Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಡೆದು ಹೋದ ದಾಂಪತ್ಯವನ್ನು ಸರಿಪಡಿಸೋದು ಹೇಗೆ? ಇಲ್ಲಿದೆ ಟಿಪ್ಸ್
ಪ್ರತಿಯೊಬ್ಬರ ದಾಂಪತ್ಯವು ಹಾಲು-ಜೇನಿನಂತೆ ಇರೋದಿಲ್ಲ. ಸಾಮಾನ್ಯವಾಗಿ ಸಂಬಂಧ ಎಂದ ಮೇಲೆ ಅದ್ರಲ್ಲಿ ಮನಸ್ಥಾಪ ಜಗಳಗಳು ಇದ್ದಿದ್ದೇ. ಆದರೆ ಅದನ್ನೇ ಮುಂದುವರಿಸಿಕೊಂಡು ಹೋಗಬಾರದು. ಕೆಲವೊಂದು ಸಂಬಂಧಗಳಲ್ಲಿ ಹೇಗಾಗುತ್ತೆ ಅಂದರೆ ಗಂಡ/ಹೆಂಡತಿ ಇಬ್ಬರೂ ಅಹಂ ಅನ್ನು ತಲೆಗೇರಿಸಿಕೊಂಡಿರುತ್ತಾರೆ.
ಹೀಗಾಗಿ ಜಗಳ ಆದ ಸಂದರ್ಭದಲ್ಲಿ ಕಾಂಪ್ರೋಮೈಸ್ ಮಾಡೋದಕ್ಕೆ ಇಬ್ಬರೂ ಮುಂದೆ ಬರೋದಿಲ್ಲ. ಹೀಗಾದಾಗ ಇಂತಹ ದಾಂಪತ್ಯದಲ್ಲಿ ಸುಖ ಕಂಡುಕೊಳ್ಳೋದಕ್ಕೆ ಸಾಧ್ಯವೇ ಆಗೋದಿಲ್ಲ. ಅಷ್ಟಕ್ಕು ಒಡೆದು ಹೋದ ದಾಂಪತ್ಯದಲ್ಲಿ ಮತ್ತೆ ಖುಷಿ ಕಂಡುಕೊಳ್ಳೋದು ಹೇಗೆ ಇಲ್ಲಿದೆ ಟಿಪ್ಸ್.

1. ಹಳೆಯ ವಿಚಾರವನ್ನು ಕೆದಕಬೇಡಿ
ಸಂಬಂಧದಲ್ಲಿ ಖುಷಿಯೇ ತುಂಬಿರಬೇಕು ಎಂದು ಹೇಳೋದಕ್ಕೆ ನಾವೇನು ಮೆಷಿನ್‌ಗಳಾ? ನಮ್ಮ ಭಾವನೆಗಳು ಬದಲಾದಂತೆ ನಾವು ಪ್ರತಿಕ್ರಿಯೆ ನೀಡೋದು ಸಾಮಾನ್ಯ. ಹಾಗಂತ ಯಾವತ್ತೋ ಆದ ವಿಚಾರವನ್ನು ಹೊಸ ಜಗಳಗಳಾದಾಗ ಪ್ರಸ್ತಾಪ ಮಾಡೋದು ಸರಿಯಲ್ಲ. ನೀವು ಹಳೆಯ ವಿಚಾರವನ್ನು ಕೆದಕುವುದರ ಬದಲು ಆ ಸಂದರ್ಭಕ್ಕೆ ಎಷ್ಟು ಅಗತ್ಯ ಅಷ್ಟು ಮಾತ್ರ ಮಾತನಾಡಿದರೆ ಸಾಕು.
