Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಷ್ಟೋ ದಾಂಪತ್ಯದಲ್ಲಿ ಬಿರುಕು ಮೂಡಲು ಇದು ಪ್ರಮುಖ ಕಾರಣವಾಗುತ್ತಿದೆ
ಆ ಮನೆಯಲ್ಲಿ ಎಲ್ಲಾ ಸೌಕರ್ಯ ಇರುತ್ತದೆ, ಆರ್ಥಿಕವಾಗಿ ಚೆನ್ನಾಗಿರುತ್ತದೆ ಹೊರಗಿನವರಿಗೆ ನೋಡುವಾಗ ಅವರಿಗೇನು ಸಮಸ್ಯೆ ಗಂಡ-ಹೆಂಡತಿ ತುಂಬಾ ಚೆನ್ನಾಗಿ ಇರ್ತಾರೆ ಅಂದ್ಕೊಳ್ಳುತ್ತಾರೆ. ಆದರೆ ಅವರ ನಡುವೆ ದೊಡ್ಡ ಬಿರುಕು ಉಂಟಾದಾಗ ಅಥವಾ ಅವರಲೊಬ್ಬರು ಅನೈತಿಕ ಸಂಬಂಧಕ್ಕೆ ಬಿದ್ದಾಗ ಅವರ ಸ್ನೇಹಿತರಿಗೆ, ಮನೆಯವರಿಗೆ ಆಶ್ಚರ್ಯವಾಗುತ್ತದೆ.

ಆದರೆ ಅಂಥ ಸಂಬಂಧವನ್ನು ತುಂಬಾ ಹತ್ತಿರದಿಂದ ಗಮನಿಸಿದಾಗ ಅವರಿಬ್ಬರ ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿ ಇದ್ದಂತೆ ಇತ್ತು, ಆದರೆ ಅವರಿಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿರಲಿಲ್ಲ ಅಥವಾ ಅವರು ಜೊತೆಯಾಗಿ ಸಮಯ ಕಳೆಯುತ್ತಿರಲಿಲ್ಲ ಎಂಬುವುದು ಗೊತ್ತಾಗುತ್ತೆ.
ವೈವಾಹಿಕ ಬದುಕಿನಲ್ಲಿ ಭಿನ್ನಾಭಿಪ್ರಾಯದಿಂದ ದೂರಾದ ದಂಪತಿಗಳಲ್ಲಿ ಬಹುಮುಖ್ಯವಾದ ಸಮಸ್ಯೆಯೆಂದರೆ ಜೊತೆಯಾಗಿ ಹೆಚ್ಚಿನ ಸಮಯ ಕಳೆಯದಿರುವುದು. ಹೌದು ಎಲ್ಲಾ ಕೊಡುತ್ತೇವೆ, ಅದರೆ ಸಂಗಾತಿ ನಿರೀಕ್ಷೆ ಮಾಡುತ್ತಿದ್ದ ಸಮಯ ನೀಡಲು ಸಾಧ್ಯವಾಗದಿದ್ದರೆ ನಿಧಾನಕ್ಕೆ ಸಂಸಾರದಲ್ಲಿ ಬಿರುಕು ಬರುವುದು, ಅದನ್ನು ಗಮನಿಸದೆ ಹೋದರೆ ಆ ಬಿರುಕು ಮತ್ತಷ್ಟು ಹೆಚ್ಚಾಗುವುದು, ಮುಂದೆ ಅದು ವಿಚ್ಛೇದನ ಹಂತಕ್ಕೆ ಬಂದು ನಿಂತರೂ ನಿಲ್ಲಬಹುದು.
