Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ನಿಮಗೆ ಓಟು ಹಾಕಿದ್ದೇನೆ, ನೀವೂ ಗೆದ್ದಿದ್ದೀರಿ ನನಗೆ ಮದುವೆ ಮಾಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದ 40ರ ಪ್ರಾಯದ ವ್ಯಕ್ತಿ
ಪೆಟ್ರೋಲ್ ಹಾಕಲು ಹೋದಾಗ ಶಾಸಕರನ್ನು ನೋಡಿ ಅಲ್ಲಿದ್ದ ನೌಕರನೊಬ್ಬ'ನಾನು ನಿಮಗೆ ಓಟು ಹಾಕಿದ್ದೇನೆ, ನಿಮ್ಮ ಪಕ್ಷ ಗೆದ್ದಿದೆ ನನಗೆ ಮದುವೆ ಮಾಡಿಸಿ ಎಂದು ಹೇಳಿರುವುದನ್ನು ಕೇಳಿ ಶಾಸಕರಿಗೆ ಅಚ್ಚರಿ ಉಂಟಾಗಿದೆ, ಸ್ವತಃ ಶಾಸಕರೇ ಆ ವೀಡಿಯೋವನ್ನು X ಖಾತೆಯಲ್ಲಿ ಹಂಚಿಕೊಂಡಿದ್ದು ಆ ಪೋಸ್ಟ್ ತುಂಬಾ ಗಮನ ಸೆಳೆದಿದೆ.
ಶಾಸಕರು ಹಂಚಿಕೊಂಡಿರುವ ಪೋಸ್ಟ್ ಹೀಗೆ
ಶಾಸಕರಾದ ಬ್ರಿಜ್ ಭೂಷಣ್ ತಮ್ಮ ಕಾಡಿಗೆ ಪಟ್ರೋಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್‌ಗೆ ಹೋದಾಗ ಅಲ್ಲಿಯ ನೌಕರರನ್ನು ಮಾತನಾಡಿಸಿದ್ದಾರೆ, ನಾನು ನಿಮಗೆ ಓಟು ಹಾಕಿರುವುದು, ಎಂಎಲ್‌ಎ ಚುನಾವಣೆಯಲ್ಲಿ ಗೆದ್ದಿದ್ದೇವೆ, ನನಗೆ ಮದುವೆ ಮಾಡಿಸಿ ಎಂದು ಹೇಳಿರುವುದನ್ನು ಕೇಳಿ ನನಗೆ ಶಾಕ್ ಆಯ್ತು ಎಂದು ಹೇಳಿದ್ದಾರೆ.

ಆ ವ್ಯಕ್ತಿಯನ್ನು ನೋಡಿದಾಗ 45 ವರ್ಷ ಮೇಲ್ಪಟ್ಟವರಂತೆ ಕಾಣುತ್ತಾರೆ. ಆದರೂ ಮದುವೆಯಾಗಿಲ್ಲ, ಇದು ಅವರನ್ನು ತುಂಬಾ ಕಾಡ್ತಾ ಇರಬಹುದು. ಎಲ್ಲಿ ಹುಡುಗಿ ನೋಡಿದರು ಸರಿ ಬರ್ತಾ ಇಲ್ಲ, ವಯಸ್ಸು ಮಿತಿ ಮೀರುತ್ತಿದೆ, ಮದುವೆಯಾಗಿಲ್ಲ ಎಂಬ ಚಿಂತೆ ಹೀಗಾಗಿ ಶಾಸಕರಿಗೆ ನನಗೆ ಮದುವೆ ಮಾಡಿಸಿ ಎಂದು ಕೇಳಿದ್ದಾನೆ.
ಇದು ತಮಾಷೆಯ ವಿಷಯ ಅಲ್ವೇ ಅಲ್ಲ?
ಈತ ಹೇಳಿರುವುದನ್ನು ಕೇಳಿದಾಗ ತಮಾಷೆ ಅನಿಸಬಹುದು, ಆದರೆ ಇದು ಎಷ್ಟೋ ಹುಡುಗರ ಸಮಸ್ಯೆಯಾಗಿದೆ. ಹುಡುಗರಿಗೆ ವಯಸ್ಸು ಮೀರುತ್ತಿದೆ,ಆದರೆ ಹುಡುಗಿ ಸಿಗ್ತಾ ಇಲ್ಲ. ಒಂದು ಕಾಲವಿತ್ತು ಹುಡುಗನ ಮನೆಯವರ ಡಿಮ್ಯಾಂಡ್ ಹನುಮಂತನ ಬಾಲದಂತೆ ಬೆಳೆಯುತ್ತಿತ್ತು, ಆದರೆ ಈಗ ಕಾಲ ಬದಲಾಗಿದೆ ಹುಡುಗರಿಗೆ ಹುಡುಗಿ ಸಿಗ್ತಾ ಇಲ್ಲ.
