Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಈ 5 ಮಾತುಗಳು ನಿಮ್ಮ ಸಂಸಾರ ಮುರಿದು ಬಿಡುತ್ತೆ ಜೋಕೆ!
ಒರ್ವ ವ್ಯಕ್ತಿಯ ಬಾಳಿನಲ್ಲಿ ಸಂವಹನ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಸಂವಹನ ದಾಂಪತ್ಯದ ಬಂಧವನ್ನು ಗಟ್ಟಿ ಮಾಡುತ್ತದೆ. ಜೊತೆಗೆ ಅದೇ ಸಂವಹನ ಸಂಬಂಧ ಮುರಿಯೋದಕ್ಕೂ ಕೂಡ ಕಾರಣವಾಗುತ್ತದೆ. ಮಾತು ಯಾವಾಗಲೂ ನಿಯಂತ್ರಣದಲ್ಲಿ ಇರ್ಬೇಕು. ಒಂದು ವೇಳೆ ನೀವು ಆಡುವ ಮಾತು ನಿಯಂತ್ರಣ ತಪ್ಪಿ ಹೋದ್ರೆ ಸಂಬಂಧ ನುಚ್ಚು ನೂರಾಗಬಹುದು. ಅಷ್ಟಕ್ಕೂ ಮಾತನಾಡುವಾಗ ಆಗುವ ಯಾವ 5 ತಪ್ಪುಗಳು ಸಂಸಾರವನ್ನು ಹಾಳು ಮಾಡುತ್ತೆ ಅನ್ನೋದನ್ನು ತಿಳಿಯೋಣ.

1. ಪ್ರತಿಯೊಂದು ವಿಚಾರಕ್ಕೂ ವಾದ ಮಾಡುವುದು!
ಗಂಡ-ಹೆಂಡತಿ ಮಧ್ಯೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಂಸಾರ ಸಾಗಿಸೋ ಗುಣ ಇರ್ಬೇಕು. ಪ್ರತಿ ಸಾರಿ ನನ್ನ ಮಾತೇ ಮೇಲಾಗಬೇಕು ಅಂತ ಹಠ ಹಿಡಿಯೋದು ಸರಿಯಲ್ಲ. ನಿಮ್ಮ ಹೆಂಡತಿಯ ಮಾತಿಗೂ ಬೆಲೆ ಕೊಡಬೇಕು. ಇಲ್ಲವಾದರೆ ಇದೇ ವಿಚಾರಕ್ಕೆ ಪದೇ ಪದೇ ಜಗಳಗಳಾಗೋ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾವಾಗ ಸಂಸಾರದಲ್ಲಿ ಸಣ್ಣ-ಪುಟ್ಟ ವಿಚಾರಕ್ಕೂ ವಾದ-ವಿವಾದಗಳು ಹೆಚ್ಚಾಗುತ್ತದೆಯೋ ಅಂತಹ ಸಂಸಾರ ಹೆಚ್ಚು ದಿನ ಉಳಿಯೋದಿಲ್ಲ. ಹೀಗಾಗಿ ಮಾತನಡುವಾಗ ಹುಷಾರಾಗಿರಬೇಕು.
2. ಮಾತಿಗೆ ಮುಂಚೆ ಸಿಡುಕೋದು!