ಸಂಗಾತಿಗೆ ಸಮಯ ನಿಡದೆ ಹೋದರೆ ಪ್ರೀತಿ, ಎಫೆಕ್ಷನ್ ಕಡಿಮೆಯಾಗುವುದು
ಒಂದು ಒಳ್ಳೆಯ ಸಂಸಾರ ಬೇಕೆಂದು ಬಯಸುವುದಾದರೆ ಅದಕ್ಕೆ ಅವರಿಗಾಗಿ ನಿಮ್ಮ ಸಮಯವನ್ನು ಇನ್ವೆಸ್ಟ್ ಮಾಡಬೇಕು. ನೀವು ಅವರಿಗೆ ಸಮಯ ನೀಡಿದಾಗ ಮಾತ್ರ ಅವರನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು, ಅವರು ನಿಮ್ಮನ್ನು ತುಂಬಾ ಅರ್ಥ ಮಾಡಿಕೊಳ್ಳುತ್ತಾರೆ. ನಾನು ಒಂಟಿ ಎಂಬ ಭಾವನೆ ಕಾಡುವುದೇ ಇಲ್ಲ.
ಜೊತೆಯಾಗಿ ಹೆಚ್ಚು ಸಮಯ ಕಳೆದರೆ ಎಂಥ ಭಿನ್ನಾಭಿಪ್ರಾಯ ಬಂದರೂ ಅದನ್ನು ಬಗೆಹರಿಸಲು ಸಾಧ್ಯವಾಗುವುದು
ಕೆಲ ಸಂಸಾರ ತುಂಬಾ ಚಿಕ್ಕ ಕಾರಣಕ್ಕೆ ಮುರಿದು ಬೀಳುತ್ತದೆ, ಅದೇ ನಮ್ಮ ಮನೆಯಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮನ ನೋಡಿ ಎಷ್ಟೊಂದು ಕಿತ್ತಾಡಿಕೊಳ್ಳುತ್ತಾರೆ, ಅವರು ಕಿತ್ತಾಡುವುದು ನೋಡುವಾಗ ಅಬ್ಬಾ ಇವರು ಜೊತೆಯಾಗಿ ಹೇಗೆ ಸಂಸಾರ ಮಾಡಿದ್ರೋ ಎಂದನಿಸುವುದು.
ಆದರೆ ಆ ಜಗಳ ಸ್ವಲ್ಪ ಹೊತ್ತು ಅಷ್ಟೇ ನಂತರ ಅಷ್ಟೇ ಚೆನ್ನಾಗಿ ನಗಾಡಿಕೊಂಡು ಮಾತನಾಡುತ್ತಾ ಆರಾಮವಾಗಿ ಇರ್ತಾರೆ, ಒಬ್ಬರನ್ನೊಬ್ಬರು ಬೆಟ್ಟದಷ್ಟು ಪ್ರೀತಿ ಮಾಡುತ್ತಾರೆ. ಅದು ಹೇಗೆ ಎಂದು ನೀವು ಗಮನಿಸಿದಾಗ ನಿಮಗೆ ತಿಳಿಯುತ್ತದೆ ಅವರು ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಾರೆ, ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ, ಯಾವುದಾದರು ನಿರ್ಧಾರ ತೆಗೆದುಕೊಳ್ಳುವಾಗ ಸಂಗಾತಿಯ ಭಾವನೆಗೆ ಹೆಚ್ಚು ಗೌರವ ನೀಡಿರುತ್ತಾರೆ. ಯಾವ ದಾಂಪತ್ಯದಲಲ್ಲಿ ಇದೆಲ್ಲ ಇರುತ್ತದೋ ಆ ಸಂಸಾರ ಕೊನೆಯವರೆಗೂ ಚೆನ್ನಾಗಿಯೇ ಇರುತ್ತದೆ.ಹಾಗಾಗಿ ನೀವೇ ಎಷ್ಟೇ ಬ್ಯುಸಿಯಾಗಿರಿ ನಿಮ್ಮ ಸಂಗಾತಿಗೆ ಸಮಯ ನೋಡಿ
