Latest Updates
-
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ -
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ? -
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ
ಅಪ್ಪ- ಅಮ್ಮನ ಜೊತೆಯಲ್ಲಿದ್ರೆ ಮಕ್ಕಳ ಭವಿಷ್ಯ ಉತ್ತಮವಾಗುತ್ತಂತೆ!
ಮಕ್ಕಳು ತುಂಬಾನೇ ಸೂಕ್ಷ್ಮ. ಮನೆಯಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಮಕ್ಕಳು ಮುಂದೆ ಏನು ಮಾತಾಡಬೇಕಾದರೂ ಬಹಳ ಜಾಗರೂಕತೆಯಿಂದ ಮಾತನಾಡುವುದು ತುಂಬಾನೇ ಮುಖ್ಯ. ಮಕ್ಕಳು ಚಿಕ್ಕದಿರುವಾಗಲೇ ಗಂಡ-ಹೆಂಡತಿ ಬೇರೆಯಾದ್ರೆ ಅದರ ಪರಿಣಾಮವನ್ನು ಮಕ್ಕಳೇ ಎದುರಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಗಂಡ- ಹೆಂಡತಿ ಒಟ್ಟಾಗಿ ಇರಬೇಕು. ಇದ್ರಿಂದ ಮುಂದೆ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ. ಅಷ್ಟಕ್ಕು ಕೂಡು ಕುಟುಂಬದಲ್ಲಿ ಬಾಳೋದ್ರಿಂದ ಏನೆಲ್ಲಾ ಪ್ರಯೋಜನಗಳು ಇದೆ ಅನ್ನೋದನ್ನು ತಿಳಿಯೋಣ.
1. ಬಾಂಧವ್ಯ ಗಟ್ಟಿಯಾಗುತ್ತದೆ
ಯಾವಾಗ ಕುಟುಂಬಸ್ಥರೆಲ್ಲಾ ಒಟ್ಟಾಗಿ ಇರುತ್ತಾರೋ ಆ ಮನೆಯಲ್ಲಿ ಚಿಂತೆಗೆ ಜಾಗವೇ ಇರೋದಿಲ್ಲ. ತಂದೆ- ತಾಯಿ ಎಷ್ಟೇ ಬ್ಯೂಸಿಯಾಗಿದ್ರು ಕೂಡ ಮಕ್ಕಳಿಗೆ ಕೊಂಚ ಸಮಯವನ್ನು ಕೊಟ್ಟೇ ಕೊಡ್ತಾರೆ. ಮಕ್ಕಳ ಜೊತೆಗೆ ಆಟ ಆಡೋದು, ಇನ್ನೂ ಸಮಯ ಸಿಕ್ಕಾಗಲೆಲ್ಲಾ ಮನೆಯವರೆಲ್ಲಾ ಒಟ್ಟಿಗೆ ಕುಳಿತು ಟಿವಿ ನೋಡುವುದು. ಇನ್ನೂ ಆಗಾಗ್ಗೆ ಹೊರಗಡೆ ಹೋಗೋದ್ರಿಂದ ಕುಟುಂಬ ಜೊತೆಗಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ.

2. ಒತ್ತಡ ಕಡಿಮೆಯಾಗುತ್ತದೆ
ಪ್ರತಿಯೊಬ್ಬರಿಗೂ ಅವರದ್ದೇ ಆದ ಒತ್ತಡ ಇರುತ್ತದೆ. ಕೆಲಸದ ಸ್ಥಳದಲ್ಲಿ ಇಂತಿಷ್ಟು ಸಮಯದಲ್ಲಿ ಕೆಲಸ ಮುಗಿಸಿ ಕೊಡಬೇಕೆಂಬ ಒತ್ತಡ, ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕೆಂಬ ಒತ್ತಡ, ತಾಯಿ ಮತ್ಯಾವುದೋ ಒತ್ತಡ. ಆದರೆ ಮನೆಗೆ ಬಂದು ಎಲ್ಲರೂ ಒಟ್ಟಿಗೆ ಸೇರಿದಾಗ ಒಂದು ಕ್ಷಣಕ್ಕೆ ಆ ಒತ್ತಡವನ್ನೆಲ್ಲಾ ಮರೆತು ನಮ್ಮಷ್ಟಕ್ಕೆ ನಾವು ಹಾಯಾಗಿ ಸಮಯ ಕಳೆಯೋದಕ್ಕೆ ಸಾಧ್ಯವಾಗುತ್ತದೆ.
