Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ವಿಚ್ಛೇದನ ಪೋಸ್ಟ್‌ನಲ್ಲಿ ಸಾಮ್ಯತೆ ಕಾಪಾಡಿದ ಚಂದನ್‌ಶೆಟ್ಟಿ-ನಿವೇದಿತಾ ಬದುಕಿನಲ್ಲಿ ಸಾಮರಸ್ಯದ ಕೊರತೆಯಾಯಿತೇ?
ಬಣ್ಣದ ಲೋಕದ ಕಿರುತೆರೆ ಜೋಡಿಗಳನ್ನು ನೋಡಿ ಅವರ ಬದುಕು ತುಂಬಾ ಚೆನ್ನಾಗಿರುತ್ತದೆ ಎಂದು ಅಂದುಕೊಳ್ಳುತ್ತೇವೆ, ನೇಮ್-ಫೇಮ್ , ದುಡ್ಡೂ ಎಲ್ಲಾ ಇರುವ ಆ ಜೋಡಿಗಳ ಬದುಕು ತುಂಬಾನೇ ಸುಂದರವಾಗಿರುತ್ತದೆ ಎಂದು ಅಂದುಕೊಳ್ಳುತ್ತೇವೆ,.
ಜನ ಸುಮ್ಮನೆ ಹಾಗೆ ಭಾವಿಸುವುದಿಲ್ಲ, ಆ ಜೋಡಿಗಳು ತಮ್ಮ ಪೋಸ್ಟ್, ಫೋಟೋಗಳು, ರೀಲ್ಸ್ ಮೂಲಕ ಅಂಥದ್ದೊಂದು ಭ್ರಮೆ ಮೂಡಿಸಿರುತ್ತಾರೆ, ಆದರೆ ಅವರಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಎಂಬುವುದು ಅವರ ವಿಚ್ಛೇದನ ಸುದ್ದಿ ಬಂದಾಗ ಹೊರ ಜಗತ್ತಿಗೆ ತಿಳಿಯುತ್ತದೆ.

ಕೆಲವೊಂದು ಜೋಡಿಗಳ ಮಧ್ಯ ಏನೋ ಸಮಸ್ಯೆಯಿದೆ ಎಂದು ರೂಮರ್ ಹಬ್ಬಿರುತ್ತದೆ, ಆದರೆ ಮೊನ್ನೆ ಜೊತೆಯಾಗಿ ಖುಷಿಯಿಂದ ಒಂದು ಸಿನಿಮಾ ಪ್ರಮೋಷನ್ ವೀಡಿಯೋ ಮಾಡಿರುವ ಜೋಡಿ ನಾನೊಂದು ತೀರ -ನೀನೊಂದು ತೀರ ಆಗಿದ್ದಾರೆ ಎಂದರೆ ಅದನ್ನು ನಂಬುವುದು ಕಷ್ಟವೇ, ಆದರೆ ಅವರಿಬ್ಬರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.
ಇನ್ನೂ ವಿಶೇಷ ಎಂದರೆ ಸ್ವಲ್ಪ ಬದಲಾವಣೆ ಮಾಡಿ ತಾವು ಹೇಳಬೇಕಾಗಿರುವ ವಿಷಯವನ್ನು ಕೂಡ ಕಾಪಿ ಪೇಸ್ಟ್ ಮಾಡಿದ್ದಾರೆ. ವಿಚ್ಛೇದನ ಸುದ್ದಿಯನ್ನು ಒಂದೇ ರೀತಿಯಲ್ಲಿ ಘೋಷಿಸಲು ಪರಸ್ಪರ ತೀರ್ಮಾನಿಸಿದ ಈ ಜೋಡಿ ಸ್ವಲ್ಪ ಯೋಚಿಸಿ ತೀರ್ಮಾನ ಒಂದಾಗುವ ತೀರ್ಮಾನ ತೆಗೆದುಕೊಂಡರೆ ಎಷ್ಟು ಚೆನ್ನಾಗಿತ್ತು ಎಂದು ಅನಿಸದೆ ಇರಲ್ಲ.
ಹೊರಗಡೆ ಚೆನ್ನಾಗಿದ್ದೇವೆ ಎಂದು ಅಭಿನಯಿಸುತ್ತಿದ್ರಾ?
ತಿಂಗಳ ಹಿಂದೆಯಷ್ಟೇ ಹ್ಯಾಪಿ ಬರ್ತ್‌ಡೇ ಲವ್ ಎಂದು ಚಂದನ್‌ಶೆಟ್ಟಿ ಇಬ್ಬರು ಜೊತೆಗಿರುವ ಫೋಟೋ ಶೇರ್ ಮಾಡಿ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ಇನ್ನು ಅಚ್ಚರಿಯ ಸಂಗತಿ ಎಂದರೆ ಡಿವೋರ್ಸ್ ಪಡೆಯಲು ಈ ಜೋಡಿ ಕೈ ಕೈ ಹಿಡಿದು ಕೋರ್ಟ್‌ಗೆ ಹೋಗಿದ್ದಾರೆ ಯಾವ ಸಿನಿಮಾಗಿಂತಲೂ ಕಡಿಮೆಯಿಲ್ಲ ಈ ಸೀನ್, ನಿಜವಾಗಲೂ ವಿಚ್ಛೇದನ ಪಡೆಯಲು ಜೋಡಿ ಈ ರೀತಿಯೂ ಹೋಗಲು ಸಾಧ್ಯನಾ? ಇಷ್ಟೊಂದು ಚೆನ್ನಾಗಿರುವ ಈ ಜೋಡಿ ಜೋಡಿ ದೂರಾಗುವ ನಿರ್ಧಾರಕ್ಕೆ ಕಾರಣವೇನು ಎಂಬುವುದು ಯಕ್ಷ ಪ್ರಶ್ನೆ?
