Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮದುವೆಗೂ ಮುನ್ನ ಕಲಿಯಲೇಬೇಕಾದ ಸರಳ ಪಾಕವಿಧಾನಗಳಿವು
ನೂತನ ವಧುವಿಗೆ ಹಲವು ಸವಾಲುಗಳ ನಡುವೆ ತುಸು ತ್ರಾಸ ಎನಿಸುವ ಪರೀಕ್ಷೆ ಅಡುಗೆ. ಕೈರುಚಿ ಚೆನ್ನಾಗಿದ್ದರೆ ಬಹುತೇಕ ಕುಟುಂಬದವರ ಪ್ರೀತಿಯನ್ನು ಗಳಿಸಬಹುದು ಎನ್ನುವುದು ಪರೋಕ್ಷ ಸತ್ಯಸಂಗತಿ. ಆದರೆ ಆಧುನಿಕ ಕಾಲದ ಹೆಣ್ಣು ಮಕ್ಕಳು ವಿದ್ಯಾಭ್ಯಾಸ, ನಂತರ ಕೆಲಸದ ಕಡೆಗೆ ಹೆಚ್ಚು ಗಮನಕೊಡುತ್ತಾರೆಯೇ ಹೊರತು, ಅಡುಗೆ ಮನೆ ಕಡೆ ನುಸುಳುವುದೂ ಇಲ್ಲ.
ಆದರೆ ಮದುವೆಯಾದ ನಂತರ ಗಂಡನ ಮನೆಯಲ್ಲಿ ಎಲ್ಲರ ಎದುರು, ಪತಿಯ ಮುಂದೆ ಮುಜುಗರಕ್ಕೊಳಪಡಬೇಕಾಗುವ ಸಂದರ್ಭ ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿ ನಕಾರಾತ್ಮಕವಾಗಿಯೂ ಹೊರಳಬಹುದು.

ಆದ್ದರಿಂದ ಮದುವೆಯಾಗಲಿರುವ ಅಥವಾ ನೂತನವಾಗಿ ಮದುವೆಯಾದ ಹೆಣ್ಣುಮಕ್ಕಳು ಅಗತ್ಯವಾಗಿ ಕಲಿತಿರಲೇಬೇಕಾದ ಹಾಗೂ ಸುಲಭವಾಗಿ ತಯಾರಿಸಬಹುದಾದ ಕೆಲವು ಪಾಕವಿಧಾನಗಳನ್ನು ಕಲಿತಿದ್ದರೆ ಸಾಂದರ್ಭಿಕವಾಗಿ ನಿಭಾಯಿಬಹುದು. ಈ ಹಿನ್ನೆಲೆ ಮದುವೆಗೂ ಮುನ್ನ ಕಲಿಯಲೇಬೇಕಾದ ಸರಳ ರೆಸಿಪಿಗಳು ಹಾಗೂ ಅದನ್ನು ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

1. ಸಾಂಬಾರು
ಸಾಮಗ್ರಿ
* ಒಂದು ಕಪ್ ತೊಗರಿ ಬೇಳೆ
* ನಿಮ್ಮ ಆಯ್ಕೆಯಂತೆ ತರಕಾರಿ (ನುಗ್ಗೆಕಾಯಿ, ಕ್ಯಾರೆಟ್, ಬೀನ್ಸ್, ಮೂಲಂಗಿ)
* 1 ಚಮಚ ಅರಿಶಿನ
* ನಿಂಬೆ ಗಾತ್ರದ ಹುಣಸೆಹಣ್ಣು
* ಸಾಂಬಾರ್ ಪುಡಿ
* 1 ಚಮಚ ಸಾಸಿವೆ
* 2 ಕೆಂಪು ಮೆಣಸಿನಕಾಯಿ
* ಅರ್ಧ ಚಮಚ ಮೆಂತ್ಯ ಕಾಳು
* ಸ್ವಲ್ಪ ಇಂಗು
* ಕರಿಬೇವು
* ಅಡುಗೆ ಎಣ್ಣೆ
* ಅರ್ಧ ಈರುಳ್ಳಿ