3.ಮಗುವಿನ ಶೈಕ್ಷಣಿಕ ಕಾರ್ಯ ಕ್ಷಮತೆ ಸುಧಾರಿಸುತ್ತದೆ
ಮಕ್ಕಳು ತಂದೆ- ತಾಯಿಯ ಜೊತೆಗೆ ಇದ್ರೆ ಇಬ್ಬರಲ್ಲಿ ಒಬ್ಬರು ಮಕ್ಕಳ ಶಿಕ್ಷಣದ ಬಗ್ಗೆ ಖಂಡಿತ ಗಮನ ಹರಿಸುತ್ತಾರೆ. ಅವರ ಶೈಕ್ಷಣಿಕ ಕಾರ್ಯ ಕ್ಷಮತೆ ಉತ್ತಮ ಗೊಳ್ಳೋದಕ್ಕೆ ಏನೆಲ್ಲಾ ಮಾಡಬಹುದು ಅದನ್ನೆಲ್ಲಾ ಮಾಡುತ್ತಾರೆ. ಮಕ್ಕಳಿಗೆ ಉತ್ತಮ ಶಾಲಾ, ಕಾಲೇಜು ಶಿಕ್ಷಣವನ್ನು ಕೊಡಿಸಲಾಗುತ್ತದೆ. ಜೊತೆಗೆ ಅವರ ಭವಿಷ್ಯಕ್ಕೆ ಏನೆಲ್ಲಾ ಬೇಕೋ ಪೋಷಕರು ಅದನ್ನೆಲ್ಲಾ ಮಾಡುತ್ತಾರೆ. ಒಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಹೆಗಲಾಗಿ ನಿಲ್ಲುತ್ತಾರೆ.
4. ಮಕ್ಕಳು ಪೋಷಕರ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ
ಮಕ್ಕಳು ತಮ್ಮ ಜೀವನದ ಆರಂಭಿಕ ಹಂತದಲ್ಲಿ ಏನು ಕಲಿತಿದ್ರೂ ಕೂಡ ಅದು ಪೋಷಕರಿಂದಲೇ ಬಳುವಳಿಯಾಗಿ ಬಂದಿರೋದು. ಮಕ್ಕಳನ್ನು ಮುದ್ದಿಸುತ್ತಾ ಕಾಳಜಿಯಿಂದ ನೋಡಿಕೊಳ್ಳೋದು ಎಷ್ಟು ಮುಖ್ಯವೋ ಹಾಗೆಯೇ ಅವರು ಹಾದಿ ತಪ್ಪಿದಾಗ ತಿದ್ದಿ ಬುದ್ಧಿ ಹೇಳುವುದು ಕೂಡ ಅಷ್ಟೇ ಮುಖ್ಯ. ನೀವು ಉತ್ತಮ ಪೋಷಕರಾಗಿದ್ದರೆ ಮುಂದೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಮ್ಮ ಮಕ್ಕಳನ್ನು ಕೂಡ ಅವರು ಅದೇ ರೀತಿ ನೋಡಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಕೂಡು ಕುಟುಂಬದಲ್ಲಿ ಬಾಳಿದರೆ ಉತ್ತಮ ಅಂತ ಹೇಳೋದು.
5. ಹದಿ ಹರೆಯದ ಮಕ್ಕಳ ಸಮಸ್ಯೆ ನಿವಾರಣೆಯಾಗುತ್ತದೆ
ಹದಿ ಹರೆಯದಲ್ಲಿ ಮಕ್ಕಳು ಏನೆಲ್ಲಾ ಸಮಸ್ಯೆಗಳಿಗೆ ಸಿಲುಕುತ್ತಾರೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಪ್ರೀತಿಯ ಗುಂಗಿನಲ್ಲಿ ಬಿದ್ದು ಬಿಡುತ್ತಾರೆ. ಕೆಲವೊಂದು ಸಲ ಪ್ರೀತಿ ಕೈ ಕೊಟ್ಟಾಗ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಪೋಷಕರು ಮಕ್ಕಳನ್ನು ಸ್ನೇಹಿತರಂತೆ ಸ್ವೀಕರಿಸಿದಾಗ ಮಕ್ಕಳು ನಿಮ್ಮ ಬಳಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹಾಗೂ ನೀವು ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಬಹುದು.
