Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತ್ರ, ಪೊಲೀಸರಿಂದಲೇ ಆ ತಪ್ಪಾಗಿದ್ದೇಕೆ? ಎರಡನೇ ಮದುವೆ ಬಗ್ಗೆ ಕಾನೂನು ಏನು ಹೇಳುತ್ತೆ?
ದರ್ಶನ್ ಪವಿತ್ರ ಗೌಡ ಸಂಬಂಧಕ್ಕೆ ಹೆಸರೇನು? ಈ ಪ್ರಶ್ನೆ ಹಲವು ವರ್ಷಗಳಿಂದ ಜನ ಕೇಳುತ್ತಲೇ ಇದ್ದಾರೆ. ಕೊಲೆ ಆರೋಪದಲ್ಲಿ ಅರೆಸ್ಟ್ ಆದಾಗ ಪೊಲೀಸ್ ಆಯುಕ್ತರು ಪವಿತ್ರಾಳನ್ನು ದರ್ಶನ್‌ನ ಪತ್ನಿ ಎಂದು ಎಲ್ಲೇಖ ಮಾಡಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು.
ಬೇರೆ ಯಾರೋ ಹೇಳಿದರೆ ಏನೋ ಹೇಳುತ್ತಿದ್ದಾರೆ ಎಂದು ಆದರೆ ಕಾನೂನು ಗೊತ್ತಿರುವವರೇ ಹೀಗೆ ಹೇಗೆ ಹೇಳಿದರು? ಏಕೆಂದರೆ ಕಾನೂನು ಪ್ರಕಾರ ವಿಜಯಲಕ್ಷ್ಮಿ ಒಬ್ಬರೇ ದರ್ಶನ್ ಪತ್ನಿ, ಹೀಗಿರುವಾಗ ಪವಿತ್ರ ಪತ್ನಿಯಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು.

ಪವಿತ್ರಾ ಗೌಡ ದರ್ಶನ್ ಪತ್ನಿ ಅಲ್ಲ ಎಂದು ಪೊಲೀಸ್ ಆಯುಕ್ತರಿಗೆ ಪತ್ರ ಪಡೆದಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಕಾನೂನಾತ್ಮಕವಾಗಿ ದರ್ಶನ್‌ಗೆ ವಿಜಯಲಕ್ಷ್ಮಿ ಒಬ್ಬರೇ ಪತ್ನಿ. ಹೀಗಾಗಿ ಅವರು ಪೊಲೀಸ್ ಆಯುಕ್ತರಿಗೆ ಈ ರೀತಿ ಮನವಿ ಮಾಡಿದ್ದಾರೆ. ಪವಿತ್ರ ಗೌಡರ ರೆಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಹಾಕುವಂತೆ ಕೋರಿ ಅರ್ಜಿ.
ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹಾಗೂ ಇತರರನ್ನು ಅರೆಸ್ಟ್ ಮಾಡಿ ಎರಡು ವಾರಗಳು ಆಗುತ್ತಾ ಬಂದಿದೆ.
ನನಗೆ ಕಾನೂನು ಮೇಲೆ ಸಂಪೂರ್ಣ ನಂಬಿಕೆ ಇದೆ. ಹಾಗಾಗಿ ಪವಿತ್ರ ಗೌಡರ ಗುರುತನ್ನು ಸರಿಯಾದ ರೀತಿಯಲ್ಲಿ ಉಲ್ಲೇಖಿಸಲು ಮನವಿ ಮಾಡುತ್ತಿದ್ದೇನೆ. ಈ ಕೊಲೆ ಕೇಸ್‌ನ ಮಾಸ್ಟರ್ ಮೈಂಡ್, ಎ1 ಆರೋಪಿ ಎಂದು ಹೇಳ್ಪಡುವ ಪವಿತ್ರಾ ಗೌಡ ನನ್ನ ಪತಿ ದರ್ಶನ್‌ರ ಗೆಳತಿ ಆದರೆ ಅವರ ಪತ್ನಿಯಲ್ಲ. ಕಾನೂನು ಬದ್ಧವಾಗಿ ದರ್ಶನ್ ಮದುವೆಯಾಗಿರುವುದು ನನ್ನೊಬ್ಬಳನ್ನೇ. ನಾವು 19-05-2003 ರಲ್ಲಿ ಕಾನೂನು ರೀತಿಯಲ್ಲಿ ಸತಿ-ಪತಿಯಾಗಿದ್ದೇವೆ.
