Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಚಾಣಕ್ಯ ಪ್ರಕಾರ ಈ ಮೂರು ವ್ಯಕ್ತಿಗಳ ಜೊತೆಗಿರುವುದು ವಿಷ ಸರ್ಪವನ್ನು ಹಿಡಿದಂತೆ!
ಯಾರನ್ನು ದೂರವಿಡಬೇಕು, ಯಾರನ್ನು ಹತ್ತಿರ ಸೇರಿಸಬೇಕು ಎಂದು ಗೊತ್ತಿದ್ದರೆ ಜೀವನದ ಅರ್ಧ ಸಮಸ್ಯೆ ದೂರವಾದಂತೆ, ಹೌದು ತಪ್ಪಾದ ವ್ಯಕ್ತಿಗಳು ನಮ್ಮ ಸುತ್ತವಿದ್ದರೆ ಅವರು ನಮಗೆ ಎಷ್ಟೇ ಆಪ್ತರಾಗಿರಲಿ ಅವರಿಂದ ನಮಗೆ ಅಪಾಯ ತಪ್ಪಿದ್ದಲ್ಲ. ಇದರ ಬಗ್ಗೆ ಚಾಣಕ್ಯ ಹೇಳಿರುವ ಬೋಧನೆ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಚಾಣಕ್ಯ ಪ್ರಕಾರ ಎಂಥ ವ್ಯಕ್ತಿಗಳನ್ನು ದೂರವಿಡಬೇಕು ಎಂದರೆ....

ದುರಾಸೆಯುಳ್ಖವರು, ಕುತಂತ್ರಿಗಳು: ಇಂಥ ವ್ಯಕ್ತಿಗಳು ನಮ್ಮ ಜೊತೆ ಇದ್ದರೆ ಅವರನ್ನು ಕಣ್ಮುಚ್ಚಿ ನಂಬಿದರೆ ಅಪಾಯ ಅಪ್ಪಿದ್ದಲ್ಲ. ಇವರು ತುಂಆ ಚೆನ್ನಾಗಿ ಇರುವಂತೆ ನಟಿಸುತ್ತಾರೆ, ಆದರೆ ನಮಗೆ ಯಾವಾಗ ಕೇಡು ಬಗೆಯುವುದು ಎಂದು ಕಾಯುತ್ತಿರುತ್ತಾರೆ. ಹಾಗಾಗಿ ಇಂಥ ವ್ಯಕ್ತಿಗಳನಬ್ನು ಹತ್ತಿರವೂ ಬಿಟ್ಟುಕೊಡದೆ ಇದ್ದರೆ ಒಳ್ಳೆಯದು. ಇವರಿಗೆ ತುಂಬಾನೇ ಹೊಟ್ಟೆಕಿಚ್ಚು, ಮತ್ತೊಬ್ಬರ ಏಳಿಗೆ ನೋಡಿ ಸಹಿಸಲು ಇವರಿಗೆ ಸಾಧ್ಯವಾಗಲ್ಲ.
ನಮ್ಮ ಜೊತೆ ಇದ್ದೇ ನಮನ್ನು ಗುಂಡಿಯೊಳಗೆ ನೂಕಿ ಬಿಡುತ್ತಾರೆ. ಇವರು ತುಂಬಾನೇ ಕುತಂತ್ರಿಗಳು, ನಿಮ್ಮ ಜೊತೆಗೆ ಬೇರೆಯವರ ಬಗ್ಗೆ ಕೆಟ್ಟದಾಗ ಮಾತನಾಡುತ್ತಾರೆ ಎಂದಾದರೆ ನೀವು ಅವರಿಂದ ದೂರವಿರುವುದು ಒಳ್ಳೆಯದು,ಏಕೆಂದರೆ ಅವರು ನಿಮ್ಮ ಬಗ್ಗೆ ಕೂಡ ಅದೇ ಅಭಿಪ್ರಾಯ ಹೊಂದಿರುತ್ತಾರೆ. ತುಂಬಾನೇ ಸ್ವಾರ್ಥಿಗಳು ತಮ್ಮ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ತನ್ನ ಕಾರ್ಯವಾದರೆ ಆಯ್ತು, ಇದರಿಂದ ಬೇರೆಯವರಿಗೆ ಏನಾದರು ತೊಂದರೆಯಾಗುವುದೇ ಈ ಬಗ್ಗೆ ಆಲೋಚಿಸುವುದೇ ಇಲ್ಲ.
ಅಲ್ಲದೆ ನಮ್ಮ ಯಶಸ್ಸು ಅವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ, ನಾವು ಏಳಿಗೆ ಹೊಂದುತ್ತಿದ್ದೇವೆ ಎಂದಾದರೆ ನಮ್ಮ ದಾರಿಗೆ ಅಡ್ಡವಾಗುವುದರ ಬಗ್ಗೆ ಆಲೋಚಿಸುತ್ತಾರೆ, ಒಳ ಸಂಚುಗಳ ಮೂಲಕ ನಮಗೆ ತೊಂದರೆ ಕೊಡಲು ನೋಡುತ್ತಾರೆ.