* 1 ಚಮಚ ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
* 3ರಿಂದ4 ಕಪ್ ನೀರನ್ನು ಕುದಿಸಿ ಅದಕ್ಕೆ ಹುಣೆಸೆಹಣ್ಣನ್ನು ಹಾಕಿ ಮಸೆಯಿರಿ
* ಒಂದು ಕಪ್ ತೊಗರಿ ಬೇಳೆಯನ್ನು ಪ್ರತ್ಯೇಕವಾಗಿ ಕುಕ್ಕರ್ ನಲ್ಲಿ ಬೇಯಿಸಿ ಮಸೆದಿಟ್ಟುಕೊಳ್ಳಿ
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇಂಗು ಹಾಕಿ, ಸಾಸಿವೆ, ಮೆಂತ್ಯ ಕಾಳು, ಕರಿಬೇವು, ಈರುಳ್ಳಿಯನ್ನು ಒಂದಾದ ನಂತರ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ
* ನಂತರ ಕೆಂಪು ಮೆಣಸಿನಕಾಯಿ, ತರಕಾರಿ ಹಾಕಿ ಅರ್ಧ ಚಮಚ ಸಾಂಬಾರ್ ಪುಡಿ, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ನೀರು ಹಾಕಿ ಬಾಣಲೆಯನ್ನು ಮುಚ್ಚಿ ಬೇಯಲು ಬಿಡಿ
* 10 ನಿಮಿಷದ ನಂತರ ಹುಣಸೆ ಹಣ್ಣಿನ ನೀರನ್ನು ಹಾಕಿ ಅದರ ಹಸಿವಾಸನೆ ಹೋಗುವವರೆಗೂ ಬೇಯಿಸಿ
* ನಂತರ ಮಸೆದ ಬೇಳೆಯನ್ನು ಬಾಣಲೆಗೆ ಹಾಕಿ 10ರಿಂದ 15 ನಿಮಿಷ ಬೇಯಿಸಿ
* ಅಂತಿಮವಾಗಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ

2. ಟಮೋಟೊ ರಸಂ
ಸಾಮಗ್ರಿ
* ಟಮೋಟೋ
* ನಿಂಬೆ ಗಾತ್ರದ ಹುಣಸೆಹಣ್ಣು
* ಒಂದು ಚಮಚ ಸಾಂಬಾರ್ ಅಥವಾ ರಸಂ ಪುಡಿ
* ಮುಕ್ಕಾಲು ಚಮಚ ಅರಿಶಿನ
* 1 ಚಮಚ ಸಾಸಿವೆ
* ಸ್ವಲ್ಪ ಇಂಗು
* ಕರಿಬೇವು
* ತುಪ್ಪ
* ಕೊತ್ತಂಬರಿ
* ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
* ಒಂದು ಪಾತ್ರೆಯಲ್ಲಿ ಬಿಸಿನೀರನ್ನು ಕಾಯಿಸಿ ಅದಕ್ಕೆ ಹುಣಸೆಹಣ್ಣು ಹಾಕು ಮಸೆಯಿಸಿ
* ಟಮೋಟೋ ಕತ್ತರಿಸಿ ಕುದಿಯುವ ಪಾತ್ರೆಗೆ ಹಾಕಿ ಹುಣಹಣ್ಣಿನ ಜತೆ ಬೆರೆಯುವವರೆಗೂ ಮಸೆಯಿಸಿ
* ಸ್ವಲ್ಪ ಇಂಗನ್ನು ಹಾಕಿ
* ನಂತರ ಸಾಂಬಾರ್ ಅಥವ ರಸಂ ಪುಡಿ, ಅರಿಶಿನ, ಉಪ್ಪನ್ನು ಹಾಕಿ 10 ನಿಮಿಷ ಚೆನ್ನಾಗಿ ಕುದಿಸಿ
* ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಸಾಸಿವೆ ಹಾಕಿ ಅದು ಕರಿದ ನಂತರ ಕರಿಬೇವು ಹಾಕಿ ಇದನ್ನು ಕುಯುವ ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
* ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ

3.ಅವಲಕ್ಕಿ (ಪೋಹಾ)
ಸಾಮಗ್ರಿ
* 2 ಕಪ್ ಅವಲಕ್ಕಿ
* 2 ಚಮಚ ಎಣ್ಣೆ
* ಅರ್ಧ ಚಮಚ ಸಾಸಿವೆ
* ಅರ್ಧ ಚಮಚ ಇಂಗು
* ಅರ್ಧ ಕಪ್ ಈರುಳ್ಳಿ
* ಅರ್ಧ ಕಪ್ ಟಮೋಟೋ
* ಉಪ್ಪು
* ಮುಕ್ಕಾಲು ಚಮಚ ಅರಿಶಿನ
* 1 ಚಮಚ ಶುಂಠಿ ಮೆಣಸಿನಕಾಯಿಯ ಪೇಸ್ಟ್
* ನಿಂಬೆಹಣ್ಣು
* 1 ಚಮಚ ಕೊತ್ತಂಬರಿ
ತಯಾರಿಸುವ ವಿಧಾನ
* ಅವಲಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಯಲು ಇಡಿ
* ಬಾಣಲೆಗೆ ಎಣ್ಣೆ ಹಾಕಿ ಬಿಯಾದ ನಂತರ ಸಾಸಿವ ಹಾಕಿ
* ನಂತರ ಇಂಗು ಹಾಕಿ ಸ್ವಲ್ಪ ಬಿಸಿಯಾದ ನಂತರ
* ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಬಾಡಿಸಿ
* ಶುಂಠಿ ಮೆಣಸಿನಕಾಯಿಯ ಪೇಸ್ಟ್, ಟಮೋಟೋ ಹಾಕಿ ಸ್ವಲ್ಪ ಸಮಯದ ನಂತರ
* ಸ್ವಲ್ಪ ನೀರು, ಉಪ್ಪು, ಅರಿಶಿನ ಹಾಕಿ ಸ್ವಲ್ಪ ಸಮಯ ಬೇಯಲು ಬಿಡಿ
* ಅವಲಕ್ಕಿಯಲ್ಲಿರುವ ಉಳಿದ ನೀರನ್ನು ತೆಗೆದು ಅವಲಕ್ಕಿಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2 ನಿಮಿಷ ಬೇಯಲು ಬಿಡಿ
* ಅಂತಿಮವಾಗಿ ಗ್ಯಾಸ್ ಆಫ್ ಆದ ನಂತರ ನಿಂಬೆಹಣ್ಣಿನ ರಸ ಹಾಗೂ ಕೊತ್ತಂಬರಿ ಹಾಕಿ ಮಿಶ್ರಣ ಮಾಡಿದರೆ ರುಚಿಕರ ಅವಲಕ್ಕಿ ತಿನ್ನಲು ಸಿದ್ಧ

4. ದೋಸೆ
ಸಾಮಗ್ರಿ
* 1 ಕೆ.ಜಿ ಅಕ್ಕಿ
* 1 ಕಪ್ ಉದ್ದಿನ ಬೇಳೆ,
* 1 ಚಮಚ ಮೆಂತ್ಯ ಕಾಳು
* 1 ಚಿಟಕೆ ಅಡಿಗೆ ಸೋಡಾ,