6. ಮಾದಕ ವ್ಯಸನಿಯಾಗುವ ಸಾಧ್ಯತೆ ಹೆಚ್ಚು
ಹದಿ ಹರೆಯದ ವಯಸ್ಸಿನಲ್ಲಿ ಮಕ್ಕಳಿಗೆ ಏನೂ ತಿಳಿಯೋದಿಲ್ಲ. ಈ ವಯಸ್ಸಿನಲ್ಲಿ ಅವರಿಗೆ ಎಲ್ಲವೂ ಹೊಸತರಂತೆ ಕಾಣಿಸುತ್ತದೆ. ಹಾಗೂ ಎಲ್ಲವನ್ನೂ ಪ್ರಯತ್ನಿಸಬೇಕು ಎಂಬ ಹುಚ್ಚಿರುತ್ತದೆ. ತಪ್ಪು-ಸರಿಗಳ ಲೆಕ್ಕಾಚಾರವೇ ಅವರಿಗೆ ಗೊತ್ತಿರೋದಿಲ್ಲ. ಇಂತಹ ಸಮಯದಲ್ಲಿ ಅವರು ಮಾದಕ ವ್ಯಸನಿಯಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಒಂದು ಪೋಷಕರು ಅವರ ಜೊತೆಯಲ್ಲಿ ಸ್ನೇಹಿತರಂತೆ ಇದ್ದರೆ ಅವರಿಗೆ ತಿದ್ದಿ ಬುದ್ಧಿ ಹೇಳೋದಿಕ್ಕೆ ಸಾಧ್ಯವಾಗುತ್ತದೆ.
7. ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ
ಆತ್ಮ ವಿಶ್ವಾಸ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯವಾಗುತ್ತದೆ. ನಾವು ಏನಾದರೂ ಕೆಲಸ ಮಾಡಬೇಕಾದರೂ ಕೂಡ ಆತ್ಮ ವಿಶ್ವಾಸ ಬೇಕಾಗುತ್ತದೆ. ಒಂದು ವೇಳೆ ನಿಮ್ಮಲ್ಲಿ ಎಲ್ಲಾ ಸಾಮರ್ಥ್ಯಗಳು ಇದ್ದರೂ ಕೂಡ ಆತ್ಮ ವಿಶ್ವಾಸ ಇಲ್ಲದಿದ್ದರೆ ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವಿಲ್ಲ. ಆತ್ಮ ವಿಶ್ವಾಸ ನಮ್ಮಲ್ಲಿ ಬೆಳೆಯೋದಕ್ಕೆ ಮೊದಲ ಹೆಜ್ಜೆಯೇ ನಮ್ಮ ಕುಟುಂಬ. ಪೋಷಕರು ಚಿಕ್ಕಂದಿನಲ್ಲೇ ಮಕ್ಕಳಿಗೆ ಆತ್ಮ ವಿಶ್ವಾಸ ತುಂಬೋದ್ರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ.
ನಾವು ಕುಟುಂಬದ ಜೊತೆಗಿದ್ರೆ ಉತ್ತಮ ಜೀವನ ಮೌಲ್ಯದ ಜೊತೆಗೆ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಕೂಡ ನಮ್ಮಲ್ಲಿ ವೃದ್ಧಿಯಾಗುತ್ತದೆ. ಹೀಗಾಗಿ ಮಕ್ಕಳು ಉತ್ತಮರೆನಿಸಿಕೊಳ್ಳಬೇಕಾದರೆ ಮೊದಲು ಅವರಿಗೆ ನೀವು ಉತ್ತಮ ಪೋಷಕರಾಗಿ. ಆಗ ಎಲ್ಲವೂ ನೀವು ಅಂದುಕೊಂಡಂತೆ ಆಗುತ್ತದೆ.



Click it and Unblock the Notifications