2. ಸಂವಹನ ಚೆನ್ನಾಗಿರಲಿ
ಒಂದು ಸಂಬಂಧವು ಚೆನ್ನಾಗಿರಬೇಕಾದರೆ ಅಲ್ಲಿ ಸಂವಹನದ ಅಗತ್ಯ ತುಂಬಾನೇ ಇದೆ. ಕೆಲವೊಂದು ಮನೆಗಳಲ್ಲಿ ಹೆಸರಿಗಷ್ಟೇ ಅವರು ಗಂಡ-ಹೆಂತಿಯಂತಿರುತ್ತಾರೆ. ಆದರೆ ಅವರ ಮಧ್ಯೆ ಹೆಚ್ಚಿನ ಮಾತುಕತೆ ಇರೋದಿಲ್ಲ. ಸಂಬಂಧ ಹಾಳಾಗೋದಕ್ಕೆ ಇದು ಕೂಡ ಒಂದು ಕಾರಣ. ನಿಮ್ಮ ಕಷ್ಟ-ಸುಖ ಏನೇ ಇದ್ದರೂ ನಿಮ್ಮ ಸಂಗಾತಿಯ ಬಳಿ ಹಂಚಿಕೊಳ್ಳಿ. ಒಂದು ವೇಳೆ ಅವರು ದೂರವಿದ್ದರೆ ಫೋನ್, ವಿಡಿಯೋ ಕಾಲ್ ಮೂಲಕ ಸಂಭಾಷಣೆ ನಡೆಸಿ.
3. ನಂಬಿಕೆ ಇರಲಿ
ಕೆಲವೊಂದು ಸಂಬಂಧಗಳು ಹಾಳಾಗೋದಕ್ಕೆ ಮುಖ್ಯ ಕಾರಣ ದಂಪತಿಗಳಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ನಂಬಿಕೆ ಅನ್ನೋದೇ ಇರೋದಿಲ್ಲ. ಪತಿ ಹಾಗೂ ಪತ್ನಿ ಒಬ್ಬರ ಮೇಲೋಬ್ಬರು ಅನುಮಾನ ಪಡೋದು. ಸಂಗಾತಿ ಮೋಸ ಮಾಡುತ್ತಿದ್ದಾರೋ ಅನ್ನೋ ಸಂಶಯ ಯಾವಾಗಲೂ ಕಾಡುತ್ತಿರುತ್ತದೆ. ಮೊದಲು ನಿಮ್ಮವರ ಮೇಲೆ ನಂಬಿಕೆ ಇಡಿ. ನಂಬಿಕೆ ಅನ್ನೋ ಒಂದೇ ಅಸ್ತ್ರ ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.
4. ನಿಮ್ಮ ಸಂಗಾತಿಯನ್ನು ಅರ್ಥೈಸಲು ಪ್ರಯತ್ನಿಸಿ
ನಿಮ್ಮ ಸಂಗಾತಿಯ ಜೊತೆಗೆ ನಿಮಗೆ ಪ್ರತಿನಿತ್ಯ ಜಗಳ, ಮನಸ್ಥಾಪಗಳಾಗುತ್ತಿದ್ದರೆ ಒಂದು ಸಲ ಯೋಚಿಸಿ. ನಿಮ್ಮಿಬ್ಬರ ನಡುವೆ ಏನು ಸಮಸ್ಯೆಯಾಗುತ್ತಿದೆ ಅನ್ನೋ ಬಗ್ಗೆ ಅರಿತುಕೊಳ್ಳಿ. ನಿಮ್ಮ ಸಂಗಾತಿಗೆ ಏನು ಮಾಡಿದರೆ ಇಷ್ಟವಾಗುತ್ತೆ? ಏನು ಇಷ್ಟವಾಗೋದಿಲ್ಲ, ಅವರ ಹವ್ಯಾಸಗಳ ಬಗ್ಗೆ ತಿಳಿದುಕೊಳ್ಳಿ. ಯಾವಾಗ ನೀವು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳುತ್ತಿರೋ ಆಗ ದಾಂಪತ್ಯದಲ್ಲಿ ಸಂತೋಷ ಕಂಡುಕೊಳ್ಳುತ್ತೀರಿ.
5. ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ
ಸಾಮಾನ್ಯವಾಗಿ ಪತ್ನಿ ಮನೆಯನ್ನು ನೋಡಿಕೊಳ್ಳುತ್ತಾರೆ. ಪತಿ ಹೊರಗಡೆ ಹೋಗಿ ಕೆಲಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಪತಿಯು ಪತ್ನಿಯ ಮೇಲೆ ಒಂದು ರೀತಿ ಅಸಡ್ಡೆ ಭಾವನೆಯನ್ನು ತೋರುತ್ತಾನೆ. ಆಕೆ ಇಡೀ ದಿನ ಮನೆಯಲ್ಲೇ ಇರುತ್ತಾಳೆ, ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಈ ಕೆಲಸ ಪತಿಗೆ ಅತೀ ಚಿಕ್ಕ ಕೆಲಸ ಎನಿಸುತ್ತದೆ. ಆದರೆ ಇದು ಸರಿಯಲ್ಲ. ಅವಳು ಮಾಡೋ ಕೆಲಸಕ್ಕೂ ನೀವು ಮೆಚ್ಚುಗೆ ವ್ಯಕ್ತಪಡಿಸಿ ಆಕೆ ತುಂಬಾನೇ ಖುಷಿ ಪಡುತ್ತಾಳೆ. ಹೀಗಾದಾಗ ಸಂಬಂಧ ಚೆನ್ನಾಗಿರುತ್ತದೆ.
