Latest Updates
-
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ!
Fathers day 2023 : ಚಿಕ್ಕವರಿದ್ದಾಗ ಅಪ್ಪ ಹೇಳಿದ ಈ ಮಾತುಗಳೆಲ್ಲಾ ನಿಜ ಅಲ್ವಾ!
ಮನೆಯೇ ಮೊದಲ ಪಾಠ ಶಾಲೆ ಅಂತಾರೆ. ನಾವು ಚಿಕ್ಕವಯಸ್ಸಿನಲ್ಲಿ ಏನೇ ಸಂಸ್ಕಾರಗಳನ್ನು ಕಲಿತಿದ್ದರೂ ಕೂಡ ಅದು ನಮಗೆ ಪೋಷಕರಿಂದಲೇ ಬಳುವಳಿಯಾಗಿ ಬಂದಿರುತ್ತದೆ. ಸಣ್ಣ ವಯಸ್ಸಿನಲ್ಲಿ ನಾವು ಚಿಕ್ಕ-ಪುಟ್ಟ ತಪ್ಪು ಮಾಡಿದಾಗ ಅದನ್ನು ತಿದ್ದೋದಕ್ಕೆ ನಮ್ಮ ಪೋಷಕರು ನಮ್ಮ ಜೊತೆಯಲ್ಲೇ ಇರುತ್ತಾರೆ.
ಸಾಮಾನ್ಯವಾಗಿ ಅಮ್ಮ ನಮ್ಮನ್ನು ಮುದ್ದು ಮಾಡಿಸಾಕಿದ್ರು ಕೂಡ ಅಪ್ಪ ಕೊಂಚ ಗಂಭೀರವಾಗಿಯೇ ಇರುತ್ತಿದ್ದರು. ನಮ್ಮ ಮನೆಯಲ್ಲಿ ಶಿಸ್ತಿನ ಪಾಠ ಶುರುವಾಗೋದು ಅಪ್ಪನಿಂದ. ಆಗೆಲ್ಲಾ ನಮಗೆ ಅಪ್ಪ ಯಾಕೆ ಸಣ್ಣ ಸಣ್ಣ ವಿಚಾರಗಳನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಅನ್ನಿಸುತ್ತಿತ್ತು. ಆದ್ರೆ ದೊಡ್ಡವರಾದ ಮೇಲೆ ಅಪ್ಪ ಹೇಳಿದ ಮಾತುಗಳು ನಿಜ ಅನ್ನಿಸೋದಕ್ಕೆ ಶುರುವಾಗುತ್ತದೆ.

1. ಅಪ್ರಮಾಣಿಕತೆ ತೋರಬೇಡಿ
ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಸುಲಭವಾಗಿ ಮಾಡಿಕೊಳ್ಳೋದಕ್ಕೆ ನೋಡ್ತಾರೆ. ಕೆಲವೊಂದು ಸಲ ನಮಗೆ ಯಾವುದಾದರೂ ಕೆಲಸ ಆಗಬೇಕು ಅಂದ್ರೆ ಅದನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಬೇಕು ಅಂತ ಅಂದುಕೊಳ್ಳೋದಿಲ್ಲ. ಬದಲಾಗಿ ಅಪ್ರಾಮಾಣಿಕವಾಗಿಯಾದರೂ ಸರಿ ಕೆಲಸ ಆದರೆ ಸಾಕು ಅಂದುಕೊಳ್ಳುತ್ತೇವೆ.
ಪ್ರಾಮಾಣಿಕತೆಯ ಪಾಠವನ್ನು ಅಪ್ಪ ಚಿಕ್ಕಂದಿನಲ್ಲೇ ನಮಗೆ ಕಲಿಸಿದ್ರು. ಆದ್ರೆ ಆಗ ಅಪ್ಪ ಹೇಳುತ್ತಿದ್ದ ಮಾತುಗಳು ಕಿರಿಕಿರಿ ಅನ್ನಿಸುತ್ತಿತ್ತು. ಆದ್ರೆ ದೊಡ್ಡವರಾದ ಮೇಲೆ ಪ್ರಾಮಾಣಿಕತೆಯ ಬೆಲೆ ಏನು ಅನ್ನೋದು ಗೊತ್ತಾಗುತ್ತಿದೆ.