ಅವರಿಗೆ ಸಮಯ ನೀಡದಿದ್ದಾಗ ಅವರಿಗೆ ತುಂಬಾ ಒಂಟಿತನ ಕಾಡಲಾರಂಭಿಸುತ್ತದೆ, ಅವರು ವೈವಾಹಿಕ ಬದುಕಿನಲ್ಲಿ ಆಸಕ್ತಿ ಕಳೆದುಕೊಳ್ಳಬಹುದು ಅಥವಾ ನೀವು ಸಮಯ ನೀಡದೆ ಹೋದಾಗ ಬೇರೆಯವರು ಸ್ವಲ್ಪ ಕಾಳಜಿ ತೋರಿದರೆ ಆ ಕಡೆ ಆಕರ್ಷಣೆ ಬೆಳೆಯಬಹುದು, ಒಟ್ಟಿನಲ್ಲಿ ನಿಮ್ಮ ವೈವಾಹಿಕ ಸಂಬಂಧ ಎಂಬುವುದು ತುಂಬಾನೇ ದುರ್ಬಲವಾಗುತ್ತಾ ಹೋಗುತ್ತದೆ, ಹಾಗಾಗಿ ನೀವು ನಿಮ್ಮ ಸಂಗಾತಿಗೆ ಸಮಯ ಕೊಡಬೇಕು. ಎಷ್ಟೇ ಬ್ಯುಸಿಯಾಗಿರಿ ನಿಮ್ಮನ್ನು ಪ್ರೀತಿಸುವ ಆ ಜೀವವನ್ನು ಫೋನ್ ಮಾಡಿಯಾದರೂ ವಿಚಾರಿಸಿ, ಪ್ರೀತಿಯಿಂದ ಮಾತನಾಡಿ, ಸಮಯ ಸಿಕ್ಕಾಗ ಇಬ್ಬರು ಜೊತೆಯಾಗಿ ಹೊರಗಡೆ ಹೋಗಿ, ಚಿಕ್ಕ ಟ್ರಿಪ್ ಮಾಡಿ. ದಿನಾ ಮಲಗುವ ಮುನ್ನ ಇಬ್ಬರು ಸ್ವಲ್ಪ ಹೊತ್ತು ಆ ದಿನದ ಬಗ್ಗೆ ಮಾತನಾಡಿ. ಇವೆಲ್ಲಾ ಇಬ್ಬರ ನಡುವಿನ ಬಾಂಧವ್ಯ ತುಂಬಾನೇ ಸುಂದರವಾಗಿಸುತ್ತೆ.
ರೀಲ್ ನೋಡಿ ಭ್ರಮೆ ಬೇಡ
ಕೆಲ ದಂಪತಿಗಳನ್ನು ರೀಲ್‌ನಲ್ಲಿ ನೋಡಬಹುದು ಎಷ್ಟು ಚೆನ್ನಾಗಿರುತ್ತಾರೆ ಎಂಬಂತೆ ಅಭಿನಯಿಸುತ್ತಾರೆ, ಅವರನ್ನು ನೋಡಿ ಅದುವೇ ಪ್ರೀತಿ ಎಂಬ ಭ್ರಮೆ ಬೇಡ, ನನ್ನ ಸಂಗಾತಿ ನನ್ನ ಜೊತೆ ಆ ರೀತಿ ರೊಮ್ಯಾಂಟಿಕ್ ಆಗಿಲ್ಲ ಎಂದಲ್ಲ ಖಿನ್ನತೆಗೆ ಜಾರುವವರು ಇದ್ದಾರೆ, ಅವರಿಗೆ ಸಲಹೆಯೆಂದರೆ ಇಂಥ ಫ್ಯಾಂಟಸಿ ಭ್ರಮೆಯಿಂದ ಹೊರಬನ್ನಿ, ಸೋಷಿಯಲ್ ಮೀಡಿಯಾದಲ್ಲಿ ತೋರಿಸಲು ನಿಮ್ಮ ಪ್ರೀತಿ ವ್ಯಕ್ತಪಡಿಸಬೇಡಿ. ನೀವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಜೊತೆಗೆ ಸಮಯ ಕಳೆಯಿರಿ. ಸುಖ ದುಃಖಗಳನ್ನು ಹಂಚಿಕೊಳ್ಳಿ, ಹೀಗೆ ಮಾಡಿದರೆ ಮಾತ್ರ ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ನೀವು ಸಂಗಾತಿಯೊಂದಿಗೆ ಕ್ವಾಲಿಟಿ ಸಮಯ ಕಳೆದರೆ ವೈವಾಹಿಕ ಬದುಕು ಚೆನ್ನಾಗಿರುತ್ತದೆ.



Click it and Unblock the Notifications