Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಯಾವುದೇ ಪರಿಸ್ಥಿತಿಯಲ್ಲೂ ಗಂಡನ ಜೊತೆ ಈ 4 ವಿಚಾರಕ್ಕೆ ರಾಜಿ ಆಗಬಾರದಂತೆ..!
ಸಂಬಂಧದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವುದು ಮತ್ತು ಒಬ್ಬರನೊಬ್ಬರು ಗೌರವಿಸುವುದು ಯಾವುದೇ ಒಂದು ಸಂಬಂಧದ ಅಡಿಪಾಯವಾಗಿರುತ್ತದೆ. ಆದರೆ ಅದನ್ನು ಒಂದು ಹಂತದಲ್ಲಿ ಸವಾಲಾಗಿ ಮತ್ತು ಹೊರೆಯಾಗಿ ಕಾಣುವವರು ಅನೇಕರಿದ್ದಾರೆ. ನಾವಿಬ್ಬರು ಒಬ್ಬರನೊಬ್ಬರು ತುಂಬಾ ಅರ್ಥ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ ಎಂದುಕೊಂಡಿರುತ್ತಾರೆ. ಆದರೆ ಚಿಕ್ಕಪುಟ್ಟ ವಿಚಾರಗಳು ಅವರಿಗೆ ದೊಡ್ಡ ಸವಾಲಾಗಿ ಕಾಡುತ್ತಿರುತ್ತದೆ. ಅದರಲ್ಲೂ ಗಂಡ ಹೆಂಡತಿ ನಡುವೆ ಇಂತಹ ಹತ್ತಾರು ವಿಚಾರಗಳು ಸುಳಿದಾಡುತ್ತವೆ.
ಮತ್ತೆ ಕೆಲವೊಂದು ಸಂಬಂಧಗಳು ಒತ್ತಾಯದ, ಬೇಡಿಕೆಯ ಆಧಾರದಲ್ಲಿ ನಿಂತಿರುತ್ತದೆ. ಕೆಲವು ಮಹಿಳೆಯರು ತಮ್ಮ ಗಂಡನಿಂದ ಕೊನೆಯವರೆಗೂ ಪ್ರೀತಿ, ಗೌರವ ಬಯಸುತ್ತಲೇ ಇರುತ್ತಾರೆ. ಸಂಬಂಧವನ್ನು ಕುರುಡಾಗಿ ನಂಬಿದ ಪರಿಣಾಮವಾಗಿ ಪ್ರೀತಿ ಮತ್ತು ಗೌರವ, ನಂಬಿಕೆಗೆ \ಆಗಾಗ್ಗೆ ಬೇಡಿಕೊಳ್ಳುವ ಅನೇಕ ಮಹಿಳೆಯರಿದ್ದಾರೆ.

ನಿಮ್ಮ ಸಂಬಂಧ ಉಳಿಸಿಕೊಳ್ಳಬೇಕಾದರೆ, ಸಂಬಂಧದಲ್ಲಿ ಕಲಹಗಳು ಮೂಡಬಾರದು ಎಂಬ ನಿಮ್ಮ ಉದ್ದೇಶವಾಗಿದ್ದರೆ ಈ 5 ವಿಚಾರದಲ್ಲಿ ಎಂದಿಗೂ ನೀವು ರಾಜಿ ಆಗಬಾರದು. ಆತ ಚಿನ್ನದ ಗಣಿಯನ್ನೇ ನಿಮ್ಮ ಮುಂದಿಡುತ್ತೇನೆ ಅಂದರೂ ಈ 5 ವಿಚಾರಗಳಿಗೆ ನೀವು ಮಣಿಯಬಾರದಂತೆ. ಹಾಗಾದ್ರೆ ಆ 5 ವಿಚಾರಗಳೇನು? ಯಾಕೆ ನೀವು ಅವರಿಂದ ಬೇಡಬಾರದು ಎಂಬುದನ್ನು ನೋಡಿ.