ಸಂಸಾರದಲ್ಲಿ ಯಾವಾಗಲೂ ಖುಷಿಯೇ ತುಂಬಿಕೊಂಡಿರಬೇಕೆಂದೇನಿಲ್ಲ. ಸಂಸಾರ ಎಂದ ಮೇಲೆ ಅಲ್ಲಿ ಖುಷಿ, ನೋವು-ನಲಿವು, ದುಃಖಗಳಾಗೋದು ಸಾಮಾನ್ಯ. ಸಂಸಾರದಲ್ಲಿ ಒಂದು ದೊಡ್ಡ ಜಗಳ ನಡೆದ ನಂತರ ಗಂಡ ತನ್ನ ಹೆಂಡತಿಯ ಬಳಿ ಅಥವಾ ಹೆಂಡತಿ ತನ್ನ ಗಂಡನ ಬಳಿ ಹೋಗಿ ಎರಡು ಪ್ರೀತಿಯ ಮಾತುಗಳನ್ನು ಆಡಿದರಷ್ಟೇ ಸಾಕು. ಕೆಲವೇ ಕ್ಷಣಣಗಳಲ್ಲಿ ದುಃಖವೆಲ್ಲಾ ಮರೆತು ಹೋಗುತ್ತದೆ. ಆದರೆ ಕೆಲವರು ಹಾಗಲ್ಲ, ಮಾತು ಮಾತಿಗೂ ತನ್ನ ಸಂಗಾತಿಯ ಮೇಲೆ ಸಿಡುಕುತ್ತಾರೆ. ಸಂಗಾತಿಯನ್ನು ಕಂಡರೆ ಆಗೋದಿಲ್ಲ ಎನ್ನುವಂತೆ ಆಡುತ್ತಾರೆ. ಸಂಸಾರದಲ್ಲಿ ಸಂವಹನ ಈ ರೀತಿ ಇದ್ದರೆ ಆ ಸಂಬಂಧ ಹೆಚ್ಚು ದಿನ ಉಳಿಯೋದಿಲ್ಲ.
3. ಅತಿಯಾದ ನಿರೀಕ್ಷೇ ಇಟ್ಟುಕೊಳ್ಳುವುದು
ದಾಂಪತ್ಯ ಎಂದ ಮೇಲೆ ಗಂಡನು ಹೆಂಡತಿಯ ಮೇಲೆ ಹೆಂಡತಿಯು ಗಂಡನ ಮೇಲೆ ನಿರೀಕ್ಷೇ ಇಟ್ಟುಕೊಳ್ಳುವುದು ಸಹಜ. ಗಂಡನಾದವನು ದುಡಿದು ಮನೆಗೆ ಬಂದಾಗ ಹೆಂಡತಿ ಪ್ರೀತಿಯಿಂದ ಮಾತನಾಡಿಸಿ, ಅವರಿಗೆ ಇಷ್ಟವಾದ ಆಹಾರವನ್ನು ಮಾಡಿ ಬಡಿಸಬೇಕೆಂದು ಬಯಸುತ್ತಾರೆ. ಇನ್ನೂ ಹೆಂಡತಿಗೂ ಕೂಡ ಗಂಡನ ಮೇಲೆ ನಿರೀಕ್ಷೇಗಳು ಹೆಚ್ಚಾಗಿರುತ್ತದೆ.
ಹುಟ್ಟುಹಬ್ಬ ಅಥವಾ ವಿಶೇಷ ದಿನಗಳಲ್ಲಿ ಗಂಡನು ತನಗೆ ಸೀರೆ, ಒಡವೆಗಳನ್ನು ಕೊಡಿಸಲಿ ಎಂದು ಬಯಸುತ್ತಾಳೆ. ಕೆಲವೊಂದು ಸಲ ಈ ನಿರೀಕ್ಷೇಗಳನ್ನು ಇಬ್ಬರಿಂದಲೂ ಪೂರೈಸೋದಕ್ಕೆ ಆಗೋದಿಲ್ಲ. ಆಗ ಜಗಳ, ಮನಸ್ಥಾಪಗಳು ಹೆಚ್ಚಾಗುತ್ತದೆ. ಹೀಗೆ ಸಂಬಂಧ ಹಾಳಾಗಲು ಇದೂ ಕೂಡ ಕಾರಣ ಆಗಬಹುದು.
4. ಮುಖಕ್ಕೆ ಮುಖ ಕೊಟ್ಟ ಮಾತನಾಡದೇ ಇರುವುದು!