ಮೀಡಿಯಾ ಜೊತೆ ಅಡ್ರೆಸ್ ಮಾಡುವಾಗ ಪವಿತ್ರಾ ಗೌಡಳನ್ನು ದರ್ಶನ್ ಪತ್ನಿ ಎಂದು ತಪ್ಪಾಗಿ ಹೇಳಲಾಗಿದೆ. ಕರ್ನಾಟಕದ ಗೌರವಾನ್ವಿತ ಗೃಹ ಮಂತ್ರಿಗಳು ಕೂಡ ನ್ಯಾಷನಲ್ ಮಾಧ್ಯಮದವರೊಂದಿಗೆ ಮಾತಾಡುವಾಗಲೂ ಇದೇ ರೀತಿ ಹೇಳಿದ್ದು ಮಾಧ್ಯಮದಲ್ಲಿ ಅದು ಬಂದಿದೆ. ನಾನೊಬ್ಬಳೇ ಧರ್ಮಪತ್ನಿ, ಈ ಗೊಂದಲ ಮುಂದೆ ನಮ್ಮ ಮಗ ವಿನೇಶ್ ಬದುಕಿಗೆ ಸಮಸ್ಯೆ ಉಂಟು ಮಾಡಬಾರದು. ಪವಿತ್ರಾಗೌಡಗೆ ಸಂಜಯ್ ಸಿಂಗ್ ಜೊತೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದ್ದು ಅವರಿಗೆ ಒಬ್ಬ ಮಗಳಿದ್ದಾಳೆ, ಹಾಗಾಗಿ ಮುಂದೆ ಯಾವುದೇ ರೀತಿ ಸಮಸ್ಯೆಯಾಗದಿರಲು ಪೊಲೀಸ್ ಫೈಲ್‌ನಲ್ಲಿ ಪವಿತ್ರಾ ಗೌಡ ದರ್ಶನ್ ಪತ್ನಿ ಎಂದು ಇರುವುದನ್ನು ಸರಿಪಡಿಸಿ ಎಂದು ಮನವಿ ಮಾಡಿದ್ದಾರೆ.
ಮೊದಲ ಪತ್ನಿ ಕಾನೂನು ಬದ್ಧವಾಗಿ ಪತ್ನಿಯಾಗಿಯೇ ಇರುವಾಗ ಎರಡನೇ ಮದುವೆಯಾದರೆ ಅದು ಕಾನೂನುಬಾಹಿರ
ಮೊದಲ ಪತ್ನಿ ಬದುಕಿದ್ದು ಆಕೆಯಿಂದ ವಿಚ್ಛೇದನ ಪಡೆಯದೆ ಬೇರೆ ವಿವಾಹವಾದರೆ ಅದು ಕಾನೂನು ರೀತಿಯಲ್ಲಿ ಮಾನ್ಯವಲ್ಲ, ಅದನ್ನು ಮದುವೆಯೆಂದು ಪರಿಗಣಿಸಲು ಸಾಧ್ಯವಿಲ್ಲ. 1955ರ ಹಿಂದೂ ಮದುವೆ ಕಾಯ್ದೆ ಪ್ರಕಾರ ಮೊದಲ ಪತ್ನಿ ಜೊತೆಯಲ್ಲಿ ಜೀವಿಸದಿದ್ದರೆ ಮಾತ್ರ ಮದುವೆಗೆ ಅನುಮತಿ ನೀಡಿದೆ.
