Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಸಂಗಾತಿಯ ಮೇಲೆ ಆಸಕ್ತಿ ಕಡಿಮೆಯಾಗಿದೆಯೆಂದು ತೋರಿಸುವ ಲಕ್ಷಣಗಳಿವು!
ಹೆಚ್ಚಿನ ಸಂಬಂಧಗಳೇ ಹಾಗೇ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿರುವಂತೆ ಕಂಡರೂ ಬರು ಬರುತ್ತಾ ಆ ಸಂಬಂಧ ಬೋರ್ ಆಗೋದಕ್ಕೆ ಶುರುವಾಗುತ್ತದೆ. ಮೊದಲಿದ್ದ ಆಕರ್ಷಣೆಯಾಗಲಿ, ಪ್ರೀತಿಯಾಗಲಿ ಆ ಸಂಬಂಧದಲ್ಲಿ ಇರೋದಿಲ್ಲ. ಹೆಚ್ಚಿನವರು ಮದುವೆಯಾದ ಒಂದೇ ವರ್ಷದಲ್ಲಿ ದೂರ ದೂರ ಆಗೋದಕ್ಕೆ ನಿರ್ಧರಿಸಿ ಬಿಡುತ್ತಾರೆ.

ಅಷ್ಟಕ್ಕೂ ಸಂಬಂಧ ಹಳೆಯದಾದಂತೆ ಪ್ರೀತಿ ಕಡಿಮೆಯಾಗೋದಕ್ಕೆ ಕಾರಣವೇನು? ಸಂಬಂಧಗಳು ಬೋರ್ ಆಗುತ್ತಿದೆ ಅಂತ ಸೂಚಿಸುವ ಲಕ್ಷಣಗಳು ಯಾವುದು ಅನ್ನೋದನ್ನು ಒಂದೊಂದಾಗಿಯೇ ತಿಳಿದುಕೊಳ್ಳೋಣ.
1. ಸಂಗಾತಿಯ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತೇವೆ!
ನಮ್ಮ ಸಂಗಾತಿಯ ಪ್ರತಿಯೊಂದು ವಿಚಾರದಲ್ಲೂ ಸಾಮಾನ್ಯವಾಗಿ ನಾವು ಆಸಕ್ತಿಯನ್ನು ತೋರುತ್ತೇವೆ. ಆದ್ರೆ ಯಾವಾಗ ನಮಗೆ ನಮ್ಮ ಸಂಗಾತಿಯ ಮೇಲೆ ಆಸಕ್ತಿ ಕಡಿಮೆಯಾಗುತ್ತದೆಯೋ ಆಗ ನಾವು ಅವರ ಬಗ್ಗೆ ಯಾವುದೇ ವಿಚಾರಕ್ಕೂ ತಲೆ ಕೆಡಿಸಿಕೊಳ್ಳೋದಿಲ್ಲ. ಸಂಗಾತಿಯ ಬಗ್ಗೆ ಕಾಳಜಿ ಮಾಡೋದನ್ನು ಬಿಟ್ಟು ಬಿಡ್ತೀವಿ. ಅವರಿಗೂ ನಮಗೂ ಸಂಬಂಧವೇ ಇಲ್ಲವೇನೋ ಅನ್ನೋ ಹಾಗೆ ವರ್ತಿಸೋದಕ್ಕೆ ಶುರು ಮಾಡ್ತೀವಿ.
ಇಷ್ಟು ದಿನ ಸಣ್ಣ-ಪುಟ್ಟ ವಿಚಾರಕ್ಕೂ ಜಗಳವಾಡ್ತಿದ್ದವರು ಈಗಂತೂ ಅವರ ಜೀವನ ಅವರು ಹೇಗಾದರೂ ಬದುಕಲಿ ಎಂದು ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡ್ತೀವಿ.
2. ಮಾತೇ ಆಡೋದಿಲ್ಲ
ನಮ್ಮ ದಾಂಪತ್ಯ ಜೀವನ ಬೋರ್ ಅಂತ ಅನ್ನಿಸಿದಾಗ ಮೊದಲು ನಾವು ಅವರ ಜೊತೆಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತೇವೆ. ಒಂದೇ ಮನೆಯಲ್ಲಿ ಇದ್ದರೂ ಕೂಡ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡುವ ಮನಸ್ಸು ಮಾಡೋದಿಲ್ಲ. ಅವರು ಯಾರೋ ಅಪರಿಚಿತ ವ್ಯಕ್ತಿಯಂತೆ ವರ್ತಿಸುತ್ತೇವೆ. ನಮ್ಮ ಗುಣಕ್ಕೆ ಸರಿಹೊಂದುವ ವ್ಯಕ್ತಿಗಳ ಹುಡುಕಾಟದಲ್ಲಿ ನಾವು ಬ್ಯುಸಿಯಾಗಿರ್ತೀವಿ.
3. ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ
ಮದುವೆಯಾದ ಹೊಸತರಲ್ಲಿ ಇದ್ದ ಲೈಂಗಿಕ ಆಕರ್ಷಣೆ ಈಗ ಇರೋದಿಲ್ಲ. ಮದುವೆಯಾದ ಹೊಸತರಲ್ಲಿ ಹೆಚ್ಚು ಹೊತ್ತು ಸಂಗಾತಿಯ ಜೊತೆಗೆ ಕಳೆಯೋದಕ್ಕೆ ಇಷ್ಟ ಪಡುತ್ತಿದ್ರಿ. ಆದ್ರೀಗ ಆ ಆಕರ್ಷಣೆ ಇಲ್ಲ. ಒಂದೇ ಮನೆಯಲ್ಲಿ ಇದ್ದರೂ ಕೂಡ ಇಬ್ಬರೂ ಅಪರಿಚಿರಂತೆ ಬದುಕುತ್ತಿರುತ್ತೀರಿ. ಸಂಗಾತಿಯೊಂದಿಗೆ ಲೈಂಗಿಕ ಸಂತೃಪ್ತಿ ಇಲ್ಲದಿದ್ದಾಗಲೂ ಹೀಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
4. ಸಂಗಾತಿಗಿಂತ ಇತರರು ಆಕರ್ಷಕವಾಗಿ ಕಾಣುತ್ತಾರೆ!
