Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪತ್ನಿಗೆ ಭೂತ, ಪಿಶಾಚಿ ಎಂದು ಬೈಯ್ಯುವುದು ಕ್ರೌರ್ಯವಲ್ಲ: ಕೋರ್ಟ್ ಹೀಗಂದಿದ್ಯಾಕೆ..?
ನೀವು ಪತ್ನಿಗೆ ಮನೆಯಲ್ಲು ಏನೆಂದು ಕರೆಯುತ್ತೀರಿ ಅಂದ್ರೆ ಕೆಲವರು ಪ್ರೀತಿಯಿಂದ ಚಿನ್ನ, ರನ್ನ, ಬಂಗಾರ ಅಂತ ಕರೆಯುತ್ತೇವೆ ಎನ್ನಬಹುದು. ಇನ್ನೂ ಕೆಲವರು ಅವರ ಹೆಸರನ್ನೇ ಮುದ್ದಾಗಿ ಕರೆಯಬಹುದು. ಆದ್ರೆ ಇದು ಸಂತೋಷದ ಸಮಯದಲ್ಲಿ ನೀವು ಕರೆಯುವ ಹೆಸರಾಗಿದೆ. ಅದೇ ಸಿಟ್ಟು, ಕೋಪ, ಜಗಳದ ಸಮಯದಲ್ಲಿ ನೀವು ಏನೆಂದು ಕರೆಯುತ್ತೀರಿ.
ಜಗಳದ ವೇಳೆ ನೀವು ಹೆಂಡತಿಯನ್ನು ಭೂತ, ಪಿಶಾಚಿ ಎಂದು ಕರೆಯಬಹುದು, ಕಿವಿ ಹಿಂಡಬಹುದು, ಇಲ್ಲದೆ ಗಲಾಟೆ ಮಾಡಬಹುದು. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಹೆಂಡತಿಯನ್ನು ಭೂತ, ಪಿಶಾಚಿ ಎಂದು ಕರೆಯುವುದು ಕ್ರೌರ್ಯಕ್ಕೆ ಸಮನಾಗುವುದಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.

ವಿಚ್ಛೇದಿತ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ರೀತಿಯ ಅಭಿಪ್ರಾಯ ತಿಳಿಸಿದೆ. ಪರಸ್ಪರ ದಂಪತಿ ತಮ್ಮನ್ನು ಭೂತ, ಪಿಶಾಚಿ ಎಂದು ಕರೆಯುವುದು ಕ್ರೌರ್ಯವಲ್ಲ ಎಂದಿದೆ. ಹಾಗಾದರೆ ಏನಿದು ಪ್ರಕರಣ, ಯಾವ ಕಾರಣಕ್ಕೆ ಈ ರೀತಿಯ ಅಭಿಪ್ರಾಯಪಟ್ಟಿದೆ ಎಂಬುದನ್ನು ತಿಳಿಯೋಣ.
ಜಾರ್ಖಂಡ್‌ನ ಪಕ್ಕದ ಬೊಕಾರೋ ನಿವಾಸಿಗಳಾದ ಸಹ್ದಿಯೋ ಗುಪ್ತಾ ಮತ್ತು ಅವರ ಪುತ್ರ ನರೇಶ್ ಕುಮಾರ್ ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿಬೇಕ್ ಚೌಧರಿ ಅವರ ಏಕಸದಸ್ಯ ಪೀಠವು ಈ ರೀತಿಯ ತೀರ್ಪು ನೀಡಿತು. ನರೇಶ್ ಗುಪ್ತಾ ಅವರ ವಿಚ್ಛೇದಿತ ಪತ್ನಿ ನವಾಡದಲ್ಲಿ ಸಲ್ಲಿಸಿದ ದೂರಿನ ಮೇರೆಗೆ ತಂದೆ-ಮಗ ಇಬ್ಬರೂ ಬಿಹಾರದ ನಳಂದ ಜಿಲ್ಲೆಯ ನ್ಯಾಯಾಲಯಗಳು ನೀಡಿದ ಆದೇಶವನ್ನು ಪ್ರಶ್ನಿಸಿದ್ದರು.