विधायक जी हमने चुनाव जितया है...अब आप हमारी शादी कराओ। वीडियो महोबा जिले का है। चरखरी विधायक बृजभूषण राजपूत जीप में डीजल डलवाने पहुंचे तो पेट्रोल पंप कर्मचारी की यह फरियाद सुन दंग रह गए। pic.twitter.com/O3ZNn2K6qc
— sonelal.kushwaha (@KushwahaK45286) October 16, 2024
ಕೃಷಿಕರು, ಚಿಕ್ಕ ಪುಟ್ಟ ಕೆಲಸದಲ್ಲಿ ಇರುವವರಿಗೆ ಹುಡುಗಿ ಸಿಗುವುದು ತುಂಬಾನೇ ಕಷ್ಟವಾಗುತ್ತಿದೆ
ಚಿಕ್ಕ ಸಂಬಳ, ಸ್ವಂತ ಮನೆಯಿಲ್ಲ, ಆಸ್ತಿಯಿಲ್ಲ ಎಂದಾದರೆ ಹುಡುಗಿ ಸಿಗುವುದು ಸುಲಭವಲ್ಲ, ಅರೇಂಜ್ ಮ್ಯಾರೇಜ್‌ನಲ್ಲಿ ಹುಡುಗಿಯನ್ನು ಮದುವೆ ಮಾಡಿಕೊಡುವಾಗ ಎಷ್ಟು ಅನುಕೂಲಸ್ಥರಿದ್ದಾರೆ ಎಂದೆಲ್ಲಾ ನೋಡಿಯೇ ಮದುವೆ ಮಾಡಿ ಕೊಡಲಾಗುತ್ತಿದೆ, ಹುಡುಗ ಊರಿನಲ್ಲಿಯೇ ಇದ್ದರೆ ಮದುವೆಗೆ ಒಪ್ಪುತ್ತಿಲ್ಲ, ಅಂಗಡಿ, ಬೇಕರಿ ಅಂತ ಕೆಲಸದಲ್ಲಿ ಇದ್ದರೆ ಹುಡುಗಿ ಸಿಗ್ತಾ ಇಲ್ಲ, ನಮ್ಮ ಹುಡುಗನಿಗೆ ಎಲ್ಲಿಯಾದರು ಹುಡುಗಿಯಿದ್ದರೆ ಹೇಳಿ, ನಮ್ಮ ಕಡೆಯಿಂದ ಯಾವುದೇ ಡಿಮ್ಯಾಂಡ್ ಇಲ್ಲ ಎಂದು ಪೋಷಕರು ಕಂಡು-ಕಂಡವರನ್ನಲ್ಲ ಕೇಳ್ತಾ ಇರ್ತಾರೆ.
ಪೋಷಕರು ಜೊತೆಗೆ ಇರುವುದಾದರೆ ಒಲ್ಲೆ ಅಂತಿದ್ದಾರೆ ಹೆಣ್ಮಕ್ಕಳು
ಎಷ್ಟೋ ಹೆಣ್ಮಕ್ಕಳು ಮದುವೆಯಾದ ಮೇಲೆ ನಾನು ಮತ್ತು ನನ್ನ ಗಂಡ ಮಾತ್ರ ಇರಬೇಕು, ಇಲ್ಲದಿದ್ದರೆ ಮದುವೆಗೆ ಒಲ್ಲೆ ಎಂದು ಹೇಳ್ತಾ ಇದ್ದಾರೆ. ಇತ್ತ ವಯಸ್ಸಾದ ಪೋಷಕರನ್ನು ಬಿಡಲು ಸಾಧ್ಯವೇ? ಅತ್ತ ಮದುವೆಯನೂ ಆಗ್ತಾ ಇಲ್ಲ ಇದು ಇನ್ನಷ್ಟು ಹುಡುಗರ ಕಷ್ಟವಾಗಿದೆ.
ಒಳ್ಳೆಯ ಕೆಲಸ, ಆರ್ಥಿಕ ಭದ್ರತೆ, ಮನೆ, ಕಾರು ಅಂತೆಲ್ಲಾ ಇದ್ದರೆ ಹುಡುಗಿಯರು ಒಪ್ಪುತ್ತಿದ್ದಾರೆ
ಹುಡುಗಿ ಮನೆಯವರು ಬಾಡಿಗೆ ಮನೆಯಲ್ಲಿಯೇ ಇರಲಿ ಆದರೆ ನಾವು ನಮ್ಮ ಹುಡುಗಿಯನ್ನು ಮದುವೆ ಮಾಡಿ ಕೊಡುವ ಮನೆ ಸ್ವಂತದ್ದಾಗಿರಬೇಕು, ಆರ್ಥಿಕ ಭದ್ರತೆ ಇರಬೇಕು ಎಂದೆಲ್ಲಾ ಬಯಸುತ್ತಿದ್ದಾರೆ. ಇದು ತಪ್ಪು ಅಂತಲ್ಲ...ಯಾರೇ ಆಗಲಿ ನಮ್ಮ ಹೆಣ್ಮಕ್ಕಳು ಸುರಕ್ಷಿತವಾಗಿರಬೇಕು, ತಮ್ಮ ತಂಗಿ ಒಳ್ಳೆಯ ಮನೆ ಸೇರಬೇಕು ಎಂದೇ ಬಯಸುವುದು, ಆದರೆ ಪುರುಷರಿಗೆ ಇದು ಮದುವೆ ವಿಷಯದಲ್ಲಿ ದೊಡ್ಡ ಸವಲಾಗುತ್ತಿರುವುದು ಕಟು ವಾಸ್ತವ.
ಒಳ್ಳೆ ಕೆಲಸ ಸಿಗದಿದ್ದರೆ ಹುಡುಗಿ ಸಿಗಲ್ಲ ಎಂಬ ಭಯದಲ್ಲಿ ಹುಡುಗರು ಚೆನ್ನಾಗಿ ಓದುತ್ತಿದ್ದರೆ, ಮದುವೆಗೆ ಹೆಣ್ಣು ಸಿಗದಿದ್ದರೆ ಆ ವ್ಯಕ್ತಿ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು, ಇದಕ್ಕೆ ಪರಿಹಾರವೇನು?



Click it and Unblock the Notifications