2. ಪರಿಶ್ರಮ ಎಂದಿಗೂ ವ್ಯರ್ಥವಾಗೋದಿಲ್ಲ
'ಕಷ್ಟಪಟ್ಟರೆ ಮಾತ್ರ ಸುಖ ಸಿಗೋದು" ಈ ಪಾಠವನ್ನು ಅಪ್ಪ ನಮಗೆ ಚಿಕ್ಕಂದಿನಿಂದಲೇ ಹೇಳಿಕೊಟ್ಟಿದ್ದರು. ಚೆನ್ನಾಗಿ ಓದಬೇಕು ದೊಡ್ಡವನಾದ ಮೇಲೆ ಒಂದು ಉತ್ತಮ ಹಂತಕ್ಕೆ ತಲುಪೋದಕ್ಕೆ ಸಾಧ್ಯವಾಗುತ್ತೆ ಅಂತ ಅಪ್ಪ ಹೇಳುತ್ತಿದ್ದರು. ಆದರೆ ಆಗೆಲ್ಲಾ ನಾವು ಅದನ್ನು ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ. ಆದ್ರೆ ಒಂದು ವಯಸ್ಸಿಗೆ ಬಂದಾಗ ನಮಗೆ ಸರಿಯಾದ ಕೆಲಸ ಸಿಗದಿದ್ದಾಗ ಅಪ್ಪ ಹೇಳಿದ ಮಾತು ನೆನಪಾಗುತ್ತೆ ಅಲ್ವಾ?
3. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ, ಮುಚ್ಚಿಡೋದಕ್ಕೆ ಪ್ರಯತ್ನಿಸಬೇಡಿ
ಮನುಷ್ಯ ತಪ್ಪು ಮಾಡೋದು ಸಹಜ. ಆದರೆ ಮಾಡಿದ ತಪ್ಪನ್ನು ತಿದ್ದಿ ನಡೆಯೋದು ಗೊತ್ತಿರಬೇಕು. ಅಪ್ಪಂದಿರು ಈ ಪಾಠವನ್ನು ಖಂಡಿತ ನಮಗೆ ಹೇಳಿಕೊಟ್ಟಿರುತ್ತಾರೆ. ಅದೆಷ್ಟೋ ಸಲ ನಾವು ಶಾಲೆಯಲ್ಲಿ ಮಾಡಿದ ತಪ್ಪುಗಳು ಮನೆಯವರಿಗೆ ಗೊತ್ತಾಗದಂತೆ ಮುಚ್ಚಿಡುತ್ತಿದ್ದೆವು. ಆದರೆ ಅಪ್ಪಿ-ತಪ್ಪಿ ಮನೆಯಲ್ಲಿ ಗೊತ್ತಾದರೆ ನಾವು ಆ ತಪ್ಪುನ್ನು ಮಾಡೇ ಇಲ್ಲ ಎಂದು ಸುಳ್ಳು ಹೇಳುತ್ತೇವೆ.
ಆದರೆ ಅಪ್ಪ ನಾವು ಹೇಳಿದ ಸುಳ್ಳನ್ನು ಬಹು ಬೇಗನೆ ಪತ್ತೆ ಹಚ್ಚುತ್ತಿದ್ದರು. ಆದರೆ ನಾವು ದೊಡ್ಡವರಾದ ಮೇಲೆ ನಮಗೆ ಗೊತ್ತಾಗುತ್ತಿದೆ. ಸುಳ್ಳು ಹೇಳಿ ಮುಚ್ಚಿಟ್ಟರೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಎಂದು.
4. ನಿನ್ನ ಮೇಲೆ ನಂಬಿಕೆ ಕಳೆದುಕೊಳ್ಳಬೇಡ
ನಮ್ಮ ಬಗ್ಗೆ ನಮಗೆ ಇರುವ ನಂಬಿಕೆ ಬೇರ್ಯಾರಿಗೂ ಇರೋದಕ್ಕೆ ಸಾಧ್ಯವೇ ಇಲ್ಲ. ಆದರೆ ನಮ್ಮಪ್ಪ ನಮ್ಮಲ್ಲಿ ಯಾವತ್ತಿಗೂ ನಂಬಿಕೆ ಇಟ್ಟಿರುತ್ತಾರೆ. ಅಪ್ಪನಿಗೆ ನಮ್ಮ ಮೇಲೆ ವಿಶ್ವಾಸ ಇರುತ್ತೆ. ಚಿಕ್ಕವಯಸ್ಸಿನಲ್ಲಿ ಅಪ್ಪ ನಮಗೆ ಹೊಸ ಹೊಸ ವಿಚಾರಗಳನ್ನು ಕಲಿಸುವಾಗ ನಮಗೆ ಕೊಂಚ ಭಯ ಇರುತ್ತಿತ್ತು. ನನ್ನಿಂದ ಮಾಡೋದಕ್ಕೆ ಆಗುತ್ತಾ ಇಲ್ವಾ ಎಂದು. ಆಗ ಅಪ್ಪ ನಿನ್ನಿಂದ ಆಗುತ್ತೆ ಎಂದು ದೈರ್ಯ ತುಂಬುತ್ತಿದ್ದರು.
