂಪದಲ್ಲಿ ಇರಬೇಕು?
* ಪ್ರೀತಿಯಿಂದ ಅಪ್ಪಿಕೊಳ್ಳುವುದು (ಪ್ರೀತಿಯ ಅಪ್ಪುಗೆ).
* ಸಂಗಾತಿಯ ಹಣೆಯ ಮೇಲೆ ಮುತ್ತು ನೀಡುವುದು.
* ಪ್ರಯಾಣದ ಸಮಯದಲ್ಲಿ ಕೈ ಹಿಡಿದುಕೊಳ್ಳುವುದು.
* ಕೇಳದೆಯೇ ಬೆನ್ನನ್ನು ತಟ್ಟುವುದು ಅಥವಾ ಸವರುವುದು.
* ಮಾತನಾಡುವಾಗ ಸಂಗಾತಿಯ ಭುಜದ ಮೇಲೆ ಕೈ ಇಡುವುದು.
ಸ್ಪರ್ಶದ ಕೊರತೆಯಿಂದ ಏನೆಲ್ಲಾ ಪ್ರಭಾವ ಬೀರುತ್ತೆ?
ಸಂಗಾತಿಯೊಂದಿಗಿನ ಸ್ಪರ್ಶದ ಕೊರತೆಯು, ಭಾವನಾತ್ಮಕ ಅಂತರವು ಕ್ರಮೇಣ ಹೆಚ್ಚಾಗಲು ಪ್ರಾರಂಭಿಸುತ್ತದೆ. ನಿಮ್ಮ ಸಂಗಾತಿಯು ಒಂಟಿತನ, ನಿರ್ಲಕ್ಷ್ಯ ಅಥವಾ ಅಸುರಕ್ಷಿತ ಭಾವನೆ ಅನುಭವಿಸಬಹುದು. ಇದು ಪರಸ್ಪರ ಸಂವಹನ, ಜಗಳ ಅಥವಾ ಸಂಬಂಧದ ಗುಣಮಟ್ಟ ಕುಸಿತಕ್ಕೆ ಕಾರಣವಾಗಬಹುದು.



Click it and Unblock the Notifications