ಕಠಿಣ ವರ್ತನೆ ತೋರುವರು: ಕೆಲವರು ತುಂಬಾನೇ ಒರಟಾಗಿ ವರ್ತಿಸುತ್ತಾರೆ ಅಲ್ಲದೆ ಕ್ರೂರ ಸ್ವಭಾವದವರು, ಇವರ ಬಗ್ಗೆ ಕೂಡ ಜಾಗ್ರತೆವಹಿಸಬೇಕು. ಇಂಥವರ ಜೊತೆ ತುಂಬಾನೇ ಎಚ್ಚರಿಕೆಯಿಂದಿರಬೇಕು, ಇವರುಗಳು ನಮ್ಮ ಪ್ರಾಣಕ್ಕೆ ಅಪಾಯವನ್ನುಂಟು ಮಾಡಲು ಹಿಂದೆ ಮುಂದೆ ಯೋಚಿಸಲ್ಲ.
ಇಂಥ ವ್ಯಕ್ತಿಗಳು ನಂಬಿಕೆ ಅರ್ಹರಲ್ಲ, ಇವರನ್ನು ನಂಬಿದರೆ ನಮ್ಮ ಜೀವನವನ್ನು ನಾವೇ ರಿಸ್ಕ್‌ಗೆ ತಳ್ಳಿದಂತೆ. ತುಂಬಾನೇ ಒರಟಾಗಿ ವರ್ತಿಸುತ್ತಾರೆ, ಕನಿಕರವಲ್ಲ, ಮಾನವೀಯತೆ ಇರಲ್ಲ, ಅಂಥವರ ಬಗ್ಗೆ ಜಾಗ್ರತೆವಹಿಸಿ, ಇಂಥವರನ್ನು ಯಾವುದೇ ಕಾರಣಕ್ಕೆ ನಂಬಬೇಡಿ, ಅಲ್ಲದೆ ಅವರು ಬದಲಾಗುತ್ತಾರೆ ಎಂಬ ಆಲೋಚನೆಯೂ ಸರಿಯಲ್ಲ, ಏಕೆಂದರೆ ಅವರು ಬದಲಾಗಲ್ಲ. ಒರಟುತನ ಎಂದರೆ ಚಿಕ್ಕ ವಿಷಯಕ್ಕೆ ಹೊಡೆಯುವುದು, ದೈಹಿಕ ಹಿಂಸೆ ನೀಡುವುದು, ಒಂದಿಷ್ಟೂ ಕನಿಕರ ತೋರದೆ ಇರುವುದು ಇಂಥವರು ಬದಲಾಗಲ್ಲ.
ನಿಮ್ಮ ಆಪ್ತರಲ್ಲಿ ಈ ಬಗೆಯ ಲಕ್ಷಣಗಳು ಕಂಡು ಬಂದರೆ ದೂರವಿಡುವುದು ಒಳ್ಳೆಯದು. ಇಂಥವರು ಸಂಗಾತಿಯಾಗಿ ಸಿಕ್ಕರೆ ಹೊಡೆಯುವುದು, ಬಡೆಯುವುದು ಮಾಡುತ್ತಾರೆ, ಇಂಥವರನ್ನು ಸಹಿಸಿಕೊಂಡು ಬಾಳಲು ಯತ್ನಿಸಿದರೆ ಅವರಿಂದ ನಮ್ಮ ಪ್ರಾಣಕ್ಕೆ ಕೂಡ ಅಪಾಯ ಉಂಟಾಗಬಹುದು, ಹಾಗಾಗಿ ಜಾಗ್ರತೆವಹಿಸಿ.
ಮುಂಗೋಪಿ ಸ್ವಭಾವದರು
ಮುಂಗೋಪಿ ಸ್ವಭಾವದವರು ಕೂಡ ತುಂಬಾನೇ ಅಪಾಯಕಾರಿ. ಮುಂಗೋಪದಿಂದ ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ತಪ್ಪಾಗಿ ಇರುತ್ತದೆ, ಕೆಟ್ಟ ಪರಿಣಾಮವೇ ಬೀರುವುದು, ಆದ್ದರಿಂದ ಇವರ ಜೊತೆ ಇರುವವರು ಕೂಡ ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೆ ಇವರ ಮುಂಗೋಪ ಸ್ವಭಾವ ನಮ್ಮ ಜೀವಕ್ಕೂ ತೊಂದರೆಯನ್ನುಂಟು ಮಾಡುವುದು. ಆದ್ದರಿಂದ ಇಂಥ ವ್ಯಕ್ತಿಗಳಿಂದಲೂ ಅಂತರ ಕಾಯ್ದುಕೊಂಡರೆ ತುಂಬಾನೇ ಒಳ್ಳೆಯದು.



Click it and Unblock the Notifications