ಆವತ್ತು ಅಪ್ಪ ನಮ್ಮಲ್ಲಿ ತುಂಬಿದ ವಿಶ್ವಾಸ ಇವತ್ತು ನಮಗೆ ನಮ್ಮ ಮೇಲೆ ನಂಬಿಕೆ ಬರೋ ಹಾಗೆ ಮಾಡಿದೆ. ಇವತ್ತು ನಾವು ಯಾವುದೇ ಕೆಲಸ ಮಾಡೋದಕ್ಕೂ ಹಿಂಜರಿಸೋದಿಲ್ಲ. ನಮ್ಮ ಮೇಲೆ ನಾವು ನಂಬಿಕೆ ಇಟ್ಟು ಮುಂದೆ ಸಾಗುತ್ತೇವೆ. ಇದಕ್ಕೆ ಅಪ್ಪ ಕೊಟ್ಟ ವಿಶ್ವಾಸವೇ ಕಾರಣ.
5. ಹಣಕಾಸನ್ನು ನಿರ್ವಹಣೆ ಮಾಡೋದನ್ನು ಕಲಿಯಿರಿ
ಅಪ್ಪ ದುಡ್ಡಿನ ಮಹತ್ವ ಏನು ಅನ್ನೋದನ್ನು ಚಿಕ್ಕವಯಸ್ಸಿನಲ್ಲಿಯೇ ಹೇಳಿಕೊಟ್ಟಿದ್ದರು. ಅಪ್ಪ ಪ್ರೀತಿಯಿಂದ ತಂದು ಕೊಟ್ಟ ಆಟದ ಸಾಮಾನನ್ನು ಮಾರನೇ ದಿನ ಒಡೆದು ಹಾಕಿದ್ರೆ ಇದರಲ್ಲೇ ಆಟ ಆಡಬೇಕು ಹೊಸತು ತಂದುಕೊಡೋದಿಲ್ಲ ಅಂತ ಹೇಳ್ತಿದ್ರು. ಇನ್ನೂ ಶಾಲೆಗೆ ಹೋಗುವಾಗ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ತೆಗೆದರೆ ಶಾಲೆಗೆ ಕಟ್ಟಿದ ಫೀಸ್ ಮೊತ್ತವನ್ನು ನೆನಪಿಸುತ್ತಿದ್ದರು.
ಹೀಗಾಗಿ ಚಿಕ್ಕಂದಿನಿಂದಲೇ ನಾವು ಹಣದ ಮಹತ್ವ ಎಷ್ಟಿದೆ ಅನ್ನೋದನ್ನು ಕಲಿತಿದ್ದೆವು. ಈಗ ನಾವು ಕೈ ತುಂಬಾ ದುಡಿಯುತ್ತಿದ್ದರೂ ಕೂಡ ಒಂದೊಂದು ರೂಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತೇವೆ. ಬೇಕಾಬಿಟ್ಟಿ ಖುರ್ಚು ಮಾಡೋದಿಲ್ಲ.
ಮಕ್ಕಳಿದ್ದಾಗ ಪೋಷಕರು ನಮ್ಮ ತಿದ್ದಿ ಬುದ್ಧಿ ಹೇಳಿದಾಗ ಕಿರಿಕಿರಿ ಅನ್ನಿಸುತ್ತಿತ್ತು. ಆದರೆ ಇಂದು ನಮ್ಮ ಗುಣ ನಡೆತೆಯನ್ನು ನೋಡಿ ಬೇರೆಯವರು ನಮ್ಮನ್ನು ಹೊಗಳುತ್ತಿದ್ದರೆ ಖಂಡಿತ ಆಗ ಜೀವನದ ಪಾಠ ಹೇಳಿದ ಅಪ್ಪ ನೆನಪಾಗುತ್ತಾರೆ.



Click it and Unblock the Notifications