ಒಂದೇ ಮನೆಯಲ್ಲಿದ್ದರೂ ಕೂಡ ಕೆಲ ದಂಪತಿಗಳು ಅಪರಿಚಿತರಂತೆ ಬದುಕುತ್ತಿರುತ್ತಾರೆ. ಕಾರಣ ಒಬ್ಬರಿಗೆ ಮತ್ತೊಬ್ಬರ ಗುಣ ಇಷ್ಟ ಆಗದೇ ಇದ್ದಾಗ ಅಥವಾ ಬೇರೇನಾದರೂ ಸಮಸ್ಯೆಗಳು ಬಂದಾಗ ಅದನ್ನು ಮುಕ್ತವಾಗಿ ಸಂಗಾತಿಯ ಬಳಿ ಹೇಳಿಕೊಳ್ಳೋದಿಲ್ಲ. ಬದಲಾಗಿ ಅಸಮಾಧಾನವನ್ನು ಮನಸೊಳಗೆ ಇಟ್ಟುಕೊಂಡು ಸಂಗಾತಿಯ ಮುಖ ನೋಡಿ ಮಾತನಾಡೋದಿಲ್ಲ.
ಇದೇ ಕಾರಣಕ್ಕೆ ಕೆಲವೊಂದು ಸಾರಿ ದಂಪತಿಗಳು ಮಾತನಾಡುವುದನ್ನೇ ನಿಲ್ಲಿಸಿ ಬಿಡುತ್ತಾರೆ. ಇದು ಮುಂದುವರೆದು ದಂಪತಿಗಳ ಮಧ್ಯೆ ಒಂದು ದೊಡ್ಡ ಗೋಡೆಯೇ ಸೃಷ್ಟಿಯಾಗುತ್ತದೆ. ಸಂಬಂಧ ನಾಶವಾಗೋದಕ್ಕೆ ಇದು ಕೂಡ ಒಂದು ರೀತಿ ಕಾರಣವಾಗುತ್ತದೆ.
5. ಬ್ರೇಕ್ ಅಪ್ ನ ಭಯ ಹುಟ್ಟಿಸೋದು!
ಕೆಲವೊಂದು ದಂಪತಿಗಳು ಹೇಗಂದ್ರೆ ಜಗಳವಾಡೋ ಸಂದರ್ಭದಲ್ಲಿ ಬಿಟ್ಟು ಹೋಗೋ ಮಾತನ್ನು ಪದೇ ಪದೇ ಆಡುತ್ತಿರುತ್ತಾರೆ. ಸಣ್ಣ-ಪುಟ್ಟ ಜಗಳವಾದ್ರೂ ಕೂಡ ನಿನ್ನನ್ನೂ ಬಿಟ್ಟು ಹೋಗೋದಾಗಿ ಸಂಗಾತಿಯಲ್ಲಿ ಭಯ ಹುಟ್ಟಿಸುತ್ತಾರೆ. ಈ ರೀತಿ ಆಡೋದ್ರಿಂದ ಮೊದ ಮೊದಲು ನಿಮಗೆ ಯಾವುದೇ ರೀತಿಯ ಸಮಸ್ಯೆ ಎದುರಾಗೋದಿಲ್ಲ. ಆದರೆ ಸಮಯ ಕಳೆದಂತೆ ನಿಜವಾಗಿಯೂ ಸಂಬಂಧಗಳು ಮುರಿದು ಬಿದ್ರೂ ಕೂಡ ಆಚ್ಚರಿ ಪಡಬೇಕಾಗಿಲ್ಲ.
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅಂತಾರಲ್ಲ. ಹಾಗೇ ಆಡುವ ಪ್ರತಿಯೊಂದು ಮಾತಿನ ಮೇಲೂ ನಮಗೆ ಗಮನವಿರಬೇಕು. ಇಲ್ಲದಿದ್ದರೆ ಸಂಸಾರದಲ್ಲಿ ಬಿರುಕು ಬಿದ್ದರೂ ಅಚ್ಚರಿ ಪಡಬೇಕಾಗಿಲ್ಲ.



Click it and Unblock the Notifications