ಇಬ್ಬರು ಜೊತೆಯಾಗಿ ರೀಲ್ಸ್ ಮಾಡುತ್ತಿದ್ದರು, ನಿವೇದಿತಾ ಜೈನ್ ಇರುವ ಕಾರ್ಯಕ್ರಮಗಳಿಗೆ ಬರುತ್ತಿದ್ದರು ಈ ಚಂದನ್‌ಶೆಟ್ಟಿ, ಇನ್ನು ನಿವೇದಿತಾ ಪತಿ ಜೊತೆ ಕ್ಯೂಟ್ ರೀಲ್ಸ್ ಮಾಡಿ ಹಾಕುತ್ತಾ ಗಮನ ಸೆಳೆಯುತ್ತಿದ್ದರು. ಇವರಿಬ್ಬರ ಜೋಡಿ ನೋಡಿ ಎಷ್ಟು ಚೆನ್ನಾಗಿದೆ ಈ ಜೋಡಿ ಎಂದು ಎಲ್ಲರೂ ಹೇಳುತ್ತಿದ್ದರು, ಆದರೆ ಈ ವಿಚ್ಛೇದನ ಸುದ್ದಿ ಮಾತ್ರ ಚಿತ್ರರಂಗದವರಿಗೂ ಅಚ್ಚರಿ ಮೂಡಿಸಿದೆ ಎಂದು ತಪ್ಪಾಗಲ್ಲ.
ಚಂದನ್‌ಶೆಟ್ಟಿಗೆ ಹಾಗೂ ನಿವೇದಿತಾ ಜೈನ್‌ಗೆ ಸಿನಿಮಾ ನಂಟಿದೆ ಈ ಜೋಡಿಯನ್ನು ಗೊತ್ತಿಲ್ಲದವರು ಕರ್ನಾಟಕದಲ್ಲಿ ಕಡಿಮೆಯೇ, ಎಲ್ಲರಿಗೂ ಚಿರಪರಿಚಿತ ಜೋಡಿ. ವಯಸ್ಸಿನ ಅಂತರವಿದ್ದರೂ ಇವರಿಬ್ಬರನ್ನು ನೋಡುವಾಗ ಎಂಥ ಹೊಂದಾಣಿಕೆ ಎಂದು ಅನಿಸುತ್ತಿತ್ತು. ಇಬ್ಬರು ವೃತ್ತಿ ಬದುಕಿನಲ್ಲಿ ಬೆಳೆಯುತ್ತಿದ್ದರೂ ಎಲ್ಲವೂ ಚೆನ್ನಾಗಿದೆ ಇನ್ನು ಇವರಿಗೆ ಒಂದು ಮಗುವಾದರೆ ಸಾಕು ಎಂದು ಅವರ ಅಭಿಮಾನಿಗಳು ಗುಡ್‌ನ್ಯೂಸ್ ಯಾವಾಗ ಎಂದು ಕೇಳುತ್ತಿದ್ದರು, ಆದರೆ ಈ ಜೋಡಿ ಮಾತ್ರ ಸಿಕ್ಕಾಪಟ್ಟೆ ಶಾಕ್ ನೀಡಿದೆ.
ಬಣ್ಣದ ಲೋಕದ ಹಿಂದೆ ಕತ್ತಲಿರುತ್ತದೆ, ನೋವಿರುತ್ತದೆ ಎಂಬುವುದಕ್ಕೆ ಈ ಜೋಡಿ ಬದುಕು ಒಂದು ಉದಾಹರಣೆಯಾಗಿದೆ, ಏನೂ ಇಲ್ಲದೆ ಯಾರೂ ಬೇರೆಯಾಗಲ್ಲ, ಇಬ್ಬರ ನಡುವೆ ಏನು ಸಮಸ್ಯೆವಿತ್ತು ಎಂಬುವುದು ಇಬ್ಬರೂ ಹೇಳಿಲ್ಲ, ಅವರ ಖಾಸಗಿತನವನ್ನು ಗೌರವಿಸಲು ಕೋರಿದ್ದಾರೆ.
ಈ ರೀತಿ ವಿಚ್ಚೇದನ ಸುದ್ದಿ ಕೇಳುವಾಗ ಈ ಮದುವೆ ಎಂಬುವುದು ಎತ್ತ ಸಾಗುತ್ತಿದೆ ಎಂದನಿಸದೆ ಇರಲ್ಲ, ಇತ್ತೀಚೆಗೆ ತಮಿಳಿನಲ್ಲಿ ನಟ, ಸಿಂಗರ್ ಜಿ.ವಿ ಪ್ರಕಾಶ್ ಮತ್ತು ಸಿಂಗರ್ ಸೈಂಧವಿ ವಿಚ್ಛೇದ ದೊಡ್ಡ ಸದ್ದು ಮಾಡಿತ್ತು, 9 ವರ್ಷ ಪ್ರೀತಿಸಿ 11 ವರ್ಷ ಜೊತೆಯಾಗಿದ್ದ ಜೋಡಿ ದೂರಾಗಿತ್ತು. ಚಂದನ್‌ಶೆಟ್ಟಿ ಹಾಗೂ ನಿವೇದಿತಾ ಜೈನ್ ಕೂಡ ಪರಸ್ಪರ ಪ್ರೀತಿಸಿ ಮದುವೆಯಾದವರು....



Click it and Unblock the Notifications