Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮಳೆಗಾಲದಲ್ಲಿ ಚಿಕ್ಕ ಹನಿಮೂನ್ ಟ್ರಿಪ್ ಪ್ಲ್ಯಾನ್‌ಗೆ ಕರ್ನಾಟಕದ ಈ 5 ಸ್ಥಳಗಳು ಸೋ ರೊಮ್ಯಾಂಟಿಕ್
ಮಳೆಗಾಲದಲ್ಲಿ ಒಂದು ರೊಮ್ಯಾಂಟಿಕ್ ಟ್ರಿಪ್ ಯಾರು ತಾನೆ ಇಷ್ಟಪಡಲ್ಲ, ಅದರಲ್ಲೂ ಹೊಸದಾಗಿ ಮದುವೆಯಾದವರಂತೂ ಜೋಡಿಯಾಗಿ ಸುತ್ತಲು ತುದಿಕಾಲಿನಲ್ಲಿ ನಿಂತಿರುತ್ತಾರೆ. ಮಳೆಗಾಲದಲ್ಲಿ ಸಂಗಾತಿಯ ಕೈ ಹಿಡಿದು ಸುತ್ತುವ ಅನುಭವವೇ ಹಿತ. ಅದರಲ್ಲೂ ಮಳೆಯಲ್ಲಿ ಬೈಕ್ ರೈಡ್‌ಗೆ ಅಥವಾ ಕಾರಿನಲ್ಲಿ ರೊಮ್ಯಾಂಟಿಕ್ ಮ್ಯೂಸಿಕ್ ಹಾಕಿ ಸುರಿಯುತ್ತಿರುವ ಮಳೆಯಲ್ಲಿ ಜರ್ನಿ ಮಾಡುವುದು ಊಹಿಸಿಕೊಂಡರನೇ ಸಾಕು ರೊಮ್ಯಾಂಟಿಕ್ ಅನಿಸುವುದು ಅಲ್ವಾ? ಹನಿಮೂನ್‌ಗೆ ನೀವು ದೂರದ ಸ್ಥಳಗಳಿಗೆ ಹೋಗಿಲ್ಲವೆಂದರೆ ಡೋಂಟ್‌ವರಿ ನಮ್ಮ ಕರ್ನಾಟಕದಲ್ಲಿಯೇ ಮಳೆಗಾಲದಲ್ಲಿ ಹೋಗಲು ಸೂಕ್ತವಾದ ಹಲವಾರು ಹನಿಮೂನ್ ಡೆಸ್ಟಿನೇಷನ್‌ಗಳಿವೆ...

ಬೆಂಗಳೂರು
ಹೌದು ನೀವು ಬೆಂಗಳೂರಿನ ಸುತ್ತ ಮುತ್ತ ಒಂದು ಚಿಕ್ಕ ಹನಿಮೂನ್ ಟ್ರಿಪ್ ಹೋಗಲು ಹಲವಾರು ಸ್ಥಳಗಳಿವೆ. ಮೇಕೆದಾಟು, ಚುಂಚಿಫಾಲ್ಸ್ ಇಲ್ಲಿಗೆ ನೀವು ಮಳೆಗಾಲದಲ್ಲಿ ರೊಮ್ಯಾಂಟಿಕ್ ಟ್ರಿಪ್ ಹೋಗಲು ತುಂಬಾನೇ ಸೂಕ್ತವಾಗಿದೆ. ತುಂಬಾ ಬ್ಯುಸಿ ಎನ್ನುವ ಜೋಡಿ ವೀಕೆಂಡ್‌ನಲ್ಲಿ ಇಂಥ ಸ್ಥಳಗಳಿಗೆ ಹೋಗಿ ಬಂದರೆ ಇಬ್ಬರು ಖುಷಿಯಾಗುವಿರಿ, ನಿಮ್ಮಿಬ್ಬರ ನಡುವೆ ರೊಮ್ಯಾಂಟಿಕ್ ಫೀಲ್ ಹೆಚ್ಚುವುದು.
ಮೈಸೂರು
ಒಂದೆರಡು ದಿನ ನಾವಿಬ್ಬರು ಎಲ್ಲಾದರೂ ಹೋಗಿ ಬರೋಣ ಎನ್ನುವವರಿಗೆ ಮೈಸೂರು ಕೂಡ ಸೂಕ್ತವಾದ ತಾಣವಾಗಿದೆ. ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿರುವ ಕೆಆರ್‌ಎಸ್ ಕಣ್ತುಂಬಿ, ಸಮೀಪದ ಸ್ಥಳಗಳಲ್ಲಿ ಸುತ್ತಾಡಿ ಬರಬಹುದು.
ಕೊಡಗು
ಕರ್ನಾಟದಕ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗು ಕೂಡ ಜೋಡಿಗಳಿಗೆ ಬೆಸ್ಟ್ ಹನಿಮೂನ್ ಸ್ಪಾಟ್ ಆಗಿದೆ. ಮಳೆಗಾಲದಲ್ಲಿ ಇಲ್ಲಿಯ ವಾತಾವರನ ತುಂಬಾನೇ ತಂಪಿರುತ್ತದೆ, ಪ್ರಕೃತಿ ಕೂಡ ತುಂಬಾನೇ ಸುಂದರವಾಗಿರುತ್ತದೆ, ಜಲಪಾತಗಳು ಉಕ್ಕಿ ಹರಿಯುತ್ತಿರುತ್ತದೆ, ಕೈ-ಕೈ ಬೆಸೆದು ಈ ಸ್ಥಳಗಳಲ್ಲಿ ಸುತ್ತಾಡುತ್ತಿದ್ದರೆ ಇದುವೇ ಸ್ವರ್ಗ ಅನಿಸದಿರಲ್ಲ.
ಚಿಕ್ಕಮಂಗಳೂರು
ಮಲೆಗಾಲದಲ್ಲಿ ಸಂಗಾತಿ ರೊಮ್ಯಾಂಟಿಕ್ ಟ್ರಿಪ್ ಹೋಗಲು ಕರ್ನಾಟಕದ ಮತ್ತೊಂದು ಜಿಲ್ಲೆಯೆಂದರೆ ಚಿಕ್ಕಮಂಗಳೂರು. ಮಳೆಗಾಲದಲ್ಲಿ ಇಲ್ಲಿಯ ವಾತಾವರಣ ಹನಿಮೂನ್ ಕಪಲ್‌ಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ಇಲ್ಲಿರುವ ಪ್ರಸಿದ್ಧ ಸ್ಥಳಗಳನ್ನು ನೋಡುತ್ತಾ ಒಂದೆರಡು ದಿನ ಪ್ರಕೃತಿಯ ಮಡಲಿನಲ್ಲಿ ಕಳೆದು ಬಂದರೆ ನಿಮ್ಮಿಬ್ಬರಿಗೆ ಅದರ ನೆನಪು ನಿಮ್ಮ ಜೀವನಮೂರ್ತಿ ಕಾಡುವುದು ಅಷ್ಟೊಂದು ಮಧುರವಾಗಿರುತ್ತದೆ.



Click it and Unblock the Notifications