ಗೌರವ
ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪರಸ್ಪರ ಗೌರವ ಅತ್ಯಗತ್ಯ. ಸಾಮಾನ್ಯವಾಗಿ, ಪುರುಷನು ಮಹಿಳೆಗೆ ನೀಡದಿದ್ದರೆ, ಸಂಬಂಧದ ಅಡಿಪಾಯ ಅಲುಗಾಡುತ್ತದೆ. ಅದು ಹೆಚ್ಚಾಗಿ ಸಂಬಂಧದ ಮತ್ತಷ್ಟು ಹಾಳಾಗಲು ಕಾರಣವಾಗುತ್ತದೆ. ಗೌರವವು ತಾವಾಗಿಯೇ ಸಂಪಾದಿಸಬೇಕೇ ವಿನಃ ನೀವಾಗಿಯೇ ಬೇಡಬಾರದು. ಅಥವಾ ಒಬ್ಬರಿಂದ ಗೌರವವನ್ನು ಖರೀದಿಸಲಾಗದು. ನಿಮ್ಮನ್ನು ಗೌರವದಿಂದ ನೋಡದಿದ್ದರೆ ನೀವು ಎಂದಿಗೂ ಅದನ್ನು ಅವರಿಂದ ಬೇಡಬಾರದಂತೆ.
ನಿಷ್ಠೆ
ಯಾವುದೇ ಸಂಬಂಧದಲ್ಲಿ ಪರಸ್ಪರ ನಂಬಿಕೆ ಅತ್ಯಗತ್ಯ. ಆಗಾಗ್ಗೆ, ಒಬ್ಬ ವ್ಯಕ್ತಿಯು ಸಂಬಂಧದಲ್ಲಿ ನಂಬಿಕೆಯನ್ನು ಕಳೆದುಕೊಂಡರೆ, ಸಂಬಂಧವು ನೀವಂದುಕೊಂಡಂತೆ ಸುಖಕರವಾಗಿರುವುದಿಲ್ಲ. ಒಬ್ಬರಿಗೊಬ್ಬರ ಮೇಲೆ ನಂಬಿಕೆ ಇಲ್ಲದಿದ್ದರೆ ಮಹಿಳೆ ನನ್ನ ಮೇಲೆ ನಂಬಿಕೆ ಇಡಿ ಎಂದು ಅಂಗಲಾಚಬೇಕಾಗಿಲ್ಲ.
ನಂಬಿಕೆ
ನಿಮ್ಮ ಸಂಗಾತಿಗೆ ನೀವು ಎಷ್ಟು ನಿಷ್ಠೆ ಮತ್ತು ಪ್ರಾಮಾಣಿಕರು ಎಂಬುದು ನಿಮಗೆ ತಿಳಿದಿರುವ ವಿಷಯ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಸಂಗಾತಿ ನಿಮ್ಮ ಜೊತೆಗಾರರಾಗಿದ್ದರೆ ಆ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದು ಸತ್ಯ. ನಿಮ್ಮ ಸಂಗಾತಿಯು ಸಣ್ಣ ವಿಷಯಗಳಲ್ಲಿಯೂ ಸಹ ನಿಮ್ಮ ಬಗ್ಗೆ ಅನುಮಾನಿಸುತ್ತಿದ್ದರೆ, ಈ ಸಂಬಂಧದಲ್ಲಿ ಕಲಹವೇ ಹೆಚ್ಚಾಗುತ್ತದೆ. ಹೀಗಾಗಿ ಇಂತಹ ಸನ್ನಿವೇಶದಲ್ಲಿ ನೀವು ನಂಬಿಕೆಗಾಗಿ ಅವರ ಬಳಿ ಬೇಡಿಕೊಳ್ಳಬಾರದಂತೆ.
ನಿಮ್ಮ ಮಾತು ಒಪ್ಪದೇ ಇರುವವರು
ಸಂಬಂಧ ಅಂದ ಮೇಲೆ ಅಲ್ಲಿ ನಂಬಿಕೆಯ ಜೊತೆ ಜೊತೆಗೆ ಸಾಗಬೇಕಾಗುತ್ತದೆ. ಒಂದು ವೇಳೆ ನಿಮ್ಮ ಮಾತನ್ನು ಒಪ್ಪದೇ ನಿಮ್ಮ ಮಾತುಗಳಲ್ಲಿ ತಪ್ಪು ಹುಡುಕುವುದು ಅನಿಮಾನಿಸುವುದು ನಡೆಯುತ್ತಿದ್ದರೆ ಅವರ ಬಳಿ ಎಂದಿಗೂ ಅಂಗಲಾಚಬಾರದಂತೆ. ಅಂದರೆ ಯಾವುದೇ ಕಾರಣಕ್ಕೂ ನಿಮ್ಮದು ಸರಿ ಎಂಬುದನ್ನು ಅರ್ಥೈಸಲು ಮುಂದಾಗಬಾರದಂತೆ.



Click it and Unblock the Notifications