ದರ್ಶನ್ ಅವರ ವಿಚಾರದಲ್ಲಿ ದರ್ಶನ್-ಪತ್ನಿ ಪ್ರತ್ಯೇಕವಾಗಿ ಬದುಕುತ್ತಿಲ್ಲ
ಎಲ್ಲರಿಗೆ ಗೊತ್ತಿರುವಂತೆ ಅವರು ಕೆಲವು ತಿಂಗಳಿನ ಹಿಂದೆಯಷ್ಟೇ ದುಬೈನಲ್ಲಿ ಖುಷಿಯಿಂದ ವಿವಹ ವಾರ್ಷಿಕೋತ್ಸವ ಹಂಚಿಕೊಂಡಿದ್ದರು. ದರ್ಶನ್ ಎಲ್ಲಿಯೂ ನಾನು ವಿಜಯಲಕ್ಷ್ಮಿಯಿಂದ ಪ್ರತ್ಯೇಕವಾಗಿದ್ದೇನೆ ಎಂದು ಹೇಳಿರಲಿಲ್ಲ, ಪವಿತ್ರಳನ್ನು ನನ್ನ ಪತ್ನಿ ಎಂದು ಹೇಳಿರಲಿಲ್ಲ. ಹೀಗಿರುವಾಗ ಪೊಲೀಸರು ಏಕೆ ಹಾಗೆ ಹೇಳಿದರು ಎಂಬುವುದು ಎಲ್ಲರ ಪ್ರಶ್ನೆಯಾಗಿತ್ತು. ಇದೀಗ ವಿಜಯಲಕ್ಷ್ಮಿ ಕೂಡ ಪವಿತ್ರಾಳಿಗೆ ಪತ್ನಿ ಸ್ಥಾನ ಕೊಡುವುದನ್ನು ಸಂಪೂರ್ಣ ನಿರಾಕರಿಸಿದ್ದಾರೆ. ದರ್ಶನ್ ಪತ್ನಿಯೆಂದರೆ ಅದು ವಿಜಯಲಕ್ಷ್ಮಿ ಮಾತ್ರ.
ವಿಜಯಲಕ್ಞ್ಮಿ ಜೊತೆ ದರ್ಶನ್ ಇರುವಾಗ ಅವರ ಬದುಕಿನಲ್ಲಿ ಪವಿತ್ರಾಳಿಗೆ ಸ್ಥಾನ ಇಲ್ಲ
ಪವಿತ್ರ ನಂದು ದರ್ಶನ್‌ದ್ದು 10 ವರ್ಷದ ಸಂಬಂಧ ಎಂದು ಪೋಸ್ಟ್ ಮಾಡಿದ ತಕ್ಷಣ ಪತ್ನಿಯಾಗಲು ಸಾಧ್ಯವಿಲ್ಲ, ಕಾನೂನು ಪ್ರಕಾರ ವಿಜಯಲಕ್ಷ್ಮಿ ಮಾತ್ರ ದರ್ಶನ್ ಪತ್ನಿ.
ದರ್ಶನ್‌ರನ್ನು ಸಂಷ್ಟಕ್ಕೆ ದೂಡಿರುವುದು ಪವಿತ್ರಾ ರಕ್ಷಿಸಲು ಪ್ರಯತ್ನಿಸುತ್ತಿರುವುದು ವಿಜಯಲಕ್ಷ್ಮಿ
ಈ ಕಷ್ಟದ ಪರಿಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮಿ ಗಂಡನ ಸಹಾಯಕ್ಕೆ ಬಾರದೇ ಹೋಗಿದ್ದರೆ ದರ್ಶನ್‌ಗೆ ಎಲ್ಲಾ ಭರವಸೆಯ ಬಾಗಿಲುಗಳು ಮುಚ್ಚಿ ಹೋಗುತ್ತಿತ್ತು. ವಿಜಯಲಕ್ಷ್ಮಿ ಅವರು ಒಳ್ಳೆಯ ಲಾಯರ್ ನೇಮಕ ಮಾಡಿ ಗಂಡನನ್ನು ಹೊರ ತರಲು ಶತತ ಪ್ರಯತ್ನ ಮಾಡುತ್ತಿದ್ದಾರೆ, ಇವರನ್ನು ನೋಡುವಾಗ ಇಟ್ಕೊಂಡವಳು ಇರೋತನ ಕಂಡ್ಕೊಂಡವಳು ಕೊನೆತನಕ ಎಂಬ ಗಾದೆ ಮಾತು ನೆನಪಿಗೆ ಬರುತ್ತೆ.



Click it and Unblock the Notifications