* 1 ಚಮಚ ಉಪ್ಪು
* 1/4 ಕೆ.ಜಿ. ಎಣ್ಣೆ
ತಯಾರಿಸುವ ವಿಧಾನ
* ಅಕ್ಕಿ ಮತ್ತು ಉದ್ದಿನ ಬೇಳೆ, ಮೆಂತ್ಯ ಕಾಳನ್ನು 2 -3 ಬಾರಿ ನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ ನೀರು ಹಾಕಿ
* ಮೂರನ್ನೂ ಒಟ್ಟಿಗೆ ಹಾಕಿ 4ರಿಂ6 ಗಂಟೆ ಕಾಲ ನೆನಸಬೇಕು
* ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ ಇದಕ್ಕೆ ಅಡಿಗೆ ಸೋಡಾ, ಉಪ್ಪನ್ನು ಬೆರಸಿ
* ಒಂದು ಪಾತ್ರೆಗೆ ಹಾಕಿ ಗಾಳಿ ಹೋಗದಂತೆ ಮುಚ್ಚಿ ಇಡಬೇಕು ಮಾರನೆಯ ದಿನ ಹಿಟ್ಟು ಉಕ್ಕಿರುತ್ತದೆ
* ನಂತರ ಕಾವಲಿಯನ್ನು ಇಟ್ಟು ತೆಂಗಿನ ಜುಟ್ಟು ಅಥವಾ ಈರುಳ್ಳಿಯಿಂದ ಕಾವಲಿಗೆ ಎಣ್ಣೆ ಹಚ್ಚಿ ಒಂದೊಂದು ಸೌಟು ಹಿಟ್ಟನ್ನು ಗುಂಡಗೆ ಹರಡಿ ದೋಸೆ ಹಾಕಿ ತಿರುವಿ ಹಾಕಿ ಎರಡೂ ಕಡೆಯೂ ಬೇಯಿಸಿದರೆ ಬಿಸಿ ಬಿಸಿ ದೋಸೆ ಸವಿಯಲು ಸಿದ್ದ

5. ಕಡಲೆಬೀಜದ ತೆಂಗಿನಕಾಯಿ ಚಟ್ನಿ
ಸಾಮಗ್ರಿ
* ಚಮಚ ಎಣ್ಣೆ
* 4 ಹಸಿ ಮೆಣಸಿನಕಾಯಿ
* ಕಾಲು ಚಮಚ ಜೀರಿಗೆ
* 4 ಬೆಳ್ಳುಳ್ಳಿ
* ಉಪ್ಪು
* ಸ್ವಲ್ಪ ಕಡ್ಲೆಬೀಜ
* ಹುಣಸೆ ರಸ
* 1 ಚಮಚ ತೆಂಗಿನಕಾಯಿ ಚೂರು
* ಸಾಸಿವೆ
* ಉದ್ದಿನ ಬೇಳೆ
* ಕರಿಬೇವು
ತಯಾರಿಸುವ ವಿಧಾನ
* ಮೊದಲು ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ 4 ಹಸಿ ಮೆಣಸಿನ ಕಾಯಿಯನ್ನು ಹುರಿಯಿರಿ
* ಮತ್ತೆ ಇದೇ ರೀತಿ ಕಡಲೆ ಬೀಜ ಹಾಕಿ ಹರಿದು ನಂತರ ಸಿಪ್ಪೆ ತೆಗೆಯಿರಿ
* ನಂತರ ಮಿಕ್ಸಿಗೆ ಹುರಿದ ಮೆಣಸಿನಕಾಯಿ, ಕಡಲೆ ಬೀಜ, 1/4 ಚಮಚ ಜೀರಿಗೆ, 3 ರಿಂದ 4 ಬೆಳ್ಳುಳ್ಳಿ ಎಸಳು
* ರುಚಿಗೆ ತಕ್ಕಷ್ಟು ಉಪ್ಪು, ಒಂದು ಸಣ್ಣ ಚೂರು ಹುಣಸೆ ಹಣ್ಣು, 1 ಚಮಚ ತುರಿದ ತೆಂಗಿನಕಾಯಿ ಹಾಕಿ ಸ್ವಲ್ಪ ರುಬ್ಬಿ
* ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಟ್ಟರೆ ಕಡಲೆಬೀಜದ ತೆಂಗಿನಕಾಯಿ ಚಟ್ನಿ ರೆಡಿ

6. ಮಸಾಲ ಚಹಾ
ಸಾಮಗ್ರಿ
* 1 ಗ್ಲಾಸ್ ಹಾಲು
* 1 ಚಮಚ ಸಕ್ಕರೆ
* 1 ಚಮಚ ಟೀಪುಡಿ
* ಕಾಲು ಗ್ಲಾಸ್ ನೀರು
* ಕಾಲು ಚಮಚ ಹಸಿಶುಂಠಿ
* ಸ್ವಲ್ಪ ಚಕ್ಕೆ ಪುಡಿ
* 1 ಏಲಕ್ಕಿ
ತಯಾರಿಸುವ ವಿಧಾನ
* ಹಾಲನ್ನು ಚೆನ್ನಾಗಿ ಕಾಯಿಸಿ, ಕುದಿಸಬೇಕು
* ನಂತರ ಒಂದು ಪಾತ್ರೆಯಲ್ಲಿ ಕಾಲು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದ್ದ ನಂತರ
* ಸಕ್ಕರೆ, ಟೀಪುಡಿ, ಹಸಿಶುಂಠಿ, ಚಕ್ಕೆ ಪುಡಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಣವಾಗುವವರೆಗೆ ಕುದಿಸಬೇಕು
* ಅಂತಿಮವಾಗಿ ಹಾಲನ್ನು ಹಾಕಿ 10 ನಿಮಿಷ ಕುದಿಸಿ ಸೋಸಿದರೆ ಮಸಾಲ ಚಹಾ ಸವಿಯಲು ಸಿದ್ಧ

7. ಶಾವಿಗೆ ಪಾಯಸ
ಸಾಮಗ್ರಿ
* 1 ಕಪ್ ಶಾವಿಗೆ
* 4-5 ಕಪ್ ಹಾಲು
* 2 ಕಪ್ ನೀರು (ಪಾಯಸ ಗಟ್ಟಿಯಾಗಬೇಕಾದರೆ ಇನ್ನೆರಡು ಕಪ್ ಹಾಲು ಹಾಕಬಹುದು)
* 1 ಕಪ್ ಸಕ್ಕರೆ
* ಎರಡು ಚಮಚ ತುಪ್ಪ
* 10-12 ಗೋಡಂಬಿ
* 10-20 ಒಣದ್ರಾಕ್ಷಿ
* ಒಣ ಹಣ್ಣುಗಳು
* ಒಂದೆರಡು ಚಿಟಕಿ ಏಲಕ್ಕಿ ಪುಡಿ
ತಯಾರಿಸುವ ವಿಧಾನ
* ಮೊದಲಿಗೆ ನೀರು ಮತ್ತು ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ
* ಬಾಣಲೆಗೆ ಶಾವಿಗೆ ಹಾಕಿ ಕೆಂಬಣ್ಣಕ್ಕೆ ಬರುವಂತೆ ಹುರಿಯಿರಿ
* ನಂತರ ಆ ಬಾಣಲೆಯಲ್ಲಿ ತುಪ್ಪ ಹಾಕಿ, ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ
* ಹಾಲು ಬಿಸಿಯಾಗಿದ್ದರೆ ಉರಿ ಕೊಂಚ ತಗ್ಗಿಸಿ. ಅದಕ್ಕೆ ಶಾವಿಗೆ ಹಾಕಿ
* ಶಾವಿಗೆ ಬೇಯ್ದನಂತರ ಸಕ್ಕರೆ ಹಾಕಿ
* ಏಲಕ್ಕಿ ಹಾಕಿ
* ನಂತರ ತುಪ್ಪದಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷಿ ಸೇರಿಸಿ 5 ನಿಮಿಷ ಬೇಯಿಸಿ