6. ಸಂಗಾತಿಯ ಮೇಲೆ ಕಾಳಜಿ ವಹಿಸಿ
ಮದುವೆಯಾದ ಮೇಲೆ ನಾವು ಯಾರನ್ನು ಮದುವೆಯಾಗುತ್ತೇವೆಯೋ ಅವರೇ ನಮ್ಮ ಜೀವನವಾಗುತ್ತಾರೆ. ವಿಶೇಷವಾಗಿ ಮಹಿಳೆಯರು ಪತಿಯನ್ನು ನಂಬಿಕೊಂಡು ಬಂದಿರುತ್ತಾರೆ. ಅವರ ಸುಖ-ದುಃಖದಲ್ಲಿ ಪಾಲುದಾರನಾಗೋದು ಪತಿಯಾದವನ ಕರ್ತವ್ಯ. ಅದೇ ರೀತಿ ಪತ್ನಿಯು ಕೂಡ ಪತಿಯ ಕಾಳಜಿ ಮಾಡಬೇಕು. ಹೀಗಿದ್ದಾಗ ಮಾತ್ರ ಸಂಸಾರದಲ್ಲಿ ಖುಷಿ ಕಂಡುಕೊಳ್ಳಬಹುದು.
7. ಜಗಳಕ್ಕೂ ಮಿತಿ ಇರಲಿ
ಸಾಮಾನ್ಯವಾಗಿ ಎಲ್ಲಾ ದಂಪತಿಗಳು ಜಗಳ ಆಡುತ್ತಾರೆ. ಹಾಗಂತ ಆ ಜಗಳ ಮಿತಿ ಮೀರಿ ಹೋಗಬಾರದು. ನಮ್ಮ ನಿಯಂತ್ರಣ ನಮ್ಮ ಕೈಯಲ್ಲಿರಬೇಕು. ಅವಾಚ್ಯ ಪದಗಳಿಂದ ಸಂಗಾತಿಯನ್ನು ನಿಂದಿಸೋದನ್ನು ಮಾಡಬಾರದು. ನಿಮ್ಮ ನಡವಳಿಕೆ ಇದೇ ರೀತಿ ಮುಂದುವರೆದರೆ ಇಬ್ಬರೂ ಸುಖವಾಗಿರೋದಕ್ಕೆ ಸಾಧ್ಯವೇ ಇಲ್ಲ. ಜಗಳವಾಡಬೇಕಾದರೆ ಏನು ಮಾತಾಡಬೇಕು? ಎಷ್ಟು ಮಾತಾಡಬೇಕು? ಅಷ್ಟನ್ನು ಮಾತ್ರ ಮಾತನಾಡಿ.
ಮದುವೆಯಾಗೋದು ಮುಖ್ಯವಲ್ಲ. ಮುಂದೆ ಸಂಸಾರವನ್ನು ಯಾವ ರೀತಿ ಸಾಗಿಸುತ್ತೇವೆ ಅನ್ನೋದು ತುಂಬಾನೇ ಮುಖ್ಯ. ಪತಿ-ಪತ್ನಿ ಇಬ್ಬರಿಗೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಗೌರವ, ಪ್ರಾಮಾಣಿಕತೆ, ನಂಬಿಕೆ, ಪ್ರೀತಿ ಇದ್ದಾಗ ಮಾತ್ರ ಸಂಬಂಧದಲ್ಲಿ ಖುಚಿ ಕಂಡುಕೊಳ್ಳೋದಕ್ಕೆ ಸಾಧ್ಯ.



Click it and Unblock the Notifications