ನೀವು ಮದುವೆಯಾಗಿದ್ದರೂ ಸಂಗಾತಿಯ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದರೂ ಕೂಡ ಅದು ಬರೀ ಹೆಸರಿಗೆ ಸೀಮಿತವಾಗಿರೋ ದಾಂಪತ್ಯವಾಗಿರುತ್ತದೆ. ಮದುವೆಯಾಗಿದ್ದರೂ ಬೇರೆಯವರನ್ನು ನೋಡುವಾಗ ಅವರು ನಿಮಗೆ ಆಕರ್ಷಕವಾಗಿ ಕಾಣುತ್ತಾರೆ. ನಿಮ್ಮ ಮನಸ್ಸು ಪರ ಸ್ತ್ರೀ ಅಥವಾ ಪುರುಷನತ್ತ ಆಕರ್ಷಿತವಾಗಬಹುದು. ಅವರು ನಿಮ್ಮ ಹತ್ತಿರ ಬಂದಾಗ ನಿಮ್ಮ ಹೃದಯದ ಬಡಿತ ಹೆಚ್ಚಾಗುತ್ತದೆ.
5. ಭವಿಷ್ಯದ ಕುರಿತಾಗಿ ಚಿಂತಿಸೋದಿಲ್ಲ!
ದಾಂಪತ್ಯ ಎಂದ ಮೇಲೆ ಇಬ್ಬರೂ ಒಟ್ಟಾಗಿ ಬದುಕಬೇಕು. ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಬಜೆಟ್ ಪ್ಲಾನ್ ಇತ್ಯಾದಿಗಳನ್ನು ಮಾಡಲೇಬೇಕು. ಆದರೆ ಯಾವಾಗ ನಿಮಗೆ ನಿಮ್ಮ ಸಂಬಂಧ ಬೋರ್ ಆಗಿ ಇರುತ್ತದೆಯೋ? ನಿಮ್ಮ ಸಂಗಾತಿಯ ಜೊತೆಗೆ ಬದುಕೋದಕ್ಕೆ ಇಷ್ಟ ಇರುವುದಿಲ್ಲವೋ ಆಗ ನೀವು ಈ ಬಗ್ಗೆ ಮಾತನಾಡೋದೇ ಇಲ್ಲ. ಇನ್ನೂ ದುಡಿದ ಸಂಭಳವನ್ನು ಪ್ರತ್ಯೇಕವಾಗಿ ಖರ್ಚು ಮಾಡುತ್ತಿರುತ್ತಾರೆ.
6. ಫೋನ್ ನಲ್ಲಿ ಬ್ಯುಸಿಯಾಗಿರ್ತೀರಿ!
ದಂಪತಿಗಳೆಂದರೆ ಮನೆಯಲ್ಲಿ ಖುಷಿ, ಸಂತೋಷ, ದುಃಖ, ಜಗಳ ಮಾಮೂಲಿ. ಎಲ್ಲಾ ದಿನ ಒಂದೆ ರೀತಿ ಇರೋದಿಲ್ಲ. ಆದರೆ ನಮ್ಮವರು ನಮಗಾಗಿ ಬದುಕುತ್ತಿರುವ ಜೀವ ಅನ್ನೋದು ನಮ್ಮ ಮನಸ್ಸಿನಲ್ಲಿ ಇರುತ್ತದೆ. ಕೆಲಸದಿಂದ ಬಂದ ನಂತರವು ಒಬ್ಬರಿಗೊಬ್ಬರು ಮನೆ ಕೆಲಸದಲ್ಲಿ ಸಹಾಯ ಮಾಡಿಕೊಂಡು ಇರುತ್ತಾರೆ.
ಆದರೆ ಯಾವಾಗ ಸಂಬಂಧಗಳು ಬೋರ್ ಆಗುತ್ತದೆಯೋ ಆಗ ದಂಪತಿಗಳ ಮಧ್ಯೆ ಇದ್ಯಾವುದು ಇರೋದಿಲ್ಲ. ಗಂಡ ಒಂದು ಮೂಲೆಯಲ್ಲಿ, ಹೆಂಡತಿ ಒಂದು ಮೂಲೆಯಲ್ಲಿ ಫೋನ್ ಹಿಡಿದುಕೊಂಡು ಕೂತಿರ್ತಾರೆ. ತಮ್ಮ ಸಂಗಾತಿಗಿಂತ ಸ್ನೇಹಿತರ ಬಳಗಕ್ಕೆ ಹೆಚ್ಚಿನ ಆಧ್ಯತೆ ನಡುತ್ತಾರೆ. ಅವರೊಂದಿಗೆ ಸುತ್ತಾಡೋದು, ತಿರುಗಾಡೋದು ಎಲ್ಲವನ್ನೂ ಮಾಡುತ್ತಾರೆ.
ದಾಂಪತ್ಯದಲ್ಲೇ ಆಸಕ್ತಿ ಇಲ್ಲದಿದ್ದಾಗ, ಸಂಗಾತಿಯ ಸಹವಾಸವೇ ಬೇಡ ಎಂದಾಗ ಜನರ ನಡವಳಿಕೆ ಈ ರೀತಿ ಇರುತ್ತದೆ.



Click it and Unblock the Notifications