ದೂರುದಾರರು ವರದಕ್ಷಿಣೆಗಾಗಿ ಕಾರಿಗೆ ಒತ್ತಾಯಿಸಲು ದೈಹಿಕ ಮತ್ತು ದೈಹಿಕ ಹಿಂಸೆ ನೀಡಿದ ಆರೋಪದಲ್ಲಿ 1994ರಲ್ಲಿ ಪತಿ ಮತ್ತು ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ 2008ರಲ್ಲಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ನಿಂದ ತಂದೆ-ಮಗ ಇಬ್ಬರ ಪ್ರಾರ್ಥನೆಯ ಮೇರೆಗೆ ಈ ಪ್ರಕರಣವನ್ನು ನವಾಡದಿಂದ ನಳಂದಾಗೆ ವರ್ಗಾಯಿಸಲಾಯಿತು. ಈ ಪ್ರಕರಣದಲ್ಲಿ ದಂಪತಿಗೆ ಜಾರ್ಖಂಡ್ ಹೈಕೋರ್ಟ್ ವಿಚ್ಛೇದನ ನೀಡಿತ್ತು.
ಪಾಟ್ನಾ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿ, ವಿಚ್ಛೇದಿತ ಮಹಿಳೆಯ ವಕೀಲರು "21 ನೇ ಶತಮಾನದಲ್ಲಿ ಮಹಿಳೆಯನ್ನು" "ಭೂತ" ಮತ್ತು "ಪಿಶಾಚಿ" ಎಂದು ಆಕೆಯ ಅಳಿಯಂದಿರು ಕರೆಯುತ್ತಾರೆ, ಇದು "ಅಪಾರ ಕ್ರೌರ್ಯದ ಒಂದು ರೂಪ" ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಕೋರ್ಟ್ ಈ ಅರ್ಜಿಯನ್ನು ವಿಚಾರಣೆ ನಡೆಸಿತ್ತು.
"ವೈವಾಹಿಕ ಸಂಬಂಧಗಳಲ್ಲಿ, ವಿಶೇಷವಾಗಿ ವಿಫಲವಾದ ವೈವಾಹಿಕ ಸಂಬಂಧಗಳಲ್ಲಿ", "ಗಂಡ ಮತ್ತು ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ಕೆಟ್ಟ ಪದ ಬಳಸಿ ನಿಂದಿಸಿರುವ ಉದಾಹರಣೆಗಳಿವೆ. ಆದರೆ ಈ ರೀತಿಯ ಭಾಷೆಗಳು ಕೆಟ್ಟ ಪದದ ಬಳಕೆಯ ಒಳಗೆ ಬರುವುದಿಲ್ಲ ಎಂದು ಕೋರ್ಟ್ ಹೇಳಿತು.
ಜೊತೆಗೆ ದಂಪತಿ ಒಬ್ಬರನೊಬ್ಬರು ಭೂತ, ಪಿಶಾಚಿ ಎಂದು ಕರೆಯುವುದು ಕ್ರೌರ್ಯದ ಒಳಗೆ ಬರುವುದಿಲ್ಲ. ಅವರು ಈ ಪದ ಬಳಕೆಯಿಂದ ಕ್ರೌರ್ಯಕ್ಕೆ ಸಮ ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದಕ್ಕೂ ಮೊದಲು ಪತ್ನಿ ಮನೆಗೆಲಸ ಮಾಡಬೇಕೆಂದು ನಿರೀಕ್ಷಿಸುವುದು ಕ್ರೌರ್ಯ ಎಂದು ಕರೆಯಲಾಗದು ಎಂದು ವಿಚ್ಛೇದನ ನೀಡುವ ಸಂದರ್ಭದಲ್ಲಿ ಗಂಡನಿಗೆ ದೆಹಲಿ ಹೈಕೋರ್ಟ್ ಹೇಳಿತ್ತು. ತನ್ನ ಹೆಂಡತಿಯ ಕ್ರೌರ್ಯದ ಆಧಾರದ ಮೇಲೆ ತನ್ನ ಮದುವೆಯನ್ನು ಅಸಿಂಧುಗೊಳಿಸಲು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಈ ಈ ರೀತಿ ಹೇಳಲಾಗಿತ್ತು.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ವಿಭಾಗೀಯ ಪೀಠವು ವಿವಾಹಿತ ಮಹಿಳೆಯನ್ನು ಮನೆಗೆಲಸ ಮಾಡಲು ಕೇಳುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅದು ಅವಳ ಕುಟುಂಬದ ಮೇಲಿನ ಪ್ರೀತಿ ಮತ್ತು ವಾತ್ಸಲ್ಯ ಎಂದು ಪರಿಗಣಿಸಲ್ಪಡುತ್ತದೆ ಎಂದು ಕೋರ್ಟ್ ಹೇಳಿತ್ತು.
ಭವಿಷ್ಯದ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಮದುವೆಯ ಉದ್ದೇಶವಾಗಿದೆ ಮತ್ತು ಪತಿ ತನ್ನ ಹೆಂಡತಿ ಮನೆಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸಿದರೆ ಯಾವುದೇ ಕ್ರೌರ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.



Click it and Unblock the Notifications