* ಅಂತಿಮವಾಗಿ ಒಣಹಣ್ಣುಗಳನ್ನು ಸಣ್ಣತೆ ತುಂಡರಿಸಿ ಪಾಯಸದ ಮೇಲೆ ಸಿಂಗರಿಸಿದರೆ ಸಿಹಿಯಾದ ಶಾವಿಗೆ ಪಾಯಸ ತಿನ್ನಲು ಸಿದ್ಧ

8. ಚಪಾತಿ
ಸಾಮಗ್ರಿ
* ಗೋಧಿಹಿಟ್ಟು- ಒಂದು ಬಟ್ಟಲು
* ನೀರು- ಮುಕ್ಕಾಲು ಬಟ್ಟಲು
* ಉಪ್ಪು- ರುಚಿಗೆ ತಕ್ಕಷ್ಟು
* ಎಣ್ಣೆ/ತುಪ್ಪ- ಚಪಾತಿ ಬೇಯಿಸಲು
* ಸ್ವಲ್ಪ ಗೋಧಿಹಿಟ್ಟು- ಚಪಾತಿ ಲಟ್ಟಿಸಲು
ತಯಾರಿಸುವ ವಿಧಾನ
* ಒಂದು ಬಟ್ಟಲು ಗೋಧಿಹಿಟ್ಟನ್ನು ಒಂದು ಬೇಸಿನ್ ಗೆ ಹಾಕಿ ಅದಕ್ಕೆ ಉಪ್ಪು, ಮುಕ್ಕಾಲು ಬಟ್ಟಲಿನಷ್ಟು ನೀರನ್ನು ಹಿಟ್ಟಿಗೆ ಹಾಕಿ
* ನಂತರ ಆ ಹಿಟ್ಟನ್ನು ಕೈಯಲ್ಲಿ ಚೆನ್ನಾಗಿ ತಿಕ್ಕಿ ತಿಕ್ಕಿ ಕಲಸಿಕೊಳ್ಳಿ
* ಕೊನೆಯಲ್ಲಿ ಕೈಗೆ 2-3 ಹನಿಗಳಷ್ಟು ಎಣ್ಣೆ ಸವರಿಕೊಂಡು ಹಿಟ್ಟನ್ನು ಕಲಸಿ ಆ ಹಿಟ್ಟನ್ನು ಮುಚ್ಚಿ ಬದಿಗಿಡಿ
* ಕನಿಷ್ಟ ಅರ್ಧ, ಮುಕ್ಕಾಲು ಗಂಟೆಗಳ ನಂತರ ಈ ಹಿಟ್ಟನ್ನು ಚಪಾತಿ ಮಾಡಲು ಬಳಸಬಹುದು
* ಚಪಾತಿ ಮಾಡುವಾಗ ಮತ್ತೊಮ್ಮೆ ಹಿಟ್ಟನ್ನು ಕಲಸಿಕೊಂಡು, ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ
* ಅದನ್ನು ಒಮ್ಮೆ ಗೋಧಿಹಿಟ್ಟಿನಲ್ಲಿ ಅದ್ದಿಕೊಂಡು ಚಿಕ್ಕದಾಗಿ ಲಟ್ಟಿಸಿ ಮೇಲೆ ಎಣ್ಣೆ ಹಾಕಿ ಮತ್ತೆ ಮಡಿಸಿ ಲಟ್ಟಿಸಿ
* ಪೂರಿಗಿಂತ ಸ್ವಲ್ಪ ದೊಡ್ಡದಾಗಿ ಲಟ್ಟಿಸಿಕೊಂಡು ಅಗತ್ಯವಾದರೆ ಹಿಟ್ಟನ್ನು ಬಳಸಿ
* ಕಾದ ಕಾವಲಿಗೆ ಲಟ್ಟಿಸಿದ ಹಾಳೆಯನ್ನು ಹಾಕಿ
* 20-30 ಸೆಕೆಂಡ್ ಗಳಂತೆ ಎರಡೂ ಬದಿಯಲ್ಲಿ ಒಮ್ಮೆ ಬೇಯಿಸಿ ನಂತರ ಎರಡೂ ಬದಿಗೆ ಬರುವಂತೆ ಎರಡೆರಡು ಹನಿ ಎಣ್ಣೆ/ತುಪ್ಪ ಹಾಕಿ ಬೇಯಿಸಿದರೆ ಮೃದುವಾದ ಚಪಾತಿ ತಿನ್ನಲು ಸಿದ್ಧ



Click it and Unblock the Notifications











